Home
Apps

ಸ್ಟಿಕ್ಕರ್ಸ್ ಗಳಿಗೆ ವಾಟ್ಸ್ ಆಪ್ ನಲ್ಲಿ ಮತ್ತೊಂದು ಫೀಚರ್

ಇತ್ತೀಚೆಗಷ್ಟೇ ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಬಳಕೆದಾರರಿಗಾಗಿ ವಾಟ್ಸ್ ಆಪ್ ನಲ್ಲಿ ಸ್ಟಿಕ್ಕರ್ ವೈಶಿಷ್ಟ್ಯತೆಯು ಬಿಡುಗಡೆಗೊಂಡಿದೆ. ಇದೀಗ ವಾಟ್ಸ್ ಆಪ್ ಬಳಕೆದಾರರು ಸ್ಟಿಕ್ಕರ್ಸ್ ಗೆ ತೆರಳಿ ಅದರ ಪ್ಯಾಕ್ ನಲ್ಲಿರುವ ಯಾವುದೇ ಒಂದು ಸ್ಟಿಕ್ಕರ್ ನ್ನು ಆಯ್ಕೆ ಮಾಡಿ ತಮ್ಮವರಿಗೆ ಕಳುಹಿಸಿಕೊಡಲು ಅವಕಾಶವಿದೆ.

ಸ್ಟಿಕ್ಕರ್ಸ್ ಗಳಿಗೆ ವಾಟ್ಸ್ ಆಪ್ ನಲ್ಲಿ ಮತ್ತೊಂದು ಫೀಚರ್

ವಾಟ್ಸ್ ಆಪ್ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕುವ ಟ್ವೀಟರ್ ಅಕೌಂಟಾಗಿರುವ ವಾಬೆಟಾಇನ್ಫೋ ಇದೀಗ ಸ್ಟಿಕ್ಕರ್ಸ್ ಬಳಸುವಾಗಿನ ಸರ್ಚ್ ಆಪ್ಶನ್ ನಲ್ಲಿರುವ ಹೊಸ ಫೀಚರ್ ವೊಂದರ ಬಗ್ಗೆ ತಿಳಿಸಿಕೊಟ್ಟಿದೆ.

ಡೆವಲಪ್ ಮೆಂಟ್ ಹಂತದಲ್ಲಿರುವ ಫೀಚರ್:

ವಾಬೇಟಾ ಇನ್ಫೋ ಹೇಳುವ ಮಾಹಿತಿಯ ಪ್ರಕಾರ ಈ ಹೊಸ ವೈಶಿಷ್ಟ್ಯತೆ ಇನ್ನು ಡೆವಲಪ್ ಮೆಂಟ್ ಹಂತದಲ್ಲಿದೆ. ಭವಿಷ್ಯದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ. ಹಾಗಂತ ಐಓಎಸ್ ಬಳಕೆದಾರರಿಗೆ ಲಭ್ಯವಾಗುವುದಿಲ್ಲವೆಂದಲ್ಲ. ಬದಲಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾದ ಕೆಲವೇ ದಿನಗಳಲ್ಲಿ ಐಓಎಸ್ ಬಳಕೆದಾರರಿಗೂ ಕೂಡ ಈ ಹೊಸ ವೈಶಿಷ್ಟ್ಯತೆ ಸಿಗುತ್ತದೆ.

ಟ್ವೀಟರ್ ನಲ್ಲಿ ಮಾಹಿತಿ ಬಹಿರಂಗ:

ವಾಟ್ಸ್ ಆಪ್ ಇದೀಗ ಸ್ಟಿಕ್ಕರ್ ಸರ್ಚ್ ಫೀಚರ್ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ. ಭವಿಷ್ಯದಲ್ಲಿ ಅದು ಬಳಕೆದಾರರಿಗೆ ಲಭ್ಯವಾಗಲಿದೆ. ಸದ್ಯ ಅದು ಡೆವಲಪ್ ಮೆಂಟ್ ಹಂತದಲ್ಲಿದೆ ಎಂದು ಟ್ವೀಟರ್ ನಲ್ಲಿ ವಾಬೇಟಾ ಇನ್ಫೋ ತಿಳಿಸಿದೆ. ವಾಬೇಟಾ ಇನ್ಫೋ ಮಾಡಿದ ಟ್ವೀಟ್ ಇಂತಿದೆ.

ಇತರೆ ಮೆಸೇಜಿಂಗ್ ಆಪ್ ಗಳಂತೆ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಕೂಡ ಗ್ರಾಹಕರಿಗೆ ಸ್ಟಿಕ್ಕರ್ಸ್ ಪ್ಯಾಕ್ ನ್ನು ನೀಡಿದೆ. ಸ್ಟಿಕ್ಕರ್ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಲಾಗಿರುವ ಸ್ಟಿಕ್ಕರ್ ಗಳನ್ನು ಡಿಲೀಟ್ ಅಥವಾ ಮ್ಯಾನೇಜ್ ಮಾಡಲು ಅವಕಾಶ ಮಾಡಲಾಗಿದೆ.

ವಾಟ್ಸ್ ಆಪ್ ನಲ್ಲಿ ಸದ್ಯ 13 ಸೆಟ್ ಆಫ್ ಸ್ಟಿಕ್ಕರ್ ಗಳು ಪ್ರೀ ಇನ್ಸ್ಟಾಲ್ ಆಗಿ ಲಭ್ಯವಿದೆ—ಅದರಲ್ಲಿ ಕಪ್ಪಿಯಂ ಸಾಲ್ಟಿ, ಕೋಮೋ,ಬಿಬಿಂಬಾಪ್ ಫ್ರೆಂಡ್ಸ್, ಉಂಚಿ ಎಂಡ್ ರೋಲಿ, ಬನಾನ ಎಂಡ್ ಬಿಸ್ಕೂಟ್ ಇತ್ಯಾದಿಗಳು ಸೇರಿವೆ.ಗೂಗಲ್ ಪ್ಲೇ ಸ್ಟೋರ್ ಮೂಲಕ ಇನ್ನಷ್ಟು ಸ್ಟಿಕ್ಕರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶವು ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರುತ್ತದೆ. ಕೆಳಭಾಗದಲ್ಲಿರುವ ಗೆಟ್ ಮೋರ್ ಸ್ಟಿಕ್ಕರ್ಸ್ ಆಯ್ಕೆಯನ್ನು ಕ್ಲಿಕ್ಕಿಸಿಯೂ ಕೂಡ ಡೌನ್ ಲೋಡ್ ಮಾಡಿಕೊಳ್ಳಬಹುದು.

ಸ್ಟಿಕ್ಕರ್ ಸೆಲೆಕ್ಟ್ ಮಾಡಿಕೊಳ್ಳುವುದು ಹೇಗೆ?

ಅಧಿಕೃತ ವೆಬ್ ಸೈಟ್ ಹೇಳುವ ಪ್ರಕಾರ , ಆಂಡ್ರಾಯ್ಡ್ ಬಳಕೆದಾರರು ಸ್ಟಿಕ್ಕರ್ಸ್ ಗಳನ್ನು ಆಕ್ಸಿಸ್ ಮಾಡಲು ಎಮೋಜಿ ಐಕಾನ್ ನ್ನು ಸ್ಕ್ರೀನಿನ ಎಡಭಾಗದಲ್ಲಿರುವುದನ್ನು ಕ್ಲಿಕ್ಕಿಸಿ ಪಡೆದುಕೊಳ್ಳಬಹುದು. ಎಮೋಜಿಯನ್ನು ಟ್ಯಾಪ್ ಮಾಡಿದ ನಂತರ ಬಳಕೆದಾರರು ಸ್ಟಿಕ್ಕರ್ಸ್ ಐಕಾನ್ ನ್ನು ಟ್ಯಾಪ್ ಮಾಡಬಹುದು. ಜಿಫ್ ಐಕಾನ್ ನ ಬಲಭಾಗದಲ್ಲಿ ಇರುತ್ತದೆ. ನಂತರ ಬಳಕೆದಾರರು ಯಾವುದೇ ಸ್ಟಿಕ್ಕರ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಐಓಎಸ್ ಬಳಕೆದಾರರು ಟೆಕ್ಸ್ಟ್ ಫೀಲ್ಡ್ ನಲ್ಲಿರುವ ಸ್ಟಿಕ್ಕರ್ ಐಕಾನ್ ನ್ನು ಕ್ಲಿಕ್ಕಿಸುವ ಮೂಲಕವೇ ಇದನ್ನು ಸಾಧಿಸಬಹುದು.

ಇತ್ತೀಚೆಗೆ ವಾಟ್ಸ್ ಆಪ್ ನೀಡಿರುವ ಮಾಹಿತಿಯ ಪ್ರಕಾರ ಸ್ಟಿಕ್ಕರ್ ವೈಶಿಷ್ಟ್ಯತೆಯ ಮುಂದುವರಿದ ಭಾಗವಾಗಿ ಪ್ರೀವ್ಯೂ ಫೀಚರ್ ನ್ನು ಕೂಡ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯಗೊಳಿಸಲಾಗುತ್ತದೆಯಂತೆ. ಆ ನಿಟ್ಟಿನಲ್ಲಿ ವಾಟ್ಸ್ ಆಪ್ ನ ಬೇಟಾ ವರ್ಷನ್ v2.18.325 ನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದ್ದು ಟೆಸ್ಟಿಂಗ್ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇದು ಬಳಕೆದಾರರು ಸ್ಟಿಕ್ಕರ್ ಸಹಿತವಾಗಿರುವ ಮೆಸೇಜ್ ನ್ನು ಪ್ರೀವ್ಯೂ ಮಾಡಲು ಅವಕಾಶ ನೀಡುತ್ತದೆ ಮತ್ತು ಖಾತ್ರಿ ಪಡಿಸಿಕೊಂಡ ನಂತರ ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಮಂದಿಗೆ ಕಳುಹಿಸಲು ಅವಕಾಶವಿರುತ್ತದೆ. ಒಂದು ವೇಳೆ ನೀವು ಆಯ್ಕೆ ಮಾಡಿಕೊಂಡ ಕಾಂಟ್ಯಾಕ್ಟ್ ಗಳು ತಪ್ಪಾಗಿದ್ದಲ್ಲಿ ನೀವು ಕಳುಹಿಸಲು ಸಿದ್ಧಪಡಿಸಿಕೊಂಡಿರುವ ಮೆಸೇಜ್ ನ್ನು ಕ್ಯಾನ್ಸಲ್ ಮಾಡುವುದಕ್ಕೂ ಅವಕಾಶವಿರುತ್ತದೆ.

Best Mobiles in India

English summary
WhatsApp is adding another feature to Stickers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+