ವಾಟ್ಸ್ ಆಪ್ ನಲ್ಲಿ ಬರಲಿದೆ ಇನ್ಸ್ಟಾಗ್ರಾಂನಲ್ಲಿರುವಂತಹ ಫೀಚರ್
ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಇನ್ಸ್ಟಾಗ್ರಾಂನಲ್ಲಿರುವಂತಹ ವೈಶಿಷ್ಟ್ಯತೆಯನ್ನು ಸೇರಿಸುತ್ತಿದ್ದು ಇದು ಕಾಂಟ್ಯಾಕ್ಸ್ ಗಳನ್ನು ಸುಲಭದಲ್ಲಿ ಸೇರಿಸಿಕೊಳ್ಳಲು ನೆರವು ನೀಡುತ್ತದೆ. "Share Contact Info via QR" ಅನ್ನೋ ಹೊಸ ಫೀಚರ್ ವೊಂದನ್ನು ಸೇರಿಸುವುದಕ್ಕೆ ವಾಟ್ಸ್ ಆಪ್ ಚಿಂತನೆ ನಡೆಸಿದೆ. ವ್ಯಕ್ತಿಯ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡುವ ಮೂಲಕವೇ ಹೊಸ ಕಾಂಟ್ಯಾಕ್ಟ್ ನ್ನು ಸೇರಿಸಿಕೊಳ್ಳುವುದಕ್ಕೆ ಇದು ನೆರವು ನೀಡುತ್ತದೆ.

ಇನ್ಸ್ಟಾಗ್ರಾಂನಲ್ಲಿರುವ ನೇಮ್ ಟ್ಯಾಗ್ ಫೀಚರ್ ನಂತೆಯೇ ಇದು ಕೆಲಸ ಮಾಡುತ್ತದೆ. ವಾಟ್ಸ್ ಆಪ್ ಪ್ರತಿಯೊಬ್ಬ ಬಳಕೆದಾರರಿಗೂ ಪ್ರತ್ಯೇಕ ಕ್ಯೂಆರ್ ಕೋಡ್ ನ್ನು ಜನರೇಟ್ ಮಾಡುತ್ತದೆ ಮತ್ತು ಅದನ್ನು ಅವರು ಇತರರಿಗೆ ತೋರಿಸಬಹುದು ಮತ್ತು ಅವರ ಕಾಂಟ್ಯಾಕ್ಟ್ ಲಿಸ್ಟ್ ಗೆ ಅದರಿಂದಲೇ ಆಡ್ ಆಗಬಹುದು.ಕ್ಯೂರ್ ಕೋಡ್ ಸ್ವಯಂಚಾಲಿತವಾಗಿ ಕಾಂಟ್ಯಾಕ್ಟ್ ಫಾರ್ಮ್ ನ ಎಲ್ಲಾ ಫೀಲ್ಡ್ ಗಳನ್ನು ಭರ್ತಿ ಮಾಡಿ ನಿಮ್ಮ ಕಾಂಟ್ಯಾಕ್ಟ್ ಆಪ್ ನಲ್ಲಿ ಸೇವ್ ಮಾಡುತ್ತದೆ. ಈ ಬಗ್ಗೆ ವಾಬೇಟಾ ಇನ್ಫೋ ಮಾಹಿತಿಯನ್ನು ನೀಡಿದೆ.
ಇತ್ತೀಚೆಗಷ್ಟೇ ವಾಟ್ಸ್ ಆಪ್ ಸ್ಟಿಕ್ಕರ್ಸ್ ಫೀಚರ್ ನ್ನು ಹೊಸದಾಗಿ ಸೇರಿಸಿದೆ. ಈಗಾಗಲೇ ಲಭ್ಯವಿರುವ ಎಮೋಜಿಗಳು ಮತ್ತು ಜಿಫ್ ಗಳನ್ನು ಹೊರತುಪಡಿಸಿ ಇತರೆ ಸ್ಟಿಕ್ಕರ್ಸ್ ಗಳನ್ನು ಕೂಡ ಇದು ಸೆಂಡ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಈ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯವಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಕೆಲವು ಡೀಫಾಲ್ಟ್ ಸ್ಟಿಕ್ಕರ್ ಗಳು ಲಭ್ಯವಿದ್ದು ಗೂಗಲ್ ಪ್ಲೇಯಿಂದ ಥರ್ಡ್ ಪಾರ್ಟಿ ಸ್ಟಿಕ್ಕರ್ ಗಳನ್ನು ಡೌನ್ ಲೋಡ್ ಮಾಡಿ ಸೇರಿಸಿಕೊಳ್ಳಬಹುದು. ಅಷ್ಟೇ ಅಲ್ಲ ಆಂಡ್ರಾಯ್ಡ್ ಬಳಕೆದಾರರು ತಮ್ಮದೇ ಸ್ವಂತ ಕಸ್ಟಮ್ ಸ್ಟಿಕ್ಕರ್ ಗಳನ್ನು ಸೇರಿಸಿಕೊಳ್ಳಬಹುದು.
ಇತ್ತೀಚೆಗೆ ವಾಟ್ಸ್ ಆಪ್ ತನ್ನ ಫೈಲ್ ಗಳು ಇನ್ನು ಮುಂದೆ ಇರುವುದಿಲ್ಲ ಡಿಲೀಟ್ ಆಗುತ್ತದೆ ಎಂದು ತಿಳಿಸಿದ್ದು ಅಗತ್ಯವಿದ್ದರೆ ಗೂಗಲ್ ಡ್ರೈವ್ ನಲ್ಲಿ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳುವಂತೆ ಸೂಚಿಸಿದೆ. ಅಗಸ್ಟ್ ನಲ್ಲೇ ಪ್ರಕಟಪಡಿಸಿದ್ದ ಈ ಸೂಚನೆ ಇದೀಗ ಗೂಗಲ್ ಡ್ರೈವ್ ಸ್ಟೋರೇಜ್ ನಲ್ಲಿ ಪ್ರತಿಬಿಂಬಿಸುತ್ತಿದೆ.
ಇದೀಗ ಗೂಗಲ್ ಉಚಿತ ಸ್ಟೋರೇಜ್ ವ್ಯವಸ್ಥೆ ಕಲ್ಪಿಸಿದ್ದು ಗೂಗಲ್ ಡ್ರೈವ್ ನಲ್ಲಿ ಎಷ್ಟು ಬೇಕಿದ್ದರೂ ವಾಟ್ಸ್ ಆಪ್ ಫೈಲ್ ಗಳನ್ನು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳಲು ಗ್ರಾಹಕರಿಗೆ ಅವಕಾಶವಿರುತ್ತದೆ.ಒಂದು ವೇಳೆ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳದೇ ಇದ್ದಲ್ಲಿ ವಾಟ್ಸ್ ಆಪ್ ಸ್ವಯಂಚಾಲಿತವಾಗಿ ಡಾಟಾಗಳನ್ನು ಡಿಲೀಟ್ ಮಾಡುತ್ತದೆ.
ಒಂದು ವೇಳೆ ನೀವು ಕಳೆದ ಹಲವು ವರ್ಷಗಳಿಂದ ವಾಟ್ಸ್ ಆಪ್ ನ್ನು ಒಂದೇ ಸ್ಮಾರ್ಟ್ ಫೋನ್ ನಲ್ಲಿ ಬಳಕೆ ಮಾಡುತ್ತಿದ್ದಲ್ಲಿ ಕೂಡಲೇ ಅದನ್ನು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳಿ ಮತ್ತು ಗೂಗಲ್ ಡ್ರೈವ್ ನಲ್ಲಿ ಸೇವ್ ಮಾಡಿಕೊಳ್ಳಿ ಇಲ್ಲದೇ ಇದ್ದಲ್ಲಿ ಈ ಡಾಟಾಗಳು ಸ್ವಯಂಚಾಲಿತವಾಗಿ ಡಿಲೀಟ್ ಆಗಿ ಬಿಡುತ್ತದೆ ಮತ್ತು ಎಂದಿಗೂ ನಿಮಗೆ ಮರಳಿ ಸಿಗುವುದಿಲ್ಲ.


Click it and Unblock the Notifications








