Home
Apps

ವಾಟ್ಸ್‌ಆಪ್ ಡಾರ್ಕ್ ಮೋಡ್: ಜೊತೆಗೆ ಮತ್ತೊಂದು ಬೊಂಬಾಟ್ ಆಯ್ಕೆ...!

ವಾಟ್ಸ್‌ಆಪ್ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಹೊಸ ಮಾದರಿಯಲ್ಲಿ ಆಪ್‌ಡೇಟ್ ಅನ್ನು ನೀಡುತ್ತಿದೆ. ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯವನ್ನು ಮಾಡುವ ಸಲುವಾಗಿ ಹಲವು ಆಯ್ಕೆಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಹೊಸದಾಗಿ ಸ್ವೇಪ್ ರಿಪ್ಲೇ ಎನ್ನುವ ಆಯ್ಕೆಯೊಂದನ್ನು ನೀಡುತ್ತಿದೆ. ಇದರಲ್ಲಿ ಬಳಕೆದಾರರು ಚಾಟಿಂಗ್‌ ನಲ್ಲಿ ರಿಪ್ಲೇ ಮಾಡುವುದು ಇನ್ನಷ್ಟು ಸುಲಭವಾಗಲಿದೆ. ಇದಲ್ಲದೇ ಜೊತೆಗೆ ಡಾರ್ಕ್ ಮೋಡ್ ಅನ್ನು ಕಾಣಬಹುದಾಗಿದೆ.

ವಾಟ್ಸ್‌ಆಪ್ ಡಾರ್ಕ್ ಮೋಡ್: ಜೊತೆಗೆ ಮತ್ತೊಂದು ಬೊಂಬಾಟ್ ಆಯ್ಕೆ...!
How to schedule Whatsapp messages on your Android smartphone - KANNADA

ಈಗಾಗಲೇ ಬೀಟಾ ಬಳಕೆದಾರರಿಗೆ ಸ್ವೈಪ್ ರಿಪ್ಲೇ ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ ಬಳಕೆದಾರರಿಗೆ ರಿಪ್ಲೇ ಮಾಡುವ ವಿಧಾನವು ಬದಲಾಗಲಿದೆ. ಅಲ್ಲದೇ ಇದು ಗ್ರೂಪ್ ಚಾಟಿಂಗ್ ಸಂದರ್ಭದಲ್ಲಿ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸ್ವೈಪ್ ರಿಪ್ಲೇ ಕುರಿತ ಮಾಹಿತಿಯೂ ಮುಂದಿದೆ. ಅಲ್ಲದೇ ಡಾರ್ಕ್ ಮೋಡ್ ಬಗ್ಗೆಯೂ ತಿಳಿದುಕೊಳ್ಳಿ.

ಸ್ವೈಪ್ ರಿಪ್ಲೇ:

ಸ್ವೈಪ್ ರಿಪ್ಲೇ:

ವಾಟ್ಸ್‌ಆಪ್ ಚಾಟಿಂಗ್ ಸಂದರ್ಭದಲ್ಲಿ ಯಾವುದಾದರು ಒಂದು ಮೇಸೆಜ್‌ಗೆ ನೇರವಾಗಿ ರಿಪ್ಲೇ ಮಾಡಬೇಕಾದ ಸಂದರ್ಭದಲ್ಲಿ ಅದನ್ನು ಸೆಲೆಕ್ಟ್ ಮಾಡಿಕೊಳ್ಳಲು ಕಷ್ಟವಾಗುತ್ತಿತು. ಆದರೆ ಈಗ ನೀವು ಆ ಮೇಸೆಜ್ ಅನ್ನು ಸ್ವೈಪ್ ಮಾಡಿದರೆ ಸಾಕು ಅದು ರಿಪ್ಲೇಗೆ ಬಂದು ಕೂರಲಿದೆ. ನಂತರ ನೀವು ಅದಕ್ಕೆ ರಿಪ್ಲೇ ಮಾಡಬಹುದಾಗಿದೆ.

ಈಗಾಗಲೇ ಐಫೋನಿನಲ್ಲಿ:

ಈಗಾಗಲೇ ಐಫೋನಿನಲ್ಲಿ:

ಚಾಟಿಂಗ್‌ನಲ್ಲಿ ಸ್ವೈಪ್ ಅನ್ನು ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಈಗಾಗಲೇ ಐಫೋನ್‌ ಬಳಕೆದಾರರಿಗೆ ನೀಡಲಾಗಿದೆ. ಇದಾದ ನಂತರದಲ್ಲಿ ಈಗ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಸ್ವೈಪ್‌ ರಿಪ್ಲೇಯನ್ನು ನೀಡಲಾಗಿದೆ. ಬಳಕೆದಾರರಿಗೆ ಇದು ಹೊಸ ಮಾದರಿಯ ಅನುಭವನ್ನು ನೀಡಲಿದೆ.

ಇದಲ್ಲದೇ ಡಾರ್ಕ್ ಮೋಡ್ ಇದೆ:

ಇದಲ್ಲದೇ ಡಾರ್ಕ್ ಮೋಡ್ ಇದೆ:

ಇದಲ್ಲದೇ ವಾಟ್ಸ್‌ಆಪ್ ಸ್ವೈಪ್ ರಿಪ್ಲೇ ಆಯ್ಕೆಯೊಂದಿಗೆ ಬಳಕೆದಾರರಿಗೆ ಡಾರ್ಕ್ ಮೋಡ್ ಅನ್ನು ನೀಡಲಿದೆ ಎನ್ನಲಾಗಿದೆ. ಈಗಾಗಲೇ ಈ ಕುರಿತು ವಾಟ್ಸ್‌ಆಪ್ ಬೀಟಾ ಬಳಕೆದಾರರು ಹೊಸ ಮಾದರಿಯ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದು ಹೊಸ ಮಾದರಿಯ ಅನುಭವನ್ನು ಪಡೆದುಕೊಳ್ಳಬಹುದಾಗಿದೆ.

ಎಲ್ಲರಿಗೂ:

ಎಲ್ಲರಿಗೂ:

ಈ ಎರಡು ಮಾದರಿಯ ಆಯ್ಕೆಗಳು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ದೊರೆಯಲಿದೆ. ಇದಲ್ಲದೇ ವಿಂಡೋಸ್ ಬಳಕೆದಾರರು ಸಹ ಡಾರ್ಕ್ ಮೋಡ್ ಮತ್ತು ಸ್ವೈಪ್ ರಿಪ್ಲೇ ಆಯ್ಕೆಯನ್ನು ಪಡೆದುಕೊಳ್ಳಲಿದ್ದಾರೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಸಹಾಯವೂ ಅಗಲಿದೆ.

ಮಾರುಕಟ್ಟೆ:

ಮಾರುಕಟ್ಟೆ:

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಡಾರ್ಕ್ ಮೋಡ್ ಖ್ಯಾತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಟೆಲಿಗ್ರಾಂ ಮತ್ತು ಟ್ವಿಟರ್ ಗಳು ಡಾರ್ಕ್ ಮೋಡ್ ಅನ್ನು ಅನ್ನು ಹೊಂದಿದೆ. ಆದರೆ ವಾಟ್ಸ್‌ಆಪ್ ಬಳಕೆದಾರರಿಗೆ ಇದು ಶೀಘ್ರವೇ ದೊರೆಯಲಿದೆ.

Best Mobiles in India

English summary
WhatsApp for Android Will Receive the Popular Swipe to Reply Feature, to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+