Home
Apps

ವಾಟ್ಸ್‌ಆಪ್‌ನಲ್ಲಿ ಬಂತು ಬಿಗ್‌ ಫೀಚರ್ಸ್‌..! ಸ್ವೈಪ್ ಟು ರಿಪ್ಲೇ, ಪಿಐಪಿ ಮೋಡ್ ಬಳಸಿ..!

ಕಳೆದ ಒಂದು ತಿಂಗಳ ಹಿಂದೆ ವಾಬೇಟಾ ಇನ್ಫೋ ಸೈಟ್ ನಲ್ಲಿ ವಾಟ್ಸ್ ಆಪ್ ಅಭಿಮಾನಿಗಳಿಗಾಗಿ ಒಂದು ಹೊಸ ಫೀಚರ್ ಬಿಡುಗಡೆಗೊಳ್ಳುವ ಬಗ್ಗೆ ಪ್ರಕಟಿಸಲಾಗಿತ್ತು. ಇದೀಗ ಆ ವೈಶಿಷ್ಟ್ಯತೆಗಳು ಬಿಡುಗಡೆಗೊಂಡಿವೆ. ಹೌದು ಸ್ವೈಪ್ ಟು ರಿಪ್ಲೈ ವೈಶಿಷ್ಟ್ಯತೆಯನ್ನು ಆಂಡ್ರಾಯ್ಡ್ ಬಳಕೆದಾರರಿಗಾಗಿ ಬಿಡುಗಡೆಗೊಳಿಸಲಾಗಿದೆ.

ವಾಟ್ಸ್‌ಆಪ್‌ನಲ್ಲಿ ಬಂತು ಬಿಗ್‌ ಫೀಚರ್ಸ್‌..! ಸ್ವೈಪ್ ಟು ರಿಪ್ಲೇ, ಪಿಐಪಿ ಮೋಡ್

ಆದರೆ ಸದ್ಯಕ್ಕೆ ಎಲ್ಲಾ ಆಂಡ್ರಾಯ್ಡ್ ಬಳಕೆದಾರರು ಈ ವೈಶಿಷ್ಟ್ಯತೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಕೇವಲ ಬೇಟಾ ಬಳಕೆದಾರರು ಬಳಸಬಹುದು. ಆದರೆ ಕೆಲವೇ ತಿಂಗಳಲ್ಲಿ ಟೆಸ್ಟಿಂಗ್ ಕಾರ್ಯವು ಮುಗಿದ ನಂತರ ಎಲ್ಲಾ ಬಳಕೆದಾರರಿಗೂ ಬಳಸಲು ಅವಕಾಶವಿರುತ್ತದೆ.

How to recharge your Bangalore Metro card online - KANNADA
ಐಓಎಸ್ ನಲ್ಲಿರುವಂತೆ ಆಂಡ್ರಾಯ್ಡ್ ನಲ್ಲೂ ಲಭ್ಯ:

ಐಓಎಸ್ ನಲ್ಲಿರುವಂತೆ ಆಂಡ್ರಾಯ್ಡ್ ನಲ್ಲೂ ಲಭ್ಯ:

ಬಹಳ ದಿನಗಳ ಹಿಂದಿನಿಂದಲೇ ಸ್ವೈಪ್ ಟು ರಿಪ್ಲೈ ವೈಶಿಷ್ಟ್ಯತೆಯನ್ನು ಐಓಎಸ್ ಬಳಕೆದಾರರು ಬಳಸುತ್ತಿದ್ದಾರೆ.ಆದರೆ ಆಂಡ್ರಾಯ್ಡ್ ಬಳಕೆದಾರರಿಗೆ ಇದನ್ನು ಬಿಡುಗಡೆಗೊಳಿಸುವ ಮುನ್ನ ವಾಟ್ಸ್ ಆಪ್ ಈ ಫೀಚರ್ ನಲ್ಲಿ ಕೆಲವು ಬದಲಾವಣೆಗಳನ್ನು ತರಲು ಇಚ್ಛಿಸುತ್ತಿದೆ ಎಂದು ಈ ಹಿಂದಿನ ವರದಿಗಳು ತಿಳಿಸಿದ್ದವು.ಆದರೆ ಇದೀಗ ಬಿಡುಗಡೆಗೊಂಡಿರುವುದನ್ನು ಗಮನಿಸಿದರೆ ಹೆಚ್ಚುಕಡಿಮೆ ಐಓಎಸ್ ಬಳಕೆದಾರರು ಬಳಸುತ್ತಿರುವಂತೆಯೇ ಇದು ಕೂಡ ಕಾಣಿಸುತ್ತದೆ.

ಸ್ವೈಪ್ ಟು ರಿಪ್ಲೈ ವೈಶಿಷ್ಟ್ಯತೆ ಎಂದರೇನು?

ಸ್ವೈಪ್ ಟು ರಿಪ್ಲೈ ವೈಶಿಷ್ಟ್ಯತೆ ಎಂದರೇನು?

ವಾಟ್ಸ್ ಆಪ್ ನಲ್ಲಿ ಸಾಂಪ್ರದಾಯಿಕವಾಗಿ ರಿಪ್ಲೈ ಮಾಡುವ ಪದ್ದತಿಗಿಂತ ಈ ಸ್ವೈಪ್ ಟು ರಿಪ್ಲೈ ವೈಶಿಷ್ಟ್ಯತೆಯಲ್ಲಿ ಹೆಚ್ಚು ವೇಗವಾಗಿ ರಿಪ್ಲೈ ಮೆಸೇಜ್ ಗಳನ್ನು ಕಳುಹಿಸಬಹುದು.ನೀವು ಕೇವಲ ಮೆಸೇಜ್ ನ್ನು ಸೈಡ್ ವೇಗೆ ಸ್ವೈಪ್ ಮಾಡಿದರೆ ಖಾಲಿಯಿರುವ ರಿಪ್ಲೈ ಬಾಕ್ಸ್ ನಿಮಗೆ ತೆರೆದುಕೊಳ್ಳುತ್ತದೆ. ಅದರಲ್ಲಿ ನೀವೇನು ಬರೆಯಬೇಕು ಎಂದುಕೊಳ್ಳುತ್ತೀರೋ ಅದನ್ನು ಬರೆದು ಕಳುಹಿಸಬಹುದು.

ಪಿಐಪಿ ಮೋಡ್ ಕೂಡ ಆರಂಭ:

ಪಿಐಪಿ ಮೋಡ್ ಕೂಡ ಆರಂಭ:

ಇಂದಿನಿಂದ ವಾಟ್ಸ್ ಆಪ್ ನಲ್ಲಿ ಪಿಐಪಿ ಮೋಡ್ ಕೂಡ ಆರಂಭವಾಗುತ್ತಿದೆ. ಈ ವೈಶಿಷ್ಟ್ಯತೆ ಕೂಡ ಕೇವಲ ಆಂಡ್ರಾಯ್ಡ್ ಬೇಟಾ ಬಳಕೆದಾರರಿಗೆ ಮಾತ್ರವೇ ಲಭ್ಯವಾಗುತ್ತಿದೆ.

ಎಲ್ಲರಿಗೂ ಯಾಕೆ ಲಭ್ಯವಿಲ್ಲ:

ಎಲ್ಲರಿಗೂ ಯಾಕೆ ಲಭ್ಯವಿಲ್ಲ:

ವಾಟ್ಸ್ ಆಪ್ಬೇಟಾಇನ್ಫೋ ವರದಿಯ ಪ್ರಕಾರವೆ ಹೇಳುವುದಾದರೆ ಈ ವೈಶಿಷ್ಟ್ಯತೆಗಳಲ್ಲಿ ಇನ್ನು ಹೆಚ್ಚಿನ ಡೆವಲಪ್ ಮೆಂಟ್ ಅಂಶಗಳಿದ್ದು, ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಮೊದಲು ಅವುಗಳನ್ನು ಅಭಿವೃದ್ಧಿಗೊಳಿಸಲು ಚಿಂತನೆ ನಡೆಸಿದೆ. ಮತ್ತು ಸದ್ಯ ಬೇಟಾ ಬಳಕೆದಾರರಿಗೆ ಇದನ್ನು ಬಿಡುಗಡೆಗೊಳಿಸಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂಬ ಅಭಿಪ್ರಾಯವನ್ನು ವಾಟ್ಸ್ ಆಪ್ ವ್ಯಕ್ತಪಡಿಸಿದೆ.

ಪಿಐಪಿ ಮೋಡ್ ಬಳಸಲು ಏನು ಮಾಡಬೇಕು?

ಪಿಐಪಿ ಮೋಡ್ ಬಳಸಲು ಏನು ಮಾಡಬೇಕು?

ನಿಮ್ಮ ವಾಟ್ಸ್ ಆಪ್ ನ್ನು ವಾಟ್ಸ್ ಆಪ್ 2.18.301 ಆಂಡ್ರಾಯ್ಡ್ ಬೇಟಾ ವರ್ಷನ್ ಗೆ ಅಪ್ ಡೇಟ್ ಮಾಡಿಕೊಳ್ಳುವ ಮೂಲಕ ಪಿಐಪಿ ಮೋಡ್ ನ್ನು ಬಳಕೆ ಮಾಡಬಹುದು. ಈ ಮೋಡ್ ನಿಮಗೆ ಇನ್ಸ್ಟಾಗ್ರಾಂ, ಫೇಸ್ ಬುಕ್ ಮತ್ತು ಯುಟ್ಯೂಬ್ ವೀಡಿಯೋಗಳನ್ನು ವಾಟ್ಸ್ ಆಪ್ ನ ಒಳಗೆ ಪ್ಲೇ ಮಾಡಲು ಅವಕಾಶ ನೀಡುತ್ತದೆ. ಅಂದರೆ ನೀವು ಚಾಟ್ ಮಾಡುತ್ತಲೇ ವೀಡಿಯೋ ಕೂಡ ನೋಡಬಹುದು.

ಡಾರ್ಕ್ ಮೋಡ್ ವೈಶಿಷ್ಟ್ಯತೆ:

ಡಾರ್ಕ್ ಮೋಡ್ ವೈಶಿಷ್ಟ್ಯತೆ:

ವಾಟ್ಸ್ ಆಪ್ ಡಾರ್ಕ್ ಮೋಡ್ ವೈಶಿಷ್ಟ್ಯತೆಯ ಬಗ್ಗೆ ಕೂಡ ಈಗಾಗಲೇ ಸಾಕಷ್ಟು ಕೆಲಸ ಮಾಡುತ್ತಿದೆ. ಈ ಮೋಡ್ ಈಗಾಗಲೇ ಟ್ವೀಟರ್ ಮತ್ತು ಯುಟ್ಯೂಬ್ ಗಳಲ್ಲಿ ಲಭ್ಯವಿದೆ. ಕಡಿಮೆ ಬೆಳಕಿನ ಪ್ರದೇಶಗಳಲ್ಲಿ ಈ ಡಾರ್ಕ್ ಮೋಡ್ ವೈಶಿಷ್ಟ್ಯತೆಯನ್ನು ವಾಟ್ಸ್ ಆಪ್ ನಲ್ಲಿ ಅನೇಬಲ್ ಮಾಡಿಕೊಳ್ಳಬಹುದಾಗಿದೆ. ಆ ಮೂಲಕ ಕಡಿಮೆ ಬೆಳಕಿನ ಪ್ರದೇಶದಲ್ಲಿ ವಾಟ್ಸ್ ಆಪ್ ನಿಂದ ನಿಮ್ಮ ಕಣ್ಣುಗಳಿಗೆ ಆಗುವ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ.

ಈ ಎಲ್ಲಾ ವೈಶಿಷ್ಟ್ಯತೆಗಳು ಬಹಳ ಸಹಾಯ ಮಾಡುವಂತೆ ಕಾಣುತ್ತದೆ. ಅಷ್ಟೇ ಅಲ್ಲ ಇನ್ನು ಕೆಲವೇ ದಿನಗಳಲ್ಲಿ ವಾಟ್ಸ್ ಆಪ್ ನಿಮ್ಮ ಫೇಸ್ ಬುಕ್ ಅಕೌಂಟ್ ರಿಕವರ್ ಮಾಡಿಕೊಳ್ಳುವುದಕ್ಕೂ ನೆರವು ನೀಡುತ್ತದೆ. ಇದೊಂದು ಊಹೆ ಅಷ್ಟೇ. ಒಂದು ವೇಳೆ ನಿಮ್ಮ ಫೇಸ್ ಬುಕ್ ಅಕೌಂಟ್ ಹ್ಯಾಕ್ ಆದಲ್ಲಿ ಅಥವಾ ಲಾಕ್ ಆದಲ್ಲಿ ಅದನ್ನು ವಾಟ್ಸ್ ಆಪ್ ಮೂಲಕ ರಿಕವರ್ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡಲಾಗುತ್ತದೆ. ಅದಕ್ಕಾಗಿ ನೀವು ನಿಮ್ಮ ಫೋನ್ ನಂಬರ್ ಸೇರಿದಂತೆ ಕೆಲವು ವಯಕ್ತಿಕ ಮಾಹಿತಿಗಳನ್ನು ಫೇಸ್ಬುಕ್ ಅನೇಬಲ್ ಮಾಡುವ ಈ ವೈಶಿಷ್ಟ್ಯತೆಗಾಗಿ ಹಂಚಿಕೊಳ್ಳಬೇಕಾಗಬಹುದು. ಒಟ್ಟಿನಲ್ಲಿ ಹೊಸ ವೈಶಿಷ್ಟ್ಯತೆಗಳು ವಾಟ್ಸ್ ಆಪ್ ಪ್ರಿಯರಿಗೆ ಇಷ್ಟವಾಗುವಂತಿರುವುದು ಮಾತ್ರ ಸುಳ್ಳಲ್ಲ.

Best Mobiles in India

English summary
WhatsApp is rolling out Swipe to Reply, PiP mode for Android beta users. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+