ಕಾಣೆಯಾಗುತ್ತಿರುವ ವಾಟ್ಸ್ ಆಪ್ ಚಾಟ್ ಎಲ್ಲಿ ಹೋಯ್ತು?

|

ಯಶಸ್ಸು ಮತ್ತು ಪ್ರಸಿದ್ಧತೆಯ ಜೊತೆಜೊತೆಗೆ ಒಂದಷ್ಟು ಸಮಸ್ಯೆಗಳು ಕೂಡ ಹುಟ್ಟಿಕೊಳ್ಳುತ್ತವೆ- ಇದನ್ನು ಸದ್ಯದ ಮಟ್ಟಿಗೆ ವಾಟ್ಸ್ ಆಪ್ ನ ಪ್ರಸಿದ್ಧತೆಗೆ ಹೋಲಿಸಿದರೆ ಸರಿಯಾಗಿ ಹೊಂದುತ್ತದೆ ಅನ್ನಿಸುತ್ತದೆ. ಹೌದು ವಾಟ್ಸ್ ಆಪ್ ಮೆಸೇಜಿಂಗ್ ಫ್ಲ್ಯಾಟ್ ಫಾರ್ಮ್ ದಿನದಿಂದ ದಿನಕ್ಕೆ ತನ್ನ ಪ್ರಸಿದ್ಧತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ ಮತ್ತು ಅದೇ ಕಾರಣಕ್ಕೆ ವಾಟ್ಸ್ ಆಪ್ ನಲ್ಲಿ ಹೊಸ ಹೊಸ ಫೀಚರ್ ಗಳನ್ನು ಸೇರಿಸಲಾಗುತ್ತಿದೆ.

ಸಮಸ್ಯೆಗಳು:

ಸಮಸ್ಯೆಗಳು:

ಈ ರೀತಿಯ ಬದಲಾವಣೆಗಳು ವಾಟ್ಸ್ ಆಪ್ ನಲ್ಲಿ ಕೆಲವು ಕೆಟ್ಟ ಮೆಸೇಜ್ ಗಳಿಗೆ, ಸ್ಕ್ಯಾಮ್ , ಬಗ್ಸ್ ಮತ್ತು ಆಪ್ ನ ಕೆಲವು ಸಮಸ್ಯೆಗಳಿಗೂ ಕಾರಣವಾಗಿದೆ. ಇತ್ತೀಚೆಗೆ ಕಾಣಿಸಿಕೊಂಡ ಹೊಸ ಬಗ್ ಎಂದರೆ ಕೆಲವು ಬಳಕೆದಾರರು ತಮ್ಮ ವಾಟ್ಸ್ ಆಪ್ ಮೆಸೇಜ್ ಗಳು ಇದ್ದಕ್ಕಿದ್ದಂತೆ ಕಾಣೆಯಾಗಿರುವುದರ ಬಗ್ಗೆ ವರದಿ ಮಾಡಿದ್ದರು.

ವಾಬೇಟಾಇನ್ಫೋದಲ್ಲೂ ಪ್ರಕಟ:

ವಾಬೇಟಾಇನ್ಫೋದಲ್ಲೂ ಪ್ರಕಟ:

ವಾಟ್ಸ್ ಆಪ್ ಬಳಕೆದಾರರಾಗಿರುವ ಭರತ್ ಮಿಶ್ರಾ ತಮ್ಮ ವಾಟ್ಸ್ ಆಪ್ ಮೆಸೇಜ್ ಗಳು ಕಾಣೆಯಾಗುತ್ತಿರುವುದರ ಬಗ್ಗೆ ಹಲವು ಬ್ಲಾಗ್ ಗಳಲ್ಲಿ ಮತ್ತು ಪೋರ್ಟಲ್ ಗಳಲ್ಲಿ ತಿಳಿಸಿದ್ದಾರೆ. ಇವರ ಪೋಸ್ಟ್ ನ್ನು ವಾಬೇಟಾಇನ್ಫೋದಲ್ಲೂ ಕೂಡ ಹಂಚಿಕೊಳ್ಳಲಾಗಿದೆ. ಅವರು ತಿಳಿಸಿರುವಂತೆ ಪ್ರತಿದಿನ ಬೆಳಿಗ್ಗೆ ಅವರ ಮೊಟೋ ಜಿ4 ಪ್ಲಸ್ ಸ್ಮಾರ್ಟ್ ಫೋನಿನ ವಾಟ್ಸ್ ಆಪ್ ನಿಂದ ಒಂದು ಅಥವಾ ಎರಡು ಮೆಸೇಜ್ ಗಳು ಇದಕ್ಕಿದ್ದಂತೆ ಕಾಣೆಯಾಗಿರುತ್ತದೆಯಂತೆ!

ಭರತ್ ಮಿಶ್ರಾ ಹೇಳಿಕೆ:

ಭರತ್ ಮಿಶ್ರಾ ಹೇಳಿಕೆ:

"ಕಳೆದ ತಿಂಗಳಿನಿಂದ ಚಾಟ್ ಹಿಸ್ಟರಿ ಅಚಾನಕ್ ಆಗಿ ಕಾಣೆಯಾಗುತ್ತಿತ್ತು. ಇದೀಗ ಟ್ರೆಂಡ್ ಬದಲಾಗಿದೆ. ಪ್ರತಿದಿನ ಬೆಳಿಗ್ಗೆ ನಾನು ಒಂದು ಅಥವಾ ಎರಡು ಚಾಟ್ ಹಿಸ್ಟರಿ ಕಾಣೆಯಾಗುತ್ತಿರುವುದನ್ನು ನಾನು ಗಮನಿಸುತ್ತಿದ್ದೇನೆ. ನಾನು ಮೋಟೋ ಜಿ4 ಪ್ಲಸ್ ಮೊಬೈಲ್ ನ್ನು ಬಳಸುತ್ತಿದ್ದೇನೆ ಮತ್ತು ಇತ್ತೀಚೆಗೆ ಗೂಗಲ್ ಹುಡುಕಾಟದಿಂದಾಗಿ ಇಂತಹ ಸಮಸ್ಯೆಯನ್ನು ಇನ್ನೂ ಹಲವರು ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.ಆಶ್ಚರ್ಯವೆಂದರೆ ಈ ಸಮಸ್ಯೆಯ ಬಗ್ಗೆ ವಾಟ್ಸ್ ಆಪ್ ಯಾವುದೇ ಪ್ರತ್ಯುತ್ತರವನ್ನೂ ನೀಡಿಲ್ಲ ನಾನು ಸುಮಾರು 25 ಕ್ಕೂ ಹೆಚ್ಚು ಬಾರಿ ಅವರ ಸಪೋರ್ಟ್ ಟೀಮ್ ಗೆ ಇಮೇಲ್ ಕಳುಹಿಸಿದ್ದೇನೆ. ನಾನು ಆಪ್ ನ್ನು ಸುಮಾರು ಐದು ಬಾರಿ ರಿಇನ್ಸ್ಟಾಲ್ ಮಾಡಿದ್ದೇನೆ ಮತ್ತು ನನ್ನ ಮೊಬೈಲ್ ನ್ನು ಕೂಡ ರಿಸೆಟ್ ಮಾಡಿದ್ದೇನೆ ಆದರೂ ಏನೂ ಬದಲಾಗಲಿಲ್ಲ. ನಾನು ಆಂಟಿವೈರಸ್ ಬಳಸುವುದನ್ನು ನಿಲ್ಲಿಸಿದೆ ಮತ್ತು ಯಾವುದೇ ಗೊಂದಲವಾಗಬಾರದು ಅಂತ ಆಪ್ ಕ್ಲೀನಿಂಗ್ ನ್ನು ಕೂಡ ನಿಲ್ಲಿಸಿದೆ" ಎಂದು ಅವರು ತಿಳಿಸಿದ್ದಾರೆ.

ಮತ್ತೊಬ್ಬಾಕೆಗೂ ಇದೇ ಸಮಸ್ಯೆ:

ಮತ್ತೊಬ್ಬಾಕೆಗೂ ಇದೇ ಸಮಸ್ಯೆ:

ಇದೇ ರೀತಿಯ ಸಮಸ್ಯೆಯನ್ನು ಅಕ್ಟೋಬರ್ ನಲ್ಲಿ ಮತ್ತೊಬ್ಬ ವಾಟ್ಸ್ ಆಪ್ ಬಳಕೆದಾರರು ವರದಿ ಮಾಡಿದ್ದರು.ಆಕೆ ಎಪ್ರಿಲ್ ನಿಂದ ಈ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಹೇಳಿದ್ದರು ಮತ್ತು ವಾಟ್ಸ್ ಆಪ್ ಗೆ ಈ ನಿಟ್ಟಿನಲ್ಲಿ ದೂರ ನೀಡಿದ್ದರೂ ಕೂಡ ಯಾವುದೇ ಪ್ರತ್ಯುತ್ತರ ಬಂದಿಲ್ಲ ಎಂಬುದನ್ನೂ ಆಕೆ ತಿಳಿಸಿದ್ದರು.

ಕಾರಣವೇನಿರಬಹುದು ?

ಕಾರಣವೇನಿರಬಹುದು ?

ನಾವೀಗ ಊಹೆ ಮಾಡುತ್ತಿರುವಂತೆ ಬಳಕೆದಾರರು ತಮ್ಮ ಚಾಟ್ ಗಳನ್ನು ಗೂಗಲ್ ಡ್ರೈವ್ ಲನ್ಲಿ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳದೇ ಇದ್ದಲ್ಲಿ ಅವರ ಹಳೆಯ ಚಾಟ್ ಗಳು ಡಿಲೀಟ್ ಆಗುತ್ತವೆ. ವಾಟ್ಸ್ ಆಪ್ ಕಳೆದ ವರ್ಷದ ಅಗಸ್ಟ್ ನಲ್ಲಿ ಗೂಗಲ್ ಜೊತೆಗೆ ಕೈಜೋಡಿಸಿದ್ದು ಆಪ್ ನ ಬ್ಯಾಕ್ ಅಪ್ ನ್ನು ಗೂಗಲ್ ಡ್ರೈವ್ ಅಕೌಂಟ್ ಗೆ ಸೇವ್ ಮಾಡಿದರೆ ಅದು ಸ್ಟೋರೇಜ್ ಗೆ ಲೆಕ್ಕಕ್ಕೆ ಬರುವುದಿಲ್ಲ.

ಒಂದು ವೇಳೆ ನೀವು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳದೇ ಇದ್ದಲ್ಲಿ ಒಂದು ವರ್ಷದಲ್ಲಿ ಗೂಗಲ್ ಡ್ರೈವ್ ಸ್ಟೋರೇಜ್ ನಿಂದ ಚಾಟ್ ಗಳು ಸ್ವಯಂಚಾಲಿತವಾಗಿ ರಿಮೂವ್ ಆಗುತ್ತದೆ ಎಂಬುದನ್ನು ತಿಳಿಸಿತ್ತು. ಬಳಕೆದಾರರು ತಮ್ಮ ಚಾಟ್ ಹಿಸ್ಟರಿಯನ್ನು ಕಳೆದುಕೊಳ್ಳುತ್ತಿರುವುದಕ್ಕೆ ಇದೂ ಕೂಡ ಒಂದು ಕಾರಣವಾಗಿರುವ ಸಾಧ್ಯತೆ ಇದೆ. ಬಗ್ಸ್ ಕೂಡ ಇನ್ನೊಂದು ಸಾಧ್ಯತೆ ಆಗಿರಬಹುದು ಎಂದು ಊಹಿಸಲಾಗುತ್ತಿದೆ.

ಡಾಟಾ ಬ್ಯಾಕ್ ಅಪ್ ತೆಗೆದುಕೊಳ್ಳುವುದು ಹೇಗೆ?

ಡಾಟಾ ಬ್ಯಾಕ್ ಅಪ್ ತೆಗೆದುಕೊಳ್ಳುವುದು ಹೇಗೆ?

ವಾಟ್ಸ್ ಆಪ್ ನಿಮ್ಮ ಎಲ್ಲಾ ಡಾಟಾವನ್ನು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳುವುದಕ್ಕೆ ನೆರವು ನೀಡುತ್ತದೆ ಆ ಮೂಲಕ ನೀವು ಗೂಗಲ್ ಡ್ರೈವ್ ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಬಹುದು ಮತ್ತು ಅದನ್ನು ಇನ್ನೊಂದು ಡಿವೈಸ್ ಗೆ ಸುಲಭದಲ್ಲಿ ಟ್ರಾನ್ಸ್ಫರ್ ಕೂಡ ಮಾಡಬಹುದು. ವಾಟ್ಸ್ ಆಪ್ ಬ್ಯಾಕ್ ಅಪ್ ತೆಗೆದುಕೊಳ್ಳುವುದಕ್ಕೆ ಹೀಗೆ ಮಾಡಿ ಮೆನು ಐಕಾನ್>ಸೆಟ್ಟಿಂಗ್ಸ್> ಚಾಟ್ಸ್> ಚಾಟ್ ಬ್ಯಾಕ್ಅಪ್ > ಗೂಗಲ್ ಡ್ರೈವ್ ಗೆ ಬ್ಯಾಕ್ ಆಪ್ > ನೆವರ್ ನ್ನು ಹೊರತುಪಡಿಸಿ ಯಾವುದೇ ಬ್ಯಾಕ್ ಅಪ್ ಫ್ರೀಕ್ವೆನ್ಸಿಯನ್ನು ಆಯ್ಕೆ ಮಾಡಿ> ಗೂಗಲ್ ಅಕೌಂಟ್ ನ್ನು ಆಯ್ಕೆ ಮಾಡಿ ಅಂದರೆ ನೀವೆಲ್ಲಿ ನಿಮ್ಮ ಚಾಟ್ ಹಿಸ್ಟರಿಯನ್ನು ಸೇವ್ ಮಾಡಬೇಕು ಎಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿ ಮತ್ತು ಮುಂದಿನ ಎಲ್ಲಾ ಮಾಹಿತಿಗಳನ್ನು ಅನುಸರಿಸುತ್ತಾ ಸಾಗಿದರೆ ನಿಮ್ಮ ಡಾಟಾ ಬ್ಯಾಕ್ ಅಪ್ ಆಗುತ್ತದೆ.


Best Mobiles in India

English summary
WhatsApp old chats are mysteriously disappearing and this could be the reason why

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X