ಇನ್ನು ಕೆಲವೇ ದಿನದಲ್ಲಿ ವಾಟ್ಸ್ ಆಪ್ ನಲ್ಲಿ ಮತ್ತೊಂದು ಹೊಸ ಫೀಚರ್!

|

ಯಾರ ಕೈಯಲ್ಲಿ ನೋಡಿದ್ರೂ ಮೊಬೈಲು, ಯಾರ ಕೈಯಲ್ಲಿ ನೋಡಿದ್ರೂ ವಾಟ್ಸ್ ಆಪ್ ಇಂದಿನ ದಿನಗಳಲ್ಲಿ ಸಾಮಾನ್ಯವೆನಿಸಿದೆ. ಫಟಾಫಟ್ ಅಂತ ಮೆಸೇಜ್ ಕಳುಹಿಸುವುದಕ್ಕೆ ಅನುವು ಮಾಡಿಕೊಡುವ ಆಪ್ ಆಗಿರುವ ವಾಟ್ಸ್ ಆಪ್ ತನ್ನ ಬಳಕೆದಾರರಿಗಾಗಿ ಸಾಕಷ್ಟು ವೈಶಿಷ್ಟ್ಯತೆಗಳನ್ನು ಬಿಡುಗಡೆಗೊಳಿಸುತ್ತಲೇ ಇದೆ. ಬಳಕೆದಾರ ಸ್ನೇಹಿಯಾಗಬೇಕು ಎಂಬುದು ಇದರ ಹಿಂದಿನ ಉದ್ದೇಶ. ಇದೀಗ ಮತ್ತೆ ವಾಟ್ಸ್ ಆಪ್ ಹೊಸ ಫೀಚರ್ ವೊಂದನ್ನು ಬಿಡುಗಡೆಗೊಳಿಸುವುದಕ್ಕೆ ಕೆಲಸ ಮಾಡುತ್ತಿದೆ. ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಆಪ್ ನಲ್ಲಿ “ಕಾನ್ಸಿಗೆಟೀವ್ ವಾಯ್ಸ್ ಮೆಸೇಜ್” ಫೀಚರ್ ನೀಡುವ ಬಗ್ಗೆ ವಾಟ್ಸ್ ಆಪ್ ನಲ್ಲಿ ಕೆಲಸಗಳು ನಡೆಯುತ್ತಿದೆ.

ವಾಬೇಟಾಇನ್ಫೋ ಟ್ವೀಟರ್ ಅಕೌಂಟ್ ವಾಟ್ಸ್ ಆಪ್ ನ ಮುಂಬರುವ ಫೀಚರ್ ಗಳ ಬಗ್ಗೆ ಟ್ರ್ಯಾಕ್ ಇಟ್ಟಿರುತ್ತದೆ ಮತ್ತು ಇದೀಗ ವಾಟ್ಸ್ ಆಪ್ ನ 2.18.362 ವರ್ಷನ್ ನಲ್ಲಿ ಈ ಫೀಚರ್ ಇರುವುದನ್ನು ವಾಬೇಟಾಇನ್ಫೋ ತಿಳಿಸಿದೆ.

ಕಾನ್ಸಿಗೇಟಿವ್ ವಾಯ್ಸ್ ಮೆಸೇಜ್ ಫೀಚರ್ ಹೇಗೆ ಕೆಲಸ ಮಾಡುತ್ತದೆ?

ಕಾನ್ಸಿಗೇಟಿವ್ ವಾಯ್ಸ್ ಮೆಸೇಜ್ ಫೀಚರ್ ಹೇಗೆ ಕೆಲಸ ಮಾಡುತ್ತದೆ?

ಹೆಸರೇ ಸೂಚಿಸುವಂತೆ, ಈ ಫೀಚರ್ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ವಾಟ್ಸ್ ಆಪ್ ಬಳಕೆದಾರರಿಗೆ ಕನ್ಸಿಗೇಟಿವ್ ವಾಯ್ಸ್ ಮೆಸೇಜ್ ಗಳನ್ನು ನಿರಂತರವಾಗಿ ಪ್ಲೇ ಮಾಡುವುದಕ್ಕೆ ಅವಕಾಶ ನೀಡುತ್ತದೆ. ವಾಬೇಟಾಇನ್ಫೋ ತಿಳಿಸಿರುವಂತೆ ವಾಟ್ಸ್ ಆಪ್ ನಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಾಯ್ಸ್ ಮೆಸೇಜ್ ಗಳು ಕಂಡುಬಂದರೆ ಆಗ ಈ ಫೀಚರ್ ಕೆಲಸ ಮಾಡುತ್ತದೆ.

ಈ ವೈಶಿಷ್ಟ್ಯತೆ ಬಳಸಿ ವಾಟ್ಸ್ ಆಪ್ ಸ್ವಯಂಚಾಲಿತವಾಗಿ ಮೆಸೇಜ್ ಸೆಂಡ್ ಆದ ಸೀಕ್ವೆನ್ಸ್ ನ ಅನುಸಾರವಾಗಿ ವಾಯ್ಸ್ ಮೆಸೇಜ್ ಗಳನ್ನು ಪ್ಲೇ ಮಾಡುತ್ತದೆ.ಆದರೆ ಈ ಫೀಚರ್ ಕೆಲಸ ಮಾಡಲು ಮೆಸೇಜ್ ರಿಸೀವ್ ಮಾಡಿದ ವ್ಯಕ್ತಿ ಮೊದಲ ಯಾವುದಾದರೊಂದು ವಾಯ್ಸ್ ಮೆಸೇಜ್ ನ್ನು ಕ್ಲಿಕ್ಕಿಸಿ ಪ್ಲೇ ಮಾಡಬೇಕಾಗುತ್ತದೆ.

ವಾಯ್ಸ್ ನೋಟ್

ವಾಯ್ಸ್ ನೋಟ್

ಪ್ರತಿ ವಾಯ್ಸ್ ನೋಟ್ ಮುಗಿದ ನಂತರ ವಾಟ್ಸ್ ಆಪ್ ಶಾರ್ಟ್ ಆಡಿಯೋ ಟೋನ್ ಒಂದನ್ನು ಪ್ಲೇ ಮಾಡುತ್ತದೆ ಮತ್ತು ಇದು ಒಂದು ಆಡಿಯೋ ಮುಗಿದಿದ್ದರೂ ಕೂಡ ಪ್ಲೇ ಆಗಲು ಇನ್ನೊಂದು ಆಡಿಯೋ ರೆಡಿಯಾಗಿದೆ ಎಂಬುದನ್ನು ಸೂಚಿಸುತ್ತದೆ. ಇನ್ನು ಎಲ್ಲಾ ವಾಯ್ಸ್ ನೋಟ್ ಗಳು ಪ್ಲೇ ಆದ ನಂತರ ಎಲ್ಲವೂ ಪ್ಲೇ ಆಗಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಮತ್ತೊಂದು ವಿಭಿನ್ನ ಟೋನ್ ಅಲರ್ಟ್ ಇರುತ್ತದೆ.

ಸದ್ಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಬಿಡುಗಡೆಗೊಳ್ಳಲಿರುವ ಈ ಫೀಚರ್ ಮುಂದಿನ ದಿನಗಳಲ್ಲಿ ಐಓಎಸ್ ನಲ್ಲೂ ಕೂಡ ಬಿಡುಗಡೆಗೊಳ್ಳಲಿದೆ ಎಂಬುದರ ಬಗ್ಗೆ ಸಂಶಯವಿಲ್ಲ.

ಆಂಡ್ರಾಯ್ಡ್ ನ ವಾಟ್ಸ್ ಆಪ್ ಬಳಕೆದಾರರಿಗೆ ಸ್ಟಿಕ್ಕರ್ಸ್ ನಲ್ಲಿ ಸರ್ಚ್ ಫೀಚರ್ ಬಿಡುಗಡೆ

ಆಂಡ್ರಾಯ್ಡ್ ನ ವಾಟ್ಸ್ ಆಪ್ ಬಳಕೆದಾರರಿಗೆ ಸ್ಟಿಕ್ಕರ್ಸ್ ನಲ್ಲಿ ಸರ್ಚ್ ಫೀಚರ್ ಬಿಡುಗಡೆ

ಸ್ಟಿಕ್ಕರ್ಸ್ ನಲ್ಲಿ ಸರ್ಚ್ ಫೀಚರ್ ಬಿಡುಗಡೆಗೊಳಿಸುವ ಬಗ್ಗೆ ವಾಟ್ಸ್ ಆಪ್ ನಲ್ಲಿ ಇನ್ನೊಂದೆಡೆ ಕೆಲಸಗಳು ನಡೆಯುತ್ತಿದೆ.ಕಳೆದ ತಿಂಗಳು ಸ್ಟಿಕ್ಕರ್ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಬ್ಬರಿಗೂ ಕೆಲಸ ಮಾಡಲು ಪ್ರಾರಂಭಿಸಿದೆ. ಅದರ ಫಲವಾಗಿ ವಿಭಿನ್ನ ಸ್ಟಿಕ್ಕರ್ಸ್ ಪ್ಯಾಕ್ ಗಳು ವಾಟ್ಸ್ ಆಪ್ ಅಪ್ಲಿಕೇಷನ್ ನಲ್ಲಿ ಗ್ರಾಹಕರ ಬಳಕೆಗಾಗಿ ಲಭ್ಯವಾಗುತ್ತಿದೆ.

ಫೇಸ್ ಬುಕ್ ಮಾಲೀಕತ್ವದ ಕಂಪೆನಿ ಇತರೆ ಇನ್ಸ್ಟೆಂಟ್ ಮೆಸೇಜಿಂಗ್ ಆಪ್ ಗಳಂತೆ ಸ್ಟಿಕ್ಕರ್ ಸ್ಟೋರ್ ನ್ನು ಇಟ್ಟಿದ್ದು ಹೆಚ್ಚಿನ ಸ್ಟಿಕ್ಕರ್ ಪ್ಯಾಕ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಇಟ್ಟಿದೆ. ಸ್ಟಿಕ್ಕರ್ ಸ್ಟೋರ್ ನಲ್ಲಿ ಈಗಾಗಲೇ ಡೌನ್ ಲೋಡ್ ಮಾಡಿರುವ ಸ್ಟಿಕ್ಕರ್ ಗಳನ್ನು ಮ್ಯಾನೇಜ್ ಮಾಡಲು ಮತ್ತು ಅವುಗಳನ್ನು ಅಗತ್ಯವಿದ್ದರೆ ಡಿಲೀಟ್ ಮಾಡುವುದಕ್ಕೆ ಕೂಡ ಅವಕಾಶವಿರುತ್ತದೆ.

ವಾಟ್ಸ್ ಆಪ್ ಸ್ಟಿಕ್ಕರ್ ಸ್ಟೋರ್ ನಲ್ಲಿ ಈಗ 13 ಸೆಟ್ ಗಳ ಪ್ರೀಇನ್ಸ್ಟಾಲ್ಡ್ ಸ್ಟಿಕ್ಕರ್ ಗಳಿವೆ-ಕ್ಯೂಪಿಕಂ ಸಾಲ್ಟಿ, ಕೋಮೋ, ಬಿಬಿಮ್ಬ್ಯಾಪ್ ಫ್ರೆಂಡ್ಸ್, ಅನ್ಚಿ ಮತ್ತು ರೋಲೀ, ಶಿಬಾ ಇನು, ದಿ ಮಾಲ್ಡೋರೋಟ್ಸ್, ಕೊಕೊ, ಹ್ಯಾಚ್, ಫಿಯರ್ಲೆಸ್, ಬನಾನಾ ಮತ್ತು ಬಿಸ್ಕೂಟ್. ಇದನ್ನು ಹೊರತುಪಡಿಸಿ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್ ನಿಂದ ಗೆಟ್ ಮೋರ್ ಸ್ಟಿಕ್ಕರ್ಸ್ ಆಯ್ಕೆಯನ್ನು ಲಿಸ್ಟ್ ನ ಕೆಳಭಾಗದಲ್ಲಿ ಕ್ಲಿಕ್ಕಿಸುವ ಮೂಲಕ ಇನ್ನಷ್ಟು ಸ್ಟಿಕ್ಕರ್ ಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.

Best Mobiles in India

Read more about:
English summary
WhatsApp, here's what it will do for you

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X