ಬಂದಿದೆ ವಾಟ್ಸ್ಆಪ್ ಹೈಡ್ ಆಯ್ಕೆ...! ಮುಚ್ಚಿಡಿ ಯಾರಿಗೂ ತಿಳಿದ ಹಾಗೆ ಗುಟ್ಟನ್ನು...!
ವಾಟ್ಸ್ಆಪ್ ದಿನಕ್ಕೊಂದು ಹೊಸ ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ. ಇದೇ ಮಾದರಿಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ವಾಟ್ಸ್ಆಪ್ ಬಳಕೆದಾರರ ಸಂಖ್ಯೆಯೂ ಸುಮ್ಮನೇ ಏರಿಕೆಯಾಗುತ್ತಿದೆ. ಇದರಿಂದಾಗಿ ಹೊಸ ಹೊಸ ಆಯ್ಕೆಗಳು ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ನೀಡಿದೆ. ಇಂದಿನ ಹೊಸ ಆಪ್ ಡೇಟ್ ನಲ್ಲಿಯೂ ಬೆಸ್ಟ್ ಆಗಿರುವ ಆಯ್ಕೆಯೊಂದು ಲಭ್ಯವಾಗಿದೆ.

ಈ ಹೊಸ ಆಯ್ಕೆಯಲ್ಲಿ ಬಳಕೆದಾರರಿಗೆ ತಮ್ಮ ವಾಟ್ಸ್ಆಪ್ ನಲ್ಲಿ ಬಂದಿರುವ ಮೀಡಿಯಾವನ್ನು ಅಂದರೆ ಫೋಟೋಗಳನ್ನು, ವಿಡಿಯೋಗಳನ್ನು ಮತ್ತು ಜೀಫ್ ಫೈಲ್ ಗಳನ್ನು ಹೈಡ್ ಮಾಡುವ ಅವಕಾಶವನ್ನು ನೀಡಲಾಗಿದೆ. ಇದರಿಂದಾಗಿ ನಿಮ್ಮ ವಾಟ್ಸ್ಆಪ್ ಮೀಡಿಯಾಗಳು ನಿಮ್ಮನ್ನು ಬಿಟ್ಟು ಬೇರೆಯಾರಿಗೂ ಕಾಣಿಸಿದ ಮಾದರಿಯಲ್ಲಿ ಸ್ಮಾರ್ಟ್ ಫೋನಿನಲ್ಲಿಯೇ ಇರಲಿದೆ. ಯಾರಿಗೂ ತಿಳಿದ ಹಾಗೆ ಗುಟ್ಟನ್ನು ಮುಚ್ಚಿಡಬಹುದಾಗಿದೆ.

ಹೈಡ್ ಮಾಡಿ:
ನಿಮ್ಮ ವಾಟ್ಸ್ಆಪ್ ನಲ್ಲಿ ಬಂದಿರುವ ಎಲ್ಲಾ ಮೀಡಿಯಾಗಳನ್ನು ಹೈಡ್ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಡಲಿದೆ. ಇದರಿಂದಾಗಿ ನಿಮ್ಮ ಸ್ಮಾರ್ಟ್ ಫೋನ್ ತರೆದವರಿಗೆ ಮೀಡಿಯಾದಲ್ಲಿ ವಾಟ್ಸ್ಆಪ್ ವಿಡಿಯೋವಾಗಲಿ, ಫೋಟೋವಾಗಲಿ ಕಾಣಿಸಿಕೊಳ್ಳುವುದೇ ಇಲ್ಲ.

ಒಂದೊಂದು ನಂಬರೆಗೇ ಮಾಡಬಹುದು:
ಇದಲ್ಲದೇ ವಾಟ್ಸ್ಆಪ್ ಮೀಡಿಯಾವನ್ನು ಹೈಡ್ ಮಾಡುವ ಆಯ್ಕೆಯನ್ನು ಒಂದೋಂದೇ ಕಾಂಟೆಕ್ಟಿಗೆ ಸಹ ಬಳಕೆ ಮಾಡಬಹುದಾಗಿದೆ. ನಿಮ್ಮ ಸ್ನೇಹಿತರೊಬ್ಬರ ವಾಟ್ಸ್ಆಪ್ ಖಾತೆಯನ್ನು ಮಾತ್ರವೇ ಹೈಡ್ ಮಾಡುವ ಅವಕಾಶವನ್ನು ಕಾಣಬಹುದಾಗಿದೆ. ಅಲ್ಲದೇ ಶೋ-ಹೈಡ್ ಎರಡು ಆಯ್ಕೆಯೂ ಕಾಣಿಸಿಕೊಂಡಿದೆ.

ಆಯ್ಕೆ ಹೇಗೆ..?
ಮೀಡಿಯಾ ಡೌನ್ ಲೋಡ್ ಮಾಡಬೇಕೆ ಎನ್ನುವ ಆಯ್ಕೆಯೊಂದನ್ನು ವಾಟ್ಸ್ಆಪ್ ನೀಡಿದ್ದು, ಡಿಫಾಲ್ಟ್ ಅನ್ನು ಸೆಲೆಕ್ಟ್ ಮಾಡಿದರೆ ಯೆಸ್ ಎನ್ನುವ ಆಯ್ಕೆಯೂ ಇರಲಿದೆ. ಅಲ್ಲದೇ ಇದೊಂದಿಗೆ ಯೆಸ್ ಆರ್ ನೋ ಎನ್ನುವ ಎರಡು ಆಯ್ಕಯು ಕಾಣಿಸಿಕೊಳ್ಳಲಿದೆ. ಇದರಲ್ಲಿ ನಿಮಗೆ ಬೇಕಾದನ್ನು ಆಯ್ಕೆ ಮಾಡಿಕೊಳ್ಳಬಹುದು.

ಮಾಡುವುದು ಹೇಗೆ..?
ಇದಕ್ಕಾಗಿ ನೀವು ವಾಟ್ಸ್ಆಪ್ ಸೆಟ್ಟಿಂಗ್ಸ್ ನಲ್ಲಿ ಚಾಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ಹೊಸ ಆಯ್ಕೆಯೂ ಕಾಣಿಸಿಕೊಳ್ಳಲಿದೆ. ಅದಲ್ಲಿ ನೀವು ಮೀಡಿಯಾ ವಿಸಿಬಲಿಟಿ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಉತ್ತಮ ಆಯ್ಕೆ:
ಇದರಿಂದಾಗಿ ನಿಮ್ಮ ಪ್ರೈವಸಿಯೂ ಉಳಿದುಕೊಳ್ಳಲಿದೆ. ಅಲ್ಲದೇ ಸ್ಮಾರ್ಟ್ ಫೋನಿನಲ್ಲಿ ಹೆಚ್ಚಿನ ಜಾಗವೂ ಸೇವ್ ಆಗಲಿದೆ. ಅಲ್ಲದೇ ಬಳಕೆದಾರರಿಗೆ ಮಾಹಿತಿಯನ್ನು ಹೈಡ್ ಮಾಡುವುದು ಸುಲಭವಾಗಲಿದೆ. ಬಳಕೆದಾರರಿಗೆ ಇದರಿಂದ ಹೆಚ್ಚಿನ ಲಾಭವಾಗುವುದು ಖಂಡಿತ.


Click it and Unblock the Notifications



