Home
Apps

1 ಲಕ್ಷಕ್ಕೂ ಹೆಚ್ಚು ಅಕೌಂಟ್‌ಗಳನ್ನು ನಿರ್ಭಂಧಿಸಿತು ವಾಟ್ಸ್ಆಪ್!!

ವಾಟ್ಸ್ಆಪ್ ಮೂಲಕ ಸುಳ್ಳು ಸುದ್ದಿಗಳನ್ನು ಹರಿಬಿಡುವ ಅಕೌಂಟ್‌ಗಳ ಮೇಲೆ ಕಣ್ಣಿಟ್ಟಿರುವ ವಾಟ್ಸ್ಆಪ್ ಸಂಸ್ಥೆ ಸುಮಾರು 1 ಲಕ್ಷಕ್ಕೂ ಹೆಚ್ಚು ಅಕೌಂಟ್‌ಗಳನ್ನು ನಿರ್ಭಂಧಿಸಿದೆ ಎಂಬ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಬ್ಲೂಮ್​ಬರ್ಗ್​ ವರದಿ ಮಾಡಿರುವ ಪ್ರಕಾರ, ಇನ್ನೂ ಕೆಲವೇ ದಿನಗಳಲ್ಲಿ ಬ್ರೆಜಿಲ್ ದೇಶದ ಚುನಾವಣೆ ನಡೆಯಲಿದ್ದು, ಹಾಗಾಗಿ, ಸುಳ್ಳು ಮಾಹಿತಿಯನ್ನು ತಡೆಗಟ್ಟಲು ವಾಟ್ಸ್ಆಪ್ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲು ವಾಟ್ಸ್ಆಪ್ ಮಾತೃಸಂಸ್ಥೆ ಫೇಸ್​ಬುಕ್ ಇಂಕ್ ಸಕಲ ಸಿದ್ಧತೆಯಲ್ಲಿದ್ದು, 2016 ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಫೇಸ್​ಬುಕ್ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲಾಗಿದೆ ಎಂಬ ಆರೋಪ ಕೇಳಿ ಬಂದ ನಂತರ ಇದೀಗ ಎಚ್ಚೆತ್ತುಕೊಂಡಿದೆ. ಹಾಗಾಗಿ, ಇದರ ಮೊದಲ ಹೆಜ್ಜೆ ಎಂಬಂತೆ ಬ್ರೆಜಿಲ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಾಟ್ಸ್ಆಪ್ ಅಕೌಂಟ್‌ಗಳನ್ನು ನಿರ್ಭಂಧಿಸಿದೆ ಎಂದು ಹೇಳಲಾಗಿದೆ.

1 ಲಕ್ಷಕ್ಕೂ ಹೆಚ್ಚು ಅಕೌಂಟ್‌ಗಳನ್ನು ನಿರ್ಭಂಧಿಸಿತು ವಾಟ್ಸ್ಆಪ್!!

ಭಾರತದಂತೆ ಬ್ರೆಜಿಲ್ ಕೂಡ ವಾಟ್ಸಆಪ್‌ನ ಜಾಗತಿಕ ಮಾರುಕಟ್ಟೆಯಾಗಿದ್ದು, 21 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬ್ರೆಜಿಲ್​ನಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರು ವಾಟ್ಸ್ಆಪ್ ಅನ್ನು ಬಳಸುತ್ತಾರೆ. ಹಾಗಾಗಿ, ಕೆಲವರು ಸುಳ್ಳು ವಂದತಿಗಳನ್ನು ಹಬ್ಬಿಸಲೆಂದು ವಾಟ್ಸ್ಆಪ್ ಬಳಸುತ್ತಿದ್ದು, ಇಂತಹ ಪ್ರಚಾರದ ಮೇಲೆ ಸಂಸ್ಥೆಯು ಕಣ್ಣಿಟ್ಟಿದೆ. ಹೀಗಾಗಿ ಮತದಾರರ ಮೇಲೆ ಪ್ರಭಾವ ಬೀರಬಹುದಾದ ವದಂತಿಗಳನ್ನು ಹೆಚ್ಚಾಗಿ ಬಳಸುತ್ತಿರುವ ವಾಟ್ಸ್‌ಪ್​ಗಳನ್ನು ನಿರ್ಬಂಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಅಕ್ಟೋಬರ್ 7 ರಂದು ಬ್ರೆಜಿಲ್​ನಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಉಳಿದ ಚುನಾವಣೆಗಳಿಗಾಗಿ ಚುನಾವಣಾ ಅಧ್ಯಕ್ಷ ಅಭ್ಯರ್ಥಿಯೋರ್ವರು ಪ್ರಚಾರಕ್ಕಾಗಿ ಲಕ್ಷಾಂತರ ಡಾಲರ್​ಗಳನ್ನು ವಾಟ್ಸಪ್ ಬಳಕೆದಾರರ ಮೇಲೆ ವ್ಯಯಿಸಿದ್ದಾರೆ ಎಂದು ವರದಿಯಾಗಿದೆ. ವಾಟ್ಸ್ಆಪ್ ಬಳಕೆದಾರರ ತಂಡವೊಂದು ಅಭ್ಯರ್ಥಿಯೋರ್ವರ ಪರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅದನ್ನು ಮತವಾಗಿಸುವ ಪ್ರಯತ್ನ ಮಾಡಿದೆ ಎಂಬ ಸುದ್ದಿ ಕೂಡ ಈ ಈ ನಿರ್ಭಂಧಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

1 ಲಕ್ಷಕ್ಕೂ ಹೆಚ್ಚು ಅಕೌಂಟ್‌ಗಳನ್ನು ನಿರ್ಭಂಧಿಸಿತು ವಾಟ್ಸ್ಆಪ್!!

ಫೇಸ್​ಬುಕ್ ಬಳಕೆದಾರರ ಡೇಟಾ ದುರುಪಯೋಗ ಪಡಿಸಿಕೊಂಡ ಕೆಂಬ್ರಿಜ್ ಅನಾಲಿಟಿಕಾ ಹಗರಣದ ನಂತರ ಫೇಸ್‌ಬುಕ್ ಹಾಗೂ ವಾಟ್ಸ್ಆಪ್ ಮೇಲೆ ಈಗ ನಂಬಿಕೆ ಇಡುವುದು ಕಷ್ಟವಾಗಿದೆ. ಅಮೆರಿಕಾ, ಭಾರತವೂ ಸೇರಿದಂತೆ ವಿವಿಧ ಸಾರ್ವತ್ರಿಕ ಚುನಾವಣೆಗಳ ಮೇಲೆ ಪ್ರಭಾವ ಉಂಟು ಮಾಡಿದೆ ಎಂದು ಆರೋಪಿಸಲಾಗಿದೆ. ಹಾಗಾಗಿ, ಸಾಮಾಜಿಕ ಜಾಲತಾಣದ ದುರ್ಬಳಕೆ ತಡೆಯಲು ಫೇಸ್‌ಬುಕ್ ವಿಶೇಷ ವಾರ್ ರೂಂ ಸಿದ್ಧಪಡಿಸಿದೆ.

Best Mobiles in India

English summary
Just in: WhatsApp bans more than 100000 accounts in Brazil election. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+