ಬೇಕಾಗಿದ್ದಾರೆ..ವಾಟ್ಸಾಪ್ ನಿಂದ ಹಣಗಳಿಸಿಕೊಡುವ ಉದ್ಯೋಗಿ!

ವಾಟ್ಸಾಪ್ ಒಂದು ಉಚಿತ ಆಪ್ ಆಗಿದ್ದು ಕಂಪೆನಿಯು ಇದರಿಂದ ಯಾವುದೇ ಆದಾಯವನ್ನು ಗಳಿಸುತ್ತಿಲ್ಲ.

By Tejaswini P G
|

ಫೇಸ್ಬುಕ್ ಒಳ್ಳೆಯ ಉದ್ಯೋಗಿಗಳ ಹುಡುಕಾಟದಲ್ಲಿದೆ. ಫೇಸ್ಬುಕ್ ಕಂಪೆನಿಗೆ ತನ್ನ ಮಾಲೀಕತ್ವದ ವಾಟ್ಸಾಪ್ ಇನ್ಸ್ಟೆಂಟ್ ಮೆಸೇಜಿಂಗ್ ಆಪ್ ನಿಂದ ಆದಾಯ ಗಳಿಸುವುದರಲ್ಲಿ ಸಹಾಯಮಾಡಲು ಒಬ್ಬ ಉತ್ತಮ ಉದ್ಯೋಗಿಗಳ ಅಗತ್ಯ ಎದುರಾಗಿದೆ.

ಬೇಕಾಗಿದ್ದಾರೆ..ವಾಟ್ಸಾಪ್ ನಿಂದ ಹಣಗಳಿಸಿಕೊಡುವ ಉದ್ಯೋಗಿ!

ಕಂಪೆನಿಯ ಕಾರ್ಯನಿರ್ವಾಹಕರೊಬ್ಬರ ಬ್ಲಾಗ್ ಒಂದರಲ್ಲಿ ಈ ಕುರಿತಾಗಿ ಪೋಸ್ಟ್ ಒಂದನ್ನು ಕಾಣಬಹುದು. ವಾಟ್ಸಾಪ್ ನಿಂದ ಆದಾಯ ಗಳಿಸುವ ನಿಟ್ಟಿನಲ್ಲಿ ಮಾಡಬಹುದಾದ ಪ್ರಯತ್ನಗಳ ನೇತ್ರತ್ವವನ್ನು ವಹಿಸಲು ಅಸಾಧಾರಣ ಸಾಮರ್ಥ್ಯವುಳ್ಳ ವ್ಯಕ್ತಿ ಗಳ ಹುಡುಕಾಟದಲ್ಲಿದೆ ವಾಟ್ಸಾಪ್.

"ನೀವು ಪ್ರಾಡಕ್ಟ್ ಬಿಲ್ಡಿಂಗ್ನಲ್ಲಿ ಒಳ್ಳೆಯ ಅನುಭವವನ್ನು ಪಡೆದಿದ್ದರೆ,ಗ್ರಾಹಕರು ಹಾಗೂ ವ್ಯಾಪಾರದ ಕುರಿತು ಅನುಭೂತಿಯನ್ನು ಹೊಂದಿರುವವರಾಗಿದ್ದರೆ, ವಾಟ್ಸಾಪ್ ನ ಸಾಮರ್ಥ್ಯವನ್ನು ಅರಿತು ಅದನ್ನು ಮಿಲಿಯಾಂತರ ವ್ಯಾಪಾರಗಳ ಬೆಳವಣಿಗೆಗೆ ಸಹಕಾರಿಯಾಗುವಂತೆ ಮಾಡುವ ಶಕ್ತಿ ನಿಮಗಿದ್ದರೆ ನಮ್ಮನು ಸಂಪರ್ಕಿಸಿ" ಎನ್ನುತ್ತದೆ ವಾಟ್ಸಾಪ್ ನ ಬ್ಲಾಗ್ಪೋಸ್ಟ್.

"ವಾಟ್ಸಾಪ್ ಒಂದು ಸ್ಟಾರ್ಟ್-ಅಪ್ ಕಂಪೆನಿಯಾಗಿದ್ದು, ನೀವು ಅತ್ಯಂತ ಶ್ರದ್ಧೆಯಿಂದ, ಇಂಜಿನಿಯರ್ಗಳು, ಡಿಸೈನರ್ಗಳು ಮತ್ತು ಇತರ ಕ್ರಾಸ್-ಫಂಕ್ಶನಲ್ ಪಾರ್ಟ್ನರ್ಗಳೊಂದಿಗೆ ಉತ್ತಮ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಮೊಬೈಲ್ ಆಪ್ನಲ್ಲಿ ನೀಡಬಹುದಾದ ಫೀಚರ್ಗಳ ಕರಿತು ಸಾಮಾರ್ಥ್ಯ ಮೀರಿ ಪ್ರಯತ್ನಿಸಬೇಕು, ಹಾಗೂ ಗುಣಮಟ್ಟದಲ್ಲಿ ಯಾವುದೇ ರೀತಿಯ ಕೊರತೆಯಾಗಬಾರದು" ಎನ್ನುತ್ತದೆ ಆ ಪೋಸ್ಟ್.

ಈ ಉದ್ಯೋಗದ ವಿವರ ಹೀಗಿದೆ. ಇದೊಂದು ಫುಲ್-ಟೈಮ್ ಉದ್ಯೋಗವಾಗಿದ್ದು , ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್ ನ ಫೇಸ್ಬುಕ್ ಹೆಡ್ ಕ್ವಾರ್ಟರ್ಸ್ ನಲ್ಲಿರುವ ವಾಟ್ಸಾಪ್ ತಂಡದೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಈ ಸ್ಥಾನಕ್ಕೆ ಆಯ್ಕೆಯಾಗುವ ವ್ಯಕ್ತಿಯು ವಾಟ್ಸಾಪ್ ನ ಡೈರೆಕ್ಟರ್ ಆಫ್ ಗ್ರೋತ್ ಆಂಡ್ ಮಾನಿಟೈಸೇಶನ್ ಗೆ ರಿಪೋರ್ಟ್ ಮಾಡಬೇಕಾಗುತ್ತದೆ.

ಫೇಸ್ಬುಕ್ ಕಂಪೆನಿಯು ನವೀನ ಹಾಗೂ ವಿಶಿಷ್ಟ ಫೀಚರ್ಗಳ ಪರಿಕಲ್ಪನೆ, ತಾಂತ್ರಿಕ ಅಭಿವೃದ್ಧಿ, ಬಿಡುಗಡೆ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಬಲ್ಲ ವ್ಯಕ್ತಿಯ ಹುಡುಕಾಟದಲ್ಲಿದೆ.ಈ ವ್ಯಕ್ತಿಯು ಚಿಕ್ಕ ಫೀಚರ್ ಅಥವ ಸಂಪೂರ್ಣ ಹೊಸದಾದ ಪ್ರಾಡಕ್ಟ್ ಯಾವುದೇ ಆಗಿರಲಿ ಅದರ ಸಂಪೂರ್ಣ ಅಭಿವೃದ್ಧಿಯನ್ನು ನಿಭಾಯಿಸುವ ಸಾಮರ್ಥ್ಯನ್ನು ಹೊಂದಿದವನಾಗಿರಬೇಕಾಗುತ್ತದೆ.

ಉದ್ಯೋಗದ ಜವಾಬ್ದಾರಿಗಳ ಕುರಿತಾಗಿ ಬ್ಲಾಗ್ನಲ್ಲಿ ಹೀಗೆ ಹೇಳಿದೆ "ನಮ್ಮ ಸರಳತೆ ಹಾಗೂ ಗುಣಮಟ್ಟವನ್ನು ಸರಿಹೊಂದುವಂತಹ,ಸದಾ ಬದಲಾಗುತ್ತಿರುವ ಪರಿಸರದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬಲ್ಲ ಹೊಸ ಫೀಚರ್ ಅಥವ ಪ್ರಾಡಕ್ಟನ್ನು ಸೃಷ್ಟಿಸಲು ಡಿಸೈನರ್ ಹಾಗೂ ಇಂಜಿನಿಯರ್ಗಳೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ" .

ಈ ಉದ್ಯೋಗಕ್ಕೆ ಅರ್ಹರಾಗಲು ಪ್ರಾಡಕ್ಟ್ ಮ್ಯಾನೇಜ್ಮೆಂಟ್ ಅಥವ ಪ್ರಾಡಕ್ಟ್ ಡಿಸೈನ್ ನಲ್ಲಿ ಕನಿಷ್ಠ 10 ವರ್ಷಗಳ ಅನುಭವವಿರಬೇಕು. ಮೊಬೈಲ್ ಅಪ್ಲಿಕೇಶನ್ಗಳ ತಾಂತ್ರಿಕ ಸೂಕ್ಷ್ಮಗಳ ಅರಿವಿರಬೇಕಾಗುತ್ತದೆ. ಯೂಸರ್ ಇಂಟರ್ಫೇಸ್ ನ ಡಿಸೈನ್, ಮೊಬೈಲ್ ಉತ್ಪನ್ನಗಳು ಇತ್ಯಾದಿಗಳ ಬಗ್ಗೆ ಅಗತ್ಯ ತಿಳುವಳಿಕೆ ಇರಬೇಕಾಗುತ್ತದೆ.

ವಿಶ್ವದ 180 ದೇಶಗಳಲ್ಲಿ ಒಂದು ಬಿಲಿಯನ್ ಗೂ ಹೆಚ್ಚು ಜನರು ತಮ್ಮ ಕುಟುಂಬ ಹಾಗೂ ಗೆಳೆಯರೊಂದಿಗೆ ವ್ಯವಹರಿಸಲು ವಾಟ್ಸಾಪ್ ಬಳಸುತ್ತಾರೆ. ಇದೊಂದು ಉಚಿತ ಆಪ್ ಆಗಿದ್ದು ಕಂಪೆನಿಯು ಇದರಿಂದ ಯಾವುದೇ ಆದಾಯವನ್ನು ಗಳಿಸುತ್ತಿಲ್ಲ. ಹೀಗಾಗಿ ಈಗ ಈ ದಿಕ್ಕಿನತ್ತ ಗಮನ ಹರಿಸುತ್ತಿದೆ ಫೇಸ್ಬುಕ್!!

Best Mobiles in India

Read more about:
English summary
WhatsApp seems to be hunting for professionals who can help the company monetize the instant messaging platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X