ವಾಟ್ಸ್‌ಆಪ್‌ನಿಂದ ಆಕರ್ಷಕ View Once ಫೀಚರ್‌ ಪರಿಚಯ..! ಹೇಗೆ ಬಳಸೋದು ಅಂತೀರಾ..? ಈ ಸ್ಟೋರಿ ನೋಡಿ..!

By Gizbot Bureau
|

ಜನಪ್ರಿಯ ಮೆಸೆಂಜರ್‌ ಆಪ್‌ ವಾಟ್ಸ್‌ಆಪ್‌ ಮತ್ತಷ್ಟು ಬಳಕೆದಾರ ಸ್ನೇಹಿಯಾಗುತ್ತಿದ್ದು, ತನ್ನ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್‌ ಅನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಹೌದು, ಇದೇ ಫೀಚರ್‌ ಅನ್ನು ಫೋಟೋ ಮತ್ತು ವಿಡಿಯೋಗಳಿಗೆ ಅನ್ವಯಿಸಲು ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸ್‌ಆಪ್‌ ಮುಂದಾಗಿದೆ. ವಾಟ್ಸ್‌ಆಪ್‌ ಈ ಫೀಚರ್‌ಗೆ ವೀವ್‌ ಒನ್ಸ್‌ ಎಂದು ಹೆಸರಿಟ್ಟಿದ್ದು, ಈ ಫೀಚರ್‌ ಅನ್ನು ಆನ್‌ ಮಾಡಿದರೆ ಫೋಟೋ ಅಥವಾ ವಿಡಿಯೋವನ್ನು ನೋಡಿದ ಮೇಲೆ ಅವು ಚಾಟ್‌ನಿಂದ ಡಿಸ್‌ಅಪಿಯರ್‌ ಆಗುತ್ತವೆ.

ವಾಟ್ಸ್‌ಆಪ್‌ನಿಂದ ಆಕರ್ಷಕ View Once ಫೀಚರ್‌ ಪರಿಚಯ..! ಹೇಗೆ ಬಳಸೋದು ಅಂತೀರಾ..?

ಏನಿದು ವಾಟ್ಸ್‌ಆಪ್‌ ವೀವ್‌ ಒನ್ಸ್‌ ಫೀಚರ್‌..!

ವಾಟ್ಸ್‌ಆಪ್‌ ವೀವ್‌ ಒನ್ಸ್‌ ಫೀಚರ್‌ ಡಿಸ್‌ಅಪಿಯರಿಂಗ್‌ ಮೆಸೇಜ್‌ ಫೀಚರ್‌ ರೀತಿಯೇ ಇದ್ದು, ಸ್ವೀಕರಿಸುವಾತ ಯಾವಾಗ ನೋಡ್ತಾನೋ ಆಗ ಫೋಟೋ ಮತ್ತು ವಿಡಿಯೋ ಡಿಸ್‌ಅಪಿಯರ್‌ ಆಗುತ್ತದೆ. ವೀವ್‌ ಒನ್ಸ್‌ ಫೀಚರ್‌ ಆನ್‌ ಮಾಡಿದರೆ ಫೋಟೋ ಮತ್ತು ವಿಡಿಯೋವನ್ನು ಒಂದು ಬಾರಿ ಮಾತ್ರ ನೋಡಬಹುದು. ಇದು ಇನ್‌ಸ್ಟಾಗ್ರಾಂನ ವ್ಯಾನಿಷ್‌ ಮೋಡ್‌ ರೀತಿ ಕೆಲಸ ಮಾಡುತ್ತದೆ.

ವಾಟ್ಸ್‌ಆಪ್‌ ವೀವ್‌ ಒನ್ಸ್‌ ಫೀಚರ್‌ ಬಗ್ಗೆ ಗೊತ್ತಿರಲಿ..!

ನೀವು ಹಂಚಿಕೊಂಡ ಮಿಡಿಯಾ ಫೈಲ್‌ ಸ್ವೀಕರಿಸುವವರ ಮೊಬೈಲ್‌ನಲ್ಲಿ ಸೇವ್‌ ಆಗುವುದಿಲ್ಲ.

ವೀವ್‌ ಒನ್ಸ್‌ ಫೋಟೋ ಮತ್ತು ವಿಡಿಯೋಗಳನ್ನು ಒಂದು ಬಾರಿ ಮಾತ್ರ ನೋಡಬಹುದು. ವಾಪಸ್‌ ಕಳಿಸಿಕೊಳ್ಳುವುದು ಬಿಟ್ಟು ಅವುಗಳನ್ನು ಮತ್ತೆ ನೋಡಲು ಯಾವುದೇ ದಾರಿ ಇಲ್ಲ.

ವೀವ್‌ ಒನ್ಸ್‌ ಮಿಡಿಯಾ ಫೈಲ್‌ ಫಾರ್ವರ್ಡ್‌, ಸೇವ್‌, ಸ್ಟಾರ್‌ ಅಥವಾ ಶೇರ್‌ ಮಾಡಲು ಆಗುವುದಿಲ್ಲ.

ನೀವು ಚಾಟ್‌ನಲ್ಲಿ ವೀವ್‌ ಒನ್ಸ್‌ ಮೀಡಿಯಾವನ್ನು ತೆರೆದು ನೋಡದಿದ್ದರೆ 14 ದಿನದಲ್ಲಿ ಚಾಟ್‌ನಿಂದಲೂ ಕೂಡ ಕಾಣೆಯಾಗುತ್ತದೆ.

ವೀವ್‌ ಒನ್ಸ್‌ ಮೀಡಿಯಾ ಫೈಲ್‌ನ್ನು ನೀವು ನೋಡಿರದಿದ್ದರೆ ಬ್ಯಾಕ್‌ಅಪ್‌ ಮೂಲಕ ರಿಸ್ಟೋರ್‌ ಮಾಡಬಹುದು. ಒಪನ್‌ ಮಾಡಿದ್ದರೆ ಬ್ಯಾಕ್ಅಪ್‌ನಿಂದಲೂ ರಿಸ್ಟೋರ್‌ ಆಗಲ್ಲ.

ವೀವ್‌ ಒನ್ಸ್‌ ಮೀಡಿಯಾ ಫೈಲ್‌ ಅನ್ನು ಸ್ಕ್ರೀನ್‌ ಶಾಟ್‌ ಅಥವಾ ಸ್ಕ್ರೀನ್‌ ರೆಕಾರ್ಡಿಂಗ್‌ ಮಾಡಬಹುದು.

ವೀವ್‌ ಒನ್ಸ್‌ ಫೀಚರ್‌ ಆನ್‌ ಮಾಡುವುದು ಹೇಗೆ..?

ಮೊದಲು ಇತ್ತೀಚಿನ ವಾಟ್ಸ್‌ಆಪ್‌ ಆವೃತ್ತಿಯನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಿ. ಅದಾದ ಮೇಲೆ ಈ ಕೆಳಗಿನ ಹಂತಗಳನ್ನು ಅನುಸರಿಸುವದರೊಂದಿಗೆ ವೀವ್‌ ಒನ್ಸ್‌ ಫೀಚರ್‌ ಬಳಸಬಹುದು.

ವಾಟ್ಸ್‌ಆಪ್‌ ಒಪನ್‌ ಮಾಡಿ, ಯಾವುದಾದರೂ ಚಾಟ್‌ಗೆ ಹೋಗಿ.

ಚಾಟ್‌ಬಾಕ್ಸ್‌ನಲ್ಲಿರುವ ಕ್ಯಾಮೆರಾ ಐಕಾನ್‌ ಟ್ಯಾಪ್‌ ಮಾಡಿ, ಫೋಟೋ ಅಥವಾ ವಿಡಿಯೋವನ್ನು ಆಯ್ದುಕೊಳ್ಳಿ.

ಬಳಿಕ ಪ್ರಿವೀವ್‌ ವಿಂಡೋ ನಿಮಗೆ ಕಾಣುತ್ತದೆ. ಟೆಕ್ಸ್ಟ್‌ಬಾಕ್ಸ್‌ನ ಬಲ ಮೂಲೆಯಲ್ಲಿ ವೀವ್‌ ಒನ್ಸ್‌ ಐಕಾನ್‌ ಕಾಣುತ್ತದೆ. ಅದನ್ನು ಕ್ಲಿಕ್‌ ಮಾಡಿ.

ಒಂದು ಸಾರಿ ವೀವ್‌ ಒನ್ಸ್‌ ಫೀಚರ್‌ನೊಂದಿಗೆ ಮೀಡಿಯಾ ಕಳುಹಿಸಿದರೆ, ಸ್ವೀಕರಿಸುವಾತ ಒಂದು ಬಾರಿ ಮಾತ್ರ ಆ ಮೀಡಿಯಾ ಫೈಲ್‌ನ್ನು ನೋಡಬಹುದು.

Best Mobiles in India

Read more about:
English summary
WhatsApp New Feature: How To Use WhatsApp Disappearing Photo Feature?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X