ಇನ್ಮುಂದೆ KaiOS ಸ್ಟೋರ್‌ನಲ್ಲಿಯೂ ವಾಟ್ಸ್‌ಆಪ್‌ ಲಭ್ಯ..! ಎಲ್ಲ ಫೀಚರ್‌ ಫೋನ್‌ಗಳಲ್ಲೂ ವಾಟ್ಸ್‌ಆಪ್‌..!

By Gizbot Bureau
|

ವಿಶ್ವದ ಪ್ರಸಿದ್ಧ ಇನ್‌ಸ್ಟಾಂಟ್ ಮೆಸೆಂಜಿಂಗ್‌ ಆಪ್‌ ವಾಟ್ಸ್‌ಆಪ್ ಸದ್ಯ KaiOS ಸೇರಿ ಹಲವು ಫೀಚರ್‌ ಫೋನ್‌ಗಳ ಆಪರೇಟಿಂಗ್‌ ಸಿಸ್ಟಮ್‌ಗೆ ಲಭ್ಯವಿದೆ. KaiOS ಮೂಲಕ ಕಾರ್ಯನಿರರ್ವಹಿಸುತ್ತಿರುವ ಜಿಯೋ ಫೋನ್ 2 ಮತ್ತು ನೋಕಿಯಾ 8110 ಫೀಚರ್‌ ಫೋನ್‌ಗಳಿಗೆ ಈಗಾಗಲೇ ವಾಟ್ಸ್‌ಆಪ್‌ ಸೇವೆ ದೊರೆಯುತ್ತಿದೆ. ಇಷ್ಟೇ ಅಲ್ಲದೇ ಅಧಿಕೃತ KaiOS ಸ್ಟೋರ್ ಜಾಗತಿಕವಾಗಿ ವಾಟ್ಸ್‌ಆಪ್‌ನ್ನು ಫೀಚರ್‌ ಫೋನ್‌ಗಳಿಗೆ ನೀಡುತ್ತಿರುವುದು ವಾಟ್ಸ್‌ಆಪ್‌ ಬಳಕೆಯನ್ನು ಹೆಚ್ಚಿಸಿದೆ.

ಇನ್ಮುಂದೆ KaiOS ಸ್ಟೋರ್‌ನಲ್ಲಿಯೂ ವಾಟ್ಸ್‌ಆಪ್‌ ಲಭ್ಯ..!

ಜಾಗತಿಕವಾಗಿ KaiOS ಆಧರಿತ ಮೊಬೈಲ್‌ ಬಳಸುತ್ತಿರುವ ಬಳಕೆದಾರರು ಸದ್ಯ ವಾಟ್ಸ್‌ಆಪ್‌ನ್ನು ಬಳಸಬಹುದು. ಅಧಿಕೃತ KaiOS ಬ್ಲಾಗ್‌ ಪ್ರಕಾರ 512MB ಮತ್ತು 256MB RAM ಹೊಂದಿರುವ ಸಾಧನಗಳಿಗೆ KaiOS ಸ್ಟೋರ್ ಮೂಲಕ ವಾಟ್ಸ್‌ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 2019ರ ತೃತೀಯ ತ್ರೈಮಾಸಿಕದ ವೇಳೆಗೆ ಹೆಚ್ಚಿನ KaiOS ಆಧರಿತ ಸ್ಮಾರ್ಟ್‌ ಫೀಚರ್‌ ಫೋನ್‌ಗಳು ವಾಟ್ಸ್‌ಆಪ್‌ನೊಂದಿಗೆ ಮಾರುಕಟ್ಟೆಗೆ ಕಾಲಿಡಲಿವೆ.

ವಾಟ್ಸ್‌ಆಪ್‌ನ್ನು KaiOS ಪ್ಲಾಟ್‌ಫಾರ್ಮ್‌ಗೆ ತರಲು ಹಾಗೂ ಪ್ರಮುಖ ಸಂವಹನ ಸಾಧನಗಳನ್ನು ಹೆಚ್ಚಿನ ಜನಕ್ಕೆ ವಿಸ್ತರಿಸಲು ನಾವು ರೋಮಾಂಚನಗೊಂಡಿದ್ದೇವೆ. ಇಂಟರ್‌ನೆಟ್‌ ಮತ್ತು ಡಿಜಿಟಲ್ ಸೇವೆಗಳು ಎಲ್ಲರಿಗೂ ದೊರಕಿಸಲು ನಾವು ಪ್ರಯತ್ನಿಸುತ್ತೇವೆ. ಮತ್ತು ಕೈಗೆಟುಕುವ ದರದ ಸ್ಮಾರ್ಟ್ ಫೀಚರ್ ಫೋನ್‌ಗಳಲ್ಲಿ ವಾಟ್ಸ್‌ಆಪ್ ನೀಡುವುದು ಈ ಗುರಿಯತ್ತ ಸಾಗುವ ದೊಡ್ಡ ಕ್ರಮವಾಗಿದೆ. ಬಳಕೆದಾರರು ತಮ್ಮ ಪ್ರೀತಿಪಾತ್ರರು, ಸಮುದಾಯ ಮತ್ತು ಜಗತ್ತಿನ ಇತರರೊಂದಿಗೆ ಸಂಪರ್ಕ ಹೊಂದಲು ಕಾಯಬೇಕಿಲ್ಲ ಎಂದು KaiOS ಟೆಕ್ನಾಲಜೀಸ್‌ನ ಸಿಇಒ ಸೆಬಾಸ್ಟಿಯನ್ ಕೋಡ್‌ವಿಲ್ಲೆ ಹೇಳುತ್ತಾರೆ.

KaiOS ಹೊಂದಿರುವ ಸುಮಾರು 100 ಮಿಲಿಯನ್ ಫೋನ್‌ಗಳನ್ನು 100ಕ್ಕೂ ಹೆಚ್ಚು ದೇಶಗಳಲ್ಲಿ ಬಳಸಲಾಗುತ್ತಿದೆ ಎಂದು ಬ್ಲಾಗ್ ಉಲ್ಲೇಖಿಸಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ನಂತರ ವಿಶ್ವದ ಮೂರನೇ ಅತಿ ಹೆಚ್ಚು ಬಳಕೆಯಾಗುವ ಆಪರೇಟಿಂಗ್ ಸಿಸ್ಟಮ್ ಆಗಿದೆ. ನೋಕಿಯಾ 8110 ಮತ್ತು ಎರಡು ಜಿಯೋ ಫೋನ್‌ಗಳ ಹೊರತಾಗಿ KaiOS ಬೆಂಬಲದೊಂದಿಗೆ ಹಲವು ಫೀಚರ್ ಫೋನ್‌ಗಳು ಕಾರ್ಯನಿರ್ವಹಿಸುತ್ತಿವೆ.

Best Mobiles in India

Read more about:
English summary
WhatsApp Now Available For JioPhone And Other KaiOS Powered Devices

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X