ವಾಟ್ಸ್ಆಪ್ ನಿಂದ ಐಫೋನ್ ಬಳಕೆದಾರರಿಗೆ ಎರಡು ಹೊಸ ಆಯ್ಕೆಗಳು...!

By Lekhaka
|

ವಾಟ್ಸ್ಆಪ್ ಮತ್ತೊಂದು ನೂತನ ಆಪ್ಡೇಟ್ ವೊಂದನ್ನು ಬಿಡುಗಡೆ ಮಾಡುವ ಸನಿಹದಲ್ಲಿದ್ದು, ಈ ಆಪ್ಡೇಟ್ ನಲ್ಲಿ ಸಾಕಷ್ಟು ಹೊಸ ಹೊಸ ಆಯ್ಕೆಗಳನ್ನು ಕಾಣಬಹುದಾಗಿದೆ. ಈ ಹಿಂದೆ ಕೇವಲ ಸ್ಟೀಕರ್ ಗಳನ್ನು ಮಾತ್ರವೇ ಬಿಡುಗಡೆ ಮಾಡುವುದಾಗಿ ತಿಳಿಸಿದ್ದ ವಾಟ್ಸ್ಆಪ್, ಈ ಬಾರಿ ಇನ್ನು ಹಲವು ಆಯ್ಕೆಗಳನ್ನು ಆಪಲ್ ಬಳಕೆದಾರರಿಗೆ ನೀಡಲು ಮುಂದಾಗಿದೆ.

ವಾಟ್ಸ್ಆಪ್ ನಿಂದ ಐಫೋನ್ ಬಳಕೆದಾರರಿಗೆ ಎರಡು ಹೊಸ ಆಯ್ಕೆಗಳು...!

ವಾಟ್ಸ್ಆಪ್ ಐಫೋನ್ ಬಳಕೆದಾರರಿಗೆ ಎರಡು ಹೊಸ ಫೀಚರ್ ಗಳನ್ನು ಬಳಕೆಗೆ ನೀಡುತ್ತಿದೆ ಎನ್ನಲಾಗಿದೆ. ಒಂದು ಯೂಟ್ಯೂಬ್ ವಿಡಿಯೋಗಳನ್ನು ವಾಟ್ಸ್ ಆಪ್ ಚಾಟಿನಲ್ಲೇ ನೋಡುವುದು ಮತ್ತೊಂದು ವಾಯ್ಸ್ ರೆಕಾಡಿಂಗ್ ಮಾಡುವ ಹೊತ್ತಿನಲ್ಲಿ ರೆಕಾರ್ಡಿಂಗ್ ಬಟನ್ ಅನ್ನು ಒತ್ತಿ ಹಿಡುಕೊಳ್ಳದೇ ಇರುವುದು. ಈ ಆಯ್ಕೆಗಳು ವಾಟ್ಸ್ಆಪ್ ಆವೃತ್ತಿ 2.17.81ನಲ್ಲಿ ದೊರೆಯಲಿದೆ.

ದಿನೇ ದಿನೇ ವಾಟ್ಸ್ಆಪ್ ನಲ್ಲಿ ಯೂಟ್ಯೂಬ್ ಲಿಂಕ್ ಗಳನ್ನು ಸೆಂಡ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಕಳುಹಿಸಿದ ಲಿಂಕ್ ಗಳನ್ನು ಓಪನ್ ಮಾಡಿ ಯೂಟ್ಯೂಬ್ ಗೆ ಹೋಗಿ ವಿಡಿಯೋವನ್ನು ನೋಡುವ ಬದಲು ಚಾಟ್ ವಿಂಡೋದಲ್ಲಿಯೇ ಪಿಚ್ಚರ್ ಇನ್ ಪಿಚ್ಚರ್ ಆಯ್ಕೆಯ ಮೂಲಕ ವಿಡಿಯೋ ನೋಡುವ ಅವಕಾಶವನ್ನು ಮಾಡಿಕೊಡಲು ವಾಟ್ಸ್ಆಪ್ ಮುಂದಾಗಿದೆ.

ಇದಲ್ಲದೇ ವಾಯ್ಸ್ ರೆಕಾರ್ಡಿಂಗ್ ಮಾಡುವ ಸಂದರ್ಭದಲ್ಲಿ ವಾಟ್ಸ್ಆಪ್ ಬಳಕೆದಾರರು ವಾಯ್ಡ್ ರೆಕಾರ್ಡಿಂಗ್ ಬಟನ್ ಅನ್ನು ಪ್ರೆಸ್ ಮಾಡಿಕೊಳ್ಳ ಬೇಕಾಗಿತ್ತು. ಆದರೆ ಸದ್ಯ ದೊರೆತಿರುವ ಹೊಸ ಆಪ್ಡೇಟ್ ನಲ್ಲಿ ವಾಯ್ಸ್ ಮೇಸೆಜ್ ಕಳುಹಿಸಲು ಬಟನ್ ಒತ್ತಿ ಹಿಡಿಯುವ ಅವಶ್ಯಕತೆ ಇಲ್ಲ ಎನ್ನಲಾಗಿದೆ.

ಕರ್ನಾಟಕದಲ್ಲಿ 4G VoLET ಸೇವೆ ಆರಂಭಿಸಿದ ಏರ್‌ಟೆಲ್: ಆರಂಭಿಕ ಕೊಡುಗೆ ..?ಕರ್ನಾಟಕದಲ್ಲಿ 4G VoLET ಸೇವೆ ಆರಂಭಿಸಿದ ಏರ್‌ಟೆಲ್: ಆರಂಭಿಕ ಕೊಡುಗೆ ..?

ಈ ಎರಡು ಆಯ್ಕೆಗಳು ಕೇಲವ ಐಫೋನ್ ಬಳಕೆದಾರರಿಗೆ ಮಾತ್ರವೇ ದೊರೆಯಲಿದ್ದು, ಶೀಘ್ರವೇ ಆಂಡ್ರಾಯ್ಡ್ ಬಳಕೆದಾರರಿಗೂ ಈ ಆಯ್ಕೆಗಳು ಬಳಕೆಗೆ ಮುಕ್ತವಾಗಲಿದೆ ಎನ್ನಲಾಗಿದೆ. ಇದಲ್ಲದೇ ಈ ಹೊಸ ಆಯ್ಕೆಯೊಂದಿಗೆ ಇನ್ನು ಹಲವು ಆಯ್ಕೆಗಳು ಬಳಕೆದಾರರಿಗೆ ಲಭ್ಯವಿರಲಿದೆ.

Best Mobiles in India

Read more about:
English summary
WhatsApp for iPhones will get two new features. After the update, you can watch YouTube videos within a conversation in Picture-in-Picture mode.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X