ವಾಟ್ಸ್‌ಆಪ್‌ ಇನ್ನು ಆಕರ್ಷಕ..! ಬರ್ತಿವೆ ಸಾಲು ಸಾಲು ಫೀಚರ್ಸ್‌..!

By Gizbot Bureau
|

ವಾಟ್ಸ್‌ಆಪ್‌ ತನ್ನ ಬಳಕೆದಾರರಿಗೆ ಸುಗಮ ಸಂದೇಶ ಮತ್ತು ಕರೆ ಅನುಭವ ಒದಗಿಸಲು ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಲೇ ಇದೆ. ಇದಕ್ಕಾಗಿ ಆಪ್‌ನ್ನು ನಿರಂತರವಾಗಿ ಅಪ್‌ಡೇಟ್‌ಗಳನ್ನು ನೀಡುತ್ತಾ ಬರುತ್ತಿದೆ. ತ್ವರಿತ ಸಂದೇಶ ಆಪ್‌ ಇತ್ತೀಚೆಗೆ ಹಲವಾರು ಫೀಚರ್‌ಗಳನ್ನು ಸೇರಿಸಿಕೊಂಡಿದೆ. ಇವುಗಳಲ್ಲಿ ಪ್ರಮುಖ ಮತ್ತು ಬಹುನಿರೀಕ್ಷಿತ ಫೀಚರ್‌ ಅಂದರೆ ಡಾರ್ಕ್ ಮೋಡ್‌ನ ಬೀಟಾ ಆವೃತ್ತಿ ಬಿಡುಗಡೆ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಈ ವಾರದ ಆರಂಭದಲ್ಲಿ ಸಿಗುವ ಅಥವಾ ಅಭಿವೃದ್ಧಿ ಹೊಂದುತ್ತಿರುವ ಕೆಲವು ಇತ್ತೀಚಿನ ನವೀಕರಣಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಡಾರ್ಕ್ ಮೋಡ್ ಫೀಚರ್‌

ಡಾರ್ಕ್ ಮೋಡ್ ಫೀಚರ್‌

ಸುಮಾರು ಒಂದು ವರ್ಷದ ಕಾಯುವಿಕೆಯ ನಂತರ, ವಾಟ್ಸ್‌ಆಪ್ ಇತ್ತೀಚೆಗೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಡಾರ್ಕ್ ಮೋಡ್ ಫೀಚರ್‌ನ್ನು ಹೊರತಂದಿದೆ. ಸದ್ಯಕ್ಕೆ ಈ ಫೀಚರ್‌ ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಒಎಸ್ ಆಪ್‌ನ ಬೀಟಾ ಆವೃತ್ತಿಯಲ್ಲಿ ಮಾತ್ರ ಗುರುತಿಸಲಾಗಿದ್ದರೂ, ಶೀಘ್ರದಲ್ಲಿಯೇ ಎಲ್ಲಾ ಬಳಕೆದಾರರಿಗೂ ಲಭ್ಯವಾಗುತ್ತದೆ.

ಬೀಟಾ ಎಪಿಕೆಯಲ್ಲಿ ಲಭ್ಯ

ನೀವು ಡಾರ್ಕ್‌ ಮೋಡ್‌ ಫೀಚರ್‌ ಬಳಸಲು ಬಯಸಿದರೆ, ನೀವು ಸ್ಥಿರ ಆಪ್‌ನಲ್ಲಿ ಕಾಯಲು ಸಾಧ್ಯವಾಗದಿದ್ದರೆ, ಅಪ್ಲಿಕೇಶನ್‌ನ ಇತ್ತೀಚಿನ ಆಂಡ್ರಾಯ್ಡ್ ಬೀಟಾ ಆವೃತ್ತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆದರೆ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬೀಟಾ ಆವೃತ್ತಿಯ ಡೌನ್‌ಲೋಡ್‌ ಮಿತಿ ಮೀರಿರೋ ಕಾರಣ, ಎಪಿಕೆ ಆವೃತ್ತಿಯನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

ಡಾರ್ಕ್‌ ಮೋಡ್‌ ಹೇಗೆ ಆಕ್ಟಿವ್‌?

ಡಾರ್ಕ್‌ ಮೋಡ್‌ ಹೇಗೆ ಆಕ್ಟಿವ್‌?

ಆಂಡ್ರಾಯ್ಡ್ ಫೋನ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಹೇಗೆ ಸಕ್ರಿಯಗೊಳಿಸಬಹುದು ಎಂಬುದರ ಸ್ಕ್ರೀನ್‌ಶಾಟ್‌ಗಳನ್ನು ಬ್ಲಾಗ್ ಹಂಚಿಕೊಂಡಿದೆ. ಫೀಚರ್‌ ಸಕ್ರಿಯಗೊಳಿಸಲು, ನೀವು ಮೊದಲು ಅಪ್ಲಿಕೇಶನ್‌ನ ಇತ್ತೀಚಿನ ಆಂಡ್ರಾಯ್ಡ್ ಬೀಟಾ ಆವೃತ್ತಿಗೆ ನವೀಕರಿಸಬೇಕು. ನಂತರ ಸೆಟ್ಟಿಂಗ್ಸ್‌> ಚಾಟ್ಸ್> ಡಿಸ್‌ಪ್ಲೇ> ಥೀಮ್> ಡಾರ್ಕ್ ಥೀಮ್‌ಗೆ ಹೋಗಿ ಸಕ್ರಿಯಗೊಳಿಸಿ.

ಡಾರ್ಕ್‌ ಸ್ಪ್ಲಾಶ್‌

ಡಾರ್ಕ್‌ ಸ್ಪ್ಲಾಶ್‌

ಐಫೋನ್ ಬಳಕೆದಾರರಿಗಾಗಿ ಐಒಎಸ್ ಬೀಟಾ ಅಪ್‌ಡೇಟ್‌ನಲ್ಲಿ ಡಾರ್ಕ್ ಸ್ಪ್ಲಾಶ್ ಪರದೆಯನ್ನು ನೀಡಿದೆ. ಇದನ್ನು ಈಗಾಗಲೇ ಪೂರ್ವನಿಯೋಜಿತವಾಗಿ ಸಕ್ರಿಯಗೊಳಿಸಲಾಗಿದೆ. ಇನ್ನು, ತಿರುಚಿದ ಫಾರ್ವರ್ಡ್ ಬಟನ್ ಚಿಹ್ನೆ, ನವೀಕರಿಸಿದ ಗುಂಪು ಮತ್ತು ಪ್ರೊಫೈಲ್ ಐಕಾನ್‌ಗಳು, ಡಾರ್ಕ್‌ ಬಣ್ಣಗಳನ್ನು ಬೆಂಬಲಿಸುತ್ತವೆ. ಅಪ್ಲಿಕೇಶನ್‌ನ ಉನ್ನತ ಪಟ್ಟಿಯ ಐಕಾನ್‌ಗಳು ನವೀಕರಣಗಳನ್ನು ಸಹ ಪಡೆದಿವೆ.

ಆನಿಮೇಟೆಡ್ ಸ್ಟಿಕ್ಕರ್ಸ್‌

ಆನಿಮೇಟೆಡ್ ಸ್ಟಿಕ್ಕರ್ಸ್‌

ಶೀಘ್ರದಲ್ಲೇ ಹೊರಬರಬಹುದಾದ ಮತ್ತೊಂದು ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಆನಿಮೇಟೆಡ್ ಸ್ಟಿಕ್ಕರ್ಸ್. ಆಂಡ್ರಾಯ್ಡ್‌ಗಾಗಿ ತನ್ನ ಇತ್ತೀಚಿನ ವಾಟ್ಸ್‌ಆಪ್ ಬೀಟಾ ಅಪ್‌ಡೇಟ್‌ನಲ್ಲಿ ಆನಿಮೇಟೆಡ್ ಸ್ಟಿಕ್ಕರ್‌ಗಳ ಪ್ಯಾಕ್‌ಗೆ ಬೆಂಬಲವನ್ನು ಪರೀಕ್ಷಿಸಿದೆ. ಟೆಲಿಗ್ರಾಮ್ ಮತ್ತು ಇತರ ಚಾಟ್ ಅಪ್ಲಿಕೇಶನ್‌ಗಳಲ್ಲಿ ಇಂತಹ ಸ್ಟಿಕ್ಕರ್‌ಗಳು ಈಗಾಗಲೇ ಲಭ್ಯವಿದೆ. ಈ ಆನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ ಅನ್ನು ಸ್ಟಿಕ್ಕರ್‌ಗಳ ಟ್ಯಾಬ್‌ಗೆ ಸೇರಿಸುವ ನಿರೀಕ್ಷೆಯಿದೆ, ಈ ಟ್ಯಾಬ್‌ ಅಪ್ಲಿಕೇಶನ್‌ನಲ್ಲಿ ಈಗಾಗಲೇ ಅಸ್ತಿತ್ವದಲ್ಲಿದೆ. ನಿಶ್ಚಲವಾದ ಸ್ಟಿಕ್ಕರ್‌ಗಳು ಮತ್ತು ಜಿಐಎಫ್‌ಗಳನ್ನು ಫಾರ್ವರ್ಡ್ ಮಾಡುವಂತೆಯೇ ಬಳಕೆದಾರರು ಈ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಇತರ ಸಂಪರ್ಕಗಳಿಗೆ ರವಾನಿಸಲು ಸಾಧ್ಯವಾಗುತ್ತದೆ.

ಸ್ವಯಂ-ವಿನಾಶಕಾರಿ ಸಂದೇಶ ವೈಶಿಷ್ಟ್ಯ

ಸ್ವಯಂ-ವಿನಾಶಕಾರಿ ಸಂದೇಶ ವೈಶಿಷ್ಟ್ಯ

ಪ್ರಸ್ತುತ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಲಭ್ಯವಿದ್ದರೂ, ಈ ನವೀಕರಣವು ಬಳಕೆದಾರರು ನಿಗದಿಪಡಿಸಿದ ನಿರ್ದಿಷ್ಟ ಅವಧಿಯ ನಂತರ ಸಂದೇಶವನ್ನು ಸ್ವಯಂಚಾಲಿತವಾಗಿ ಅಳಿಸುತ್ತದೆ. ಲಭ್ಯವಾದ ನಂತರ, 'ಸಂದೇಶವನ್ನು ಅಳಿಸು' ಫೀಚರ್‌ ಟಾಗಲ್ ಆನ್ / ಆಫ್ ಬಟನ್‌ನೊಂದಿಗೆ ಬರುತ್ತದೆ ಮತ್ತು ಸಂದೇಶಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗಲು ಬಳಕೆದಾರರು ನಿರ್ದಿಷ್ಟ ಸಮಯವನ್ನು ಆಯ್ಕೆ ಮಾಡಬಹುದು. ಸಮಯವನ್ನು ಆಯ್ಕೆ ಮಾಡಲು ಐದು ಆಯ್ಕೆಗಳಿದ್ದು, 1 ಗಂಟೆ, 1 ದಿನ, 1 ವಾರ, 1 ತಿಂಗಳು ಮತ್ತು 1 ವರ್ಷದ ಆಯ್ಕೆಗಳು ಸಿಗುತ್ತವೆ. ಅದರಂತೆ, ಆ ಚಾಟ್‌ಗೆ ಕಳುಹಿಸಿದ ಸಂದೇಶಗಳು ಕಣ್ಮರೆಯಾಗುತ್ತವೆ.

Best Mobiles in India

Read more about:
English summary
WhatsApp Dark Mode, Animated Stickers, Introduced: Everything You Need To Know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X