Home
Apps

ವಾಟ್ಸ್ಆಪ್ ನಿಂದ ಹೊಸ ಆಯ್ಕೆ ಬಳಕೆದಾರರಿಗೆ ಹೊಸ ಅವಕಾಶ..!

By Lekhaka

ಸೋಶಿಯಲ್ ಮೀಡಿಯಾ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿದೆ ಎನ್ನಲಾಗಿದ್ದು, ಇದೇ ಮಾದರಿಯಲ್ಲಿ ಈ ಬಾರಿ iSO ಬಳಕೆದಾರರಿಗೆ ನೂತನ ಆಯ್ಕೆಯನ್ನು ನೀಡಲಾಗಿದ್ದು, ಈ ಕುರಿತು ಮಾಹಿತಿಯೂ ಮುಂದಿದೆ.

ವಾಟ್ಸ್ಆಪ್ ನಿಂದ ಹೊಸ ಆಯ್ಕೆ ಬಳಕೆದಾರರಿಗೆ ಹೊಸ ಅವಕಾಶ..!


ವಾಟ್ಸ್ಆಪ್ ದಿನಕ್ಕೊಂದು ಹೊಸ ಆಯ್ಕೆಗಳನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಬಳಕೆದಾರರಿಗೆ ಹೆಚ್ಚಿನ ಆಯ್ಕೆಯನ್ನು ನೀಡುವ ಸಲುವಾಗಿ iSO ಬಳಕೆದಾರರಿಗೆ ಸದ್ಯ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದ್ದು, ಇದರಲ್ಲಿ ಬಳಕೆದಾರರಿಗೆ ಆಕೌಂಟ್ ಇನ್ಫರ್ಮೆಷನ್ ಅನ್ನು ನೀಡುವ ಆಯ್ಕೆಯನ್ನು ಮಾಡಿಕೊಡಲು ಮುಂದಾಗಿದೆ.

ಇದಕ್ಕಾಗಿ ವಾಟ್ಸ್ ಆಪ್ ನಲ್ಲಿ ಹೊಸ ಆಯ್ಕೆಯೂ ಕಾಣಿಸಿಕೊಂಡಿದ್ದು, ರಿಕ್ವೇಸ್ಟ್ ಆಕೌಂಟ್ ಇನ್ ಫೋ ಫೀಷರ್ ಅನ್ನು ನೀಡಲಾಗಿದೆ. ಈಗಾಗಲೇ ಈ ಹೊಸ ಆಯ್ಕೆಯೂ ಆಂಡ್ರಾಯ್ಡ್ ಬಳಕೆದಾರರಿಗೆ ಈಗಾಗಲೇ ಬಳಕೆಯಲ್ಲಿದೆ ಎನ್ನಲಾಗಿದೆ. ಇದರಿಂದಾಗಿ ವಾಟ್ಸ್ಆಪ್ ಆಕೌಂಟ್ ಡಿಲೀಟ್ ಆದರು ಯೋಚನೆ ಮಾಡಬಹುದಾಗಿದೆ.

ವಾಟ್ಸ್ಆಪ್ iOS 2.18.60 ಆಪ್ಡೇಟ್ ನಲ್ಲಿ ಆಕೌಂಟ್ ಇನ್ಫರ್ಮೆಷನ್ ಆಯ್ಕೆಯೂ ಕಾಣಿಸಿಕೊಳ್ಳಲಿದೆ. ಇದಕ್ಕಾಗಿ ಸೆಟ್ಟಿಂಗ್ಸ್ ನಲ್ಲಿ ಮೆನು ಆಯ್ಕೆಯಲ್ಲಿ ಇದು ಕಾಣಿಸಿಕೊಂಡಿದೆ. ಅಲ್ಲಿ ನಿಮ್ಮ ಆಕೌಂಟ್ ಸೆಟ್ಟಿಂಗ್ಸ್ ಮತ್ತು ಇನ್ ಫರ್ಮೇಷನ್ ಆಯ್ಕೆಯನ್ನು ನೀಡಲಾಗಿದೆ. ಇದರಿಂದಾಗಿ ಐಫೋನ್ ಬಳಕೆದಾರರು ಹೊಸ ಮಾದರಿಯ ಆಯ್ಕೆಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಇದಲ್ಲದೇ ಈ ಹೊಸ ಆಯ್ಕೆಯೊಂದಿಗೆ iOS ಬಳಕೆದಾರರು ಇನ್ನಷ್ಟು ಹೊಸ ಆಯ್ಕೆಗಳನ್ನು ಪಡೆದುಕೊಂಡಿದ್ದಾರೆ. ವಿಡಿಯೋ ಕಾಲ್ ಮತ್ತು ಪೇಮೆಂಟ್ ಫೀಚರ್ ಮತ್ತು ಬ್ಯಾಕಪ್ ಫೀಚರ್ ಅನ್ನು ನೀಡಲಾಗಿದೆ. ಅಲ್ಲದೇ ಕೆಲವು ಬಗ್ ಗಳನ್ನು ಸಹ ತೆಗೆಯಲಾಗಿದ್ದು, ಬಳಕೆದಾರರಿಗೆ ಇನ್ನಷ್ಟು ಉತ್ತಮ ಆಯ್ಕೆಗಳನ್ನು ನೀಡುತ್ತಿದೆ ಎನ್ನಲಾಗಿದೆ.

How to send WhatsApp Payments invitation to others - GIZBOT KANNADA

ಇದಲ್ಲದೇ ಸ್ಪ್ಯಾಮ್ ಮೇಸೆಜ್ ಗಳನ್ನು ಕಡಿಮೆ ಮಾಡುವ ಸಲುವಾಗಿ ಹೊಸದೊಂದು ಆಯ್ಕೆಯನ್ನು ನೀಡಲು ಮುಂದಾಗಿದೆ. ಅಲ್ಲದೇ ಮೇಸೆಜ್ ಗಳನ್ನು ರಿಪೋರ್ಟ್ ಮಾಡುವ ಅವಕಾಶವು ಇದರಲ್ಲಿದೆ. ಇದಲ್ಲದೇ ಹೊಸದಾಗಿ ಕಾಣಿಸಿಕೊಂಡಿರುವ ಗ್ರೂಪ್ ವೀಡಿಯೊ ಕಾಲಿಂಗ್ ಫೀಚರ್ ಬಳಕೆದಾರರಿಗೆ ಹೆಚ್ಚಿನ ಸಹಾಯವನ್ನು ಮಾಡಲಿದೆ.

ದಿನೇ ದಿನೇ ವಾಟ್ಸ್ಆಪ್ ಖ್ಯಾತಿಯೂ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ 200 ಮಿಲಿಯನ್ ಬಳಕೆದಾರರು ವಾಟ್ಸ್ಆಪ್ ಬಳಸುತ್ತಿದ್ದು, ವಿಶ್ವದಲ್ಲಿ ಸುಮಾರು ಒಂದು ಬಿಲಿಯನ್ ಮಂದಿ ಬಳಕೆದಾರರು ಇದ್ದಾರೆ ಎನ್ನಲಾಗಿದೆ.

Best Mobiles in India

English summary
WhatsApp iOS version 2.18.60 has received the new Request Account Info feature. This feature will let users request a report of their account settings and information.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+