Home
Apps

WhatsApp: ಬರ್ತಿದೆ ಸೂಪರ್ ಫೀಚರ್; ಕಡಿಮೆ ಬೆಳಕಿನಲ್ಲಿಯೂ ಮಾಡಬಹುದು ವಿಡಿಯೋ ಕಾಲ್!

ಪ್ರಸ್ತುತ ವಾಟ್ಸಪ್​ (WhatsApp) ಕ್ರೇಜ್ ಎಷ್ಟು ಇದೆ ಎಂಬುದನ್ನು ಹೇಳಬೇಕಾಗಿಲ್ಲ. ಬದಲಾಗುತ್ತಿರುವ ಸಮಯ ಮತ್ತು ತಂತ್ರಜ್ಞಾನಕ್ಕೆ ಅನುಗುಣವಾಗಿ ವಾಟ್ಸಪ್‌ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಅದರಲ್ಲೂ ಯುವಕರನ್ನು ಸೆಳೆಯಲು ವಾಟ್ಸಪ್‌ ಬೊಂಬಾಟ್‌ ಫೀಚರ್‌ಗಳನ್ನು ತರುತ್ತಿದೆ. ಇದರ ಭಾಗವಾಗಿ ವಾಟ್ಸಪ್​ ಇದೀಗ, ಮತ್ತೊಂದು ಹೊಸ ಫೀಚರ್ ಅನ್ನು ಪರಿಚಯಿಸಲು ತಯಾರಿ ನಡೆಸುತ್ತದೆ. ಹಾಗಿದೆ, ವಾಟ್ಸಪ್ ಯಾವ ಹೊಸ ಫೀಚರ್ ತರಲಿದೆ? ಅದರಿಂದ ನಮಗೇನು ಲಾಭ? ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಹೌದು, ವಾಟ್ಸಪ್​ನಲ್ಲಿ ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯಗಳು ಲಭ್ಯವಾಗುತ್ತಿವೆ. ಸುಧಾರಿತ ತಂತ್ರಜ್ಞಾನವನ್ನು ಸೇರಿಸುವ ಮೂಲಕ ವಾಟ್ಸಪ್​ ಈ ಹೊಸ ಫೀಚರ್‌ಗಳನ್ನು ತರುತ್ತಿದೆ. ವಿಶೇಷವಾಗಿ ಯುವಕರನ್ನು ಆಕರ್ಷಿಸುವ ಉತ್ತಮ ವೈಶಿಷ್ಟ್ಯದತ್ತ ಕಂಪನಿ ಕೆಲಸ ಮಾಡುತ್ತಿದೆ. ಇದನ್ನು ಬಳಕೆದಾರರು ತುಂಬಾ ಇಷ್ಟಪಡುತ್ತಿದ್ದಾರೆ. ಇತ್ತೀಚೆಗೆ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು, ವಾಟ್ಸಪ್‌ ವಿಡಿಯೋ ಕರೆಗಳಿಗಾಗಿ ಹೊಸ ಫಿಲ್ಟರ್‌ಗಳು ಮತ್ತು ಹಿನ್ನೆಲೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಅದರಂತೆ, ಕಂಪನಿಯು ವಿಡಿಯೋ ಕಾಲಿಂಗ್‌ನಲ್ಲಿ ಹೊಸ ರೂಪ ನೀಡಲಿದೆ.

WhatsApp: ಬರ್ತಿದೆ ಸೂಪರ್ ಫೀಚರ್; ವಿಡಿಯೋ ಕಾಲ್‌ನಲ್ಲಿ ದೊಡ್ಡ ಬದಲಾವಣೆ!

ವಾಟ್ಸಪ್‌ನ ಹೊಸ ವೈಶಿಷ್ಟ್ಯ ಯಾವುದು ಗೊತ್ತಾ?

ವಾಟ್ಸಪ್ ವಿಡಿಯೋ ಕರೆಗಳಿಗಾಗಿ 'ಲೋ ಲೈಟ್ ಮೋಡ್' (Low Light Mode) ವೈಶಿಷ್ಟ್ಯವನ್ನು ಪರಿಚಯಿಸಿದೆ. ಕಡಿಮೆ ಬೆಳಕಿನಲ್ಲಿ ವಿಡಿಯೋ ಕರೆಗಳನ್ನು ಮಾಡಲು ನೀವು ಈ ವೈಶಿಷ್ಟ್ಯವನ್ನು ಬಳಸಲು ಸಾಧ್ಯವಾಗುತ್ತದೆ. ಕಡಿಮೆ ಬೆಳಕಿನಲ್ಲಿಯೂ ನಿಮ್ಮ ಮುಖವನ್ನು ಸುಲಭವಾಗಿ ನೋಡುವ ರೀತಿಯಲ್ಲಿ ಈ ವೈಶಿಷ್ಟ್ಯವನ್ನು ವಿನ್ಯಾಸಗೊಳಿಸಲಾಗಿದೆ. ಕಂಪನಿಯು, 'ಲೋ ಲೈಟ್ ಮೋಡ್' ವೈಶಿಷ್ಟ್ಯದೊಂದಿಗೆ ವಿಡಿಯೋ ಕರೆಗಳ ಗುಣಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ವಿಡಿಯೋ ಕರೆಗಾಗಿ ವಿಭಿನ್ನ ಅನುಭವವನ್ನು ನೀಡಲಿದೆ.

ಕಡಿಮೆ ಬೆಳಕನ್ನು ಹೊಂದಿರುವ ಸ್ಥಳದಲ್ಲಿ ನೀವು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ತಕ್ಷಣ, ಈ ಫೀಚರ್‌ ಸ್ಪಷ್ಟತೆ (ಪ್ರಕಾಶತೆ) ಹೆಚ್ಚಿಸುತ್ತದೆ. ಅದರ ಸಹಾಯದಿಂದ ಬೆಳಕು ಹೆಚ್ಚಾಗುತ್ತದೆ. ಮತ್ತು ವಿಡಿಯೋ ಅದ್ಭುತವಾಗಿ ಗೋಚರಿಸುತ್ತದೆ. ಕತ್ತಲೆಯಲ್ಲಿಯೂ ಎದುರಿಗಿರುವ ವ್ಯಕ್ತಿಯನ್ನು ನೋಡಲು ಇದರಿಂದ ನಿಮಗೆ ಸುಲಭವಾಗುತ್ತದೆ.

ಈ ಹೊಸ ಫೀಚರ್ ಅನ್ನು ಯಾರೆಲ್ಲಾ ಬಳಸಬಹುದು?

ವಿಡಿಯೋ ಕರೆಗಳಿಗಾಗಿ 'ಲೋ ಲೈಟ್ ಮೋಡ್' ವೈಶಿಷ್ಟ್ಯವು ಆಂಡ್ರಾಯ್ಡ್‌ ಮತ್ತು iOS ಬಳಕೆದಾರರಿಗೆ ಲಭ್ಯವಿದೆ. ವಿಂಡೋಸ್ ಅಪ್ಲಿಕೇಶನ್‌ನಲ್ಲಿ ಯಾವುದೇ ವೈಶಿಷ್ಟ್ಯವು ಲಭ್ಯವಿಲ್ಲ. ಆದರೆ, ಬಳಕೆದಾರರು ವಿಂಡೋಸ್ ಆವೃತ್ತಿಯಲ್ಲಿ ಬ್ರೈಟ್‌ನೆಸ್ ಅನ್ನು ಸರಿಹೊಂದಿಸಬಹುದು. ವಿಡಿಯೋ ಕರೆ ಮಾಡುವಾಗ ಬಳಕೆದಾರರು ಪ್ರತಿ ಬಾರಿಯೂ ಈ 'ಲೋ ಲೈಟ್ ಮೋಡ್' ಅನ್ನು ಆನ್ ಮಾಡಬೇಕು ಎಂದು ಕಂಪನಿ ಹೇಳಿದೆ. ಈ ವೈಶಿಷ್ಟ್ಯವನ್ನು ಹೇಗೆ ಸಕ್ರಿಯಗೊಳಿಸುವುದು ಎಂಬುವುದನ್ನು ತಿಳಿಯೋಣ ಬನ್ನಿ.

'ಲೋ ಲೈಟ್ ಮೋಡ್' ಫೀಚರ್ಸ್‌ ಸಕ್ರಿಯಗೊಳಿಸುವುದು ಹೇಗೆ?

  1. ಮೊದಲು ನಿಮ್ಮ ಮೊಬೈಲ್‌ನಲ್ಲಿ ವಾಟ್ಸಪ್ ಅಪ್ಲಿಕೇಶನ್ ಓಪನ್ ಮಾಡಬೇಕು
  2. ಬಳಿಕ ವಾಟ್ಸಪ್‌ನಲ್ಲಿ ವಿಡಿಯೋ ಕರೆ ಮಾಡಬೇಕು
  3. ನಿಮ್ಮ ವಿಡಿಯೋ ಕರೆಯನ್ನು ಪೂರ್ಣ ಡಿಸ್ಪ್ಲೇಗೆ ತೆಗೆದುಕೊಳ್ಳಬೇಕು.
  4. 'ಲೋ ಲೈಟ್ ಮೋಡ್' ಅನ್ನು ಸಕ್ರಿಯಗೊಳಿಸಲು ಇಲ್ಲಿ 'ಬಲ್ಬ್' ಐಕಾನ್ ಮೇಲೆ ಕ್ಲಿಕ್ ಮಾಡಬೇಕು.
  5. ನೀವು 'ಲೋ ಲೈಟ್ ಮೋಡ್' ಆಫ್ ಮಾಡಲು ಬಯಸಿದರೆ, ಪುನಃ ಬಲ್ಬ್ ಐಕಾನ್ ಮೇಲೆ ಕ್ಲಿಕ್ ಮಾಡಬೇಕು.

ವಿಡಿಯೋ ಕರೆಗಳ ಸಮಯದಲ್ಲಿ ನಿಮಗೆ ಹೆಚ್ಚು ಮನರಂಜನೆ ಮತ್ತು ಉತ್ತಮ ವಾತಾವರಣವನ್ನು ಕಲ್ಪಿಸಲು ಈ ನವೀಕರಣಗಳನ್ನು ವಿನ್ಯಾಸಗೊಳಿಸಲಾಗಿದೆ. ಹತ್ತು ವಿಶಿಷ್ಟ ಫಿಲ್ಟರ್‌ಗಳು ಲಭ್ಯವಿದ್ದು, ನೀವು ತಮ್ಮ ಮನಸ್ಥಿತಿ ಅಥವಾ ಸಂಭಾಷಣೆಯ ವೈಬ್‌ಗೆ ಹೊಂದಿಸಲು ವಾರ್ಮ್, ಕೂಲ್ ಅಥವಾ ವಿಂಟೇಜ್ ಟಿವಿಯಂತಹ ಆಯ್ಕೆಗಳನ್ನು ಆಯ್ಕೆ ಮಾಡಬಹುದು ಎಂದು WABetaInfo ತಿಳಿಸಿದೆ.

Best Mobiles in India

English summary
WhatsApp has introduced the 'Low Light Mode' feature for video calls: know details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+