ವಾಟ್ಸ್ ಆಪ್ ನಲ್ಲಿ ಬರಲಿರುವ ಹೊಸ ಫೀಚರ್ ಗಳು

By Gizbot Bureau
|

ಆದಷ್ಟು ಬೇಗನೆ ಡಾರ್ಕ್ ಮೋಡ್ ಫೀಚರ್ ನ್ನು ತನ್ನ ಬಳಕೆದಾರರಿಗೆ ನೀಡುವ ಉದ್ದೇಶದಿಂದ ನಿರಂತರವಾಗಿ ಸಾಫ್ಟ್ ವೇರ್ ನ್ನು ವಾಟ್ಸ್ ಆಪ್ ಅಪ್ ಡೇಟ್ ಮಾಡುವುದಕ್ಕೆ ಪ್ರಯತ್ನಿಸುತ್ತಲೇ ಇದೆ. ನೂತನ ಆಂಡ್ರಾಯ್ಡ್ ಬೇಟಾ ವರ್ಷನ್ 2.19.366 ನಲ್ಲಿ ಡಾರ್ಕ್ ಮೋಡಿನ ಅಭಿವೃದ್ಧಿ ಜೊತೆಗೆ ಪ್ರಮುಖ ಬಗ್ ಗಳನ್ನು ಫಿಕ್ಸ್ ಮಾಡುವುದಕ್ಕಾಗಿ ಪ್ರಯತ್ನಿಸಲಾಗಿದೆ. ಅತ್ಯುತ್ತಮ ಬಗ್-ಫ್ರೀ- ಅನುಭವ ನೀಡುವುದಕ್ಕಾಗಿ ಮತ್ತು ಒಟ್ಟಾರೆ ಮೆಸೇಜ್,ಕರೆಗಳ ಅನುಭವವು ವಾಟ್ಸ್ ಆಪ್ ನಲ್ಲಿ ಬಳಕೆದಾರರಿಗೆ ಅನುಕೂಲಕರವಾಗಿರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಹಲವು ಅಭಿವೃದ್ಧಿಗಳನ್ನು ಮಾಡಲಾಗುತ್ತಿದೆ.

ವಾಟ್ಸ್ ಆಪ್

ವಾಟ್ಸ್ ಆಪ್ ಬಗೆಗಿನ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕುವ ಬ್ಲಾಗ್ ಆಗಿರುವ ವಾಬೇಟಾಇನ್ಫೋ ತಿಳಿಸುವ ಪ್ರಕಾರ ಫೇಸ್ ಬುಕ್ ಮಾಲೀಕತ್ವದ ಸಾಮಾಜಿಕ ಮೆಸೇಜಿಂಗ್ ಆಪ್ ಪ್ರಮಖ ಬಗ್ ಫಿಕ್ಸ್ ಗಳನ್ನು ಮಾಡುತ್ತಿದ್ದು ಈ ಹಿಂದಿನ ವರ್ಷನ್ ನಲ್ಲಿರುವ ಹೆಚ್ಚಿನ ಸಮಸ್ಯೆಗಳನ್ನು ಪರಿಹರಿಸುತ್ತಿದೆ. ಅದರಲ್ಲೂ ಪ್ರಮುಖವಾಗಿ ಸ್ಪ್ಯಾಶ್ ಸ್ಕ್ರೀನ್ ಬಗ್ ಫಿಕ್ಸ್ ನ್ನು ಮಾಡಲಾಗಿದ್ದು ಆಪ್ ತೆರೆದ ಕೂಡಲೇ ಕ್ರ್ಯಾಷ್ ಆಗುವುತ್ತಿದ್ದ ಸಮಸ್ಯೆಯನ್ನು ಪರಿಹರಿಸಲಾಗಿದೆ. ನಿಮ್ಮ ಫೋನಿನ ವಾಟ್ಸ್ ಆಪ್ ನಲ್ಲಿ ಸದ್ಯದಲ್ಲೇ ಬರಲಿರುವ ಕೆಲವು ಪ್ರಮುಖ ಫೀಚರ್ ಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಡಾರ್ಕ್ ಥೀಮ್ ಆಯ್ಕೆ:

ಡಾರ್ಕ್ ಥೀಮ್ ಆಯ್ಕೆ:

ಬ್ಲಾಗ್ ನಲ್ಲಿ ಹೇಳಲಾಗಿರುವ ಪ್ರಕಾರ ವಾಟ್ಸ್ ಆಪ್ ಡಾರ್ಕ್ ಥೀಮ್ ನ ಅಭಿವೃದ್ಧಿಗಾಗಿ ಸಾಕಷ್ಟು ಸಮಯವನ್ನು ನೀಡುತ್ತಿದೆ. ಇದೀಗ ಹೊಸ ಡಾರ್ಕ್ ಮೋಡ್ ಆಪ್ಟಿಮೈಜೇಷನ್ ನಡೆಸಿದ್ದು ಚಾಟ್ ಸೆಟ್ಟಿಂಗ್ಸ್ ನ ಡಿಸ್ಪ್ಲೇ ಆಯ್ಕೆಯಲ್ಲಿ ಅದು ವಿಸಿಬಲ್ ಆಗುತ್ತದೆ.

ಆದರೆ, ಎಲ್ಲಾ ಆಯ್ಕೆಗಳು ಕೂಡ ಸದ್ಯ ಅಭಿವೃದ್ಧಿಯ ಹಂತದಲ್ಲಿದೆ. ಮತ್ತು ಸದ್ಯ ನಿಮ್ಮ ಮೊಬೈಲ್ ನಲ್ಲಿ ಡಾರ್ಕ್ ಮೋಡ್ ಗೆ ಸಂಬಂಧಿಸಿದ ಅಪ್ ಡೇಟ್ ಗಳು ಲಭ್ಯವಿಲ್ಲದೆ ಇದ್ದಲ್ಲಿ ಚಿಂತಿಸುವ ಅಗತ್ಯವಿಲ್ಲ. ಸದ್ಯ ಈ ಆಯ್ಕೆಯನ್ನು ಆಂಡ್ರಾಯ್ಡ್ ಬೇಟಾ ವರ್ಷನ್ ನಲ್ಲಿ ಟೆಸ್ಟ್ ಮಾಡಲಾಗುತ್ತಿದ್ದು ಸ್ಟೇಬಲ್ ಆಗಿರುವ ವರ್ಷನ್ ಇನ್ನೂ ಕೂಡ ಬಿಡುಗಡೆಗೊಂಡಿಲ್ಲ. ಹಾಗಂತ ಅಧಿಕೃತವಾಗಿ ಯಾವಾಗ ಬಿಡುಗಡೆಗೊಳ್ಳಲಿದೆ ಎಂಬ ಬಗ್ಗೆಯೂ ಕೂಡ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. ಹಾಗಾಗಿ ಮುಂದಿನ ಪ್ರಕಟಣೆಯವರೆಗೆ ಕಾಯಲೇಬೇಕು.

ಹೊಸ ಎಮೋಜಿ ಸ್ಕಿನ್:

ಹೊಸ ಎಮೋಜಿ ಸ್ಕಿನ್:

ವಾಟ್ಸ್ ಆಪ್ 6 ಎಮೋಜಿಗಳಿಗೆ ಹೊಸದಾಗಿ ಸ್ಕಿನ್ ನ್ನು ಸೇರಿಸಿದೆ. ಎಮೋಜಿಗಳೆಂದರೆ "ಮ್ಯಾನುವಲ್ ಗಾಲಿಖುರ್ಚಿಯಲ್ಲಿರುವ ಮಹಿಳೆ", "ಮ್ಯಾನುವಲ್ ಗಾಲಿಖುರ್ಚಿಯಲ್ಲಿರುವ ಪುರುಷ", ‘ಮೋಟರ್ ವೀಲ್ ಚೇರ್ ನಲ್ಲಿರುವ ಮಹಿಳೆ ', ‘ಮೋಟರ್ ವೀಲ್ ಚೇರ್ ನಲ್ಲಿರುವ ಪುರುಷ ', ‘ಪ್ರಾಬಿಂಗ್ ಕೇನ್ ಜೊತೆಗಿರುವ ಮಹಿಳೆ ', ‘ಪ್ರಾಬಿಂಗ್ ಕೇನ್ ನಲ್ಲಿರುವ ಪುರುಷ '.

ವಾಲ್ ಪೇಪರ್ ಆಯ್ಕೆ:

ವಾಲ್ ಪೇಪರ್ ಆಯ್ಕೆ:

ನೂತನ ಅಪ್ ಡೇಟ್ ನಲ್ಲಿ ಕಾಣಬಹುದಾದ ಆಯ್ಕೆಯೆಂದರೆ ವಾಲ್ ಪೇಪರ್ ಆಯ್ಕೆ. ಚಾಟ್ ಸೆಟ್ಟಿಂಗ್ಸ್ ನ ಒಳಗಡೆಯೇ ಇರುತ್ತಿದ್ದ ಈ ಆಯ್ಕೆ ಇದೀಗ ವಿಭಿನ್ನ ಸೆಕ್ಷನ್ ಗೆ ಹಾಕಲಾಗಿದ್ದು ಡಿಸ್ಪ್ಲೇ ಸೆಕ್ಷನ್ ನಲ್ಲಿ ಸದ್ಯ ಲಭ್ಯವಾಗುತ್ತದೆ. ಚಾಟ್ ಸೆಟ್ಟಿಂಗ್ಸ್ ನಲ್ಲಿ ಚಾಟ್ ವಾಲ್ ಪೇಪರ್ ಆಯ್ಕೆಯನ್ನು ಟ್ಯಾಪ್ ಮಾಡಿದರೆ ಅದರೊಳಗೆ ಈ ಆಯ್ಕೆ ಸಿಗುತ್ತದೆ. ನೀವು ಡಿಸ್ಪ್ಲೇಯನ್ನು ಸೆಲೆಕ್ಟ್ ಮಾಡಬೇಕಾಗುತ್ತದೆ. ಡಿಸ್ಪ್ಲೇ ಆಯ್ಕೆಯಲ್ಲಿಯೂ ಕೂಡ ಡಾರ್ಕ್ ಥೀಮ್ ಸೆಟ್ಟಿಂಗ್ಸ್ ಲಭ್ಯವಾಗಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಇದು ಬಿಡುಗಡೆಗೊಳ್ಳಲಿದೆ.

ವಾಟ್ಸ್ ಆಪ್ ಬೇಟಾ ಅಪ್ ಡೇಟ್ ನ್ನು ಡೌನ್ ಲೋಡ್ ಮಾಡುವುದು ಹೇಗೆ?:

ವಾಟ್ಸ್ ಆಪ್ ಬೇಟಾ ಅಪ್ ಡೇಟ್ ನ್ನು ಡೌನ್ ಲೋಡ್ ಮಾಡುವುದು ಹೇಗೆ?:

ಮೇಲಿನ ಎಲ್ಲಾ ಫೀಚರ್ ಗಳನ್ನು ಬೇಟಾ ವರ್ಷನ್ ನಲ್ಲಿ ಟೆಸ್ಟ್ ಮಾಡಲು ಬಯಸುವ ಎಲ್ಲಾ ಬಳಕೆದಾರರು ಕೂಡ ಆಪ್ ನ ಬೇಟಾ ಪ್ರೊಗ್ರಾಮ್ ಗೆ ರಿಜಿಸ್ಟರ್ ಮಾಡಿಕೊಳ್ಳಬಹುದು. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ ಅಪ್ ಡೇಟ್ ಗಳು ಲೈವ್ ಆಗಿದೆ ಮತ್ತು ಆಸಕ್ತರು ಅದನ್ನು ಎನ್ರೋಲ್ ಮಾಡಿಕೊಳ್ಳಬಹುದು ಮತ್ತು ಹೊಸ ಫೀಚರ್ ಗಳ ಮೊದಲ ಅನುಭವವನ್ನು ಪಡೆದುಕೊಳ್ಳಬಹುದು.

ಈ ಹೊಸ ಫೀಚರ್ ಗಳನ್ನು ಹೊರತು ಪಡಿಸಿ ಪ್ರಸಿದ್ಧ ಮೆಸೇಜಿಂಗ್ ಆಪ್ ನಲ್ಲಿ ಡಿಲೀಟ್ ಮೆಸೇಜ್ ಫೀಚರ್ ಕೂಡ ಲಭ್ಯವಾಗಲಿದ್ದು ಈ ಆಯ್ಕೆಯ ಮೂಲಕ ಸ್ವಯಂಚಾಲಿತವಾಗಿ ನಿರ್ಧಿಷ್ಟ ಸಮಯದ ನಂತರ ಮೆಸೇಜ್ ಗಳು ಡಿಲೀಟ್ ಆಗುವಂತೆ ಬಳಕೆದಾರರು ಸಮಯವನ್ನು ಸೆಟ್ ಮಾಡುವುದಕ್ಕೆ ಅವಕಾಶವಿರುತ್ತದೆ ಮತ್ತು ಆ ಮೆಸೇಜ್ ಗಳು ಯಾವತ್ತೂ ಕೂಡ ಲಭ್ಯವಿರುವುದಿಲ್ಲ.

Best Mobiles in India

Read more about:
English summary
WhatsApp Latest Update Introduces Dark Mode With Major Bug Fixes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X