2020ರಲ್ಲಿ ವಾಟ್ಸ್‌ಆಪ್‌ಗೆ ಬರಲಿದೆ ಈ ದೊಡ್ಡ ಫೀಚರ್‌..!

By Gizbot Bureau
|

ವಿಶ್ವದ ಜನಪ್ರಿಯ ಮೆಸೇಜಿಂಗ್‌ ಆಪ್‌ ವಾಟ್ಸ್‌ಆಪ್‌ 2020ರಲ್ಲಿ ಹಲವು ಹೊಸ ಫೀಚರ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಈಗಾಗಲೇ ಹೊಸ ಫೀಚರ್‌ಗಳನ್ನು ವಾಟ್ಸ್‌ಆಪ್‌ನ ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ, ಹೊಸ ಫೀಚರ್‌ಗಳ ಪೈಕಿ 'ಕಣ್ಮರೆಯಾಗುವ ಸಂದೇಶಗಳು' ಫೀಚರ್‌ ನಮ್ಮ ವಾಟ್ಸ್‌ಆಪ್‌ ಬಳಕೆಯ ವಿಧಾನವನ್ನು ಬದಲಾಯಿಸುತ್ತದೆ ಎನ್ನಬಹುದು.

ಅಕ್ಟೋಬರ್‌ನಲ್ಲಿ ಬಿಡುಗಡೆ

ಅಕ್ಟೋಬರ್‌ನಲ್ಲಿ ಬಿಡುಗಡೆ

ಅಕ್ಟೋಬರ್‌ನಲ್ಲಿ 'ಕಣ್ಮರೆಯಾಗುವ ಸಂದೇಶಗಳು' ಫೀಚರ್‌ ಆಂಡ್ರಾಯ್ಡ್ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯಲ್ಲಿ (ವಿ 2.19.275) ಬಿಡುಗಡೆಯಾಗಿತ್ತು. ನಂತರ ನವೆಂಬರ್‌ನಲ್ಲಿ, ಅಪ್ಲಿಕೇಶನ್‌ನ ಬೀಟಾ ಆವೃತ್ತಿ 2.19.348ರಲ್ಲಿ ‘ಸಂದೇಶಗಳನ್ನು ಅಳಿಸಿ' ಫೀಚರ್‌ ಆಗಿ ಕಂಡುಬಂದಿದೆ. ಈ ಫೀಚರ್‌ ಗ್ರೂಪ್‌ ಚಾಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಗ್ರೂಪ್‌ನ ನಿರ್ದಿಷ್ಟ ನಿರ್ವಾಹಕರು ಮಾತ್ರ ಈ ಫೀಚರ್‌ನ್ನು ಸಕ್ರಿಯಗೊಳಿಸುತ್ತಾರೆ ಎನ್ನಲಾಗಿದೆ.

ಗ್ರೂಪ್‌ ಸೆಟ್ಟಿಂಗ್ಸ್‌ನಲ್ಲಿ ಫೀಚರ್‌

ಗ್ರೂಪ್‌ ಸೆಟ್ಟಿಂಗ್ಸ್‌ನಲ್ಲಿ ಫೀಚರ್‌

‘ಗ್ರೂಪ್‌ ಮಾಹಿತಿಯನ್ನು ಸಂಪಾದಿಸಿ', ‘ಸಂದೇಶಗಳನ್ನು ಕಳುಹಿಸಿ' ಮತ್ತು ‘ಗ್ರೂಪ್‌ ನಿರ್ವಾಹಕರನ್ನು ಸಂಪಾದಿಸಿ' ಮುಂತಾದ ಇತರ ಆಯ್ಕೆಗಳೊಂದಿಗೆ ‘ಗ್ರೂಪ್‌ ಸೆಟ್ಟಿಂಗ್ಸ್‌ಗಳಲ್ಲಿ' ‘ಸಂದೇಶಗಳನ್ನು ಅಳಿಸು' ಆಯ್ಕೆಯು ಕಾಣಿಸುತ್ತದೆ. ಇದು ಹೊಸ ಅಪ್‌ಡೇಟ್‌ನಲ್ಲಿ ಕಂಡುಬಂದಿದೆ.

ಸಮಯದ ಆಯ್ಕೆ

ಸಮಯದ ಆಯ್ಕೆ

ಹೊಸ ಸಂದೇಶಗಳನ್ನು ಅಳಿಸುವ ಮೊದಲು ಚಾಟ್‌ನಲ್ಲಿ ಮೆಸೇಜ್‌ ಉಳಿಯಲು ಅಗತ್ಯವಿರುವ ಸಮಯವನ್ನು ಗ್ರೂಪ್‌ ನಿರ್ವಾಹಕ ಆಯ್ಕೆ ಮಾಡುತ್ತಾನೆ. ಸಮಯದ ಆಯ್ಕೆಯಲ್ಲಿ ನಮಗೆ ಆಫ್, 1 ಗಂಟೆ, 1 ದಿನ, 1 ವಾರ, 1 ತಿಂಗಳು ಮತ್ತು 1 ವರ್ಷದಂತಹ ಆರು ಆಯ್ಕೆಗಳು ದೊರೆಯುತ್ತವೆ. ಅಕ್ಟೋಬರ್ ಅಪ್‌ಡೇಟ್‌ನಲ್ಲಿ 5 ಸೆಕೆಂಡು ಅಥವಾ 1 ಗಂಟೆ ಮಾತ್ರ ಇತ್ತು.

ಎಲ್ಲಾ ಸದಸ್ಯರಿಗೂ ಅನ್ವಯ

ಎಲ್ಲಾ ಸದಸ್ಯರಿಗೂ ಅನ್ವಯ

ಬಳಕೆದಾರರು ಯಾವ ಆಯ್ಕೆಯನ್ನು ಆರಿಸಿಕೊಂಡರೂ ಚಾಟ್‌ನ ಎಲ್ಲ ಸದಸ್ಯರಿಗೆ ಅನ್ವಯವಾಗುತ್ತದೆ. ಇದರರ್ಥ ಬಳಕೆದಾರರು ನಿರ್ದಿಷ್ಟ ಅಥವಾ ವೈಯಕ್ತಿಕ ಸಂದೇಶಕ್ಕಾಗಿ ಮುಕ್ತಾಯ ಸಮಯವನ್ನು ಆಯ್ಕೆ ಮಾಡಲು ಸಾಧ್ಯವಾಗದಿರಬಹುದು. ಈ ಫೀಚರ್‌ ಆಂಡ್ರಾಯ್ಡ್ ಆವೃತ್ತಿಯ ಬೀಟಾ ಅಪ್‌ಡೇಟ್‌ನಲ್ಲಿ ಗುರುತಿಸಲಾಗಿದ್ದರೂ, ಐಒಎಸ್ ಬಳಕೆದಾರರಿಗೂ ಸಹ ಬರುತ್ತದೆ ಎಂದು ನಿರೀಕ್ಷಿಸಬಹುದು.

Best Mobiles in India

Read more about:
English summary
WhatsApp Is Getting Its Biggest Feature In 2020

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X