ಐಫೋನ್ ಬಳಕೆದಾರರಿಗೆ ವಾಟ್ಸ್ಆಪ್‌ನಿಂದ ಸಿಹಿಸುದ್ದಿ!
ಕಳೆದ ಫೆಬ್ರವರಿಯಲ್ಲಿ ಐಫೋನ್ ಐಒಎಸ್ ಬಳಕೆದಾರರಿಗೆ 'ವಾಟ್ಸ್‌ಆಪ್ ಬ್ಯುಸಿನೆಸ್' ಆವೃತ್ತಿ ಹೊರತರುತ್ತಿರುವುದಾಗಿ ಘೋಷಿಸಿದ್ದ ವಾಟ್ಸ್ಆಪ್, ಪರೀಕ್ಷಾರ್ಥ ಬಳಕೆಯ ಬಳಿಕ ಇದೀಗ ವಾಟ್ಸಪ್ ಮೆಕ್ಸಿಕೋದಲ್ಲಿ ಮೊದಲ ಬಾರಿಗೆ ಐಒಎಸ್ ಬಳಕೆದಾರರಿಗೆ ವಾಟ್ಸ್‌ಆಪ್ ಬ್ಯುಸಿನೆಸ್ ಆವೃತ್ತಿ ಪರಿಚಯಿಸಿದೆ. 2018ರ ಜನವರಿಯಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಸಿಕ್ಕಿದ್ದ ವಾಟ್ಸ್‌ಆಪ್ ಬ್ಯುಸಿನೆಸ್ ಆವೃತ್ತಿ ಇದೀಗ ಐಒಎಸ್ ಬಳಕೆದಾರರಿಗೆ ಕೂಡ ಲಭ್ಯವಾಗಿದೆ.
ಹೌದು, ವಾಟ್ಸ್‌ಆಪ್‌ನ ಖಚಿತ ಮೂಲವಾದ ಬೇಟಾ ಇನ್ಫೋ ಈ ಕುರಿತು ಪ್ರಕಟಿಸಿದ್ದು, ಮೆಕ್ಸಿಕೋ ಬೆನ್ನಲ್ಲೇ ಬ್ರೆಜಿಲ್, ಅರ್ಜೆಂಟಿನಾ ಮತ್ತು ಫ್ರಾನ್ಸ್‌ನ ಬಳಕೆದಾರರು ತಮಗೆ ವಾಟ್ಸ್‌ಆಪ್ ಬ್ಯುಸಿನೆಸ್ ಆವೃತ್ತಿ ಐಒಎಸ್‌ನಲ್ಲಿ ಲಭ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ವಾಟ್ಸ್ಆಪ್ ಬ್ಯುಸಿನೆಸ್ ಐಒಎಸ್ ಆವೃತ್ತಿ ಕುರಿತು ಕಂಪನಿ ಯಾವುದೇ ಹೇಳಿಕೆ ನೀಡಿಲ್ಲ. ಜತೆಗೆ ಭಾರತದಲ್ಲಿ ಯಾವಾಗ ಲಭ್ಯ ಎಂಬುದರ ಬಗ್ಗೆ ಕೂಡ ವಾಟ್ಸ್‌ಆಪ್ ಸೂಚನೆ ನೀಡಿಲ್ಲ.

ವ್ಯಾಪಾರ ಅಭಿವೃದ್ಧಿಗೆ ವ್ಯಾಪಾರಸ್ಥರು ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ನ್ನು ಬಳಕೆ ಮಾಡಲು ಶುರುವಿಟ್ಟುಕೊಂಡಿದ್ದಾರೆ. ಗ್ರಾಹಕರ ನಡುವಿನ ಉತ್ತಮ ಬಾಂಧವ್ಯ ಮತ್ತು ಪ್ರಚಾರಕ್ಕೆ ವಾಟ್ಸ್ ಆಪ್ ಒಂದು ಉತ್ತಮ ಮಾರ್ಗವಾಗಿದೆ ಮತ್ತು ವಾಟ್ಸ್ ಆಪ್ ಮುಖಾಂತರವೇ ಹಲವಾರು ಉತ್ಪನ್ನಗಳು ಇತ್ತೀಚಿನ ದಿನಗಳಲ್ಲಿ ಮಾರಾಟವಾಗುತ್ತಿದೆ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಹಾಗಾದರೆ, ಏನಿದು 'ವಾಟ್ಸ್‌ಆಪ್ ಬ್ಯುಸಿನೆಸ್' ಫೀಚರ್ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಾಟ್ಸ್ ಆಪ್ ಬ್ಯುಸಿನೆಸ್ ಹೆಚ್ಚು ಪ್ರಸಿದ್ಧಿ
ಎರಡು ಕಾರಣಗಳಿಂದಾಗಿ ವಾಟ್ಸ್ ಆಪ್ ಬ್ಯುಸಿನೆಸ್ ಹೆಚ್ಚು ಪ್ರಸಿದ್ಧಿಯಾಗುತ್ತಿದೆ. ಒಂದು ವ್ಯಕ್ತಿಗತವಾಗಿರುವುದು ಮತ್ತು ನೇರನುಡಿಯ ಮೂಲಕ ನಿರ್ಶಿತವಾಗುವಿಕೆ. ಉದಾಹರಣೆಗೆ ಯಾವುದೇ ಕಾಮಿಕ್ ಸ್ಟೋರಿ ಇಷ್ಟವಾದರೆ,ಚಂದಾದಾರರು ವಾಟ್ಸ್ ಆಪ್ ನಲ್ಲಿ "ಲೈಕ್" ಮಾಡುವುದು ಹೃದಯದ ಚಿಹ್ನೆ ಹಾಕುವುದನ್ನು ಮಾಡುತ್ತಾರೆ, ಒಂದು ವೇಳೆ ಇಷ್ಟವಾಗದೇ ಇದ್ದರೂ ಕೂಡ ಅದನ್ನು ನೇರವಾಗಿ ವ್ಯಾಪಾರಸ್ಥರಿಗೆ ತಿಳಿಸುವ ಅವಕಾಶ ಇದರಲ್ಲಿರುತ್ತದೆ.

ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುತ್ತಿದೆ.
ಈಗಾಗಲೇ ವಾಟ್ಸ್ ಆಪ್ ಬ್ಯೂಸಿನೆಸ್ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುತ್ತಿದೆ. ಸದ್ಯದಲ್ಲೇ ಏರ್ ಲೈನ್, ಈ-ಕಾಮರ್ಸ್ ಕಂಪನೆ, ಬ್ಯಾಂಕ್ ಗಳು ತಮ್ಮ ಗ್ರಾಹಕರ ಜೊತೆ ವಾಟ್ಸ್ ಆಪ್ ಮೂಲಕ ಸಂಪರ್ಕ ಹೊಂದಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿವೆ ಎಂಬ ಬಗ್ಗೆ ವಾಟ್ಸ್ ಆಪ್ ಕಂಪೆನಿಯ ವಕ್ತಾರರು ಈ-ಮೇಲ್ ಮುಖಾಂತರ ತಿಳಿಸಿದ್ದಾರೆ. ಆ ಮೂಲಕ ವಾಟ್ಸ್ ಆಪ್ ಬ್ಯೂಸಿನೆಸ್ ವಿಶ್ವದಾದ್ಯಂತ 3 ಮಿಲಿಯನ್ ಜನರು ವಾಟ್ಸ್ ಆಪ್ ಬ್ಯೂಸಿನೆಸ್ ನಲ್ಲಿ ಆಕ್ಟೀವ್ ಆಗಲು ಸಾಧ್ಯವಾಗುತ್ತದೆ.

ಸಂಪರ್ಕ ಹೊಂದಲು ಇರುವ ಅತ್ಯುತ್ತಮ ವಿಧಾನ
ಈಮೇಲ್ ಮತ್ತು ಎಸ್ ಎಂಎಸ್ ಗಳಿಗಿಂತ ವಾಟ್ಸ್ ಆಪ್ ಗ್ರಾಹಕರ ಜೊತೆ ಸಂಪರ್ಕ ಹೊಂದಲು ಇರುವ ಅತ್ಯುತ್ತಮ ವಿಧಾನವಾಗಿದೆ. ಈಮೇಲ್ ಗಳನ್ನು ಯಾವಾಗಲೂ ಪರಿಶೀಲಿಸುತ್ತಾ ಇರುವುದು ಕಠಿಣ ಮತ್ತು ಎಸ್ ಎಂ ಎಸ್ ಗಳ ಬಗೆಗಿನ ಕ್ರೇಝ್ ಈಗ ಜನರಲ್ಲಿ ಕಡಿಮೆಯಾಗಿತ್ತು ಆಗೊಮ್ಮೆ ಈಗೊಮ್ಮೆ ನೋಡುತ್ತಾರೆ. ಆದರೆ ವಾಟ್ಸ್ ಆಪ್ ಮೆಸೇಜ್ ಗಳು ಹಾಗಲ್ಲ. ಜನರಿಗೆ ಅಲರ್ಟ್ ಸಿಕ್ಕಿದ ಕೂಡಲೇ ಪರೀಕ್ಷಿಸುತ್ತಾರೆ ಮತ್ತು ಅದು ಜನರಿಗೆ ತುಂಬಾ ಆರಾಮದಾಯಕವಾಗಿ ಕೂಡ ಇದೆ.

ವಾಟ್ಸ್ ಆಪ್ ಬ್ಯೂಸಿನೆಸ್ ಆಪ್ ಏಕೆ ಬೇಕು?
ಈಗ ದೊಡ್ಡ ದೊಡ್ಡ ಕಂಪೆನಿಗಳೂ ಕೂಡ ಈಗ ವಾಟ್ಸ್ ಆಪ್ ಬ್ಯೂಸಿನೆಸ್ ಆಪ್ ಬಳಕೆ ಮಾಡಲು ಪ್ರಾರಂಭಿಸಿದ್ದು, ಗ್ರಾಹಕರ ಜೊತೆ ಅದರಲ್ಲೇ ಸಂಪರ್ಕ ರೂಪಿಸುತ್ತಿದೆ. ಆನ್ ಲೈನ್ ಟ್ರಾವೆಲ್ ಪ್ಲಾಟ್ ಫಾರ್ಮ್ ಗಳಾದ ಮೇಕ್ ಮೈ ಟ್ರಿಪ್, Goibibo ಗಳು ಈ-ಟಿಕೆಟ್ ಗಳನ್ನು ಕಳುಹಿಸಲು, ಹೊಟೆಲ್ ಬುಕ್ ಮಾಡಿದ ಓಚರ್ ಗಳನ್ನು ಗ್ರಾಹಕರಿಗೆ ತಲುಪಿಸಲು, ವಿಮಾನದಲ್ಲಿ ತಮ್ಮ ಸೀಟುಗಳನ್ನು ಕಾಯ್ದಿರಿಸಲು ವಾಟ್ಸ್ ಆಪ್ ನ್ನೇ ಬಳಕೆ ಮಾಡಲು ಶುರು ಮಾಡಿವೆ. ವಿಪ್ರತಿಕ್ರಿಯೆಗಳನ್ನು ಕೂಡ ವಾಟ್ಸ್ ಆಪ್ ಮುಖಾಂತರವೇ ವ್ಯಾಪಾರಸ್ಥರು ಪಡೆಯುತ್ತಿದ್ದಾರೆ.

ವಾಟ್ಸ್ ಆಪ್ ಬ್ಯುಸಿನೆಸ್ ಯಶಸ್ವಿ
ಕಾಮಿಕ್ಸ್ ಉದ್ಯಮಕ್ಕೆ ಬರುವ ಮುನ್ನ ಫ್ಲಿಪ್ ಕಾರ್ಟ್ ಮತ್ತು ಶಿಯೋಮಿಯಲ್ಲಿ ಕೆಲಸ ಮಾಡಿದ ಐಐಟಿ- ರೂರ್ಕಿಯ ಹಳೆಯ ವಿದ್ಯಾರ್ಥಿಯಾಗಿರುವ ರಾಜೀವ್ ತಂಹಂಕರ್ ಹೇಳುವಂತೆ 2016 ರಲ್ಲಿ ಕಾಮಿಕ್ ಬುಕ್ ನ ಪಬ್ಲಿಷ್ ಮಾಡುವ ಕೆಲಸವನ್ನು ಅವರು ಆರಂಭಿಸಿದ್ದು ವಾಟ್ಸ್ ಆಪ್ ಬ್ಯುಸಿನೆಸ್ ಆರಂಭಿಸಿದ ಮೇಲೆ ಅವರ ಬ್ಯುಸಿನೆಸ್ ಹೆಚ್ಚು ಪ್ರಸಿದ್ಧಿಯಾಗಿದೆಯಂತೆ. ಬೆಂಗಳೂರಿನ ಮುದ್ರಣಗಾರರೊಬ್ಬರು ವಾಟ್ಸ್ ಆಪ್ ನಲ್ಲಿ ಪಬ್ಲಿಷ್ ಮಾಡಲು ಪ್ರಾರಂಭಿಸಿದ ಕೇವಲ ನಾಲ್ಕೇ ತಿಂಗಳಲ್ಲಿ 20,000 ಚಂದಾದಾರರನ್ನು ಪಡೆದಿದ್ದಾರೆ.


Click it and Unblock the Notifications








