TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ವಾಟ್ಸ್ ಆಪ್ ನಲ್ಲಿ ಈಗ ಮತ್ತಷ್ಟು ವೈಶಿಷ್ಟ್ಯಗಳನ್ನು ಕಾಣಬಹುದು. ಅದರಲ್ಲೂ ಪ್ರಮುಖವಾಗಿ ವಾಟ್ಸ್ ಆಪ್ ಗುಂಪಿನಲ್ಲಿ ಹೆಚ್ಚು ಅವಕಾಶಗಳು ಲಭ್ಯವಾಗಿದೆ. ಈ ಹೊಸ ವೈಶಿಷ್ಟ್ಯಗಳು ಸ್ಟೇಬಲ್ ಆಂಡ್ರಾಯ್ಡ್ ಮತ್ತು iOS ವರ್ಷನ್ ಗಳಲ್ಲಿ ಲಭ್ಯವಿದೆ. ಹೆಚ್ಚಿನ ಹೊಸ ವೈಶಿಷ್ಟ್ಯತೆಗಳು ಈಗಾಗಲೇ ಆಂಡ್ರಾಯ್ಡ್ ಬೆಟಾ ಬಿಲ್ಡ್ಸ್ ಮತ್ತು ಸ್ಟೇಬಲ್ ವರ್ಷನ್ ಗಳಲ್ಲಿ ಕಾಣಬಹುದಾಗಿದೆ. ಕೆಲವನ್ನು ಮೊದಲಿನ ಬೆಟಾ ಬಿಲ್ಡ್ಸ್ ನಲ್ಲಿ ಕಾಣಬಹುದಾಗಿತ್ತು ಆದರೆ ನಂತರದ ದಿನಗಳಲ್ಲಿ ಅದನ್ನು ಮತ್ತೆ ನಿಷ್ಕ್ರಿಯಗೊಳಿಸಲಾಗಿತ್ತು.
ಆದರೆ ಈಗ ಅಧಿಕೃತವಾಗಿ ವಾಟ್ಸ್ ಆಪ್ ಗ್ರೂಪಿನ ಅಡ್ಮಿನ್ ಗಳಿಗೆ ಹೊಸ ವೈಶಿಷ್ಯತೆಗಳನ್ನು ಬಳಸಿ ಗ್ರೂಪನ್ನು ಕಂಟ್ರೋಲ್ ಮಾಡಲು ಅವಕಾಶ ನೀಡಲಾಗಿದೆ. ಮೆನ್ಶನ್ ಬಟನ್, ಗುಂಪಿನ ಸದಸ್ಯರ ಹುಡುಕಾಟಕ್ಕೆ ಅವಕಾಶ,ಗ್ರೂಪಿನ ವಿವರಣೆಯನ್ನು ಜೋಡಿಸಲು ಅವಕಾಶ ಮತ್ತು ಹೀಗೆ ಹಲವು ವೈಶಿಷ್ಟ್ಯತೆಗಳಿವೆ.
ಈ ಎಲ್ಲಾ ವೈಶಿಷ್ಟ್ಯಗಳು ಈಗಾಗಲೇ ಚಾಲ್ತಿಯಲ್ಲಿರುವ ಗುಂಪುಗಳಿಗೆ ಮತ್ತು ಹೊಸದಾಗಿ ಹುಟ್ಟುವ ಎಲ್ಲಾ ಗುಂಪುಗಳಿಗೂ ಅನ್ವಯವಾಗಲಿದೆ. ಈ ಎಲ್ಲಾ ಹೊಸ ವೈಶಿಷ್ಟ್ಯತೆಗಳ ಬಗ್ಗೆ ಈ ಮೇಲ್ ಮೂಲಕ ತಿಳಿಸಲಾಗಿದೆ. ಈ ಮೂಲಕ ವಾಟ್ಸ್ ಅಪ್ ಗುಂಪುಗಳು, ಒಟ್ಟು ವಾಟ್ಸ್ ಆಪ್ ನ ಅನುಭವಕ್ಕೆ ಹೆಚ್ಚಿನ ಅವಕಾಶ ನೀಡಲಿದೆ ಅನ್ನುವುದು ದೃಢವಾಗಿದೆ. ಈ ವೈಶಿಷ್ಟ್ಯಗಳು ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಸೃಷ್ಟಿ ಮಾಡಿದೆ. ಇಲ್ಲಿ ಗ್ರೂಪ್ ಅಡ್ಮಿನ್ ಗಳಿಗೆ ನೀಡಲಾಗಿರುವ ಹೊಸ ಅವಕಾಶಗಳನ್ನು ಪಟ್ಟಿ ಮಾಡಿದ್ದೇವೆ.
ಗ್ರೂಪ್ ವಿವರಣೆ
ಇತ್ತೀಚೆಗಿನ ಅಪ್ಡೇಟ್ ಪ್ರಕಾರ, ಫೇಸ್ಬುಕ್ ಮಾಲೀಕತ್ವದ ಮೇಸೇಜ್ ಮಾಡುವ ವೇದಿಕೆಯಾಗಿರುವ ವಾಟ್ಸ್ ಆಪ್, ಗುಂಪಿನ ನಾಯಕನಿಗೆ ಗುಂಪಿನ ವಿವರಣೆಯನ್ನು ಜೋಡಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅಂದರೆ ಗ್ರೂಪ್ ಅಡ್ಮಿನ್ ಗಳು Add a group description ಅನ್ನುವ ಹೊಸ ಅವಕಾಶವನ್ನು ಗ್ರೂಪಿನ ಸಕ್ರಿಯ ಪಾಲ್ಗೊಳ್ಳುವಿಕೆಗಾಗಿ ಬಳಸಿಕೊಳ್ಳಬಹುದಾಗಿದೆ. ಈ ಮೂಲಕ ಗ್ರೂಪಿನ ಉದ್ದೇಶ ಮತ್ತು ಗ್ರೂಪಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ಎಲ್ಲಾ ಸದಸ್ಯರಿಗೆ ತಿಳಿಯುವಂತೆ ಬರೆಯಬಹುದು. ಈ ಡಿಸ್ಕ್ರಿಪ್ಶನ್ ನ್ನು ಗುಂಪಿನ ನಾಯಕ ಬದಲಾಯಿಸಬಹುದು. ಅಷ್ಟೇ ಅಲ್ಲ ,ಗುಂಪಿನ ಯಾವುದಾದರೂ ಸದಸ್ಯರಿಗೆ ಬೇಕಾದರೂ ಇದನ್ನು ಬದಲಾಯಿಸಲು ಗುಂಪಿನ ನಾಯಕ ಅವಕಾಶ ಕೊಡಬಹುದು ಅಥವಾ ಕೊಡದೆಯೂ ಇರಬಹುದು.
ವಾಟ್ಸ್ ಆಪ್ ಗ್ರೂಪಿನ ಅಡ್ಮಿನ್ ನಿಯಂತ್ರಿಸಬಹುದಾದ ಅಂಶಗಳು
ಗ್ರೂಪ್ ಡಿಸ್ಕ್ರಿಪ್ಶನ್ ಹೊರತು ಪಡಿಸಿ ಇನ್ನಿತರೆ ಹಲವು ಅಧಿಕಾರಗಳನ್ನು ಗ್ರೂಪ್ ಅಡ್ಮಿನ್ ಗಳಿಗೆ ನೀಡಲಾಗಿದೆ. ಗ್ರೂಪ್ ಅಡ್ಮಿನ್ ಗಳು ಬೇಕಾದರೆ ಸದಸ್ಯರಿಗೆ ವಿಷಯ ಬದಲಾವಣೆಗೆ ಮತ್ತು ಗ್ರೂಪಿನ ಐಕಾನ್ ಬದಲಾವಣೆಗೆ ಅವಕಾಶ ನೀಡಬಹುದು. ಅಷ್ಟೇ ಅಲ್ಲ., ಇತರೆ ಸದಸ್ಯರ ಅಡ್ಮಿನ್ ಪರ್ಮಿಷನ್ ಗಳನ್ನು ಬೇಕಿದ್ದರೆ ತೆಗೆದುಹಾಕುವ ಅವಕಾಶವನ್ನು ನೀಡಲಾಗಿದೆ.ಗ್ರೂಪಿನ ಸೃಷ್ಟಿಕರ್ತನನ್ನು ಅಡ್ಮಿನ್ ಅಧಿಕಾರವಿರುವ ಇತರೆ ಯಾವುದೇ ಸದಸ್ಯನೂ ತೆಗೆದುಹೊಕಲು ಸಾಧ್ಯವಿಲ್ಲ.
ಗ್ರೂಪ್ ಕ್ಯಾಚ್ ಅಪ್
ಗ್ರೂಪ್ ಕ್ಯಾಚ್ ಅಪ್ ವೈಶಿಷ್ಟ್ಯವು ಬಳಕೆದಾರನಿಗೆ ತನಗೆ ಬೇಕು ಅನ್ನಿಸಿರುವ ವ್ಯಕ್ತಿಯ ಇಲ್ಲವೇ ವಿಷಯದ ಮೆಸೇಜ್ ಗಳನ್ನು ಹುಡುಕಲು ಅವಕಾಶ ನೀಡುತ್ತೆ. ಅಥವಾ ಮೇಸೇಜ್ ಗೆ ನೀಡಿದ ಪ್ರತ್ಯುತ್ತರವನ್ನು ಹುಡುಕಬಹುದು. ಈ ರೀತಿ ಮೆಸೇಜ್ ಗಳನ್ನು ಹುಡುಕಲು ಮಾಡಬೇಕಾಗಿರುವುದು ಇಷ್ಟೇ.. ಚಾಟ್ ಮಾಡಿದ ಪರದೆಯ ಬಲಭಾಗದ ಮೂಲೆಯಲ್ಲಿರುವ @ ಬಟನ್ ನ್ನು ಒತ್ತಬೇಕು.
ಗುಂಪಿನ ಸದಸ್ಯರ ಹುಡುಕಾಟಕ್ಕೆ ಅವಕಾಶ
ಇಷ್ಟು ದಿನ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿ ಮಾತ್ರ ವ್ಯಕ್ತಿಗಳನ್ನು ಹುಡುಕಬಹುದಿತ್ತು. ಆದರೆ ಈಗ ಗುಂಪಿನ ಸದಸ್ಯರ ಪಟ್ಟಿಯಲ್ಲೂ ಕೂಡ ನಿಮಗೆ ಬೇಕಿರುವ ವ್ಯಕ್ತಿಯ ಕಾಂಟ್ಯಾಕ್ಟ್ ನ್ನು ಗುಂಪಿನ ಪಟ್ಟಿಯಲ್ಲಿ ಹುಡುಕಬಹುದು. ಇದು ಗ್ರೂಪಿನ ಇನ್ಫೋ ವಿಭಾಗಕ್ಕೆ ತೆರಳಿದರೆ ಹುಡುಕಾಟ ಮಾಡಬಹುದು. ಯಾರು ಗುಂಪನ್ನು ಬಿಟ್ಟು ಹೊರಹೋಗಿದ್ದಾರೋ ಅವರನ್ನು ಮತ್ತೆ ಗುಂಪಿಗೆ ಸೇರಿಸುವುದು ಒಂದು ಕಷ್ಟದ ಕೆಲಸ, ಹಾಗಾಗಿ ಅವರನ್ನು ಮತ್ತೆ ಆಮಂತ್ರಿಸಲು ಇದು ನೆರವಾಗುತ್ತೆ.