TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಫೋನ್ ಅನ್‌ಲಾಕ್ ಆಗಿದ್ದರೂ ಈಗ 'ವಾಟ್ಸ್‌ಆಪ್' ಮೆಸೇಜ್ ಓದೋಕೆ ಆಗೊಲ್ಲ!
ವಿಶ್ವದ ಅತ್ಯಂತ ಜನಪ್ರಿಯ ಮೆಸೇಂಜಿಂಗ್ ಮಾಧ್ಯಮವಾಗಿರುವ ವಾಟ್ಸ್‌ಆಪ್ ಐಫೋನ್‌ಗಾಗಿ ಬಯೊಮೆಟ್ರಿಕ್ ಲಾಕ್ ಸೌಲಭ್ಯವನ್ನು ಕಲ್ಪಿಸಿದೆ. ಕಳೆದ ವರ್ಷ ಮೆಸೇಜ್ ಡಿಲೀಟ್, ಗ್ರೂಪ್ ಕಾಲ್‌ನಂತಹ ಹಲವು ಸೌಲಭ್ಯಗಳನ್ನು ಅಳವಡಿಸಿಕೊಂಡಿದ್ದ ವಾಟ್ಸ್‌ಆಪ್, ಈ ವರ್ಷದ ಮೊದಲ ಅಪ್‌ಡೇಟ್ ಆಗಿ ಬಯೊಮೆಟ್ರಿಕ್ ಫೀಚರ್ ಅನ್ನು ಪರಿಚಯಿಸಿದೆ. ಈ ಮೂಲಕ ಇನ್ಮುಂದೆ ಫೋನ್ ಅನ್‌ಲಾಕ್ ಆಗಿದ್ದರೂ ವಾಟ್ಸ್‌ಆಪ್ ಮೆಸೇಜ್‌ಗಳನ್ನು ಯಾರೂ ನೋಡಲು ಸಾಧ್ಯವಾಗದಂತಹ ಆಯ್ಕೆಯನ್ನು ನೀಡಿದೆ.
ಈ ಹೊಸ ಫೀಚರ್ ಅನ್ನು ಐಫೋನ್‌ನ ಕಾರ್ಯಾಚರಣೆ ವ್ಯವಸ್ಥೆಗೆ (ಐಒಎಸ್) ಅಪ್‌ಡೇಡ್ ಬಿಡುಗಡೆ ಮಾಡಿರುವ ವಾಟ್ಸ್ಆಪ್ ತನ್ನ ಬಳಕೆಯನ್ನು ಇನ್ನಷ್ಟು ಸುರಕ್ಷಿತವಾಗಿಸಲು ಫೇಸ್ ಐಡಿ ಅಥವಾ ಟಚ್ ಐಡಿ ಮೂಲಕ ಅಪ್ಲಿಕೇಷನ್ ತೆರೆಯುವ ಸೌಲಭ್ಯ ನೀಡಿರುವುದಾಗಿ ತಿಳಿಸಿದೆ. ಇದನ್ನು ಅಪ್‌ಡೇಟ್ ಮಾಡಿಕೊಂಡರೆ ಹೊಸ ಬಯೋಮೆಟ್ರಿಕ್ ಅಥೆಂಟಿಕೇಷನ್ ಫೀಚರ್ ಲಭ್ಯವಾಗಲಿದ್ದು, ಫಿಂಗರ್‌ಪ್ರಿಂಟ್ ಮತ್ತು ಫೇಸ್‌ಐಡಿ ಬಯೊಮೆಟ್ರಿಕ್ ಮೂಲಕ ಆಪ್ ಲಾಕ್ ಮಾಡಬಹುದು ಎಂದು ಹೇಳಿದೆ.
ವಾಟ್ಸ್ಆಪ್ನಲ್ಲಿ ಹೆಚ್ಚು ಖಾಸಾಗಿತನವನ್ನು ಕಾಪಾಡಿಕೊಳ್ಳಲು ವಾಟ್ಸ್‌ಆಪ್ ಬಯೊಮೆಟ್ರಿಕ್ ಫೀಚರ್ ಅನ್ನು ಪರಿಚಯಿಸಲಿದೆ ಎಂದು ಆಂಡ್ರಾಯ್ಡ್ ಬೀಟಾ ನೀಡಿರುವ ಇತ್ತೀಚಿನ ವರದಿಯಿಂದ ತಿಳಿದುಬಂದಿತ್ತು. ಫಿಂಗರ್‌ಪ್ರಿಂಟ್ ಫೀಚರ್ ಮೂಲಕ ಇನ್ಮುಂದೆ ವಾಟ್ಸ್‌ಆಪ್ ಲಾಕ್ ಮಾಡುವ ಬಗ್ಗೆಯೂ ಹೇಳಿತ್ತು. ಹಾಗಾದರೆ, ಐಪೋನ್ ಬಳಕೆದಾರರು ವಾಟ್ಸ್ಆಪ್‌ನಲ್ಲಿ ಬಯೊಮೆಟ್ರಿಕ್ ಫೀಚರ್ ಸಕ್ರಿಯಗೊಳಿಸುವುದು ಹೇಗೆ ಮತ್ತು ಭವಿಷ್ಯದಲ್ಲಿ ವಾಟ್ಸ್ಆಪ್ ತರುತ್ತಿರುವ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.
ಸಕ್ರಿಯಗೊಳಿಸುವುದು ಹೇಗೆ?
ಐಒಎಸ್ ಬೀಟಾ ಬಳಕೆದಾರರಿಗೆ ಕಳೆದ ವಾರವೇ ಈ ಸೌಲಭ್ಯ ಕಲ್ಪಿಸಿದ್ದು, ಇದೀಗ ವಿಶ್ವದಾದ್ಯಂತ ಎಲ್ಲಾ ಐಫೋನ್ ಬಳಕೆದಾರರಿಗೂ ಈ ಸೌಲಭ್ಯವನ್ನು ನೀಡಲಾಗಿದೆ ಎಂದು ವಾಟ್ಸ್ಆಪ್ ತಿಳಿಸಿದೆ. ಹಾಗಾಗಿ, ಐಫೋನ್ ಬಳಕೆದಾರರ ವಾಟ್ಸ್ಆಪ್ ಅನ್ನು ಅಪ್‌ಡೇಟ್ ಮಾಡಿಕೊಂಡ ನಂತರ Settings > Account > Privacy > Screen Lock ಮೂಲಕ ಈ ಫೀಚರ್ ಪಡೆಯಬಹುದು.
ಆರ್ಡರ್ನಲ್ಲಿ ವಾಯ್ಸ್ ಮೆಸೇಜ್
ಈ ಹೊಸ ಫೀಚರ್ ಮೂಲಕ ವಾಟ್ಸ್ಆಪ್ ಬಳಕೆದಾರರು ಇನ್ಮುಂದೆ ಮಾರ್ನಾಲ್ಕು ವಾಯ್ಸ್ ಮೆಸೇಜ್ಗಳನ್ನ ಆರ್ಡರ್ನಲ್ಲಿ ಪ್ಲೇ ಮಾಡಬಹುದು ಎಂದು ಹೇಳಲಾಗಿದೆ. ಆಲಿಸಬೇಕಾದ ಎಲ್ಲಾ ವಾಯ್ಸ್ ಮೆಸೇಜ್‌ಗಳನ್ನು ಒಂದೇ ವೇಳೆಯಲ್ಲಿ ಸೆಲೆಕ್ಟ್ ಮಾಡಿ ಪ್ಲೇ ಮಾಡಿದರೆ, ಅವೆಲ್ಲವೂ ಆರ್ಡರ್ನಲ್ಲಿ ಪ್ಲೇ ಆಗುತ್ತವೆ ಎಂದು ಹೇಳಲಾಗಿದೆ.
ಡಾರ್ಕ್ ಮೋಡ್
ಕತ್ತಲಲ್ಲಿ ವಾಟ್ಸ್ಆಪ್ ಬಳಕೆ ಮಾಡುವಾಗ ಕಣ್ಣುಗಳ ಮೇಲಿನ ಒತ್ತಡ ಕಡಿಮೆ ಮಾಡುವ ಸಲುವಾಗಿ ಮತ್ತು ಬ್ಯಾಟರಿ ಬಾಳಿಕೆ ಹೆಚ್ಚಿಸುವ ಸಲುವಾಗಿ ಡಾರ್ಕ್ ಮೋಡ್ ಅನ್ನು ಈ ವರ್ಷ ವಾಟ್ಸ್‌ಆಪ್‌ನಲ್ಲಿ ಕಾಣಬಹುದಾಗಿದೆ. ವಾಟ್ಸ್ಆಪ್ ಬೀಟಾ ಇನ್ಫೋ ಟ್ವಿಟರ್ ಅಕೌಂಟ್ನಲ್ಲಿ ಈ ಬಗ್ಗೆ ಖಚಿತ ಮಾಹಿತಿ ನೀಡಲಾಗಿದೆ.
ಸ್ವೈಪ್ ಟು ರಿಪ್ಲೈ
ಈಗಾಗಲೇ ಲಭ್ಯವಿರುವ ಈ ಸ್ವೈಪ್ ಟು ರಿಪ್ಲೈ ಮತ್ತಷ್ಟು ಅಪ್‌ಡೇಟ್ ಆಗಿ ಬರಲಿದೆ. ಬಳಕೆದಾರರು ಈ ಫೀಚರ್ ಮೂಲಕ ಬಳಕೆದಾರರು ಬಲಕ್ಕೆ ಸ್ವೈಪ್ ಮಾಡುವ ಮೂಲಕ ಮೆಸೇಜ್ಗಳಿಗೆ ರಿಪ್ಲೈ ಮಾಡಬಹುದು. ಬಲಕ್ಕೆ ಸ್ವೈಪ್ ಮಾಡುತ್ತಿದ್ದಂತೆ ಆ ಸಂದೇಶ ರಿಪ್ಲೈ ಕಾಂಟೆಕ್ಸ್ಟ್ನಲ್ಲಿ ಲೋಡ್ ಆಗುತ್ತದೆ ಎಂದು ಹೇಳಲಾಗಿದೆ.
ಕಾಂಟ್ಯಾಕ್ಟ್ಸ್ ಲಿಂಕಿಂಗ್
ವಾಟ್ಸ್ಆಪ್ ಪರಿಚಯಿಸಲಿರುವ ಈ ನೂತನ ಫೀಚರ್ ಸಹಾಯದಿಂದ ನೀವು ಯಾರೊಂದಿಗೆ ಹೆಚ್ಚು ಬಾರಿ ಚಾಟ್ ಮಾಡ್ತೀರ ಎನ್ನುವುದರ ಆಧಾರದ ಮೇಲೆ ಇತರೆ ಕಾಂಟ್ಯಾಕ್ಟ್ಗಳನ್ನ ಆಟೋಮ್ಯಾಟಿಕ್ ಆಗಿ ಲಿಂಕ್ ಮಾಡಿ ಪಟ್ಟಿ ಮಾಡಬಹುದಾಗಿದೆ. ಇದು ಚಾಟಿಂಗ್‌ಗೆ ಬಹಳ ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.