ಫೇಕ್‌ ನ್ಯೂಸ್‌ ತಡೆಗಟ್ಟಲು ವಾಟ್ಸ್‌ಆಪ್‌ನಿಂದ ಮತ್ತೊಂದು ಫೀಚರ್‌..!

By Gizbot Bureau
|

ಜಗತ್ತಿನ ಪ್ರಸಿದ್ಧ ಇನ್‌ಸ್ಟಾಂಟ್‌ ಮೆಸೆಂಜಿಂಗ್‌ ಆಪ್‌ ವಾಟ್ಸ್‌ಆಪ್‌ ಭಾರತದಲ್ಲಿ ಹೊಸ ಚಾಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ಫೀಚರ್‌ನಿಂದ ಬಳಕೆದಾರರಿಗೆ ಒಂದು ಸಂದೇಶ ಹಲವು ಬಾರಿ ಫಾರ್ವರ್ಡ್ ಆಗಿದ್ದರೆ ತಿಳಿಯುತ್ತದೆ.

ಫೇಕ್‌ ನ್ಯೂಸ್‌ ತಡೆಗಟ್ಟಲು ವಾಟ್ಸ್‌ಆಪ್‌ನಿಂದ ಮತ್ತೊಂದು ಫೀಚರ್‌..!

ಜನರು ತಪ್ಪಾಗಿ ಮಾಹಿತಿ ನೀಡುವುದನ್ನು ತಡೆಯುವ ಪ್ರಯತ್ನವಾಗಿ ವಾಟ್ಸ್‌ಆಪ್‌ ಈ ಕ್ರಮ ಕೈಗೊಂಡಿದೆ. ವಾಟ್ಸ್‌ಆಪ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನಕಲಿ ಸುದ್ದಿಗಳನ್ನು ತಡೆಯಲು 'frequently forwarded’ಎಂಬ ಫೀಚರ್‌ನ್ನು ಜಾರಿಗೆ ತರುತ್ತಿದೆ ಎಂಬುದರ ಬಗ್ಗೆ ಈ ಹಿಂದೆ ವರದಿಯಾಗಿತ್ತು.

ಇತ್ತೀಚಿನ ಅಪ್‌ಡೇಟ್‌

ಇತ್ತೀಚಿನ ಅಪ್‌ಡೇಟ್‌

ಬಹಳ ಸಮಯದಿಂದ ನಕಲಿ ಸುದ್ದಿಗಳು ದೊಡ್ಡ ಸಮಸ್ಯೆಯಾಗಿದೆ. ಫೇಕ್‌ ನ್ಯೂಸ್‌ ನಿಯಂತ್ರಿಸಲು ವಾಟ್ಸ್‌ಆಪ್‌ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. iOS ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಇತ್ತೀಚಿನ ಅಪ್‌ಡೇಟ್‌ನಲ್ಲಿ ಈ ಫೀಚರ್‌ ಲಭ್ಯವಿದೆ. ಆದರೆ,ಒಂದೇ ಸಂದೇಶವನ್ನು ಹಲವು ಬಾರಿ ಫಾರ್ವರ್ಡ್ ಮಾಡಿದ್ದರೆ ಹೇಗೆ ಗುರುತಿಸುತ್ತೀರಿ..? ನಿಮಗೆ ಈ ರೀತಿಯ ಫಾರ್ವರ್ಡ್‌ ಸಂದೇಶ ಬಂದಾಗಲೆಲ್ಲಾ, ವಾಟ್ಸ್‌ಆಪ್ ಅಂತಹ ಸಂದೇಶಗಳನ್ನು ಹಲವು ಬಾರಿ ಫಾರ್ವರ್ಡ್‌ ಮಾಡಿದಂತೆ ಗುರುತಿಸುತ್ತದೆ.

ಫಾರ್ವರ್ಡ್‌ ಸಂದೇಶ

ಫಾರ್ವರ್ಡ್‌ ಸಂದೇಶ

ಈ ಫೀಚರ್‌ನಲ್ಲಿ ಫಾರ್ವರ್ಡ್‌ ಸಂದೇಶ ಬಂದ ನಂತರ ಅದನ್ನು ಮುಂದುವರಿಸಲು ಅಥವಾ ನಿರ್ಗಮಿಸಬಹುದಾದ ಆಯ್ಕೆ ಬಳಕೆದಾರರಿಗೆ ಬಿಟ್ಟಿದ್ದು. ಕಂಪನಿ ಮೊದಲು ಹೇಳಿದಂತೆ 'frequently forwarded' ಫೀಚರ್‌ ಬಳಸಬಹುದೆಂದು ಊಹಿಸಲಾಗಿತ್ತು. 5 ಬಾರಿಗೂ ಹೆಚ್ಚು ಫಾರ್ವರ್ಡ್ ಮಾಡಲಾದ ಸಂದೇಶಗಳು ಎರಡು ಬಾಣದ ಐಕಾನ್‌ನ್ನು ತೋರಿಸುತ್ತವೆ ಎಂಬುದನ್ನು ಗಮನಿಸಬೇಕು. ವಾಟ್ಸ್‌ಆಪ್‌ಗೆ ಗೌಪ್ಯತೆ ಉನ್ನತ ಮಾನದಂಡವಾಗಿರುವುದರಿಂದ, ಸಂದೇಶ ಎಷ್ಟು ಬಾರಿ ಫಾರ್ವರ್ಡ್ ಮಾಡಲಾಗಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸುವುದಿಲ್ಲ. ಏಕೆಂದರೆ ಸಂದೇಶ ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ.

ನೊಟಿಫಿಕೇಷನ್‌

ನೊಟಿಫಿಕೇಷನ್‌

ನಾವು ಇತ್ತೀಚೆಗೆ ನಮ್ಮ ಫಾರ್ವರ್ಡ್ ಮಾಡಿದ ಸಂದೇಶದ ಲೇಬಲ್‌ಗೆ ಅಪ್‌ಡೇಟ್‌ ಪರಿಚಯಿಸಿದ್ದೇವೆ. ಇದು, ಜನರಿಗೆ ಸರಣಿ ಸಂದೇಶದಂತಹ ಹಲವಾರು ಬಾರಿ ಫಾರ್ವರ್ಡ್ ಮಾಡಲಾದ ಸಂದೇಶಗಳನ್ನು ಸ್ವೀಕರಿಸಿದಾಗ ಗುರುತಿಸಲು ಸಹಾಯ ಮಾಡುತ್ತದೆ. ಹೆಚ್ಚು ಫಾರ್ವರ್ಡ್ ಮಾಡಲಾದ ಸಂದೇಶಗಳನ್ನು ಎರಡು ಬಾಣದ ಚಿಹ್ನೆಯ ಮೂಲಕ ಗುರುತಿಸಲಾಗುತ್ತದೆ ಮತ್ತು ಬಳಕೆದಾರರು ಅಂತಹ ಸಂದೇಶವನ್ನು ಫಾರ್ವರ್ಡ್ ಮಾಡುವಾಗ ನೊಟಿಫಿಕೇಷನ್‌ ಸ್ವೀಕರಿಸುತ್ತಾರೆ ಎಂದು ವಾಟ್ಸ್‌ಆಪ್‌ ವಕ್ತಾರರು ಹೇಳಿದ್ದಾರೆ.

ನಕಲಿ ಸುದ್ದಿಗಳನ್ನು ನಿಭಾಯಿಸಲು ವಾಟ್ಸ್‌ಆಪ್ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದೆ. ಭಾರತದಲ್ಲಿ ದೊಡ್ಡ ಸಮಸ್ಯೆಯಾಗಿರುವ ನಕಲಿ ಸುದ್ದಿಗಳನ್ನು ತಡೆಯಲು ಫೇಸ್‌ಬುಕ್ ಒಡೆತನದ ಮೆಸೆಂಜಿಂಗ್ ಪ್ಲಾಟ್‌ಫಾರ್ಮ್ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತದಲ್ಲಿ 200 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಬಳಕೆದಾರರನ್ನು ವಾಟ್ಸ್‌ಆಪ್ ಹೊಂದಿದೆ.

Best Mobiles in India

English summary
WhatsApp Launches New Feature To Curb Fake News

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X