Home
Apps

ಯಾರು ಊಹಿಸಿರಲಿಲ್ಲ..! ಗೂಗಲ್ ಪೇ, ಫೋನ್ ಪೇ ಔಟ್.. ಇನ್ಮುಂದೆ ವಾಟ್ಸಾಪ್‌ನಲ್ಲೇ ಎಲ್ಲಾ ಬಿಲ್‌ ಕಟ್ಟಬಹುದು!

ಇಲ್ಲಿ ಕೇಳಿ..! ಇನ್ಮುಂದೆ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಬೇಕಿಲ್ಲ. ವಾಟ್ಸಾಪ್‌ನಲ್ಲೇ ವಿದ್ಯುತ್, ಗ್ಯಾಸ್, ನೀರಿನ ಸೇರಿದಂತೆ ಎಲ್ಲಾ ಬಿಲ್‌ಗಳನ್ನು ಪಾವತಿಸಬಹುದು. ಹೌದು, ಈ ಡಿಜಿಟಲ್ ಯುಗದಲ್ಲಿ ಬಹುತೇಕ ಎಲ್ಲಾ ಕೆಲಸಗಳನ್ನು ಕುಳಿತಲ್ಲಿಯೇ ಮಾಡಬಹುದು. ಪ್ರಸ್ತುತ, ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಾಪ್ (WhatsApp) ಮೂಲಕವೂ ನೀವು ಬಿಲ್‌ಗಳನ್ನು (WhatsApp Payment) ಕಟ್ಟಬಹುದು. ಇದರಿಂದ ಲಕ್ಷಾಂತರ ಭಾರತೀಯ ಬಳಕೆದಾರರಿಗೆ ಅನುಕೂಲವಾಗಲಿದೆ. ಬನ್ನಿ, ಈ ಕುರಿತ ಹೆಚ್ಚಿನ ಮಾಹಿತಿ ತಿಳಿಯೋಣ.

ಪ್ರಸ್ತುತ, ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಆನ್‌ಲೈನ್ ಪೇಮೆಂಟ್ ಸಹ ಹೆಚ್ಚಾಗಿದೆ. ಹಿಂದೆಲ್ಲಾ ವಿದ್ಯುತ್ ಬಿಲ್, ವಾಟರ್ ಬಿಲ್‌ಗಳನ್ನು ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪಾವತಿಸಬೇಕಾಗಿತ್ತು. ಈ ಡಿಜಿಟಲ್ ಯುಗದಲ್ಲಿ ಇಂತಹ ಬಹುತೇಕ ಕೆಲಸಗಳನ್ನು ಸದಾ ಕೈಯಲ್ಲೇ ಇರುವ ಮೊಬೈಲ್ ಮೂಲಕ ಸುಲಭವಾಗಿ ಮಾಡಬಹುದು. ಅದರಂತೆ, ಇದೀಗ ವಾಟ್ಸಾಪ್ (WhatsApp) ಮೂಲಕವೂ ನೀವು ಬಿಲ್‌ಗಳನ್ನು ಕಟ್ಟಬಹುದಾಗಿದೆ.

ಗೂಗಲ್ ಪೇ, ಫೋನ್ ಪೇ ಬೇಡ! ಇನ್ಮುಂದೆ ವಾಟ್ಸಾಪ್‌ನಲ್ಲೇ ಎಲ್ಲಾ ಬಿಲ್‌ ಕಟ್ಟಬಹುದು

ವಾಟ್ಸಾಪ್ ಭಾರತದಲ್ಲಿ ನಿರಂತರವಾಗಿ ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ವಾಟ್ಸಾಪ್ ಕೇವಲ ಸಂದೇಶ ಕಳುಹಿಸುವುದಕ್ಕೆ ಮಾತ್ರವಲ್ಲ, ಹಲವು ವಿಷಯಗಳಿಗೆ ಉಪಯುಕ್ತವಾಗಿದೆ. ಆದರೆ, ಇದೀಗ ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ. ಅದುವೇ, ಬಿಲ್ ಪಾವತಿ ವೈಶಿಷ್ಟ್ಯ. ಇದು ಲಭ್ಯವಾದ ನಂತರ, ನೀವು ಎಲ್ಲಾ ಬಿಲ್‌ಗಳನ್ನು ವಾಟ್ಸಾಪ್ ಮೂಲಕವೇ ಪಾವತಿಸಲು (WhatsApp Payment) ಸಾಧ್ಯವಾಗುತ್ತದೆ. ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ಸೇರಿದಂತೆ ಇನ್ನಿತರ ಆಪ್‌ಗಳು ಅಗತ್ಯವಿಲ್ಲ.

2020ರಲ್ಲಿ ಯುಪಿಐ ಪಾವತಿ ಪ್ರಾರಂಭ

ವಾಟ್ಸಾಪ್ ಭಾರತದಲ್ಲಿ ನವೆಂಬರ್ 2020 ರಲ್ಲಿ ಯುಪಿಐ ಪಾವತಿಗಳನ್ನು ಪ್ರಾರಂಭಿಸಿತು. ಆದರೆ, ಆಗ ಕೆಲವೇ ಜನರು ಈ ವೈಶಿಷ್ಟ್ಯವನ್ನು ಹೊಂದಿದ್ದರು. ಆದರೆ, ಪ್ರಸ್ತುತ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ವಾಟ್ಸಾಪ್ ಪೇ (WhatsApp Pay) ಯುಪಿಐ ಮಿತಿಯನ್ನು ತೆಗೆದುಹಾಕಿದೆ. ಅಂದರೆ, ಭಾರತದಲ್ಲಿ ವಾಟ್ಸಾಪ್ ಬಳಸುವ ಎಲ್ಲರೂ ಸಹ ಸದ್ಯ ವಾಟ್ಸಾಪ್ ಪಾವತಿಗಳನ್ನು ಬಳಸಬಹುದು.

ಇದರೊಂದಿಗೆ, ವಾಟ್ಸಾಪ್ ಪ್ರಸ್ತುತ ಪಾವತಿ ಅಪ್ಲಿಕೇಶನ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಈಗ, ಇತ್ತೀಚಿನಂತೆ, ವಾಟ್ಸಾಪ್ ಬಿಲ್ ಪಾವತಿ ವೈಶಿಷ್ಟ್ಯವನ್ನು ಸಹ ತರುತ್ತಿದೆ. ಇದರರ್ಥ ವಾಟ್ಸಾಪ್ ಇನ್ಮುಂದೆ ಸಂದೇಶಗಳನ್ನು ಕಳುಹಿಸಲು ಕೇವಲ ಒಂದು ಅಪ್ಲಿಕೇಶನ್ ಆಗಿರುವುದಿಲ್ಲ. ಬದಲಿಗೆ ಹಣವನ್ನು ಕಳುಹಿಸಲು ಮತ್ತು ಬಿಲ್‌ಗಳನ್ನು ಪಾವತಿಸಲು ಸಹ ಉಪಯುಕ್ತವಾಗಿರಲಿದೆ.

ಹೊಸ ಬಿಲ್ ಪಾವತಿ ವೈಶಿಷ್ಟ್ಯ

ವರದಿಯ ಪ್ರಕಾರ, ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ (2.25.3.15) ಹೊಸ ಬಿಲ್ ಪಾವತಿ ವೈಶಿಷ್ಟ್ಯ ಕಾಣಿಸಿಕೊಂಡಿದೆ. ಇದು ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಆದರೆ ಅದಕ್ಕೆ ಸಂಬಂಧಿಸಿದ ಮೂಲಭೂತ ಕಾರ್ಯಗಳನ್ನು ಅಪ್ಲಿಕೇಶನ್‌ನಲ್ಲಿ ಮಾಡಲಾಗಿದೆ. ಈ ವೈಶಿಷ್ಟ್ಯವು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳನ್ನು ನೀಡಿದರೆ, ಅದನ್ನು ಎಲ್ಲರಿಗೂ ವಿಸ್ತರಿಸಬಹುದು.

ಗೂಗಲ್ ಪೇ, ಫೋನ್ ಪೇ ಬೇಡ! ಇನ್ಮುಂದೆ ವಾಟ್ಸಾಪ್‌ನಲ್ಲೇ ಎಲ್ಲಾ ಬಿಲ್‌ ಕಟ್ಟಬಹುದು

ಈ ವೈಶಿಷ್ಟ್ಯ ಬಿಡುಗಡೆ ಯಾವಾಗ?

ಈ ವೈಶಿಷ್ಟ್ಯದೊಂದಿಗೆ, ನೀವು ವಿದ್ಯುತ್ ಬಿಲ್‌ಗಳು, ಮೊಬೈಲ್ ರೀಚಾರ್ಜ್‌ಗಳು, ಗ್ಯಾಸ್ ಬಿಲ್‌ಗಳು, ನೀರಿನ ಬಿಲ್‌ಗಳು, ಪ್ರಿಪೇಯ್ಡ್ ಮೊಬೈಲ್ ರೀಚಾರ್ಜ್‌ಗಳು (ಲ್ಯಾಂಡ್‌ಲೈನ್ ಬಿಲ್‌ಗಳು) ಮತ್ತು ಮನೆ ಬಾಡಿಗೆಯನ್ನು ಸಹ ವಾಟ್ಸಾಪ್ ಮೂಲಕವೇ ಪಾವತಿಸಲು ಅವಕಾಶ ನೀಡಲಾಗುತ್ತದೆ. ಕಂಪನಿಯು ಇದರ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಆದರೆ, ಈ ವೈಶಿಷ್ಟ್ಯವು ಶೀಘ್ರದಲ್ಲೇ ಬೀಟಾ ಬಳಕೆದಾರರಿಗೆ ಲಭ್ಯವಿರುತ್ತದೆ. ನಂತರ ಅದು ಎಲ್ಲರಿಗೂ ಲಭ್ಯವಾಗುತ್ತದೆ.

ಹೊಸದಾಗಿ ಸೇರಿಸಲಾದ 'ಬಿಲ್ ಪಾವತಿ' ವಿಭಾಗದ ಸ್ಕ್ರೀನ್‌ಶಾಟ್ ಕೂಡ ವಾಟ್ಸಾಪ್ ಬೀಟಾ ಅಪ್ಲಿಕೇಶನ್‌ನಲ್ಲಿ ಸೋರಿಕೆಯಾಗಿದೆ. ಅದು ಪ್ರಸ್ತುತ ಖಾಲಿಯಾಗಿದೆ. ಶೀಘ್ರದಲ್ಲೇ, ಮೊಬೈಲ್ ರೀಚಾರ್ಜ್‌ಗಳು, ಗ್ಯಾಸ್ ಬಿಲ್‌ಗಳು ಮತ್ತು ಡಿಶ್ ಟಿವಿಯಂತಹ ಎಲ್ಲಾ ಪಾವತಿಗಳು ಅಲ್ಲಿ ಲಭ್ಯವಿರಬಹುದು. ನೀವು ಅವುಗಳ ಮೇಲೆ ಕ್ಲಿಕ್ ಮಾಡಿ ತಕ್ಷಣವೇ ಪಾವತಿ ಮಾಡಬಹುದು. ಇನ್ಮುಂದೆ ಬೇರೆ ಯಾವುದೇ ಅಪ್ಲಿಕೇಶನ್‌ಗಳ ಅಗತ್ಯವಿಲ್ಲ.

ಬಿಲ್ ಪಾವತಿ ಅಷ್ಟು ಸುಲಭವಲ್ಲ!

ವಾಟ್ಸಾಪ್ ಬಿಲ್ ಪಾವತಿಗಳನ್ನು ಪ್ರಾರಂಭಿಸುವುದು ಅಷ್ಟು ಸುಲಭವಲ್ಲ. ಸರ್ಕಾರದ ಅನುಮತಿ, ತಾಂತ್ರಿಕ ಸಮಸ್ಯೆಗಳು ಉಂಟಾಗಬಹುದು. ಆದರೆ, NPCI ಮಿತಿಯನ್ನು ತೆಗೆದುಹಾಕುವುದರೊಂದಿಗೆ, ಒಂದು ಪ್ರಮುಖ ಅಡಚಣೆಯನ್ನು ನಿವಾರಿಸಲಾಗಿದೆ. ವಾಟ್ಸಾಪ್ ಬಿಲ್ ಪಾವತಿಗಳನ್ನು ಯಶಸ್ವಿಯಾಗಿ ತಂದರೆ, ಅದು ಇತರೆ ಯುಪಿಐ ಅಪ್ಲಿಕೇಶನ್‌ಗಳಿಗೆ ದೊಡ್ಡ ಸ್ಪರ್ಧೆ ನೀಡಲಿದೆ.

ಒಂದೇ ಅಪ್ಲಿಕೇಶನ್‌ನಲ್ಲಿ ಎಲ್ಲವೂ ಲಭ್ಯ

ಪ್ರಸ್ತುತ, ಲಕ್ಷಾಂತರ ಭಾರತೀಯರು ಪ್ರತಿದಿನ ವಾಟ್ಸಾಪ್ ಬಳಸುತ್ತಾರೆ. ಬಿಲ್ ಪಾವತಿಗಳು ವಾಟ್ಸಾಪ್‌ನಲ್ಲಿಯೂ ಬಂದರೆ, ಡಿಜಿಟಲ್ ಪಾವತಿಗಳು ಇನ್ನಷ್ಟು ಸುಲಭವಾಗುತ್ತವೆ. ಪ್ರಸ್ತುತ, ವಾಟ್ಸಾಪ್ ಬಳಕೆದಾರರು ಯುಪಿಐ ಮೂಲಕ ಹಣವನ್ನು ಕಳುಹಿಸುತ್ತಿದ್ದಾರೆ ಮತ್ತು ಸ್ವೀಕರಿಸುತ್ತಿದ್ದಾರೆ. ಬಿಲ್‌ಗಳನ್ನು ಸಹ ಶೀಘ್ರದಲ್ಲೇ ಪಾವತಿಸಲಾಗುವುದು. ಒಂದೇ ಅಪ್ಲಿಕೇಶನ್‌ನಲ್ಲಿ ಎಲ್ಲವೂ ಲಭ್ಯವಿರುವುದರಿಂದ ಸಮಯ ಮತ್ತು ಶ್ರಮ ಉಳಿಸುತ್ತದೆ. ಈಗಾಗಲೇ ವಾಟ್ಸಾಪ್ ಪೇ ವೈಶಿಷ್ಟ್ಯದೊಂದಿಗೆ ವಿದ್ಯುತ್ ಬಿಲ್‌ಗಳನ್ನು ಸುಲಭವಾಗಿ ಪಾವತಿಸಬಹುದಾಗಿದೆ.

Best Mobiles in India

English summary
WhatsApp might soon allow users to make bill payments in India: report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+