Subscribe to Gizbot

ವಾಟ್ಸ್ ಆಪ್ ಬಿಸ್ನೆಸ್ ಆಪ್: ಅಧಿಕೃತವ ವ್ಯವಹಾರದಾರರಿಗೆ ಮಾತ್ರವೇ..!

Written By: Lekhaka

ವಾಟ್ಸ್ ಆಪ್ ದೇಶ ವಿದೇಶದಲ್ಲಿ ತನ್ನ ಖ್ಯಾತಿಯನ್ನು ಪಸರಿಸುತ್ತಿದ್ದು, ದಿನ ದಿಂದ ದಿನಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚು ಮಾಡಿಕೊಳ್ಳುತ್ತಿದೆ. ವಿಶ್ವದಲ್ಲೇ ಅತೀ ಹೆಚ್ಚು ಖ್ಯಾತಿಗಳಿಸಿಕೊಂಡಿರುವ ಆಪ್ ಗಳಲ್ಲಿ ಅಗ್ರ ಸ್ಥಾನವನ್ನು ಗಳಿಸಿಕೊಂಡಿರುವ ಫೇಸ್ ಬುಕ್ ಒಡೆತನಕ್ಕೆ ಸೇರಿದ ವಾಟ್ ಆಪ್ ಬಿಸ್ನೆಸ್ ಮಾಡುವವರಿಗಾಗಿಯೇ ಪ್ರತ್ಯೇಕ ಆಪ್ ವೊಂದನ್ನು ಬಿಡುಗಡೆ ಮಾಡಿದೆ.

ವಾಟ್ಸ್ ಆಪ್ ಬಿಸ್ನೆಸ್ ಆಪ್: ಅಧಿಕೃತವ ವ್ಯವಹಾರದಾರರಿಗೆ ಮಾತ್ರವೇ..!

ಈ ಬಿಸ್ನೆಸ್ ಆಕೌಂಟ್ ಗಳಿಗಾಗಿಗೇ ಗ್ರೀನ್ ಟಿಕ್ ಆಯ್ಕೆಯನ್ನು ವಾಟ್ಸ್ ಆಪ್ ನೀಡಲಿದ್ದು, ಸಾಮಾನ್ಯ ಆಕೌಂಟ್ ಗಳಿಗೂ ಬಿಸ್ನೆಸ್ ಆಕೌಂಟ್ ಗಳಿಗೂ ವ್ಯತ್ಯಾಸವನ್ನು ಗುರುತಿಸಲು ಇದು ಸಹಾಯವನ್ನು ಮಾಡಲಿದೆ ಎನ್ನಲಾಗಿದೆ. ಇದರಿಂದಾಗಿ ಚಾಟ್ ಮಾಡುವ ಸಂದರ್ಭದಲ್ಲಿ ಗ್ರಾಹಕರಿಗೆ ಇದು ಸಹಾಯವನ್ನು ಮಾಡಲಿದೆ.

ಈ ಗ್ರೀನ್ ಟಿಕ್ ಅನ್ನು ವಾಟ್ಸ್ ಆಪ್ ಆಕೌಂಟ್ ಗಳನ್ನು ಪರಿಶೀಲಿಸದ ನಂತರದಲ್ಲಿ ನೀಡಲಿದ್ದು, ಇದು ಆಕೌಂಟ್ ಅನ್ನು ವೆರಿಫೈ ಮಾಡಿದ ನಂತರದಲ್ಲಿ ಮಾತ್ರವೇ ನೀಡಲಿದೆ. ಇದರಿಂದಾಗಿ ಗ್ರಾಹಕರು ನಂಬಿಕೆಯಿಂದ ಇಲ್ಲಿ ವ್ಯವಹಾರವನ್ನು ಮಾಡಬಹುದು, ಇದೇ ಆಕೌಂಟ್ ಗಳು ಗ್ರೀನ್ ಟಿಕ್ ಮಾರ್ಕ್ ಪಡೆದಿಲ್ಲ ಎಂದರೆ ಅದು ವಾಟ್ಸ್ ಆಪ್ ನಿಂದ ಅಧಿಕೃತವಾಗಿಲ್ಲ ಎಂದು ಅರ್ಥ ನೀಡಲಿದೆ.

ವಾಟ್ಸ್ ಆಪ್ ಬಿಸ್ನೆಸ್ ಆಪ್: ಅಧಿಕೃತವ ವ್ಯವಹಾರದಾರರಿಗೆ ಮಾತ್ರವೇ..!
How to save WhatsApp Status other than taking screenshots!! Kannada
ಈಗಾಗಲೇ ಈ ವಾಟ್ಸ್ ಆಪ್ ಬಿಸ್ನೆಸ್ ಆಪ್ ಪ್ಲೇ ಸ್ಟೋರಿನಲ್ಲಿ ಬೀಟಾ ಆವೃತ್ತಿಯಲ್ಲಿ ದೊರೆಯಲಿದ್ದು, ಸದ್ಯ ಪ್ರೋಗಾತ್ಮಕ ಹಂತದಲ್ಲಿದೇ ಈಗಾಗಲೇ ಪ್ರೈವೆಂಟ್ ಕಂಪನಿಗಳು ಈ ಆಪ್ ಅನ್ನು ಟೆಸ್ಟ್ ಮಾಡುತ್ತಿದೆ ಎನ್ನಲಾಗಿದೆ. ಈ ಹೊಸ ಆಪ್ ಗಾಗಿ ವಾಟ್ಸ ಆಪ್ ತನ್ ಲೋಗೋವನ್ನು ಬದಲಾಯಿಸಿಕೊಂಡಿದೆ ಎನ್ನಲಾಗಿದೆ.

ಹೊಸ ಮಾದರಿಯ ನೋಕಿಯಾ 6 ಸ್ಮಾರ್ಟ್ ಫೋನ್ ಲಾಂಚ್..!

ಈ ಆಪ್ ನಲ್ಲಿ ಚಾಟ್ ಮಾಡಬಹುದಾಗಿದೆ ಅಲ್ಲದೇ ಫೇಸ್ ಬುಕ್ ಮಾದರಿಯಲ್ಲಿ ಆನ್ ಲಿಟಿಕ್ಸ್ ಸಹ ಬಳಕೆದಾರರಿಗೆ ದೊರೆಯಲಿದ್ದು, ಇಲ್ಲಿ ಗ್ರಾಹಕರಿಗೆ ಮತ್ತು ವ್ಯವಹಾರದಾರರಿಗೆ ಲಾಭವಾಗಲಿದೆ. ಅಲ್ಲದೇ ಈ ಬಿಸನೆಸ್ ಆಪ್ ಗಳನ್ನು ಸ್ನಾಮ್ ನಲ್ಲಿ ರಿಪೋರ್ಟ್ ಸಹ ಮಾಡಬಹುದಾಗಿದೆ.

English summary
The business app is currently being tested by a private group of testers and the company will introduce it as WhatsApp Business-a standalone app.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot