Home
Apps

ಐಫೋನ್ ಬಳಕೆದಾರರಿಗೆ ವಾಟ್ಸ್ ಆಪ್ ನ ಹೊಸ ವೈಶಿಷ್ಟ್ಯತೆಗಳು...!

By Sushma Charhra

ವಾಟ್ಸ್ ಆಪ್ ನಲ್ಲಿ ಮೆಸೇಜ್ ನ ಒಂದು ಭಾಗವಾಗಿ ಮೀಡಿಯಾ ಫೈಲ್ ಗಳನ್ನು ನೋಡಲು ಪ್ರಮುಖವಾಗಿ ಐಫೋನ್ ಬಳಕೆದಾರರಿಗೆ ವಾಟ್ಸ್ ಆಪ್ ಮತ್ತಷ್ಟು ಸುಲಭ ದಾರಿಗಳನ್ನು ಮಾಡಿಕೊಡುತ್ತಿದೆ. ಅಷ್ಟೇ ಅಲ್ಲ ಶೇರ್ ಮಾಡಿರುವ ಯುಆರ್ ಎಲ್ ಸಸ್ಪೀಷಿಯಸ್ ಅಂದರೆ ಅನುಮಾನ ಹುಟ್ಟಿಸುವ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡ ಖಾತ್ರಿಗೊಳಿಸುತ್ತದೆ. ಇದು ಆಪ್ ಅಪ್ ಡೇಟ್ ನ ಒಂದು ಭಾಗವಾಗಿ ಬರಲಿದೆ. ಅಷ್ಟೇ ಅಲ್ಲ WABeta ಇನ್ಫೋ ವೆಬ್ ಸೈಟ್ ನಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಕೆಲವು ಸಣ್ಣಪುಟ್ಟ ಯುಐ ಬದಲಾವಣೆಗಳನ್ನು ಕೂಡ ಮಾಡಲಾಗಿದೆ.

ಐಫೋನ್ ಬಳಕೆದಾರರಿಗೆ ವಾಟ್ಸ್ ಆಪ್ ನ ಹೊಸ ವೈಶಿಷ್ಟ್ಯತೆಗಳು...!

ಅಪ್ ಡೇಟ್ ನ ಭಾಗವಾಗಿ, ನೋಟಿಫಿಕೇಷನ್ ಪೆನಲ್ ನಲ್ಲಿಯೇ ಬಳಕೆದಾರರು ತಮ್ಮ ಮೀಡಿಯಾ ಪೈಲ್ ಗಳನ್ನು ನೋಡಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಇಂತಹ ಮೆಸೇಜ್ ಗಳನ್ನು ಕ್ಯಾಮರಾ ಐಕಾನ್ ನಂತೆ ನೋಟಿಫಿಕೇಷನ್ ಏರಿಯಾದಲ್ಲಿ ಕಾಣಬಹುದಾಗಿತ್ತು ಮತ್ತು ಅದನ್ನು ನೋಡಲು ಮೀಡಿಯಾ ಫೈಲ್ ನ್ನು ವಾಟ್ಸ್ ಆಪ್ ನಲ್ಲಿ ತೆಯಬೇಕಾಗಿತ್ತು. ಈ ಪ್ರೀವ್ಯೂನಲ್ಲಿ GIF ಫೈಲ್ ಗಳನ್ನು ನೋಡಲು ಕೂಡ ಅವಕಾಶವಿರುತ್ತದೆ. ಒಂದು ವೇಳೆ ನೀವು ನೋಟಿಫಿಕೇಷನ್ ಎಕ್ಸ್ ಟೆನ್ಷನ್ ನ್ನು ರಿಸೀವ್ ಮಾಡಿದ್ದೀರೋ ಇಲ್ಲವೋ ಎಂಬುದನ್ನು ವೆರಿಫೈ ಮಾಡಬೇಕು ಎಂಬ ಆಸೆ ಇದ್ದರೆ ನಿಮ್ಮ ಫ್ರೆಂಡ್ ಬಳಿ ಒಂದು ಇಮೇಜ್ ನ್ನು ಕಳುಹಿಸಲು ಹೇಳಿ ಮತ್ತು ಸರಳವಾಗಿ ನೋಟಿಫಿಕೇಷನ್ ಕಾಣಿಸಿದಾಗ ಅದನ್ನು ಸ್ಪೈಪ್ ಡೌನ್ ಮಾಡಿ ಪ್ರೀವ್ಯೂ ನೋಡಬಹುದು.

ಯಾವಾಗ ಲಭ್ಯವಾಗುತ್ತದೆ ಹೊಸ ಅಪ್ ಡೇಟ್?
ಪ್ರತಿಯೊಬ್ಬರ ಮೊಬೈಲ್ ನ್ನು ತಲುಪಲು ಈ ಹೊಸ ಅಪ್ ಡೇಟ್ ಗೆ ಕೆಲವು ವಾರಗಳೇ ಬೇಕಾಗಬಹುದು ಯಾಕೆಂದರೆ ಬಿಡುಗಡೆಯು ನಿಧಾನಗತಿಯಲ್ಲಿದೆ ಎಂಬುದಾಗಿ ವೆಬ್ ಸೈಟ್ ವರದಿ ಮಾಡಿದೆ.

ಸದ್ಯ ಈ ವೈಶಿಷ್ಟ್ಯತೆಯು ಐಓಎಸ್ 10 ಮತ್ತು ಅದಕ್ಕಿಂತ ಮುಂದಿನ ವರ್ಷನ್ ನಲ್ಲಿ ರನ್ ಆಗುವ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ಅನುಮಾನಾಸ್ಪದ ಲಿಂಕ್ ಗಳನ್ನು ತಿಳಿಸುತ್ತದೆ ವಾಟ್ಸ್ ಆಪ್:
ವಾಟ್ಸ್ ಆಪ್ ನಲ್ಲಿ ಹಂಚಲಾಗಿರುವ ಲಿಂಕ್ ನಲ್ಲಿ ಯಾವುದೇ ರೀತಿಯ ಗುಮಾನಿ ಕಾಣಿಸಿದರೆ ಅದನ್ನು ಕೂಡ ವಾಟ್ಸ್ ಆಪ್ ನಿಮಗೆ ತಿಳಿಸುತ್ತದೆ. ಯಾವುದೇ ವ್ಯಕ್ತಿ ಒದು ಯುಆರ್ ಎಲ್ ನ್ನು ಮೆಸೇಜ್ ರೂಪದಲ್ಲಿ ರಿಸೀವ್ ಮಾಡಿದಾಗ ಅದನ್ನು ಸ್ಥಳೀಯವಾಗಿ ಅನಲೈಸ್ ಮಾಡಲಾಗುತ್ತದೆ ಮತ್ತು ಒಂದು ವೇಳೆ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಆ ಲಿಂಕ್ ನಲ್ಲಿ ಗೋಚರಿಸಿದ್ದೇ ಆದಲ್ಲಿ ಅದನ್ನು ಬಳಕೆದಾರರಿಗೆ ಮಾರ್ಕ್ ಮಾಡಿ ತಿಳಿಸಲಾಗುತ್ತದೆ. ಈ ವೈಶಿಷ್ಟ್ಯತೆಯು ಸುಳ್ಳು ಸುದ್ದಿಗಳು ಹರಡುವುದಕ್ಕೆ ಬ್ರೇಕ್ ಹಾಕಲಿದೆ ಎಂದು ನಂಬಲಾಗಿದೆ,

ಈ ವೈಶಿಷ್ಟ್ಯತೆಯು ಐಓಎಸ್ 7 ಮತ್ತು ಮೇಲಿನ ಎಲ್ಲಾ ಡಿವೈಸ್ ಗಳಲ್ಲಿ ಕೆಲಸ ಮಾಡುತ್ತದೆ. ಅಂದರೆ ಇದು ಐಫೋನ್ 4 ರಲ್ಲೂ ಕೂಡ ಸದ್ಯ ಈ ವೈಶಿಷ್ಟ್ಯತೆಯು ಕೆಲಸ ಮಾಡುತ್ತದೆ. ಆಂಡ್ರಾಯ್ಡ್ ಬಳಕೆದಾರರನ್ನು ಈ ವೈಶಿಷ್ಟ್ಯತೆ ಯಾವಾಗ ತಲುಪುತ್ತದೆ ಎಂಬ ಬಗ್ಗೆ ಇದುವರೆಗೂ ಯಾವುದೇ ಖಚಿತತೆ ಇಲ್ಲ.

ಸುಳ್ಳು ಸುದ್ದಿಗಳ ವಿರುದ್ಧ ವಾಟ್ಸ್ ಆಪ್ ಸಮರ:
ಒಟ್ಟಿನಲ್ಲಿ ಭಾರತದಲ್ಲಿ ಸುಳ್ಳು ಸುದ್ದಿ ಹರಡುವಿಕೆಯ ವಿರುದ್ಧ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಗಂಭೀರ ಚಿಂತನೆ ನಡೆಸುತ್ತಿದೆ ಎಂಬುದು ಮಾತ್ರ ಸತ್ಯ. ಇತ್ತೀಚೆಗೆ ಇದೇ ವಿಚಾರವಾಗಿ ಕಂಪೆನಿಯು ಭಾರತದ ಹಲವು ರಾಜ್ಯಗಳಲ್ಲಿ ರೇಡಿಯೋ ಕ್ಯಾಂಪೈನ್ ನ್ನು ಕೂಡ ಮಾಡಿತ್ತು. ಯಾವುದೇ ಮೆಸೇಜ್ ನ್ನು ಫಾರ್ವಡ್ ಮಾಡುವ ಮುನ್ನ ಅದನ್ನು ಫಾರ್ವಡ್ ಮಾಡಿರುವ ಮೆಸೇಜಾ ಎಂಬುದನ್ನು ಗಮನಿಸಿ ಮತ್ತು ಸತ್ಯಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದನ್ನು ವಿಮರ್ಷಿಸಿ ಎಂದು ಬಳಕೆದಾರರನ್ನು ವಾಟ್ಸ್ ಆಪ್ ಕೇಳಿಕೊಂಡಿದೆ.

Best Mobiles in India

English summary
WhatsApp introduces notification media preview, suspicious link alert for these users. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+