ಶೀಘ್ರದಲ್ಲಿಯೇ ಬರಲಿದೆ ವಾಟ್ಸಾಪ್ನಲ್ಲಿ ಕಳುಹಿಸಿದ ಮೆಸೇಜ್ಗಳನ್ನು 'ಅನ್ಸೆಂಡ್' ಮಾಡುವ ಫೀಚರ್!

ವಾಟ್ಸಾಪ್ನಲ್ಲಿ ನೀವು ಈಗಾಗಲೇ ಕಳುಹಿಸಿರುವ ಮೆಸೇಜ್ ಅನ್ನು ಹಿಂಪಡೆಯುವ ಅಂದರೆ ಅನ್ಸೆಂಡ್ ಮಾಡುವ ಫೀಚರ್ ಶೀಘ್ರವೇ ಬರಲಿದ್ದು ಸಧ್ಯಕ್ಕೆ ಇದು ಬೀಟಾ ಆವೃತ್ತಿಯಲ್ಲಿ ಪರೀಕ್ಷೆಗೊಳಗಾಗುತ್ತಿದೆ.

By Tejaswini P G
|

ಜೀವನದಲ್ಲಿ ಒಮ್ಮೆಯಾದರೂ ಯಾರಿಗಾದರೂ ತಪ್ಪಿ ಮೆಸೇಜ್ ಕಳುಹಿಸಿ ಯಾಕಾದರೂ ಕಳುಹಿಸಿದೆನೋ ಎಂದು ಮುಜುಗರ ಪಡುವ ಸನ್ನಿವೇಶ ಎದುರಿಸಿರುತ್ತೀರಿ! ದುರದೃಷ್ಟವಶಾತ್ ತಮ್ಮ ತಪ್ಪಿನ ಅರಿವಾದಾಗ ಕಾಲ ಮಿಂಚಿರುತ್ತದೆ. ಈಗಾಗಲೇ ಕಳುಹಿಸಿರುವ ಮೆಸೇಜ್ ಅನ್ನು ಹಿಂಪಡೆಯುವ ಅವಕಾಶವೇ ಇರುವುದಿಲ್ಲ!

ಶೀಘ್ರದಲ್ಲಿಯೇ ಬರಲಿದೆ ವಾಟ್ಸಾಪ್ನಲ್ಲಿ ಹೊಸ ಫೀಚರ್!

ಆದರೆ ಇನ್ನು ಮುಂದೆ ಇದರ ಕುರಿತು ಚಿಂತಿಸಬೇಕಿಲ್ಲ.ಈ ಸಂದರ್ಭ ಬದಲಾಗಲಿದೆ. ಹೌದು, ವಾಟ್ಸಾಪ್ ನಲ್ಲಿ ಬರಲಿದೆ ಹೊಸ ಫೀಚರ್! ನೀವು ತಪ್ಪಿ ಕಳುಹಿಸಿದ ಮೆಸೇಜ್ಗಳನ್ನು ಹಿಂಪಡೆಯುವ ಅಂದರೆ 'ಅನ್ಸೆಂಡ್' ಮಾಡುವ ಫೀಚರ್ ಶೀಘ್ರದಲ್ಲಿಯೇ ವಾಟ್ಸಾಪ್ನಲ್ಲಿ ಲಭ್ಯವಾಗಲಿದೆ. ವಾಟ್ಸಾಪ್ ನ ಹೊಸ ಬೀಟಾ ಆವೃತ್ತಿಯಲ್ಲಿ ಈ ಫೀಚರ್ ಸಧ್ಯಕ್ಕೆ ಲಭ್ಯವಿದ್ದು, ಬಳಕೆದಾರರಿಗೆ ಅವರು ಈಗಾಗಲೇ ಕಳುಹಿಸಿರವ ಮೆಸೇಜ್ ಅನ್ನು ಹಿಂಪಡೆಯಲು ಅಂದರೆ 'ಅನ್ಸೆಂಡ್' ಮಾಡಲು ಅವಕಾಶ ಮಾಡಿಕೊಡುತ್ತಿದೆ. WABetaInfo ನ ವರದಿಯ ಅನುಸಾರ ಆಂಡ್ರಾಯ್ಡ್ ತಜ್ಞರು ಈ ಫೀಚರ್ ನ ಪರೀಕ್ಷೆ ನಡೆಸುತ್ತಿದ್ದಾರೆ.

ವಾಟ್ಸಾಪ್ ಬೀಟಾ ದ ಹೊಸ ಆವೃತ್ತಿಯಲ್ಲಿ ಈಗಾಗಲೇ ಇದಕ್ಕೆಂದೇ ಸೀಮಿತವಾಗಿರುವ ರೀಕಾಲ್ ಸರ್ವರ್ ಒಂದನ್ನು ಆನ್ ಮಾಡಿದ್ದಾರೆ. ಈ ಫೀಚರ್ ಇನ್ನೂ ಬೀಟಾ ಆವೃತ್ತಿಯಲ್ಲಿ ಲಭ್ಯವಾಗಿರುವ ಕಾರಣ, ಬೀಟಾ ಪ್ರೋಗ್ರಾಮ್ ಗೆ ನೋಂದಾಯಿಸಿಕೊಳ್ಳದವರು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ.

ಭವಿಷ್ಯದ ಪಿಕ್ಸೆಲ್‌ಗಳಿಗಾಗಿ 'ಹೆಚ್‌ಟಿಸಿ' ತಂತ್ರಜ್ಞರಿಗೆ ಗೂಗಲ್‌ ಗಾಳ!! ಏನಿದು?ಭವಿಷ್ಯದ ಪಿಕ್ಸೆಲ್‌ಗಳಿಗಾಗಿ 'ಹೆಚ್‌ಟಿಸಿ' ತಂತ್ರಜ್ಞರಿಗೆ ಗೂಗಲ್‌ ಗಾಳ!! ಏನಿದು?

ಈ ಹೊಸ ಫೀಚರನ್ನು ಪರೀಕ್ಷಿಸಿ ಜನತೆಗೆ ಬಿಡುಗಡೆಮಾಡಲು ಎಷ್ಟೇ ಸಮಯ ಹಿಡಿದರೂ, ಈ ಫೀಚರ್ ನ ಪ್ರಾಮುಖ್ಯತೆ ಕಡಿಮೆಯಾಗುವುದಿಲ್ಲ. ಎಷ್ಟೋ ಬಾರಿ ನೀವು ಯಾರಿಗೋ ಕಳುಹಿಸಬೇಕಾದ ಮೆಸೇಜ್ ಅನ್ನು ಇನ್ಯಾರಿಗೋ ಕಳುಹಿಸಿ ತೊಂದರೆಗೊಳಗಾಗಿರುತ್ತೀರಿ. ಹೀಗಿರುವಾಗ, ವಾಟ್ಸಾಪ್ ನಲ್ಲಿ ಈ ಫೀಚರ್ ಬಂದರೆ ನೀವು ಈ ಬಗ್ಗೆ ಮುಂದೆ ತಲೆಕೆಡಿಸಿಕೊಳ್ಳಬೇಕಾಗುವುದಿಲ್ಲ.

ನೀವು ಈಗಾಗಲೇ ಕಳುಹಿಸಿರುವ ಮೆಸೆಜ್ ಅನ್ನು ಹಿಂಪಡೆದ ಮೇಲೆ ನೀವು ಕಳುಹಿಸಿದ ಮೆಸೇಜ್ ಅದನ್ನು ಸ್ವೀಕರಿಸಿದವರ ನೋಟಿಫಿಕೇಶನ್ ಏರಿಯಾದಲ್ಲಿ ಕಾಣಸಿಗುವುದಿಲ್ಲ. ಅದರ ಬದಲಾಗಿ, "ದಿಸ್ ಮೆಸೇಜ್ ವಾಸ್ ಡಿಲೀಟೆಡ್ (ಈ ಮೆಸೇಜ್ ಅನ್ನು ಡಿಲೀಟ್ ಮಾಡಲಾಗಿದೆ)" ಎನ್ನುವ ಸಂದೇಶ ಅಲ್ಲಿರುತ್ತದೆ.

ಎಲ್ಲರ ಬಹುಬೇಡಿಕೆಯ ಈ ಸೂಪರ್ ಫೀಚರನ್ನು ಎಲ್ಲಾ ಬಳಕೆದಾರರಿಗೆ ಯಾವಾಗ ಬಿಡುಗಡೆಮಾಡಲಾಗುತ್ತದೆ ಎಂದು ಈಗಲೇ ಹೇಳಲಾಗದು.ಅಲ್ಲದೆ ಈ ಫೀಚರ್ ವಾಟ್ಸಾಪ್ ನ ಆಂಡ್ರಾಯ್ಡ್ ಮತ್ತು ಐಓಎಸ್ ಆವೃತ್ತಿಗಳೆರಡರಲ್ಲೂ ಲಭ್ಯವಾಗಲಿದೆಯೇ ಎನ್ನುವುದರ ಕುರಿತು ಇನ್ನೂ ಕೂಡ ಸ್ಪಷ್ಟ ಮಾಹಿತಿಯಿಲ್ಲ.

Best Mobiles in India

Read more about:
English summary
After you decide to recall your message on WhatsApp, it will not be displayed on the recipient's notification area.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X