ವಾಟ್ಸ್ ಆಪ್ ನ ಗ್ರೂಪ್ ಸ್ಟಿಕ್ಕರ್ ಗಳು ಇದೀಗ ವಾಟ್ಸ್ ಆಪ್ ವೆಬ್ ನಲ್ಲೂ ಲಭ್ಯ- ಆಕ್ಟಿವೇಟ್ ಮಾಡುವುದು ಹೇಗೆ ಗೊತ್ತಾ?

By Gizbot Bureau
|

ವಾಟ್ಸ್ ಆಪ್ ನಲ್ಲಿ ಲಭ್ಯವಿರುವ ಸ್ಟಿಕ್ಕರ್ ಇತ್ತೀಚೆಗೆ ವಾಟ್ಸ್ ಆಪ್ ಬಳಸುತ್ತಿರುವವರ ಹಾಟ್ ಫೇವರೆಟ್ ಅನ್ನಿಸಿಕೊಂಡಿದೆ. ಅದೇ ಕಾರಣಕ್ಕೆ ವಾಟ್ಸ್ ಆಪ್ ಬಳಕೆದಾರರ ಸಂತೋಷಕ್ಕಾಗಿ ಈ ಫೀಚರ್ ನ್ನು ಮತ್ತಷ್ಟು ಆಹ್ಲಾದಕರಗೊಳಿಸುತ್ತಲೇ ಇರುತ್ತದೆ. ಐಓಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಕೂಡ ಒಂದು ವೇಳೆ ನೀವು ಎರಡು ಸ್ಟಿಕ್ಕರ್ ಗಳನ್ನು ಒಟ್ಟಿಗೆ ಕಳುಹಿಸಿದರೆ ಸ್ಟಿಕ್ಕರ್ ಗಳು ಒಂದೇ ಚಾಟ್ ವಿಂಡೋದಲ್ಲಿ ಜೋಡಿಸಲ್ಪಟ್ಟಿರುತ್ತದೆ. ಆ ಮೂಲಕ ಜಾಗದ ಉಳಿತಾಯ ಮಾಡುವ ಉದ್ದೇಶವನ್ನು ಇದರಲ್ಲಿ ಹೊಂದಲಾಗಿದೆ.

ವಾಟ್ಸ್ ಆಪ್

ಸಣ್ಣ ಸ್ಕ್ರೀನಿನ ಡಿವೈಸ್ ಗಳಲ್ಲಿ ವಾಟ್ಸ್ ಆಪ್ ನ ಈ ಫೀಚರ್ ಬಹಳ ಪ್ರಯೋಜನಕಾರಿಯಾಗಿರುತ್ತದೆ. ಇದೀಗ ವಾಟ್ಸ್ ಆಪ್ ತನ್ನ ವೆಬ್ ವರ್ಷನ್ ನಲ್ಲೂ ಕೂಡ ಸ್ಟಿಕ್ಕರ್ ಗಳ ಲಭ್ಯತೆಯನ್ನು ಮಾಡುತ್ತಿದೆ.

ವಾಬೇಟಾಇನ್ಫೋ

ವಾಬೇಟಾಇನ್ಫೋ ನೀಡಿರುವ ಮಾಹಿತಿಯ ಪ್ರಕಾರ ವಾಟ್ಸ್ ಆಪ್ ವೆಬ್ ನಲ್ಲಿ ಗ್ರೂಪ್ ನ ಸ್ಟಿಕ್ಕರ್ ಗಳನ್ನು ಈಗಾಗಲೇ ಅನೇಬಲ್ ಮಾಡಲಾಗಿದೆ. ಒಂದು ವೇಳೆ ವಾಟ್ಸ್ ಆಪ್ ವೆಬ್ ನ್ನು ಪಿಸಿಯಲ್ಲಿ ನೀವು ಬಳಸುತ್ತಿದ್ದರೆ ಇದೀಗ ಎರಡು ಸ್ಟಿಕ್ಕರ್ ಗಳನ್ನು ಒಟ್ಟಿಗೆ ಕಳುಹಿಸಿದ್ದರೆ ಒಂದೇ ಚಾಟ್ ನಲ್ಲಿ ನೋಡುವುದಕ್ಕೆ ಸಾಧ್ಯವಾಗುತ್ತದೆ.ಇದು ಸ್ಮಾರ್ಟ್ ಫೋನಿನಲ್ಲಿ ಜಾಗದ ಉಳಿತಾಯ ಮಾಡಿದಂತೆ ಇಲ್ಲೂ ಕೂಡ ಜಾಗದ ಉಳಿತಾಯಕ್ಕೆ ನೆರವಾಗುತ್ತದೆ.ಯಾರು ಅತೀ ಹೆಚ್ಚು ಟೆಕ್ಸ್ಟ್ ಮೆಸೇಜ್ ಗಳನ್ನು ಕಳುಹಿಸುತ್ತಿರುತ್ತಾರೋ ಅವರು ಇದೀಗ ಸ್ಟಿಕ್ಕರ್ ಗಳನ್ನು ಕಳುಹಿಸಿದಾಗಲೂ ಕೂಡ ಹೆಚ್ಚು ಟೆಕ್ಸ್ಟ್ ಗಳನ್ನು ನೋಡುವುದಕ್ಕೆ ಸಾಧ್ಯವಾಗುತ್ತದೆ.

ಸ್ಟಿಕ್ಕರ್

ಆದರೆ ನೆನಪಡಿ. ಈ ಫೀಚರ್ ನೀವು ಎರಡು ಸ್ಟಿಕ್ಕರ್ ಗಳನ್ನು ಒಟ್ಟಿಗೆ ಸೆಂಡ್ ಮಾಡಿದಾಗ ಮಾತ್ರವೇ ಕೆಲಸ ಮಾಡುತ್ತದೆ. ಒಂದು ವೇಳೆ ಎರಡಕ್ಕಿಂತ ಹೆಚ್ಚು ಸ್ಟಿಕ್ಕರ್ ಗಳನ್ನು ಕಳುಹಿಸಿದರೆ ವಾಟ್ಸ್ ಆಪ್ ವೆಬ್ ನಲ್ಲಿ ಎರಡು ಸ್ಟಿಕ್ಕರ್ ಗಳು ಒಂದೇ ಲೈನಿನಲ್ಲಿ ಬರುತ್ತದೆ ಮತ್ತು ಮೂರನೆಯ ಸ್ಟಿಕ್ಕರ್ ಆ ಲೈನಿನ ಕೆಳಭಾಗ ಸಪರೇಟ್ ಆಗಿರುತ್ತದೆ.

ವಾಬೇಟಾಇನ್ಫೋ

ವಾಬೇಟಾಇನ್ಫೋ ಹೇಳಿರುವ ಪ್ರಕಾರ ಬಳಕೆದಾರರು ಈ ಫೀಚರ್ ನ್ನು ಬಳಸುವುದಕ್ಕಾಗಿ ತಮ್ಮ ವಾಟ್ಸ್ ಆಪ್ ವೆಬ್ ನ್ನು ರೀಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಗ್ರೂಪ್ ಸ್ಟಿಕ್ಕರ್ ನ ಈ ವೈಶಿಷ್ಟ್ಯತೆಯು ಬಹಳ ಹಿಂದೆಯೇ ಸ್ಮಾರ್ಟ್ ಫೋನಿನಲ್ಲಿ ಲಭ್ಯವಿತ್ತು. ಆದರೆ ಇದೀಗ ವೆಬ್ ವರ್ಷನ್ ನಲ್ಲೂ ಕೂಡ ಲಭ್ಯವಾಗುತ್ತಿದ್ದು ಬಳಕೆದಾರರಿಗೆ ಖಂಡಿತ ಸಂತಸದ ಸುದ್ದಿಯಾಗಿದೆ.

ವಾಟ್ಸ್ ಆಪ್

ವಾಟ್ಸ್ ಆಪ್ ಇತ್ತೀಚೆಗೆ ಇಂತಹ ಹಲವು ಪ್ರಮುಖ ಫೀಚರ್ ಗಳನ್ನು ಪರಿಚಯಿಸಿದ್ದು ಆಂಡ್ರಾಯ್ಡ್ ಬಳಕೆದಾರರ ವಯಕ್ತಿಕ ಭದ್ರತೆಯ ಬಗ್ಗೆ ಕಾಳಜಿಯನ್ನು ತೆಗೆದುಕೊಂಡಿದೆ. ಫಿಂಗರ್ ಪ್ರಿಂಟ್ ಅನ್ ಲಾಕ್ ಬಳಸಿ ವಾಟ್ಸ್ ಆಪ್ ನ ಆಂಡ್ರಾಯ್ಡ್ ಬಳಕೆದಾರರು ಇದೀಗ ತಮ್ಮ ಚಾಟ್ ನ್ನು ಮತ್ತಷ್ಟು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.ಒಮ್ಮೆ ಈ ಫೀಚರ್ ಅನೇಬಲ್ ಆದ ನಂತರ ಬಳಕೆದಾರರು ಫಿಂಗರ್ ಪ್ರಿಂಟ್ ಬಳಸಿಯೇ ಪ್ರತಿ ಬಾರಿಯೂ ಆಪ್ ನ್ನು ತೆರೆಯಬೇಕಾಗುತ್ತದೆ. ಇದು ನೀವು ನಿಮ್ಮ ಮೊಬೈಲನ್ನು ಇತರರಿಗೆ ಕೊಟ್ಟಾಗ ವಾಟ್ಸ್ ಆಪ್ ಚಾಟ್ ನ್ನು ಅವರಿಗೆ ಗೊತ್ತಾಗದಂತೆ ಸೆಕ್ಯೂರ್ ಆಗಿ ಇಡಬೇಕು ಎಂದುಕೊಂಡಿದ್ದಲ್ಲಿ ಈ ವೈಶಿಷ್ಟ್ಯತೆಯು ನೆರವಿಗೆ ಬರುತ್ತದೆ. ಇದು ಕೆಪಾಸಿಟೀವ್ ಮತ್ತು ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಎರಡರಲ್ಲೂ ಕೂಡ ಕಾರ್ಯ ನಿರ್ವಹಿಸುತ್ತದೆ.

Most Read Articles
Best Mobiles in India

Read more about:
English summary
WhatsApp Group Stickers Now Available On WhatsApp Web

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X