ಬ್ಲಾಕ್ ಬೇರಿ 10 OSನಲ್ಲಿ ವಾಟ್ಸ್ಆಪ್ ಅನ್ನು ಇನ್ನು ಹೆಚ್ಚು ದಿನ ಬಳಕೆ ಮಾಡಬಹುದು...!
ವಾಟ್ಸ್ ಆಪ್ ಜನವರಿ 1 ರ ನಂತರದಲ್ಲಿ ಹಲವಾರು ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಿದೆ. ಇದೇ ಮಾದರಿಯಲ್ಲಿ ಬ್ಲಾಕ್ ಬೇರಿ OS ಮತ್ತು ಬ್ಲಾಕ್ ಬೇರಿ 10 OSನಲ್ಲಿ ಹಾಗೂ ವಿಂಡೊಸ್ 8.0ರಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸ್ ಆಪ್ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಿದೆ ಎನ್ನಲಾಗಿತ್ತು.

ಆದರೆ ಬ್ಲಾಕ್ ಬೇರಿ 10 OS ಬಳಕೆದಾರರು ವಾಟ್ಸ್ ಆಪ್ ಬಳಕೆ ಮಾಡಿಕೊಳ್ಳಲು ಹೆಚ್ಚುವರಿ ದಿನಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ವಾಟ್ಸ್ ಆಪ್ ಒಟ್ಟು ಎರಡು ವಾರಗಳ ಕಾಲ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲಿದ್ದು, ಅದಾದ ನಂತರದಲ್ಲಿ ಬ್ಲಾಕ್ ಬೇರಿ 10 OSನಲ್ಲಿಯೂ ಕಾರ್ಯಚರಣೆಯನ್ನು ನಿಲ್ಲಿಸಲಿದೆ.
ಆದರೆ ಸದ್ಯ ಇನ್ ಸ್ಟಾಲ್ ಆಗಿರುವ ವಾಟ್ಸ್ ಆಪ್ ಅನ್ನು ಬಳಕೆದಾರರು ಬಳಸಬಹುದಾಗಿದೆ. ಆದರೆ ಮತ್ತೆ ರಿಜಿಸ್ಟರ್ ಆಗುವ ಅವಕಾಶ ಮತ್ತು ಆಪ್ ಅನ್ನು ಅಪ್ ಡೇಟ್ ಮಾಡುವ ಯಾವುದೇ ಅವಕಾಶವನ್ನು ಪಡೆದುಕೊಳ್ಳುವುದಿಲ್ಲ. ಒಮ್ಮೆ ಆಪ್ ಅನ್ನು ಫೋನಿನಿಂದ ತೆಗೆದಲ್ಲಿ ಮತ್ತೇ ಇನ್ನೆಂದು ವಾಟ್ಸ್ ಆಪ್ ಅನ್ನು ಹಾಕಿಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ವಾಟ್ಸ್ ಆಪ್ ಶೀಘ್ರವೇ ಈ ಹಳೇ ಫೋನ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವವರು ಹೊಸ ಫೋನ್ ಗಳಿಗೆ ಆಪ್ ಗ್ರೇಡ್ ಅಗುವಂತೆ ಮನವಿ ಮಾಡಿದೆ. ಕಾರಣ ವಾಟ್ಸ್ ಆಪ್ ದಿನದಿಂದ ದಿನಕ್ಕೆ ಅಪ್ ಡೇಟ್ ಆಗುತ್ತಿದ್ದು, ಹೆಚ್ಚು ಬದಲಾಗುತ್ತಾ ಸಾಗುತ್ತಿದೆ. ಈ ಹಳೇಯ ಫೋನ್ ಗಳು ಅದಕ್ಕೆ ಸಫೋರ್ಟ್ ಮಾಡುವುದಿಲ್ಲ ಎನ್ನಲಾಗಿದೆ.
ಕಳೆದ ವರ್ಷದಲ್ಲಿ ವಾಟ್ಸ್ ಆಪ್ ಹಲವು ಫೋನ್ ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಿದೆ. ಇದಲ್ಲದೇ ಇನ್ನು ಕೇಲವೆ ದಿನಗಳಲ್ಲಿ ಹಲವು ಆಂಡ್ರಾಯ್ಡ್ ಫೋನ್ ಗಳಲ್ಲಿಯೂ ವಾಟ್ಸ್ ಆಪ್ ಕಾರ್ಯಚರಣೆಯನ್ನು ನಿಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದಾಗಿ ನೀವು ಸಹ ಹಳೇಯ ಫೋನ್ ಬಳಕೆ ಮಾಡುತ್ತಿದ್ದರೇ ಹೊಸ ಫೋನ್ ಗಳಿಗೆ ಬದಲಾಗುವುದು ಉತ್ತಮ.


Click it and Unblock the Notifications



