TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಐಫೋನ್‌ನ ವಾಟ್ಸ್‌ಆಪ್ ಸ್ಟೇಟಸ್‌ನಲ್ಲಿ ಜಾಹೀರಾತು..! ನಿಮ್ಮ ಮೊಬೈಲ್‌ನಲ್ಲೂ ಬರುತ್ತೇ..!
ವಾಟ್ಸ್ ಆಪ್ ಎಂದರೆ ಕೇವಲ ನಮ್ಮ ಕಾಂಟ್ಯಾಕ್ಟ್ ನಲ್ಲಿರುವವರು ಮಾತ್ರ ನಮ್ಮ ಜೊತೆಗೆ ಲಭ್ಯವಾಗುತ್ತಾರೆ. ಜಾಹೀರಾತು, ಅಪರಿಚಿತ ವ್ಯಕ್ತಿಗಳ ಕಿರಿಕಿರಿ ಇಂತಹ ಯಾವುದೇ ಸಮಸ್ಯೆಯೂ ಇರುವುದಿಲ್ಲ ಎಂದು ಇಷ್ಟಪಡುತ್ತಿದ್ದವರಿಗೆ ಇನ್ನು ಮುಂದೆ ನಿರಾಸೆ ಕಾದಿದೆ. ಯಾಕೆಂದರೆ ವಾಟ್ಸ್ ಆಪ್ ನಲ್ಲೂ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ.
ಹೌದು,ವಾಟ್ಸ್ ಆಪ್ ಇತ್ತೀಚೆಗೆ ತನ್ನ ಹೊಸ ಅಪ್ ಡೇಟ್ ಗಳಿಂದಲೇ ಹೆಡ್ ಲೈನ್ ಸುದ್ದಿ ಮಾಡುತ್ತಿದೆ. ಕೆಲವೇ ದಿನಗಳ ಮುಂಚೆ ವಾಟ್ಸ್ ಆಪ್ ನ ಕೋ ಫೌಂಡರ್ ಆಗಿರುವ ಬ್ರಿಯಾನ್ ಆಕ್ಟನ್ ಫೇಸ್ ಬುಕ್ ನ್ನು ಅವರು ಯಾಕೆ ತೊರೆದರು ಎಂಬುದನ್ನು ತಿಳಿಸಿದ್ದರು.ಅಷ್ಟೇ ಅಲ್ಲದೆ ಮಾರ್ಕ್ ಜ್ಯೂಕ್ ಬರ್ಗ್ ಫೇಸ್ ಬುಕ್ ಸಿಇಓ ವಾಟ್ಸ್ ಆಪ್ ನ್ನು ಖರೀದಿಸುವಾಗ ಅದರಲ್ಲಿ ಜಾಹೀರಾತುಗಳನ್ನು ಸೇರಿಸುವ ಬಗ್ಗೆ ಮುಂದಾಲೋಚನೆಯನ್ನು ಇಟ್ಟುಕೊಂಡಿದ್ದರು ಎಂಬುದನ್ನೂ ಕೂಡ ಅವರು ತಿಳಿಸಿದ್ದಾರೆ. ಆ ಕಾಲ ಈಗ ಸನ್ನಿಹಿತವಾಗಿದೆ.
ಫೇಸ್‌ಬುಕ್-ವಾಟ್ಸ್‌ಆಪ್ ಜುಗಲ್‌ಬಂದಿಗೆ 5 ವರ್ಷ
ವಾಟ್ಸ್ ಆಪ್ ನ್ನು ಫೇಸ್ ಬುಕ್ ಖರೀದಿಸಿ 5 ವರ್ಷ ಕಳೆಯುತ್ತಾ ಬಂದಿರುವ ಈ ಸಂದರ್ಬದಲ್ಲಿ ಬಹುಶ್ಯಃ ವಾಟ್ಸ್ ಆಪ್ ನಲ್ಲಿ ಜಾಹೀರಾತುಗಳನ್ನು ಕಾಣುವ ಸಮಯ ಹತ್ತಿರ ಬಂದಾಗಿದೆ ಎಂದೆನಿಸುತ್ತದೆ. ವಾಬೇಟಾಇನ್ಫೋ ವರದಿಯೊಂದು ಹೇಳುವ ಪ್ರಕಾರ ವಾಟ್ಸ್ ಆಪ್ ನ ಹೊಸ ವೈಶಿಷ್ಟ್ಯತೆಗಳಲ್ಲಿ ಐಓಎಸ್ ವರ್ಷನ್ ನಲ್ಲಿ ಜಾಹೀರಾತುಗಳನ್ನು ಪ್ರಕಟಿಸುವುದೇ ಆಗಿದೆ ಎಂದು ತಿಳಿಸಿದೆ.
ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಕಾಣಿಸಲಿದೆ ಜಾಹೀರಾತುಗಳು:
ಇನ್ಸ್ಟಾಗ್ರಾಂನ ಸ್ಟೋರೀಸ್ ನಲ್ಲಿ ಕಾಣಿಸುವ ಹಾಗೆ ವಾಟ್ಸ್ ಆಪ್ ನ ಸ್ಟೇಟಸ್ ನಲ್ಲಿ ಈ ಜಾಹೀರಾತುಗಳು ಕಾಣಿಸುತ್ತದೆ.ಆದರೆ ಈ ಜಾಹೀರಾತುಗಳು ಟಾರ್ಗೆಟ್ ಆಗಿರುತ್ತವೆಯಾ ಅಥವಾ ಇಲ್ಲವಾ ಎಂಬ ಬಗ್ಗೆ ತಿಳಿದುಬಂದಿಲ್ಲ. ವಾಟ್ಸ್ ಆಪ್ ಎನ್ಕ್ರಿಪ್ಟೆಡ್ ಪ್ರಕಾರ ಫೇಸ್ಬುಕ್ ಬಳಕೆದಾರರ ಡಾಟಾವನ್ನು ನೀಡುವಂತಿಲ್ಲ.
ಆದರೆ, ಸಂಬಂಧಪಟ್ಟ ಫೋನ್ ನಂಬರ್ ನಿಂದ ಫೇಸ್ ಬುಕ್ ಪ್ರೊಫೈಲ್ ನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಮತ್ತು ಈ ಸಾಮಾಜಿಕ ಜಾಲತಾಣವು ಬಳಕೆದಾರರ ಆಕ್ಟಿವಿಟಿಯನ್ನು ಗಮನಿಸಿ ಜಾಹೀರಾತುಗಳನ್ನು ಟಾರ್ಗೆಟ್ ಮಾಡಿದರೂ ಆಶ್ಚರ್ಯವಿಲ್ಲ.
ಆದರೆ ಇದುವರೆಗೂ ಯಾವಾಗ ಈ ವೈಶಿಷ್ಟ್ಯತೆಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ಬಗ್ಗೆ ತಿಳಿದುಬಂದಿಲ್ಲ. ಈಗಾಗಲೇ ಇದು ಟೆಸ್ಟಿಂಗ್ ಹಂತದಲ್ಲಿದೆ ಎಂಬುದು ತಿಳಿದುಬಂದಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ಐಓಎಸ್ ಬಳಕೆದಾರರು ಈ ವೈಶಿಷ್ಟ್ಯತೆಯ ಅಪ್ ಡೇಟ್ ನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಟೆಸ್ಟಿಂಗ್ ನಡೆಯುತ್ತಿದೆ:
ಅಗಸ್ಟ್ ತಿಂಗಳಿನಲ್ಲಿಯೇ ಹೊರಬಿದ್ದಿರುವ ವರದಿಯ ಪ್ರಕಾರ ಬ್ಯುಸಿನೆಸ್ ಹೆಚ್ಚಿಸಿಕೊಳ್ಳಲು ನಡೆಸುತ್ತಿರುವ ಹೊಸ ಅಪ್ ಡೇಟ್ ಬಗೆಗಿನ ಟೆಸ್ಟಿಂಗ್ ಕಾರ್ಯವು ವಾಟ್ಸ್ ಆಪ್ ನಲ್ಲಿ ಆರಂಭವಾಗಿದೆಯಂತೆ. ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಪ್ರಕಟಗೊಳ್ಳುವ ಆಡ್ ಗಳನ್ನು ಪೇಸ್ ಬುಕ್ ನ ಜಾಹೀರಾತು ಸಿಸ್ಟಮ್ ನಲ್ಲಿ ಬ್ಯಾಕ್ ಅಪ್ ಮಾಡುವುದಕ್ಕೂ ಸಲಹೆಗಳು ಕೇಳಿಬಂದಿವೆಯಂತೆ.
ಕಂಪೆನಿಗೆ ಆದಾಯದ ಮೂಲ:
ವಾಟ್ಸ್ ಆಪ್ ನ COO ಮ್ಯಾಟ್ ಹೇಳಿಕೆ ನೀಡಿರುವಂತೆ ಇನ್ಸ್ಟಾಗ್ರಾಂನ ವೈಶಿಷ್ಟ್ಯತೆಯನ್ನು ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ. ಇನ್ಸ್ಟಾಗ್ರಾಂನಲ್ಲಿ ಅಧ್ಬುತವಾಗಿ ಕಾರ್ಯ ನಿರ್ವಹಿಸುತ್ತಿರುವ ವೈಶಿಷ್ಟ್ಯತೆಯ ಬಗ್ಗೆ ಅಧ್ಯಯನಗಳು ನಡೆಯುತ್ತಿದೆ.ಅಷ್ಟೇ ಈ ಜಾಹೀರಾತುಗಳಲ್ಲಿ ದೊಡ್ಡ ದೊಡ್ಡ ಕಂಪೆನಿಗಳಿಗೆ ತಮ್ಮ ಜಾಹೀರಾತಿಗಾಗಿ ಶುಲ್ಕ ವಿಧಿಸಲಾಗುತ್ತದೆ ಮತ್ತು ಇದು ಕಂಪೆನಿಯ ಆದಾಯ ಹೆಚ್ಚಿಸಲು ನೆರವು ನೀಡುತ್ತದೆ. ಈಗಾಗಲೇ ಊಬರ್ ನಂತಹ ಕಂಪೆನಿಗಳು ನೋಟಿಫಿಕೇಷನ್ ಗಳನ್ನು ಕಳುಹಿಸಲು ವಾಟ್ಸ್ ಆಪ್ ನ್ನು ಬಳಕೆ ಮಾಡುತ್ತಿರುವುದರಿಂದಾಗಿ ನಾವು ಅವರಿಗೆ ಶುಲ್ಕವನ್ನು ವಿಧಿಸುತ್ತೇವೆ ಎಂದು ವಾಟ್ಸ್ ಆಪ್ ನಿಂದ ತಿಳಿದುಬಂದಿದೆ.
ಇದು ಗ್ರಾಹಕರಿಗೆ ಒಳಿತನ್ನು ಮಾಡುತ್ತದೆಯೋ ಅಥವಾ ಕಿರಿಕಿರಿ ಉಂಟು ಮಾಡುತ್ತದೆಯೋ ಮುಂದಿನ ದಿನಗಳಲ್ಲಿ ಕಾದುನೋಡಬೇಕು.