ವಾಟ್ಸ್ ಆಪ್ ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆ..!
ಈಗಾಗಲೇ ಐಎಸ್ಒ ಬೀಟಾ ಆವೃತ್ತಿಯ ವಾಟ್ಸ್ ಆಪ್ ಬಳಕೆದಾರರಿಗೆ ಗ್ರೂಪ್ ವಿಡಿಯೋ ಕಾಲಿಂಗ್ ಫೀಚರ್ ಅನ್ನು ನೀಡಲಾಗಿದೆ.
ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಹೊಸದೊಂದು ಆಚ್ಚರಿಯ ಆಯ್ಕೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ಒಂದು ಬಿಲಿಯನ್ ಮಂದಿ ಈ ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮೊನ್ನೆ ತಾನೇ ಲೈವ್ ಲೋಕೆಷನ್ ಕಳುಹಿಸುವ ಆಯ್ಕೆಯನ್ನು ನೀಡಿದ್ದ ವಾಟ್ಸ್ ಆಪ್ ಈ ಬಾರಿ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಈಗಾಗಲೇ ಐಎಸ್ಒ ಬೀಟಾ ಆವೃತ್ತಿಯ ವಾಟ್ಸ್ ಆಪ್ ಬಳಕೆದಾರರಿಗೆ ಗ್ರೂಪ್ ವಿಡಿಯೋ ಕಾಲಿಂಗ್ ಫೀಚರ್ ಅನ್ನು ನೀಡಲಾಗಿದೆ. ಶೀಘ್ರವೇ ಈ ಆಯ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದ್ದು, ಇದು ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ.
ಈ ಹಿಂದೆಯೇ ವಾಟ್ಸ್ ಆಪ್ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಬೇಕು ಎಂದು ಚಿಂತನೆ ನಡೆಸಿ, ಅದೇ ಕಾರ್ಯದಲ್ಲಿ ನಿರತವಾಗಿತ್ತು ಎನ್ನಲಾಗಿದೆ. ಇದೇ ಮಾದರಿಯಲ್ಲಿ ಫೇಸ್ ಬುಕ್ ತನ್ನ ಮೇಸೆಂಜರ್ ಆಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯನ್ನು ಪರಿಚಯಿಸಿತ್ತು.
ವಾಟ್ಸ್ ಆಪ್ ಬಳಕೆ ಮಾಡುತ್ತಿರುವ ಅತೀ ಹೆಚ್ಚು ಮಂದಿ ಈ ಆಯ್ಕೆಯ ಬರುವಿಕೆಯನ್ನು ಕಾಯುತ್ತಿದ್ದಾರೆ ಎನ್ನಾಗಿದೆ. ಈಗಾಗಲೇ ವಾಟ್ಸ್ ಆಪ್ ವಿಡಿಯೋ ಕಾಲಿಂಗ್ ಆಯ್ಕೆಯೂ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವುದು ಇದಕ್ಕೇ ಸಾಕ್ಷಿ ಎನ್ನಲಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಲೈವ್ ಲೋಕೆಷನ್ ಶೇರ್ ಮಾಡುವ ಆಯ್ಕೆಯೂ ಬಳಕೆದಾರರ ಮೆಚ್ಚುಗೆಯನ್ನು ಪಡೆದುಕೊಂಡಿದೆ ಎನ್ನವ ಮಾತು ಸಹ ಕೇಳಿ ಬಂದಿದೆ.


Click it and Unblock the Notifications








