Subscribe to Gizbot

ವಾಟ್ಟ್‌ಆಪ್ ವಿಡಿಯೋ ಕಾಲ್‌ ಬಳಕೆದಾರರಿಗೆ ಹೊಸ ಆಯ್ಕೆ..!

Posted By: Tejaswini P G

ವಾಟ್ಸಾಪ್ ತನ್ನ ಆಪ್ ನಲ್ಲಿ ಒಂದಷ್ಟು ಹೊಸ ಫೀಚರ್ಗಳನ್ನು ನೀಡುತ್ತಿದೆ. ಗ್ರೂಪ್ ನ ವಿವರಣೆಯನ್ನು ನೀಡುವುದು, ವಾಯ್ಸ್ ಮತ್ತು ವೀಡಿಯೋ ಕರೆಗಳ ಮಧ್ಯೆ ಸ್ವಿಚ್ ಮಾಡುವ ಸಾಮರ್ಥ್ಯ ಹೀಗೆ ಹಲವು ಫೀಚರ್ ಗಳನ್ನು ವಾಟ್ಸಾಪ್ ಈ ಅಪ್ಡೇಟ್ ನಲ್ಲಿ ನೀಡುತ್ತಿದೆ. ಅಷ್ಟೇ ಅಲ್ಲದೆ ಗ್ರೂಪ್ ಮಾಹಿತಿ ಹೊಂದಿರುವ ಪರದೆಯಿಂದ ನೇರವಾಗಿ ಗ್ರೂಪ್ ನ ಸದಸ್ಯರನ್ನು ಹುಡುಕುವ ಸಾಮರ್ಥ್ಯ ಇತ್ಯಾದ ಫೀಚರ್ಗಳನ್ನು ಕೂಡ ನೀಡಿದೆ.

How to save WhatsApp Status other than taking screenshots!! Kannada
ಕಳೆದ ಕೆಲವು ವಾರಗಳಿಂದ ಈ ಫೀಚರ್ಗಳನ್ನು ಆಪ್ ನ ಬೇರೆ ಬೇರೆ ಬೀಟಾ ಆವೃತ್ತಿಗಳಲ್ಲಿ ನೀಡಲಾಗಿತ್ತು ಎಂಬ ವರದಿಗಳು ಕೇಳಿ ಬರುತ್ತಿವೆ. ಈಗ ವಾಟ್ಸಾಪ್ ನ ಈ ಸುಧಾರಿತ ಆಂಡ್ರಾಯ್ಡ್ ಆವೃತ್ತಿಯಲ್ಲಿ ಗ್ರೂಪ್ ಇನ್ಫೋ ಪರದೆಯಲ್ಲಿ ಸರ್ಚ್ ಬಾರ್, ವಾಯ್ಸ್ ಮತ್ತು ವೀಡಿಯೋ ಕರೆಗಳ ಮಧ್ಯೆ ಟಾಗಲ್ ಮಾಡುವ ಸಾಮರ್ಥ್ಯ ಇತ್ಯಾದಿ ಫೀಚರ್ಗಳು ಇವೆ.

ಕರೆ ಮಾಡುವ ಸಂದರ್ಭದಲ್ಲಿ ಬರುವ ಟ್ಯಾಬ್ ಒಂದರ ಮೇಲೆ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಸುಲಭವಾಗಿ ವಾಯ್ಸ್ ಮತ್ತು ವೀಡಿಯೋ ಕರೆಗಳ ಮಧ್ಯೆ ಟಾಗಲ್ ಮಾಡಬಹುದಾಗಿದೆ.

ಇತ್ತೀಚಿಗಿನ ಒಂದು ಲೇಖನದಲ್ಲಿ ನಾವು ವಾಟ್ಸಾಪ್ ಪೇ ಫೀಚರ್ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದೆವು. ಅಲ್ಲದೆ ಫೇಸ್ಬುಕ್ ವಾಟ್ಸಾಪ್ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ವಾಟ್ಸಾಪ್ ನಲ್ಲಿ ಏನೆಲ್ಲಾ ಸುಧಾರಣೆಗಳಾಗಿವೆ, ವಾಯ್ಸ್ ಕಾಲ್, ವೀಡಿಯೋ ಕಾಲ್, ಸ್ಟೋರೀಸ್ ಮೊದಲಾದ ಫೀಚರ್ಗಳ ಕುರಿತು ಕೂಡ ಸಾಕಷ್ಟು ಮಾಹಿತಿ ನೀಡಿದ್ದೇವೆ.

ವಾಟ್ಸಾಪ್ ನಲ್ಲಿ ನಿಮ್ಮ ಕಾಂಟ್ಯಾಕ್ಟ್ ಗಳಿಗೆ ವೀಡಿಯೋ ಅಥವಾ ಫೋಟೋಗಳನ್ನು ಕಳುಹಿಸುವಷ್ಟೇ ಸರಳವಾಗಿ ಡಿಜಿಟಲ್ ಪಾವತಿಯನ್ನು ಕೂಡ ಮಾಡುವ ಫೀಚರ್ ಅನ್ನು ವಾಟ್ಸಾಪ್ ನೀಡಿದೆ. ಸಧ್ಯಕ್ಕೆ ಈ ವಾಟ್ಸಾಪ್ ಪೇ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯವಿದ್ದು, ಭಾರತದಲ್ಲಿ ಮಾತ್ರ ಲಭ್ಯವಿದೆ.

English summary
WhatsApp new feature allows you to toggle between voice and video calls. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot