Home
Apps

ಬರ್ತಾ ಇದೆ ನಿಮ್ಮ ಊಹೆಗೂ ನಿಲುಕದ ಫೀಚರ್ಸ್‌! ಇಂತಹ ನಿರ್ಧಾರ ವಾಟ್ಸಾಪ್‌ಗೆ ಮಾತ್ರ ಸಾಧ್ಯ!

ಬಳಕೆದಾರರ ನೆಚ್ಚಿನ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ ಕಡೆಯಿಂದ ಮತ್ತೊಂದು ಹೊಸ ಸುದ್ದಿ ಬಂದಿದೆ. ಪ್ರತಿನಿತ್ಯವೂ ಒಂದಲ್ಲ ಒಂದು ಹೊಸ ಫೀಚರ್ಸ್‌ ವಿಚಾರವಾಗಿ ಸದ್ದು ಮಾಡುವ ವಾಟ್ಸಾಪ್‌ ಹೊಸ ಮಾದರಿಯ ಫೀಚರ್ಸ್‌ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಅಷ್ಟೇ ಅಲ್ಲ ಈ ಫೀಚರ್ಸ್‌ ವಾಟ್ಸಾಪ್‌ನಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎನ್ನಲಾಗಿದೆ.

ಹೌದು, ವಾಟ್ಸಾಪ್‌ ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದು ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಹೆಚ್ಚಿನ ಕಂಟ್ರೋಲ್‌ ನೀಡಲಿದೆ ಎನ್ನಲಾಗಿದೆ. ಇದರಲ್ಲಿ ಪಿನ್‌ ಮೆಸೇಜ್‌ ಅವಧಿಯ ಫೀಚರ್ಸ್‌ ಮತ್ತು ಚೇಂಜ್‌ ಪ್ರಾಕ್ಸಿ ಸೆಟ್ಟಿಂಗ್ಸ್‌ ಫೀಚರ್ಸ್‌ ಸೇರಿದೆ ಎಂದು ವರದಿಯಾಗಿದೆ. ಹಾಗಾದ್ರೆ ವಾಟ್ಸಾಪ್‌ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಫೀಚರ್ಸ್‌ಗಳ ವಿಶೇಷತೆ ಏನು? ಇದರ ಕಾರ್ಯನಿರ್ವಹಣೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬರ್ತಾ ಇದೆ ನಿಮ್ಮ ಊಹೆಗೂ ನಿಲುಕದ ಫೀಚರ್ಸ್‌! ವಾಟ್ಸಾಪ್‌ಗೆ ಮಾತ್ರ ಸಾಧ್ಯ!

ಪಿನ್‌ ಮೆಸೇಜ್‌ ಡ್ಯುರೇಷನ್
ವಾಟ್ಸಾಪ್‌ ಹೊಸದಾಗಿ ಪಿನ್‌ ಮೆಸೇಜ್‌ ಡ್ಯುರೇಷನ್‌ ಎನ್ನುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಸದ್ಯ ಈ ಫೀಚರ್ಸ್‌ ಇನ್ನು ಕೂಡ ಅಭಿವೃದ್ದಿಯ ಹಂತದಲ್ಲಿದೆ. ಇದರಿಂದ ಬಳಕೆದಾರರು ಚಾಟ್‌ಗಳು ಮತ್ತು ಗುಂಪುಗಳಲ್ಲಿ ಮೆಸೇಜ್‌ ಅನ್ನು ಎಷ್ಟು ಸಮಯದವರೆಗೆ ಪಿನ್‌ ಆಗಿರಬೇಕು ಅನ್ನೊದನ್ನ ಆಯ್ಕೆ ಮಾಡಬಹುದಾಗಿದೆ. ಅಂದರೆ ಪಿನ್‌ ಮೆಸೇಜ್‌ ಅವಧಿಯನ್ನು ಬಳಕೆದಾರರು ನಿರ್ಧರಿಸಬಹುದಾಗಿದೆ. ಇನ್ನು ಈ ಫೀಚರ್ಸ್‌ ಬಳಕೆದಾರರಿಗೆ ಒಂದು ನಿರ್ದಿಷ್ಟ ಅವಧಿಯನ್ನು ಆಯ್ಕೆ ಮಾಡಲು ಅವಕಾಶ ನೀಡಲಿದೆ.

ವಾಟ್ಸಾಪ್‌ನ ಈ ಹೊಸ ಫೀಚರ್ಸ್‌ ಬಗ್ಗೆ ಆನ್‌ಲೈನ್‌ನಲ್ಲಿ ಕೆಲ ಸ್ಕ್ರೀನ್‌ಶಾಟ್‌ಗಳು ಹರಿದಾಡಿವೆ. ಸ್ಕ್ರೀನ್‌ಶಾಟ್‌ಗಳಲ್ಲಿರುವ ಮಾಹಿತಿಯ ಪ್ರಕಾರ ಪಿನ್‌ ಮೆಸೇಜ್‌ ಡ್ಯುರೇಷನ್‌ ಫೀಚರ್ಸ್‌ ಮೂರು ವಿಭಿನ್ನ ಸಮಯದ ಅವಧಿಯನ್ನು ನೀಡಲಿದೆ. ಇದರಲ್ಲಿ 24 ಗಂಟೆಗಳು, ಏಳು ದಿನಗಳು ಮತ್ತು 30 ದಿನಗಳು ಎಂಬ ಆಯ್ಕೆಯು ಸೇರಿದೆ ಎಂದು ಹೇಳಲಾಗಿದೆ. ಇದಲ್ಲದೆ, ಹೆಚ್ಚುವರಿಯಾಗಿ, ನೀವು ಆಯ್ಕೆ ಮಾಡಿದ ಪಿನ್‌ ಮೆಸೇಜ್‌ನ ಅವಧಿ ಮುಗಿಯುವ ಮೊದಲೇ ಬೇಕಿದ್ದರೂ ಪಿನ್‌ ಮಾಡಿದ ಸಂದೇಶವನ್ನು ಅನ್‌ಪಿನ್‌ ಮಾಡಬಹುದಾಗಿದೆ.

ಅಡ್ವಾನ್ಸ್ಡ್‌ ಪ್ರಾಕ್ಸಿ ಸೆಟ್ಟಿಂಗ್ಸ್‌
ವಾಟ್ಸಾಪ್‌ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಫೀಚರ್ಸ್‌ಗಳಲ್ಲಿ ಅಡ್ವಾನ್ಸ್ಡ್‌ ಪ್ರಾಕ್ಸಿ ಸೆಟ್ಟಿಂಗ್ಸ್‌ ಕೂಡ ಒಂದಾಗಿದೆ. ಅದು ಬಳಕೆದಾರರಿಗೆ ಪ್ರಾಕ್ಸಿ ಪೋರ್ಟ್‌ಗಳನ್ನು ಕಾನ್ಫಿಗರ್ ಮಾಡಲು ಅವಕಾಶ ನೀಡಲಿದೆ. ಅಂದರೆ ನೀವು ನಿರ್ದಿಷ್ಟ ಪೋರ್ಟ್ ಅನ್ನು ಸೆಟ್‌ ಮಾಡುವುದರಿಂದ ವಿವಿಧ ಪೋರ್ಟ್‌ಗಳಲ್ಲಿ ಚಾಲನೆಯಲ್ಲಿರುವ ಇತರ ನೆಟ್‌ವರ್ಕ್ ಸೇವೆಗಳಿಂದ ಟ್ರಾಫಿಕ್‌ ಅನ್ನು ಪ್ರತ್ಯೇಕಿಸಲಿದೆ. ಇದು ವಾಟ್ಸಾಪ್‌ ಬಳಕೆದಾರರಿಗೆ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರವೇಶಗಳ ಮೇಲೆ ಹೆಚ್ಚಿನ ಕಂಟ್ರೋಲ್‌ ಅನ್ನು ನೀಡಲಿದೆ.

ನಿಮಗೆಲ್ಲಾ ತಿಳಿದಿರುವಂತೆ ಪ್ರಾಕ್ಸಿಯು ಬಳಕೆದಾರರ ಡಿವೈಸ್‌ ಮತ್ತು ಇಂಟರ್ನೆಟ್ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ನೀವು ಪ್ರಾಕ್ಸಿಯನ್ನು ಬಳಕೆ ಮಾಡಿದರೆ ಇಂಟರ್ನೆಟ್ ರಿಕ್ವೆಸ್ಟ್‌ಗಳನ್ನು ಮೊದಲು ಪ್ರಾಕ್ಸಿ ಸರ್ವರ್‌ಗೆ ಡೈರೆಕ್ಟ್‌ ಮಾಡಲಾಗುತ್ತದೆ ಎನ್ನಲಾಗಿದೆ. ಇದರಿಂದ ಸರ್ಕಾರಿ ಸೆನ್ಸಾರ್‌ಶಿಪ್ ಪ್ರಚಲಿತದಲ್ಲಿರುವ ದೇಶಗಳಲ್ಲಿ ಸೇವೆಯನ್ನು ಮುಂದುವರಿಸಲು ಈ ಫೀಚರ್ಸ್‌ ಸಹಾಯಕವಾಗಿರಲಿದೆ ಎಂದು ವಾಬೇಟಾಇನ್ಫೋ ಹೇಳಿದೆ.

ಬರ್ತಾ ಇದೆ ನಿಮ್ಮ ಊಹೆಗೂ ನಿಲುಕದ ಫೀಚರ್ಸ್‌! ವಾಟ್ಸಾಪ್‌ಗೆ ಮಾತ್ರ ಸಾಧ್ಯ!

ಇತ್ತೀಚಿಗೆ ವಾಟ್ಸಾಪ್‌ ಹೊಸದಾಗಿ Silence Unknown Callers ಫೀಚರ್ಸ್‌ ಬಿಡುಗಡೆ ಮಾಡಿದೆ. ಇದರಿಂದ ನಿಮಗೆ ಸ್ಪ್ಯಾಮ್ ಅಥವಾ ಅಪರಿಚಿತ ಸಂಖ್ಯೆಯ ಕರೆಗಳನ್ನು ಸೈಲೆಂಟ್‌ ಮಾಡಲಿದೆ ಎಂದು ಹೇಳಲಾಗಿದೆ. ಅಪರಿಚಿತ ಕರೆಗಳನ್ನು ಸೈಲೆನ್ಸ್‌ ಮಾಡುವ ಸೆಟ್ಟಿಂಗ್‌ ಅನ್ನು ಸರಳವಾಗಿ ಟಾಗಲ್‌ ಮಾಡುವುದಕ್ಕೆ ಅವಕಾಶವಿದೆ.ಸಾಮಾನ್ಯ ಕರೆಗಳಲ್ಲಿ ಅಪರಿಚಿತ ಕರೆಗಳ ಕಿರಿಕಿರಿ ಅನುಭವಿಸಿದ್ದ ಜನರಿಗೆ ವಾಟ್ಸಾಪ್‌ನಲ್ಲಿಯೂ ಸಹ ಸ್ಪ್ಯಾಮ್‌ ಕರೆಗಳ ಹಾವಳಿ ಜಾಸ್ತಿಯಾಗಿದೆ. ವಾಟ್ಸಾಪ್‌ನಲ್ಲಿಯೂ ಸಹ ಅಪರಿಚಿತ ವ್ಯಕ್ತಿಗಳ ಕರೆಗಳಿಂದ ಜನ ಬೇಸತ್ತು ಹೋಗಿದ್ದಾರೆ. ಆದರೆ ಇದಕ್ಕೆ ಫುಲ್‌ಸ್ಟಾಪ್‌ ಇಡೋದಕ್ಕೆ ವಾಟ್ಸಾಪ್‌ ಮುಂದಾಗಿದೆ. ಇದಕ್ಕಾಗಿ ಅಪರಿಚಿತ ಕರೆಗಳನ್ನು ಸೈಲೆನ್ಸ್‌ ಮಾಡುವ ಆಯ್ಕೆಯನ್ನು ತನ್ನ ಬಳಕೆದಾರರಿಗೆ ಪರಿಚಯಿಸಿದೆ. ಈ ಆಯ್ಕೆಯು ನಿಮಗೆ ಅಪರಿಚಿತ ಕರೆ ಬಂದರೆ ಅದನ್ನು ಸೈಲೆನ್ಸ್‌ ಮಾಡಲಿದೆ.

Best Mobiles in India

English summary
WhatsApp is working on a bunch of new features that will give more controls to users
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+