WhatsApp In 2023: ಈ ವರ್ಷ ವಾಟ್ಸಾಪ್ ಸೇರಿದ ಪ್ರಮುಖ ಫೀಚರ್ಸ್‌ಗಳ ವಿವರ ಇಲ್ಲಿದೆ!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರ ಅನುಕೂಲಕ್ಕಾಗಿ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಎಂದಿನಂತೆ 2023ರಲ್ಲಿಯೂ ಕೂಡ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿದೆ. ಇವುಗಳಲ್ಲಿ ಕೆಲವು ಫೀಚರ್ಸ್‌ಗಳು ಸಾಕಷ್ಟು ಸದ್ದು ಮಾಡಿದ್ದು, ಬಳಕೆದಾರರ ಗಮನಸೆಳೆದಿವೆ.
ಹೌದು, ಪ್ರತಿ ವರ್ಷದಂತೆ 2023ರಲ್ಲಿಯೂ ಹಲವು ಆಕರ್ಷಕ ಫೀಚರ್ಸ್‌ಗಳನ್ನು ವಾಟ್ಸಾಪ್ ಪರಿಚಯಿಸಿದೆ. ಈ ಫೀಚರ್ಸ್‌ಗಳ ಮೂಲಕ ಬಳಕೆದಾರರ ಅನುಭವವನ್ನು ಸುಧಾರಿಸುವುದಕ್ಕೆ ವಾಟ್ಸಾಪ್ ಪ್ರಯತ್ನಿಸಿದೆ. ಇದರಲ್ಲಿ ಪ್ರಮುಖವಾಗಿ ಹೆಚ್‌ಡಿ ಫೋಟೋ ಶೇರ್ ಮಾಡುವ ಅಯ್ಕೆ, ಸಂದೇಶಗಳನ್ನು ಎಡಿಟ್ ಮಾಡುವ ಆಯ್ಕೆಯನ್ನು ಸೇರ್ಪಡೆ ಮಾಡಲಾಗಿದೆ. ಹಾಗಾದ್ರೆ 2023ರಲ್ಲಿ ವಾಟ್ಸಾಪ್ ಪರಿಚಯಿಸಿದ ಪ್ರಮುಖ ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶೇರ್ ಹೈ ಕ್ವಾಲಿಟಿ ಫೋಟೋಸ್
2023ರಲ್ಲಿ ವಾಟ್ಸಾಪ್ ಪರಿಚಯಿಸಿದ ಪ್ರಮುಖ ಫೀಚರ್ಸ್‌ಗಳಲ್ಲಿ ಹೈ ಕ್ವಾಲಿಟಿ ಫೋಟೋ ಶೇರ್ ಮಾಡುವ ಆಯ್ಕೆಯು ಕೂಡ ಸೇರಿದೆ. ಇದರಿಂದಾಗಿ ವಾಟ್ಸಾಪ್‌ನಲ್ಲಿ ನೀವು ಶೇರ್ ಮಾಡುವ ಫೋಟೋಗಳ ರೆಸಲ್ಯೂಶನ್ ಕಡಿಮೆ ಆಗದಂತೆ ತಡೆಯಬಹುದಾಗಿದೆ. ಅಂದರೆ ವಾಟ್ಸಾಪ್‌ನಲ್ಲಿ ಯಾವುದೇ ಮೀಡಿಯಾ ಶೇರ್ ಮಾಡುವಾಗ HD ಆಯ್ಕೆಯಲ್ಲಿ ಕಳುಹಿಸುವ ಆಯ್ಕೆಯನ್ನು ನೀಡಲಾಗಿದೆ. ಇದು ಉತ್ತಮ ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ.
ಸಂದೇಶಗಳನ್ನು ಎಡಿಟ್ ಮಾಡಿ
ವಾಟ್ಸಾಪ್‌ನಲ್ಲಿ ತಪ್ಪಾದ ಸಂದೇಶವನ್ನು ಸೆಂಡ್ ಮಾಡಿ ಮುಜುಗರ ಅನುಭವಿಸುತ್ತಿದ್ದ ಬಳಕೆದಾರರಿಗೆ ಈ ವರ್ಷ ಗುಡ್‌ನ್ಯೂಸ್ ಸಿಕ್ಕಿತ್ತು. ಏಕೆಂದರೆ ತಪ್ಪಾದ ಸಂದೇಶಗಳನ್ನು ಎಡಿಟ್ ಮಾಡುವು ಆಯ್ಕೆಯನ್ನು ವಾಟ್ಸಾಪ್ ಪರಿಚಯಿಸುವ ಮೂಲಕ ಈ ಸಮಸ್ಯೆಗೆ ತೆರೆ ಎಳೆದಿದೆ. ವಾಟ್ಸಾಪ್‌ನ ಈ ನಡೆಯಿಂದಾಗಿ ಟಲಿಗ್ರಾಮ್ ಮಾದರಿಯಲ್ಲಿಯೇ ವಾಟ್ಸಾಪ್ ಬಳಕೆದಾರರು ಕೂಡ ತಮ್ಮ ಸಂದೇಶಗಳನ್ನು ಎಡಿಟ್ ಮಾಡಬಹುದಾಗಿದೆ. ಇದು ನಿಮ್ಮ ವೈಯಕ್ತಿಕ ಮತ್ತು ಗುಂಪು ಚಾಟ್‌ಗಳಲ್ಲಿ ಅವರ ಸಂದೇಶವನ್ನು ಎಡಿಟ್ ಮಾಡುವುದಕ್ಕೆ ಅವಕಾಶ ನೀಡಿದೆ.
ಚಾಟ್ ಲಾಕ್
ವಾಟ್ಸಾಪ್ ಈ ವರ್ಷ ಪರಿಚಯಿಸಿದ ಪ್ರಮುಖ ಫೀಚರ್ಸ್‌ಗಳಲ್ಲಿ ಚಾಟ್ ಲಾಕ್ ಕೂಡ ಒಂದಾಗಿದೆ. ಇದು ನಿಮ್ಮ ಪ್ರೈವೆಸಿ ಚಾಟ್‌ಗಳನ್ನು ಲಾಕ್ ಮಾಡುವುದಕ್ಕೆ ಅವಕಾಶ ನೀಡಲಿದೆ. ಇದಕ್ಕಾಗಿ ನೀವು ಪ್ರತ್ಯೇಕ ಪಿನ್ ಸೆಟ್ ಮಾಡಬೇಕಾಗುತ್ತದೆ. ಇದರಿಂದ ನೀವು ಚಾಟ್‌ಲಾಕ್ ಮಾಡಿದ ಚಾಟ್ ಅನ್ನು ಯಾರೂ ಕೂಡ ನೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂದರೆ ಅಧಿಕೃತ ಬಳಕೆದಾರರು ಮಾತ್ರ ಅದನ್ನು ಪ್ರವೇಶಿಸಬಹುದು.

ವಾಟ್ಸಾಪ್ ಪಾಸ್‌ಕೀಗಳು
ವಾಟ್ಸಾಪ್‌ನ ಈ ಆಯ್ಕೆಯು ನಿಮಗೆ ಹೆಚ್ಚಿನ ಭದ್ರತೆಯನ್ನು ನೀಡಲಿದೆ. ವಾಟ್ಸಾಪ್ ಅನ್ನು ಮೊದಲಿಗೆ ತೆರೆದಾಗ ಒಟಿಪಿ ಬದಲಿಗೆ ಪಾಸ್ ಕೀಗಳ ಮೂಲಕ ಲಾಗಿನ್ ಆಗುವುದಕ್ಕೆ ಅವಕಾಶ ಸಿಕ್ಕಿದೆ. ಇದರಿಂದ ನಿಮ್ಮ ವಾಟ್ಸಾಪ್ ಖಾತೆಗೆ ಬೇರೆಯವರು ಅನಧಿಕೃತ ಪ್ರವೇಶ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ. ವಾಟ್ಸಾಪ್‌ನ ಪಾಸ್‌ಕೀ ಫೀಚರ್ಸ್ ಇದೀಗ ಬಳಕೆದಾರರು ತಮ್ಮ ಫೋನ್‌ನ ಮುಖ ಗುರುತಿಸುವಿಕೆ ಅಥವಾ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಬಳಸಿಕೊಂಡು ಸುರಕ್ಷಿತವಾಗಿ ಲಾಗ್ ಇನ್ ಮಾಡಲು ಅನುಮತಿಸಲಿದೆ.
ಹಲವು ಡಿವೈಸ್‌ಗಳಲ್ಲಿ ಒಂದೇ ವಾಟ್ಸಾಪ್ ಅಕೌಂಟ್
ಈ ವರ್ಷ ವಾಟ್ಸಾಪ್‌ಗೆ ಸೇರ್ಪಡೆ ಆದ ಪ್ರಮುಖ ಫೀಚರ್ಸ್‌ಗಳಲ್ಲಿ ಇದು ಒಂದಾಗಿದೆ. ಈ ಫೀಚರ್ಸ್‌ನಿಂದಾಗಿ ನಿಮ್ಮ ವಾಟ್ಸಾಪ್ ಖಾತೆಯನ್ನು ಏಕಕಾಲದಲ್ಲಿ ಹಲವು ಡಿವೈಸ್‌ಗಳಲ್ಲಿ ಬಳಸುವುದಕ್ಕೆ ಅವಕಾಶ ನೀಡಿದೆ. ಪ್ರಸ್ತುತ ನೀವು WhatsApp ವೆಬ್‌ಗೆ ಹೇಗೆ ಲಾಗ್ ಇನ್ ಮಾಡುತ್ತೀರೋ ಅದೇ ರೀತಿಯ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಬಳಕೆದಾರರು ತಮ್ಮ ಖಾತೆಯನ್ನು ಹಲವು ಡಿವೈಸ್‌ಗಳಲ್ಲಿ ಲಾಗ್ ಇನ್ ಆಗಬಹುದಾಗಿದೆ.


Click it and Unblock the Notifications








