Subscribe to Gizbot

ತನ್ನ ಎಂಡ್-ಟು-ಎಂಡ್ ಮೆಸೇಜ್ ಎನ್ಕ್ರಿಪ್ಶನ್ ಕುರಿತು ಸ್ಪಷ್ಟೀಕರಣ ನೀಡಿದ ವಾಟ್ಸಾಪ್

Posted By: Tejaswini P G

ಫೇಸ್ಬುಕ್-ಕೇಂಬ್ರಿಡ್ಜ್ ಎನಲಿಟಿಕಾ ಪ್ರಕರಣದ ನಂತರ ಈಗ ಎಲ್ಲರ ದೃಷ್ಟಿ ಜಗತ್ತಿನ ಖ್ಯಾತ ಮೆಸೇಜಿಂಗ್ ಆಪ್ ಆದ ವಾಟ್ಸಾಪ್ ನತ್ತ ಹರಿದಿದೆ. ವಾಟ್ಸಾಪ್ ನ ಎಂಡ್ –ಟು-ಎಂಡ್ ಎನ್ಕ್ರಿಪ್ಶನ್ ಪಾಲಿಸಿಯ ಅನುಸಾರ ವಾಟ್ಸಾಪ್ ಬಳಕೆದಾರರಿಂದ ಅತ್ಯಲ್ಪ ಮಾಹಿತಿ ಸಂಗ್ರಹಿಸುವುದರ ಜೊತೆಗೆ ಮೆಸೇಜ್ ಗಳ ಮೇಲೆ ನಿಗಾ ಇಡುತ್ತದೆ ಎಂಬ ವರದಿಗಳಿವೆ. ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಸಂವಹನದ ಒಂದು ಸುರಕ್ಷಿತ ವಿಧಾನವಾಗಿದ್ದು ಥರ್ಡ್-ಪಾರ್ಟಿಗಳು ನಿಮ್ಮ ಮಾಹಿತಿಯನ್ನು ಪಡೆಯುವುದನ್ನು ಇದು ತಪ್ಪಿಸುತ್ತದೆ.

ತನ್ನ ಎಂಡ್-ಟು-ಎಂಡ್ ಮೆಸೇಜ್ ಎನ್ಕ್ರಿಪ್ಶನ್ ಕುರಿತು ಸ್ಪಷ್ಟೀಕರಣ ನೀಡಿದ ವಾಟ್ಸಾಪ್

ವಾಟ್ಸಾಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್ಗಳ ಪೈಕಿ ಒಂದಾಗಿದ್ದು ಪ್ರತಿ ತಿಂಗಳು ಜಗತ್ತಿನಾದ್ಯಂತ 1.2 ಬಿಲಿಯನ್ ಗೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಹೆಗ್ಗಳಿಕೆ ಇದರದ್ದು. ವಾಟ್ಸಾಪ್ ಭಾರತದಲ್ಲಿ 200 ಮಿಲಿಯನ್ ಬಳಕೆದಾರರನ್ನು ಹೊಂದಿದ್ದು, ಭಾರತ ವಾಟ್ಸಾಪ್ ಗೆ ಪ್ರಮುಖ ಮಾರುಕಟ್ಟೆಯಾಗಿದೆ. ಹಾಗಾಗಿ ಸುರಕ್ಷತೆಯಲ್ಲಿ ಯಾವುದೇ ಲೋಪಗಳಾದಲ್ಲಿ ಅದರಿಂದ ಈ ಆನಲೈನ್ ಮೆಸೇಜಿಂಗ್ ಆಪ್ ಗೆ ದೊಡ್ಡ ತೊಂದರೆಯಾಗುತ್ತದೆ .

ವಾಟ್ಸಾಪ್ ನ ವಕ್ತಾರರೊಬ್ಬರು ಇತ್ತೀಚೆಗೆ ಪಿಟಿಐ ಗೆ "ನೀವು ವಾಟ್ಸಾಪ್ ಮೂಲಕ ಯಾರಿಗೆ ಸಂದೇಶ ಕಳುಹಿಸಿತ್ತೀರಿ ಎಂಬುದರ ಮೇಲೆ ನಾವು ನಿಗಾ ಇಡುವುದಿಲ್ಲ" ಎಂದು ಹೇಳಿಕೆ ನೀಡಿದ್ದು "ವಾಟ್ಸಾಪ್ ಅತ್ಯಲ್ಪ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ವಾಟ್ಸಾಪ್ ನಲ್ಲಿ ಪ್ರತಿಯೊಂದು ಸಂದೇಶವೂ ಎಂಡ್-ಟು-ಎಂಡ್ ಎನ್ಕ್ರಪ್ಟೆಡ್ ಆಗಿದೆ" ಎನ್ನುವ ಹೇಳಿಕೆ ಅದಕ್ಕೆ ವಿರೋಧಾತ್ಮಕವಾಗಿದೆ.

ಈ ಜನಪ್ರಿಯ ಮೆಸೇಜಿಂಗ್ ಆಪ್ ಅನ್ನು ಫೇಸ್ಬುಕ್ ಸಂಸ್ಥೆಯು 2014ರಲ್ಲಿ ತನ್ನ ಸ್ವಾಧೀನಕ್ಕೆ ಪಡೆದಿತ್ತು. ಹಾಗೆಯೇ ಏಪ್ರಿಲ್ , 2016 ರಲ್ಲಿ ಈ ಸಂಸ್ಥೆಯು ವಾಟ್ಸಾಪ್ ನಲ್ಲಿ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಅನ್ನು ಜಾರಿಗೆ ತಂದಿದ್ದು, ಅದರ ಮೂಲಕ ರವಾನೆಯಾಗುವ ಸಂದೇಶಗಳು ಥರ್ಡ್-ಪಾರ್ಟಿಗಳ ಕೈಸೇರದಂತೆ ಇದು ರಕ್ಷಣೆಯನ್ನೊದಗಿಸುತ್ತದೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT
ಅಲ್ಲದೆ ಇದರ ಗ್ರೂಪ್ ಮೆಸೇಜಿಂಗ್ ಫೀಚರ್ ಉಳಿದೆಲ್ಲಾ ಮೆಸೇಜಿಂಗ್ ಆಪ್ಗಳಿಂದ ಹೆಚ್ಚು ಸುರಕ್ಷಿತವಾಗಿದೆ ಎಂದು ವಾಟ್ಸಾಪ್ ಹೇಳಿದೆ. ಈ ಹಿಂದೆ ಗ್ರೂಪ್ ಎಡ್ಮಿನ್ ನ ಅನುಮತಿಯಿಲ್ಲದೆ ಯಾರು ಬೇಕಾದರೂ ಗ್ರೂಪ್ ನ ಸಂದೇಶಗಳನ್ನು ಓದಬಲ್ಲ ಲೋಪವೊಂದಿತ್ತಾದರೂ ಈಗ ಅದನ್ನು ಸರಿಪಡಿಸಲಾಗಿದೆ.

ಒಮ್ಮೆಲೆ ಸಾವಿರಾರು ಇಮೇಲ್ ಮೆಸೇಜ್‌ಗಳನ್ನು ಡಿಲೀಟ್ ಮಾಡುವುದು ಹೇಗೆ?

"ಗ್ರೂಪ್ ಗೆ ಯಾರಾದರೂ ಹೊಸ ಸದಸ್ಯರು ಸೇರಿದಾಗ ಗ್ರೂಪ್ ನ ಎಲ್ಲಾ ಸದಸ್ಯರಿಗೂ ಈ ಕುರಿತು ಸೂಚನೆ ದೊರೆಯುತ್ತದೆ ಮತ್ತು ಆ ವ್ಯಕ್ತಿ ಗ್ರೂಪ್ ಲಿಂಕ್ ಮೂಲಕ ಗ್ರೂಪ್ ಸೇರಿದರೋ ಅಥಾ ಗ್ರೂಪ್ ನ ಎಡ್ಮಿನ್ ಅವರನ್ನು ಗ್ರೂಪ್ ಗೆ ಸೇರಿಸಿದರೋ ಎಂಬುದರ ಮಾಹಿತಿಯೂ ಇರುತ್ತದೆ. ಗ್ರೂಪ್ ನ ಸದಸ್ಯರು ಗ್ರೂಪ್ ನ ಇತರ ಎಲ್ಲಾ ಸದಸ್ಯರನ್ನು ಕಾಣಬಹುದಾಗಿದ್ದು ಅವರ ಹೆಸರು ಮತ್ತು ಫೋನ್ ನಂಬರ್ ಅನ್ನು ಕೂಡ ಕಾಣಬಹುದಾಗಿದೆ. ಅಲ್ಲದೆ ಕೇವಲ ಒಂದು ಟ್ಯಾಪ್ ಮೂಲಕ ಗ್ರೂಪ್ ತೊರೆಯಬಹುದು ಅಥವಾ ಅನಗತ್ಯ ಸಂದೇಶಗಳನ್ನು ಬ್ಲಾಕ್ ಕೂಡ ಮಾಡಬಹುದು" ಎಂದು ವಾಟ್ಸಾಪ್ ನ ವಕ್ತಾರರು ತಿಳಿಸಿದ್ದಾರೆ.

ಫೇಸ್ಬುಕ್ -ಕೇಂಬ್ರಿಡ್ಜ್ ಎನಲಿಟಿಕಾ ಪ್ರಕರಣದ ನಂತರ ವಿಮರ್ಶಕರು ಎಚ್ಚೆತ್ತುಕೊಂಡಿದ್ದು, ಫೇಸ್ಬುಕ್ ಒಡೆತನದ ವಾಟ್ಸಾಪ್ ನ ಸುರಕ್ಷತೆಯನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ.

ಅಮೇರಿಕಾದ ಟಾಪ್ ತಂತ್ರಜ್ಞಾನ ವಾಣಿಜ್ಯೋದ್ಯಮಿ ಮತ್ತು ಶೈಕ್ಷಣಿಕ ವ್ಯಕ್ತಿಯಾದ ವಿವೇಕ್ ವಾಧ್ವಾ ಅವರು "ಬಳಕೆದಾರರ ನಡುವಿನ ಸಂಭಾಷಣೆ ಎನ್ಕ್ರಿಪ್ಟೆಡ್ ಆಗಿರುತ್ತದೆ ಮತ್ತು ವಾಟ್ಸಾಪ್ ಹೇಳುವಂತೆ ಸುರಕ್ಷಿತವೂ ಆಗಿರಬಹುದು. ಆದರೆ ಕಾಲ್ ಇತ್ಯಾದಿಗಳ ಮೆಟಾಡೇಟಾ ಮಾಹಿತಿಯನ್ನು ವಾಟ್ಸಾಪ್ ಸಂಸ್ಥೆ ಸಂಗ್ರಹಿಸುತ್ತಿರಬಹುದು." ಎಂದು ಹೇಳಿದ್ದಾರೆ.

ವಾಟ್ಸಾಪ್ ಬಳಕೆದಾರರ ಮಾಹಿತಿಗೆ ವಾಟ್ಸಾಪ್ ನ ಗ್ರೂಪ್ ಚ್ಯಾಟ್ ಆಯ್ಕೆ ಫೇಸ್ಬುಕ್ ಪೋಸ್ಟ್ ಗಿಂತ ಹೆಚ್ಚು ಅಪಾಯಕಾರಿಯಾಗಿದೆ. ವಾಟ್ಸಾಪ್ ನ ಗ್ರೂಪ್ ಚ್ಯಾಟ್ ನಲ್ಲಿ ಮೊಬೈಲ್ ನಂಬರ್ಗಳು ಲಭ್ಯವಿರುವ ಕಾರಣ ಬಳಕೆದಾರರ ಮಾಹಿತಿ ಸೋರಿಕೆಯಾಗುವ ಅಪಾಯ ಹೆಚ್ಚಿದೆ.

ಸಧ್ಯಕ್ಕೆ ಫೇಸ್ಬುಕ್ ಕೇಂಬ್ರಿಡ್ಜ್ ಎನಲಿಟಿಕಾ ಪ್ರಕರಣದಲ್ಲಿ ತೀವ್ರ ಟೀಕೆಯನ್ನೆದುರಿಸುತ್ತಿದ್ದು, ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳ ಮೂಲಕ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡಿದ ಅರೋಪವನ್ನೆದುರಿಸುತ್ತಿದೆ.

English summary
Facebook-owned WhatsApp has come forward to clarify that they keep very fewer data from the users and works on end-to-end encryption. WhatsApp made the statement to answer the questions which were raised by the critics after the Facebook-Cambridge Analytica scandal. Facebook acquired WhatsApp in the year 2014.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot