ಕಿರಿಕಿರಿಯನ್ನು ದೂರ ಮಾಡಿದ ವಾಟ್ಸ್‌ಆಪ್‌ನ ಹೊಸ 5 ವೈಶಿಷ್ಟ್ಯಗಳು!

|

ವಿಶ್ವದ ಅತ್ಯಂತ ಜನಪ್ರಿಯ ಮೆಸೇಂಜಿಂಗ್ ಆಪ್ 'ವಾಟ್ಸ್ಆಪ್' ತನ್ನ ಬಳಕೆದಾರರಿಗೆ ಹಲವು ಬಗೆಯ ಹೊಸ ಆಯ್ಕೆಗಳನ್ನು ನೀಡುತ್ತಲೇ ಇರುತ್ತದೆ. ಇವುಗಳಲ್ಲಿ ಕೆಲವು ಅಪ್‌ಡೇಟ್ ವರ್ಷನ್ ಫೀಚರ್ಸ್ ಆದರೆ, ಇನ್ನು ಕೆಲವು ಫೀಚರ್ಸ್ ಹೊಸದಾಗಿ ಪರಿಚಿತವಾಗಿರುತ್ತದೆ. ಆದರೆ, ಅಪ್‌ಡೇಟ್ ಆದ ಹೊಸ ವೈಶಿಷ್ಟ್ಯಗಳು ಇರುವುದು ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದಿರುವುದೇ ಇಲ್ಲ.

ಕಿರಿಕಿರಿಯನ್ನು ದೂರ ಮಾಡಿದ ವಾಟ್ಸ್‌ಆಪ್‌ನ ಹೊಸ 5 ವೈಶಿಷ್ಟ್ಯಗಳು!

ಅಂತಹ ಅಪ್‌ಡೇಟ್‌ಗಳಲ್ಲಿ ಇನ್ವಿಟೇಷನ್ ಕಿರಿಕಿರಿ, ಫಾರ್ವರ್ಡಿಂಗ್ ಮಾಹಿತಿ, ಪ್ರೊಫೈಲ್‌ ಪಿಕ್ಚರ್ ಸೇವ್, ಸ್ವಯಂಚಾಲಿತ ವಾಯ್ಸ್‌ ಮೆಸೇಜ್ ಮತ್ತು ಗ್ರೂಪ್‌ ಕಾಲ್‌ ಆಯ್ಕೆ ಆಯ್ಕೆಗಳು ಇವೆ . ಈ ಐದು ಆಯ್ಕೆಗಳಿಂದಾಗಿ ವಾಟ್ಸ್ಆಪ್ ಬಳಕೆದಾರರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಲಿದೆ. ಹಾಗಾದರೆ, ಕಿರಿಕಿರಿಯನ್ನು ದೂರ ಮಾಡಿದ ವಾಟ್ಸ್‌ಆಪ್‌ನ ಹೊಸ 5 ವೈಶಿಷ್ಟ್ಯಗಳ ಬಗ್ಗೆ ಮುಂದೆ ತಿಳಿಯಿರಿ.

ವಾಟ್ಸ್ ಆಪ್ ಕರೆಗಳನ್ನು ಹೇಗೆ ರೆಕಾರ್ಡ್ ಮಾಡುವುದು ಗೊತ್ತಾ?
ಗ್ರೂಪ್‌ ಇನ್ವಿಟೇಷನ್ ಕಿರಿಕಿರಿ

ಗ್ರೂಪ್‌ ಇನ್ವಿಟೇಷನ್ ಕಿರಿಕಿರಿ

ಕೆಲವರ ಬಳಿ ನಮ್ಮ ಮೊಬೈಲ್ ನಂಬರ್‌ ಇದ್ದರೆ ನಮ್ಮನ್ನೂ ಸೇರಿಸಿಕೊಂಡು ಒಂದು ಗ್ರೂಪ್‌ ಮಾಡಿಬಿಡುತ್ತಾರೆ. ಆ ಗ್ರೂಪಿನಲ್ಲಿ ನೂರಾರು ಮೆಸೇಜ್‌ಗಳು ಬರುವುದು ಮನಸ್ಸಿಗೆ ಕಿರಿ ಕಿರಿ ಉಂಟಾಗುತ್ತದೆ. ಕಿರಿಕಿರಿಯಿಂದ ಅಂತಹ ಗ್ರೂಪ್‌ಗಳಿಂದ ನೀವು ಹೊರಬಂದರೆ, ಮತ್ತೆ ತಕ್ಷಣವೇ ನಿಮ್ಮನ್ನು ಆಡ್‌ ಮಾಡುತ್ತಾರೆ. ಆದರೆ, ಇನ್ಮುಂದೆ Settings-Account-Privacy-Group ಫೀಚರ್‌ನಿಂದ ಯಾವ ಗ್ರೂಪ್‌ಗೆ ಸೇರಬೇಕು ಎನ್ನುವ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬಹುದು.

ಪ್ರೊಫೈಲ್‌ ಪಿಕ್ಚರ್ ಸೇವ್

ಪ್ರೊಫೈಲ್‌ ಪಿಕ್ಚರ್ ಸೇವ್

ನಿಮ್ಮ ಪ್ರೊಫೈಲ್ ಅನ್ನು ಸುರಕ್ಷಿತಗೊಳಿಸುವ ದೃಷ್ಠಿಯಿಂದ ವಾಟ್ಸ್ಆಪ್ ಮತ್ತೊಂದು ವೈಶಿಷ್ಟ್ಯವನ್ನು ತೆಗೆದುಹಾಕುತ್ತಿದೆ.! ಹೌದು, ಯಾವುದೇ ವಾಟ್ಸ್‌ಆಪ್‌ ಪ್ರೊಫೈಲ್‌ ಪಿಕ್ಚರ್ ಅನ್ನು ಕಾಪಿ ಮಾಡುವ ಅಥವಾ ಮೊಬೈಲ್ ಗ್ಯಾಲರಿಯಲ್ಲಿ ಸೇವ್ ಮಾಡಿಕೊಳ್ಳುವ ಮತ್ತು ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಆಯ್ಕೆ ಸದ್ಯಕ್ಕಿದೆ. ಆದರೆ, ಇತ್ತೀಚಿನ ಆಂಡ್ರಾಯ್ಡ್ ಬೇಟಾ ಅಪ್‌ಡೇಟ್‌ನಲ್ಲಿ ಈ ಆಯ್ಕೆಯನ್ನು ಕೈಬಿಡಲಾಗಿದೆ. ಆದರೆ, ಗ್ರೂಪ್‌ನಲ್ಲಿ ಮಾತ್ರ ಈ ಆಯ್ಕೆ ಲಭ್ಯವಿರಲಿದೆ.

ಫಾರ್ವರ್ಡಿಂಗ್ ಮಾಹಿತಿ!

ಫಾರ್ವರ್ಡಿಂಗ್ ಮಾಹಿತಿ!

ವಾಟ್ಸ್ಆಪ್‌ನಲ್ಲಿ Forwarding Info' and ‘Frequently Forwarded' ಎನ್ನುವ ಎರಡು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ. ಈ ಫೀಚರ್ ಸಹಾಯದಿಂದ ಒಂದು ವಾಟ್ಸ್ಆಪ್ ಮೆಸೆಜ್, ಫೊಟೊ ಅಥವಾ ವಿಡಿಯೋ ಎಷ್ಟು ಬಾರಿ ಫಾರ್ವರ್ಡ್‌ ಮಾಡಲಾಗಿದೆ ಎನ್ನವ ಮಾಹಿತಿಯನ್ನು ನೀಡುತ್ತದೆ. ಒಂದು ವೇಳೆ ಆ ವಿಷಯವು ಪದೇ ಪದೇ ಫಾರ್ವರ್ಡ್‌ ಆಗುತ್ತಿದ್ದರೆ ಅದಕ್ಕೆ Frequently Forwarded ಎಂದು ಸಂದೇಶದವು ಸಂದೇಶದ ಮೇಲ್ಭಾಗದಲ್ಲಿ ಕಾಣುತ್ತದೆ.

ಸ್ವಯಂಚಾಲಿತ ವಾಯ್ಸ್‌ ಮೆಸೇಜ್

ಸ್ವಯಂಚಾಲಿತ ವಾಯ್ಸ್‌ ಮೆಸೇಜ್

ಇತರರು ವಾಟ್ಸ್ಆಪ್ ಮೂಲಕ ಕಳುಹಿಸುವ ವಾಯ್ಸ್‌ ಮೆಸೇಜ್ ಒಂದಕ್ಕಿಂತ ಹೆಚ್ಚಿದ್ದರೆ, ಆಗ ಒಂದು ಮೆಸೇಜ್ ಮುಗಿಯುತ್ತಿದ್ದಂತೆಯೇ ಮತ್ತೊಂದು ಪ್ಲೇ ಆಗುವಂತಹ ಫೀಚರ್ ಬೀಟಾದಲ್ಲಿ ಬಂದಿದೆ. ಈ ಆಯ್ಕೆಯು ಇದುವರೆಗೆ ಆಪಲ್‌ ಫೋನ್‌ಗಳಲ್ಲಿ ಮಾತ್ರವೇ ಲಭ್ಯವಿತ್ತು. ಆದರೆ, ಸ್ವಯಂಚಾಲಿತವಾಗಿ ಒಂದರ ನಂತರ ಒಂದು ವಾಯ್ಸ್ ಮೆಸೆಜ್‌ಗಳನ್ನು ಕೇಳಬಹುದಾದ ಆಯ್ಕೆಯನ್ನು ಇದೀಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಕೂಡ ಪಡೆದುಕೊಂಡಿವೆ.

ಗ್ರೂಪ್‌ ಕಾಲ್‌ ಆಯ್ಕೆ

ಗ್ರೂಪ್‌ ಕಾಲ್‌ ಆಯ್ಕೆ

ಇದೀಗ ವಾಟ್ಸ್ಆಪ್ ಗ್ರೂಪ್‌ ಚಾಟ್‌ನಲ್ಲಿ ಹೊಸ 'Group Call' ಬಟನ್ ಅನ್ನು ನೀಡಲಾಗಿದೆ. ನೀವು ಯಾವುದೇ ಒಂದು ನಿರ್ದಿಷ್ಟ ಗ್ರೂಪ್‌ ಮೇಲೆ ಕ್ಲಿಕ್‌ ಮಾಡಿದರೆ ಮೇಲ್ಭಾಗದಲ್ಲಿ ಅಲ್ಲಿ ಡಯಲ್ ಮಾಡಬಹುದಾದ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಆ ಗ್ರೂಪ್‌ನಲ್ಲಿ ಇರುವ ನಂಬರ್‌ಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ಯಾರಿಗೆ ಕಾಲ್‌ ಮಾಡಬೇಕು ಎಂಬದುನ್ನು ಆಯ್ಕೆ ಮಾಡಬೇಕು. ಆದರೆ, ಸೇವ್ ಆಗಿರುವ ನಂಬರ್‌ಗಳು ಮಾತ್ರವೇ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ.

Best Mobiles in India

English summary
WhatsApp beta for Android received an update recently that has brought three newfeatures to it. These include consecutive voice messages. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X