Home
Apps

ವಾಟ್ಸ್ ಆಪ್ 2017ರಲ್ಲಿ ತನ್ನ ಬಳಕೆದಾರರಿಗೆ ಕೊಟ್ಟ ಹೊಸ ಆಯ್ಕೆಗಳು..!

By Lekhaka

ವಾಟ್ಸ್ ಆಪ್ 2017ರಲ್ಲಿ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಯ್ಕೆಗಳನ್ನು ನೀಡಿದ್ದು, ಈ ಹಿನ್ನಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನೀಡಿದ ಫೀಚರ್ ಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವ.

ವಾಟ್ಸ್ ಆಪ್ 2017ರಲ್ಲಿ ತನ್ನ ಬಳಕೆದಾರರಿಗೆ ಕೊಟ್ಟ ಹೊಸ ಆಯ್ಕೆಗಳು..!

ಕಳೆದ ವರ್ಷದಲ್ಲಿ ವಾಟ್ಸ್ಆಪ್ ಸಾಕಷ್ಟು ಬದಲಾವಣೆಯನ್ನು ಕಂಡಿದ್ದು, ತನ್ನ ಚಹರೆಯನ್ನು ಬದಲಾಯಿಸಿಕೊಂಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬದಲಾದ ವಿಷಯಗಳು ಯಾವುವು ಎನ್ನುವುದನ್ನು ನೋಡುವ.

ಡಿಲೀಟ್ ಎವರಿವನ್:

ಡಿಲೀಟ್ ಎವರಿವನ್:

ನೀವು ಕಳುಹಿಸಿದ ಮೇಸೆಜ್ ಅನ್ನು ಸ್ವೀಕರಿಸಿದವರು ಓದುವುದಕ್ಕೂ ಮುನ್ನವೇ ಡಿಲೀಟ್ ಮಾಡುವ ಅವಕಾಶವನ್ನು ವಾಟ್ಸ್ ಆಪ್ ಮಾಡಿಕೊಟ್ಟಿತ್ತು. ಇಮೇಜ್, ವಿಡಿಯೋ, ಮೇಸೆಜ್ ಯಾವುದನ್ನಾದರು ಡೀಲಿಟ್ ಮಾಡಬಹುದಾಗಿತ್ತು.

ಶೇರ್ ಲೈವ್ ಲೋಕೆಷನ್:

ಶೇರ್ ಲೈವ್ ಲೋಕೆಷನ್:

ನೀವು ಎಲ್ಲಿದ್ದಿರಾ? ಎನ್ನುವ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಲೈವ್ ಆಗಿ ಶೇರ್ ಮಾಡುವ ಅವಕಾಶವನ್ನು ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನೀಡಿತ್ತು. ಇದು ಉತ್ತಮವಾಗಿತ್ತು.

ವಾಟ್ಸ್ ಆಪ್ ಬಿಸ್ನೆಸ್:

ವಾಟ್ಸ್ ಆಪ್ ಬಿಸ್ನೆಸ್:

ವಾಟ್ಸ್ಆಪ್ ಬಿಸ್ನೆಸ್ ಅನ್ನು ಮಾಡುವವರಿಗಾಗಿ ಹೊಸ ವೇದಿಕೆಯನ್ನು ನಿರ್ಮಿಸಿ, ಇದಕ್ಕಾಗಿ ಅಧಿಕೃತ ಖಾತೆಗಳನ್ನು ನೀಡಲು ಮುಂದಾಗಿದ್ದಲ್ಲದೇ, ಹೊಸ ಆಪ್ ಅನ್ನೇ ಬಿಡುಗಡೆ ಮಾಡಿತ್ತು.

How to save WhatsApp Status other than taking screenshots!! Kannada
ವಾಟ್ಸ್ ಆಪ್ ಸ್ಟೆಟಸ್:

ವಾಟ್ಸ್ ಆಪ್ ಸ್ಟೆಟಸ್:

ಒಂದು ದಿನದ ಬಳಕಗೆ ವಾಟ್ಸ್ಆಪ್ ನಲ್ಲಿ ವಿಡಿಯೋ, ಟೆಕ್ಸ್ಟ್, ಜಿಫ್, ಇಮೇಜ್ ಗಳನ್ನು ಸ್ಟೆಟಸ್ ಆಗಿ ಬಳಕೆ ಮಾಡಿಕೊಳ್ಳುವ ಹೊಸ ಅವಕಾಶವನ್ನು ವಾಟ್ಸ್ ಆಪ್ ಮಾಡಿಕೊಟ್ಟಿತ್ತು.

ಟು ಸ್ಟೆಪ್ ವೇರಿಫಿಕೇಷನ್:

ಟು ಸ್ಟೆಪ್ ವೇರಿಫಿಕೇಷನ್:

ವಾಟ್ಸ್ ಆಪ್ ಲಾಗ್ ಇನ್ ಆಗುವ ಸಂದರ್ಭದಲ್ಲಿ ಪಾಸ್ ವರ್ಡ್ ನೊಂದಿಗೆ ಓಟಿಪಿಯನ್ನು ನೀಡುವಂತಹ ಸೆಕ್ಯೂರ್ ವ್ಯವಸ್ಥೆಯನ್ನು ವಾಟ್ಸ್ ಆಪ್ ಬಳಕೆದಾರರಿಗೆ ಪರಿಚಯ ಮಾಡಿತ್ತು.

ಮೀಡಿಯಾ ಶೇರಿಂಗ್ ಲಿಮಿಟ್:

ಮೀಡಿಯಾ ಶೇರಿಂಗ್ ಲಿಮಿಟ್:

ಇದಲ್ಲದೇ ಒಟ್ಟಿಗೆ 30 ಪೋಟೋಗಳನ್ನು ಒಮ್ಮೆಗೆ ಶೇರ್ ಮಾಡುವ ಅವಕಾಶವನ್ನು ಮಾಡಿಕೊಟ್ಟು, ಮೀಡಿಯಾ ಶೆರಿಂಗ್ ಲಿಮಿಟ್ ಹೆಚ್ಚು ಮಾಡಿತ್ತು.

ಇನ್ ಆಪ್ ಯೂಟ್ಯೂಬ್:

ಇನ್ ಆಪ್ ಯೂಟ್ಯೂಬ್:

ವಾಟ್ಸ್ ಆಪ್ ಬಳಕೆದಾರರು ತಮ್ಮ ಚಾಟ್ ನಲ್ಲಿಯೂ ಇನ್ ಆಪ್ ಯೂಟ್ಯೂಬ್ ನೋಡುವ ಅವಕಾಶವನ್ನು ವಾಟ್ಸ್ ಆಪ್ ಬಿಡಯಗಡೆ ಮಾಡಿತ್ತು.

ಎಲ್ಲಾ ಫೈಲ್ ಗಳ ಶೇರಿಂಗ್:

ಎಲ್ಲಾ ಫೈಲ್ ಗಳ ಶೇರಿಂಗ್:

100 ಎಂಬಿ ಗಾತ್ರದ ಎಲ್ಲಾ ಮಾದರಿಯ ಫೈಲ್ ಗಳನ್ನು ವಾಟ್ಸ್ ಆಪ್ ಮೂಲಕವೇ ಶೇರ್ ಮಾಡಿಕೊಳ್ಳುವ ಅವಕಾಶವನ್ನು ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಮಾಡಿಕೊಟ್ಟಿತ್ತು.

ಫೋಟೊ ಫೀಲ್ಟರ್:

ಫೋಟೊ ಫೀಲ್ಟರ್:

ಇದಲ್ಲದೇ ಫೋಟೋಗಳನ್ನು ಕಳಿಸುವ ಸಂದರ್ಭದಲ್ಲಿ ಅದನ್ನು ವಾಟ್ಸ್ ಆಪ್ ನಲ್ಲಿಯೇ ಎಡಿಟ್ ಮಾಡಲು ಫೋಟೋ ಫಿಲ್ಟರ್ ಗಳನ್ನು ಬಳಕೆಗೆ ನೀಡಿತ್ತು, ಇದು ಗ್ರಾಹಕರಿಗೆ ಹಿಡಿಸಿತ್ತು.

ಗ್ರೂಪ್ ಆಡ್ಮಿನ್:

ಗ್ರೂಪ್ ಆಡ್ಮಿನ್:

ಸರಕಾರವು ಗ್ರೂಪ್ ಆಡ್ ಮಿನ್ ಗಳನ್ನು ತಪ್ಪಿಗೆ ಹೊಣೆ ಮಾಡುವ ಆದೇಶ ನೀಡಿದ ಹಿನ್ನಲೆಯಲ್ಲಿ ಅವರನ್ನು ರಕ್ಷಿಸಲು ಹಲವಾರು ಹೊಸ ಆಯ್ಕೆಗಳನ್ನು ಗ್ರೂಪ್ ಆಡ್ಮಿನ್ ಗಳಿಗೆ ನೀಡಲಾಯಿತು.

ಚಾಟ್ ಅನುಭವ:

ಚಾಟ್ ಅನುಭವ:

ಇದಲ್ಲದೇ ಚಾಟಿಂಗ್ ಅನುಭವನ್ನು ಉತ್ತಮ ಪಡಿಸಲು ಚಾಟ್ ಪಿನ್ ಆಯ್ಕೆಯನ್ನು ಮಾಡಿಕೊಡಲಾಗಿತ್ತು. ಇದರಿಂದ ಮುಖ್ಯ ವ್ಯಕ್ತಿಗಳ ಚಾಟ್ ಯಾವಗಲು ಮುಂದೆಯೇ ಇರುತ್ತಿತ್ತು. ಅಲ್ಲದೇ ಹೊಸ ಎಮೋಜಿಗಳು ಕಾಣಿಸಿಕೊಂಡಿದ್ದವು.

Best Mobiles in India

English summary
Here are the new features rolled out to WhatsApp in 2017 and those features those have been spotted in the beta versions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+