ಬೆಂಕಿ ಫೀಚರ್! ಇನ್ಮುಂದೆ ಕೇಳಂಗಿಲ್ಲ.. ಖಾಸಗಿ ಚಾಟ್‌ಗಳಲ್ಲಿಯೂ ಈ ವೈಶಿಷ್ಟ್ಯ ಲಭ್ಯ.. ಏನದು?
ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ (WhatsApp) ಬಳಕೆದಾರರಿಗೆ ಇಲ್ಲಿದೆ ಸಿಹಿಸುದ್ದಿ. ಈಗೇನಿದ್ದರೂ ವಾಟ್ಸಾಪ್ ಜಮಾನ. ಅದರಂತೆ ವಾಟ್ಸಾಪ್, ತನ್ನ ಬಳಕೆದಾರರನ್ನು ಮತ್ತಷ್ಟು ಆಕರ್ಷಿಸಲು ಹೊಸ ಫೀಚರ್ಸ್ ಪರಿಚಯಿಸುತ್ತಲೇ ಇರುತ್ತದೆ. ಆಗಾಗ್ಗೆ ಫೀಚರ್ಸ್ ಬದಲಾಯಿಸುವ ಮೂಲಕ ಹೆಚ್ಚು ಬಳಕೆದಾರರನ್ನು ಹೊಂದುತ್ತಿದೆ. ಇದು ಗೊತ್ತಿರುವ ವಿಚಾರ. ಇದೀಗ, ವಾಟ್ಸಾಪ್‌ನಲ್ಲಿ ಹೊಸ ಅಪ್ಡೇಟ್ ಬಂದಿದೆ. ನೀವು, ಖಾಸಗಿ ಚಾಟ್‌ಗಳಲ್ಲಿಯೂ ಈವೆಂಟ್‌ಗಳನ್ನು ನಿಗದಿಪಡಿಸಬಹುದು! ವಾಟ್ಸಾಪ್ ಪರಿಚಯಿಸಿರುವ ಆ ವೈಶಿಷ್ಟ್ಯ ಯಾವುದು? ಇದರ ಪ್ರಯೋಜನಗಳೇನು? ತಿಳಿಯಲು ಮುಂದೆ ಓದಿ.
ಅತ್ಯಂತ ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ವಾಟ್ಸಾಪ್ ಸಹ ಒಂದು. ಇಲ್ಲಿಯವರೆಗೆ ಈವೆಂಟ್‌ಗಳನ್ನು ನಿಗದಿಪಡಿಸುವ ಸಾಮರ್ಥ್ಯವು (WhatsApp Scheduling Feature) ಗುಂಪು ಚಾಟ್‌ಗಳಲ್ಲಿ ಮಾತ್ರ ಲಭ್ಯವಿತ್ತು. ಆದರೆ, ಈ ವೈಶಿಷ್ಟ್ಯವು ಶೀಘ್ರದಲ್ಲೇ ಖಾಸಗಿ ಚಾಟ್‌ಗಳಲ್ಲಿಯೂ ಲಭ್ಯವಿರುತ್ತದೆ. ಇದರರ್ಥ ನೀವು, ಇನ್ಮುಂದೆ ಸ್ನೇಹಿತರೊಂದಿಗೆ ವೈಯಕ್ತಿಕವಾಗಿ ಚಾಟ್ ಮಾಡುವಾಗ ಸಭೆಗಳು, ಅಪಾಯಿಂಟ್‌ಮೆಂಟ್‌ಗಳು ಮತ್ತು ಇತರ ಪ್ರಮುಖ ಕಾರ್ಯಕ್ರಮಗಳನ್ನು ಸುಲಭವಾಗಿ ಯೋಜಿಸಬಹುದು. ಈ ಹೊಸ ವೈಶಿಷ್ಟ್ಯದೊಂದಿಗೆ ವಾಟ್ಸಾಪ್ ಹೆಚ್ಚು ಬಳಕೆದಾರ ಸ್ನೇಹಿಯಾಗಲಿದೆ.

ಜನಪ್ರಿಯ ವಾಟ್ಸಾಪ್ ಟ್ರ್ಯಾಕರ್ ವಾಟ್ಸಾಪ್ ಬೀಟಾ (WABetaInfo) ಮಾಹಿತಿ ಪ್ರಕಾರ, ಈ ಖಾಸಗಿ ಚಾಟ್ ಈವೆಂಟ್ ರಚನೆ ವೈಶಿಷ್ಟ್ಯವು ವಾಟ್ಸಾಪ್‌ನ ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಈವೆಂಟ್ ರಚಿಸುವಾಗ ಬಳಕೆದಾರರು ಸ್ಥಳ, ಆಡಿಯೋ ಅಥವಾ ವಿಡಿಯೋ ಕರೆ ಲಿಂಕ್‌ಗಳನ್ನು ಸಹ ಸೇರಿಸಬಹುದು. ಇತರೆ ಕ್ಯಾಲೆಂಡರ್ ಅಪ್ಲಿಕೇಶನ್‌ಗಳ ಅಗತ್ಯವಿಲ್ಲದೆ, ವಾಟ್ಸಾಪ್‌ನಲ್ಲಿ ಎಲ್ಲವನ್ನೂ ಹೊಂದಿಸಬಹುದು. ಆದ್ದರಿಂದ ಇದು ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ. ಅನೇಕ ಜನರು ವಾಟ್ಸಾಪ್‌ನಲ್ಲಿ ಯೋಜನೆಗಳ ಬಗ್ಗೆ ಮಾತನಾಡುವುದರಿಂದ, ಈ ವೈಶಿಷ್ಟ್ಯವು ಅಪ್ಲಿಕೇಶನ್‌ಗಳನ್ನು ಬದಲಾಯಿಸದೆಯೇ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಹೊಂದಿಸಲು ನಿಮಗೆ ಅವಕಾಶ ಕಲ್ಪಿಸುತ್ತದೆ.
ಆಪಲ್ ಜೊತೆ ವಾಟ್ಸಾಪ್ ಸ್ಪರ್ಧೆ
ವಿಶೇಷವೆಂದರೆ, ವಾಟ್ಸಾಪ್ ಜೊತೆ ಸ್ಪರ್ಧಿಸಲು ಆಪಲ್ ಹೊಸ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದೇ ಸಮಯದಲ್ಲಿ ವಾಟ್ಸಾಪ್ ಈ ವೈಶಿಷ್ಟ್ಯವು ತಂದಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಆಪಲ್ ಶೀಘ್ರದಲ್ಲೇ ಐಫೋನ್ ಮತ್ತು ಐಪ್ಯಾಡ್ ಬಳಕೆದಾರರಿಗೆ ಈವೆಂಟ್ ಆಮಂತ್ರಣಗಳಿಗಾಗಿ ವಿಶೇಷವಾಗಿ ಅಪ್ಲಿಕೇಶನ್ ಅನ್ನು ಪರಿಚಯಿಸಲಿದೆ. ಮೀಟಿಂಗ್‌ಗಳು, ಪಾರ್ಟಿಗಳು ಅಥವಾ ಇತರೆ ಕೂಟಗಳಿಗೆ ಜನರನ್ನು ಆಹ್ವಾನಿಸಲು ಈ ಅಪ್ಲಿಕೇಶನ್ ಉಪಯುಕ್ತವಾಗಿದೆ. ಆಪಲ್ ಮುಂದಿನ ದಿನಗಳಲ್ಲಿ ಈ ಹೊಸ ಅಪ್ಲಿಕೇಶನ್ ಘೋಷಿಸುವ ಸಾಧ್ಯತೆಯಿದೆ. ಈ ವೈಶಿಷ್ಟ್ಯವು ವಾಟ್ಸಾಪ್‌ನಲ್ಲಿ ಬಂದ ನಂತರ ಬಳಕೆದಾರರು ಆಪಲ್‌ನ ವೈಶಿಷ್ಟ್ಯವನ್ನು ಬಳಸುತ್ತಾರೆಯೇ? ಎಂದು ಕಾದುನೋಡಬೇಕಿದೆ.
ವ್ಯೂ ಒನ್ಸ್ ಮೀಡಿಯಾ ವೈಶಿಷ್ಟ್ಯ
ಇಲ್ಲಿಯವರೆಗೆ ವಾಟ್ಸಾಪ್‌ನಲ್ಲಿ 'ವ್ಯೂ ಒನ್ಸ್ ಮೀಡಿಯಾ' ವೈಶಿಷ್ಟ್ಯವು ಪ್ರಾಥಮಿಕ ಸಾಧನದಲ್ಲಿ ಮಾತ್ರ ಕೆಲಸ ನಿರ್ವಹಿಸುತ್ತಿತ್ತು. ಲಿಂಕ್ ಮಾಡಲಾದ ಸಾಧನಗಳಲ್ಲಿ ViewOne ಮಾಧ್ಯಮವನ್ನು ತೆರೆಯಲು ಸಾಧ್ಯವಾಗಲಿಲ್ಲ. ಆದರೆ, ಮೆಟಾದ ಹೊಸ ಅಪ್‌ಡೇಟ್‌ನೊಂದಿಗೆ, ಬಳಕೆದಾರರು ಪಿಸಿಗಳು, ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳು ಅಥವಾ ಸೆಕೆಂಡರಿ ಸ್ಮಾರ್ಟ್‌ಫೋನ್‌ಗಳಂತಹ ಲಿಂಕ್ ಮಾಡಲಾದ ಸಾಧನಗಳಲ್ಲಿ 'ViewOne' ಮಾಧ್ಯಮವನ್ನು ಸಹ ವೀಕ್ಷಿಸಬಹುದು.
ಪ್ರಸ್ತುತ ಈ ಅಪ್ಡೇಟ್ ವಾಟ್ಸಾಪ್ (WhatsApp) ಬೀಟಾ ಆವೃತ್ತಿ 2.25.3.7 ಬಳಸುತ್ತಿರುವ ಕೆಲವು ಆಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಈ ಹಿಂದೆ, ನೀವು ಲಿಂಕ್ ಮಾಡಲಾದ ಸಾಧನದಲ್ಲಿ ViewOne ಮಾಧ್ಯಮವನ್ನು ತೆರೆಯಲು ಪ್ರಯತ್ನಿಸಿದರೆ, 'ಈ ಸಂದೇಶಕ್ಕಾಗಿ ಕಾಯುತ್ತಿದ್ದೇನೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು' ಎಂದು ಹೇಳುವ ಸಂದೇಶವನ್ನು ನೀವು ಪಡೆಯುತ್ತೀರಿ. ಈ ಹೊಸ ವೈಶಿಷ್ಟ್ಯದಿಂದ ಈ ಸಮಸ್ಯೆ ನಿವಾರಣೆಯಾಗಲಿದೆ.
ವಾಟ್ಸಾಪ್ ಈ ವೈಶಿಷ್ಟ್ಯಗಳ ಬಿಡುಗಡೆ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಬೀಟಾ ಬಳಕೆದಾರರೊಂದಿಗೆ ಪ್ರಸ್ತುತ ಪರೀಕ್ಷೆ ನಡೆಯುತ್ತಿದೆ. ವಾಟ್ಸಾಪ್ ಅನ್ನು ಆಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಆದರೆ, ಬೀಟಾ ಆವೃತ್ತಿಯು TestFlight ಮೂಲಕ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ.


Click it and Unblock the Notifications








