ಬರೋಬ್ಬರಿ 500 ಕೋಟಿ ಡೌನ್‌ಲೋಡ್‌ ಕಂಡ ವಾಟ್ಸ್‌ಆಪ್‌..!

By Gizbot Bureau
|

ಫೇಸ್‌ಬುಕ್‌ ಒಡೆತನದ ಮೆಸೇಜಿಂಗ್‌ ಆಪ್‌ ವಾಟ್ಸ್‌ಆಪ್‌ ಆಂಡ್ರಾಯ್ಡ್‌ನಲ್ಲಿ 500 ಕೋಟಿ ಡೌನ್‌ಲೋಡ್‌ಗಳನ್ನು ಕಂಡಿದೆ. ಈ ಮೈಲಿಗಲ್ಲು ಸ್ಥಾಪಿಸಿದ ಎರಡನೇ ಗೂಗಲೇತರ ಅಪ್ಲಿಕೇಶನ್ ಆಗಿದೆ. ಸ್ಟ್ಯಾಟಿಸ್ಟಾ ಪ್ರಕಾರ, ವಾಟ್ಸ್ಆಪ್ ವಿಶ್ವದಾದ್ಯಂತ ಸುಮಾರು 1.6 ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಫೇಸ್‌ಬುಕ್ ಮೆಸೆಂಜರ್ 1.3 ಬಿಲಿಯನ್ ಮತ್ತು ವೀಚಾಟ್ 1.1 ಬಿಲಿಯನ್ ಬಳಕೆದಾರರನ್ನು ಹೊಂದಿವೆ. ಫೇಸ್‌ಬುಕ್ ಮತ್ತು ಯೂಟ್ಯೂಬ್ ನಂತರ ವಿಶ್ವದ ಮೂರನೇ ಅತ್ಯಂತ ಜನಪ್ರಿಯ ಸಾಮಾಜಿಕ ನೆಟ್‌ವರ್ಕ್ ಆಗಿ ವಾಟ್ಸ್ಆಪ್‌ ಹೊರಹೊಮ್ಮಿದೆ .

ವಾಟ್ಸ್‌ಆಪ್‌

ವಾಟ್ಸ್‌ಆಪ್‌ನ ಡೌನ್‌ಲೋಡ್‌ ಸಂಖ್ಯೆ ಕೇವಲ ಪ್ಲೇ ಸ್ಟೋರ್‌ನ್ನು ಮಾತ್ರ ಅವಲಂಬಿಸಿಲ್ಲ. ಸ್ಯಾಮ್‌ಸಂಗ್ ಮತ್ತು ಹುವಾವೇಯಂತಹ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್‌ ಮಾಡಿದ ವಾಟ್ಸ್‌ಆಪ್‌ಗಳನ್ನು ಒಳಗೊಂಡಿದೆ ಎಂದು ಆಂಡ್ರಾಯ್ಡ್ ಪೊಲೀಸ್ ವರದಿ ಮಾಡಿದೆ.

ಗೂಗಲ್ ಪ್ಲೇ ಸ್ಟೋರ್‌

ಗೂಗಲ್ ಪ್ಲೇ ಸ್ಟೋರ್‌ ಪ್ರಕಾರ ವಾಟ್ಸ್‌ಆಪ್‌ ವೇಗವಾಗಿ ಬೆಳೆಯುತ್ತಿರುವ ದೇಶ ಎಂದರೆ ದಕ್ಷಿಣ ಕೊರಿಯಾ. ಇಲ್ಲಿ 2019ರಲ್ಲಿ ಸುಮಾರು ಶೇ.56ರಷ್ಟು ಆಪ್ ಡೌನ್‌ಲೋಡ್‌ನಲ್ಲಿ ಹೆಚ್ಚಳ ಕಂಡಿದೆ. ಐದು ವರ್ಷಗಳಲ್ಲಿ ಮೊದಲ ಬಾರಿಗೆ ಮೊಬೈಲ್‌ನ ಉನ್ನತ ಪ್ರಕಾಶಕರಾಗಿ ಫೇಸ್‌ಬುಕ್‌ನ್ನು ಗೂಗಲ್‌ ಆಯ್ಕೆ ಮಾಡಿಲ್ಲ. 2019ರ ಕೊನೆಯ ತ್ರೈಮಾಸಿಕದಲ್ಲಿ, ಫೇಸ್‌ಬುಕ್‌ನ ಸುಮಾರು 800 ಮಿಲಿಯನ್‌ಗೆ ಹೋಲಿಸಿದರೆ ಗೂಗಲ್ 850 ಮಿಲಿಯನ್ ಡೌನ್‌ಲೋಡ್‌ಗಳನ್ನು ಕಂಡಿದೆ ಎಂದು ವಿಶ್ಲೇಷಣಾ ಸಂಸ್ಥೆ ಸೆನ್ಸರ್ ಟವರ್ ಇತ್ತೀಚೆಗೆ ಬಹಿರಂಗಪಡಿಸಿದೆ.

ಗೂಗಲ್

ಆದರೆ, 2019ರಲ್ಲಿ ಗೂಗಲ್ ಸುಮಾರು 2.3 ಬಿಲಿಯನ್ ಡೌನ್‌ಲೋಡ್‌ಗಳನ್ನು ಕಂಡರೆ, ಫೇಸ್‌ಬುಕ್ ಸುಮಾರು 3 ಬಿಲಿಯನ್ ಡೌನ್‌ಲೋಡ್‌ಗಳನ್ನು ಗಳಿಸಿದೆ. ವಾಟ್ಸ್‌ಆಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮೆಸೆಂಜರ್ ಸೇರಿ ವಿಶ್ವದಾದ್ಯಂತ ಹೆಚ್ಚು ಡೌನ್‌ಲೋಡ್ ಮಾಡಲಾದ ಅಗ್ರ ಐದು ಅಪ್ಲಿಕೇಶನ್‌ಗಳಲ್ಲಿ ನಾಲ್ಕು ಆಪ್‌ಗಳ ಮಾಲೀಕತ್ವವನ್ನು ಫೇಸ್‌ಬುಕ್ ಹೊಂದಿದೆ, ಬೈಟ್‌ಡ್ಯಾನ್ಸ್ ಒಡೆತನದ ವಿಡಿಯೋ ಶೇರಿಂಗ್‌ ಅಪ್ಲಿಕೇಶನ್ ಟಿಕ್‌ಟಾಕ್ 2019ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಲ್ಲಿ ಎರಡನೇ ಸ್ಥಾನ ಹೊಂದಿದೆ.

Best Mobiles in India

Read more about:
English summary
WhatsApp Creates A Record With 5 Million Downloads On Android Alone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X