ವಾಟ್ಸ್ ಆಪ್ ನಲ್ಲಿ ನೀವು ರಿಸೀವ್ ಮಾಡಿದ ಇಮೇಜ್ ಸತ್ಯವಾ ಅಥವಾ ಸುಳ್ಳಾ!

By Gizbot Bureau
|

ಸಾಮಾಜಿಕ ಜಾಲತಾಣವು 2019 ರ ಲೋಕಸಭೆ ಚುನಾವಣೆಗಿಂತ ಮುಂಚಿತವಾಗಿ ಸ್ಕ್ಯಾನರ್ ನ ಅಡಿಯಲ್ಲಿ ಬರುತ್ತದೆ. ಅಂದರೆ ಕಣ್ಗಾವಲಿನಲ್ಲಿ ಇರುತ್ತದೆ. ವಾಟ್ಸ್ ಆಪ್ ಕೂಡ ಅದಕ್ಕೆ ಹೊರತಾಗಿಲ್ಲ. ವಾಟ್ಸ್ ಆಪ್ ಸುಳ್ಳು ಸುದ್ದಿಗಳನ್ನು ಪಸರಿಸುವ ಕಾರ್ಖಾನೆಯಂತೆ ಆಗಬಾರದು ಎಂಬ ಕಾರಣಕ್ಕೆ ವಾಟ್ಸ್ ಆಪ್ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗುತ್ತಿದೆ.

ವಾಟ್ಸ್ ಆಪ್ ನಲ್ಲಿ ಹೊಸ ಫೀಚರ್:

ವಾಟ್ಸ್ ಆಪ್ ನಲ್ಲಿ ಹೊಸ ಫೀಚರ್:

ಇನ್ಸೆಂಟ್ ಮೆಸೇಜಿಂಗ್ ದೈತ್ಯ ಎಂದು ಕರೆಸಿಕೊಳ್ಳುವ ವಾಟ್ಸ್ ಆಪ್ ಹೊಸ ಫೀಚರ್ ವೊಂದನ್ನು ಟೆಸ್ಟ್ ಮಾಡುತ್ತಿದ್ದು, ಇದು ಈ ಪ್ರಯೋಗದಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಹೇಳಲಾಗಿದೆ.ವಾಟ್ಸ್ ಆಪ್ ನ ಮುಂಬರುವ ಫೀಚರ್ ಗಳನ್ನ ಟ್ರ್ಯಾಕ್ ಮಾಡುವ ಫ್ಲ್ಯಾಟ್ ಫಾರ್ಮ್ ಎನ್ನಿಸಿಕೊಂಡಿರುವ ವಾಬೇಟಾಇನ್ಫೋ ನೀಡಿರುವ ಮಾಹಿತಿಯ ಪ್ರಕಾರ ಹೊಸ ಫೀಚರ್ ವೊಂದನ್ನು ವಾಟ್ಸ್ ಆಪ್ ಡೆವಲಪ್ ಮಾಡುತ್ತಿದ್ದು ನೀವು ರಿಸೀವ್ ಮಾಡಿದ ಅಂದರೆ ಚಾಟ್ ನಲ್ಲಿ ರಿಸೀವ್ ಮಾಡಿದ ಇಮೇಜ್ ಗಳನ್ನು ವೆಬ್ ನಲ್ಲಿ ಸರ್ಚ್ ಮಾಡುವುದಕ್ಕೆ ಅದು ಅವಕಾಶ ನೀಡುತ್ತದೆ. ಇನ್ನೊಂದರ್ಥದಲ್ಲಿ ಹೇಳುವುದಾದರೆ ಬಳಕೆದಾರರು ತಾವು ರಿಸೀವ್ ಮಾಡಿದ ಇಮೇಜ್ ಗೆ ಸಂಬಂಧಿಸಿದ ಸುದ್ದಿ ನಿಜವೋ ಅಥವಾ ಸುಳ್ಳೋ ಎಂಬುದನ್ನು ಈ ಫೀಚರ್ ಮೂಲಕ ಖಾತ್ರಿಗೊಳಿಸಿಕೊಳ್ಳಬಹುದು.

ಸರ್ಚ್ ಇಮೇಜ್:

ಸರ್ಚ್ ಇಮೇಜ್:

"ಸರ್ಚ್ ಇಮೇಜ್" ಹೆಸರಿನ ಸಪರೇಟ್ ಟ್ಯಾಬ್ ವೊಂದು ಚಾಟ್ ವಿಂಡೋದಲ್ಲಿ ಬಳಕೆದಾರರಿಗೆ ಲಭ್ಯವಾಗುತ್ತದೆ ಮತ್ತು ಇದು ಬಳಕೆದಾರರಿಗೆ ಇಮೇಜಿನ ಸೋರ್ಸ್ ಅಂದರೆ ಮಾಹಿತಿಯನ್ನು ಹುಡುಕುವುದಕ್ಕೆ ನೆರವು ನೀಡುತ್ತದೆ. ವಾಟ್ಸ್ ಆಪ್ ಇದಕ್ಕಾಗಿ ವಾಬೇಟಾ ಇನ್ಫೋ ಮಾಹಿತಿಯ ಪ್ರಕಾರ ಗೂಗಲ್ ಅಪ್ಲಿಕೇಷನ್ ಇಂಟರ್ ಫೇಸ್ ಅಥವಾ ಎಪಿಐ ಯನ್ನು ಸಮವಾಗಿರುವ ಇಮೇಜಿನ ಹುಡುಕಾಟಕ್ಕೆ ಬಳಸುತ್ತದೆ.

ಖಾತ್ರಿಗೊಳಿಸಿಕೊಳ್ಳುವುದು ಹೇಗೆ?

ಖಾತ್ರಿಗೊಳಿಸಿಕೊಳ್ಳುವುದು ಹೇಗೆ?

ಒಮ್ಮೆ ಬಳಕೆದಾರರು ಇಮೇಜ್ ರಿಸೀವ್ ಮಾಡಿದ ಕೂಡಲೇ ಮತ್ತು ಸರ್ಚ್ ಇಮೇಜ್ ಆಯ್ಕೆಯನ್ನು ಕ್ಲಿಕ್ಕಿಸಬಹುದು ಮತ್ತು ವಾಟ್ಸ್ ಆಪ್ ನಲ್ಲಿ ಗೂಗಲ್ ಪ್ರೌಸರ್ ತೆರೆದುಕೊಳ್ಳುತ್ತದೆ ಮತ್ತು ಫಲಿತಾಂಶ ಕಾಣಿಸುತ್ತದೆ.ಈ ಮೂಲಕ ಬಳಕೆದಾರರು ಇಮೇಜ್ ಗೆ ಸಂಬಂಧಿಸಿದ ಸುದ್ದಿಯು ನಿಜವೋ ಅಥವಾ ಸುಳ್ಳೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದು.

ಚುನಾವಣಾ ನೀತಿನಿಯಮ:

ಚುನಾವಣಾ ನೀತಿನಿಯಮ:

ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆ ಈಗಾಗಲೇ ಎಲೆಕ್ಷನ್ ಕಮಿಷನ್ ಅಭ್ಯರ್ಥಿಗಳಿಗೆ ಮತ್ತು ಪಕ್ಷಗಳಿಗೆ ಹಲವು ರೀತಿಯ ನೀತಿನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಗೂಗಲ್, ಯುಟ್ಯೂಬ್, ಫೇಸ್ ಬುಕ್ ಮತ್ತು ಟ್ವೀಟರ್ ನಂತೆ ವಾಟ್ಸ್ ಆಪ್ ಈ ನೀತಿನಿಯಮಗಳ ಅಡಿಯಲ್ಲಿ ಬರುವುದಿಲ್ಲ.

ಭಿನ್ನಾಭಿಪ್ರಾಯಗಳು:

ಭಿನ್ನಾಭಿಪ್ರಾಯಗಳು:

ಭಾರತದಲ್ಲಿ ವಾಟ್ಸ್ ಆಪ್ ವಿಚಾರದಲ್ಲಿ ಈಗಾಗಲೇ ಸ್ವಲ್ಪ ಸಮಸ್ಯೆಗಳಿದೆ. ವಾಟ್ಸ್ ಆಪ್ ನಲ್ಲಿ ಹಬ್ಬಿಸಲಾಗಿರುವ ಕೆಲವು ಫೇಕ್ ನ್ಯೂಸ್ ಮತ್ತು ಗಾಸಿಪ್ ಗಳಿಂದಾಗಿ ಕೆಲವು ದುರ್ಘಟನೆಗಳು ಸಂಬಂಧಿಸಿದೆ. ಭಾರತ ಸರ್ಕಾರವು ಈ ನಿಟ್ಟಿನಲ್ಲಿ ವಾಟ್ಸ್ ಆಪ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಹೇಳಿದೆ ಮತ್ತು ಎರಡೂ ಪಕ್ಷಗಳ ನಡುವೆ ಕೆಲವು ಭಿನ್ನಾಭಿಪ್ರಾಯಗಳು ತಲೆದೋರಿದವು ಮತ್ತು ವಾಟ್ಸ್ ಆಪ್ ಭಾರತದಲ್ಲಿ ಒಂದು ದೂರು ಅಧಿಕಾರಿಯನ್ನು ಕೂಡ ನೇಮಿಸಿತು.

ಸಂಪೂರ್ಣ ಮಾಹಿತಿ ಲಭ್ಯವಿಲ್ಲ:

ಸಂಪೂರ್ಣ ಮಾಹಿತಿ ಲಭ್ಯವಿಲ್ಲ:

ಹೊಸ ಫೀಚರ್ ಬಗ್ಗೆ ಹೇಳುವುದಾದರೆ ಸದ್ಯ ಈ ಫೀಚರ್ ಟೆಸ್ಟಿಂಗ್ ಹಂತದಲ್ಲಿದೆ. ಯಾವಾಗ ಇದು ಬಿಡುಗಡೆಗೊಳ್ಳುತ್ತದೆ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಅಷ್ಟೇ ಅಲ್ಲ ಇದು ಆಂಡ್ರಾಯ್ಡ್ ಫೋನ್ ಗಳಿಗೆ ಲಭ್ಯವಾಗುತ್ತದೆಯೇ ಅಥವಾ ಆಪಲ್ ಐಫೋನ್ ನಲ್ಲೂ ಬರಲಿದೆಯಾ ಎಂಬ ಬಗ್ಗೆ ಕೂಡ ಖಚಿತ ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವ ನಿರೀಕ್ಷೆ ಇದೆ.

Best Mobiles in India

English summary
Elections 2019: WhatsApp may soon help you find out if an image received is fake or real

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X