Subscribe to Gizbot

ಅಂತೂ ಇಂತೂ ಬಂತು 'ವಾಟ್ಸ್ಆಪ್' ಪೇಮೆಂಟ್ ಆಪ್!..ಅದ್ಬುತವಾಗಿದೆ ಹೊಸ ಸೇವೆ!!

Written By:

ಇಲ್ಲಿಯವರೆಗೂ ವದಂತಿಯಾಗಿಯೇ ಉಳಿದಿದ್ದ ವಾಟ್ಸ್ಆಪ್ ಪೇಮೆಂಟ್ ಸೇವೆಯ ಸುದ್ದಿ ಅಂತೂ ಇಂತೂ ನಿಜವಾಗಿದೆ.!! ಯುಪಿಐ ಮತ್ತು ಫೋನ್ ನಂಬರ್ ಬಳಸಿ ಹಣ ವಿನಿಮಯ ಮಾಡಬಹುದಾದ ಆಯ್ಕೆಯನ್ನು ವಾಟ್ಸ್ಆಪ್ ಬೀಟಾ ವರ್ಷನ್ ನಲ್ಲಿ ಈಗಾಗಲೇ ತರಲಾಗಿದೆ ಎಂದು ವರದಿಯಾಗಿದೆ.!!

ಹೌದು, ಭಾರತದಲ್ಲಿಯೇ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಮೆಸೇಜಿಂಗ್ ಆಪ್ ಇದೀಗ ವಾಟ್ಸ್ಆಪ್ ಪೇ ಆಪ್ ಆಗಿಯೂ ಬದಲಾಗಿದೆ. ತನ್ನ ಹತ್ತಿರದವರ ಜೊತೆ ಸಂದೇಶ ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ಹಣವನ್ನು ವಿನಮಯ ಮಾಡುವ ಆಯ್ಕೆ ಬಳಕೆದಾರರಿಗೆ ಈ ಫೆಬ್ರವರಿಯಿಂದಲೇ ಸಿಗಲಿದೆ ಎಂದು ತಿಳಿದುಬಂದಿದೆ.!!

ಅಂತೂ ಇಂತೂ ಬಂತು 'ವಾಟ್ಸ್ಆಪ್' ಪೇಮೆಂಟ್ ಆಪ್!..ಅದ್ಬುತವಾಗಿದೆ ಹೊಸ ಸೇವೆ!!

ಗೂಗಲ್‌ನ ತೇಜ್ ಆಪ್‌ಗೆ ಸೆಡ್ಡು ಹೊಡೆಯುವ ಸಲುವಾಗಿ ವಾಟ್ಸ್ಆಪ್ ಪೇಮೆಂಟ್ ಸೇವೆ ಹೊರಬರುತ್ತಿದ್ದು, ಈಗಾಗಲೇ ಇರುವ ತನ್ನ ಬಳಕೆದಾರರನ್ನೇ ಗ್ರಾಹಕರನ್ನಾಗಿ ಮಾಡಿಕೊಳ್ಳಲು ವಾಟ್ಸ್ಆಪ್ ಮುಂದಾಗಿದೆ.! ಹಾಗಾದರೆ, ವಾಟ್ಸ್ಆಪ್ ಪೇಮೆಂಟ್ ಸೇವೆ ಹೇಗಿರಲಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೀಟಾಹಂತದಲ್ಲಿ 'ವಾಟ್ಸ್ಆಪ್' ಪೇಮೆಂಟ್!!

ಬೀಟಾಹಂತದಲ್ಲಿ 'ವಾಟ್ಸ್ಆಪ್' ಪೇಮೆಂಟ್!!

'ವಾಟ್ಸ್ಆಪ್ ಪೇ' ಪ್ಲಾಟ್‌ಫಾರ್ಮ್ ಈಗಾಗಲೇ ಬೀಟಾ (ಪರೀಕ್ಷೆ) ಹಂತದಲ್ಲಿದೆ. ಪೇಮೆಂಟ್ ಸೇವೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಆಧರಿಸಿ ಫೆಬ್ರವರಿ ಅಂತ್ಯದ ವೇಳೆಗೆ ಪೇಮೆಂಟ್ ಸೇವೆಯನ್ನು ಗ್ರಾಹಕರಿಗೆ ಪರಿಚಯಿಸಲು ತೀರ್ಮಾನಿಸಿರುವುದಾಗಿ ವಾಟ್ಸ್ಆಪ್ ಪ್ರಕಟಣೆಯಲ್ಲಿ ಹೇಳಲಾಗಿದೆ.!!

(ಯುಪಿಐ) ಆಧಾರಿತ ಪಾವತಿ!!

(ಯುಪಿಐ) ಆಧಾರಿತ ಪಾವತಿ!!

ಜನಪ್ರಿಯ ಮೆಸೇಜಿಂಗ್ ಅಪ್ ವಾಟ್ಸ್ಆಪ್ ಏಕೀಕೃತ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತ ಪಾವತಿಯನ್ನು ಅಳವಡಿಸಿಕೊಂಡಿದೆ. ಆಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳೊಂದಿಗೆ ವಾಟ್ಸ್‌ಆಪ್ ಸಹಭಾಗಿತ್ವವನ್ನು ಹೊಂದಿದೆ.!!

ನೆಟ್‌ವರ್ಕ್ ಇಲ್ಲದೆಯೂ ಸಂಪರ್ಕ!!

ನೆಟ್‌ವರ್ಕ್ ಇಲ್ಲದೆಯೂ ಸಂಪರ್ಕ!!

'ವಾಟ್ಸ್ಆಪ್' ಪೇಮೆಂಟ್ ಪ್ಲಾಟ್‌ಫಾರ್ಮ್ ಮೂಲಕ ಸಮೀಪದ ಮೊಬೈಲ್‌ ಫೋನ್‌ ಜತೆಗೆ ಸಂಪರ್ಕ ಸಾಧಿಸಿ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ.! ಮೈಕ್ರೋಫೋನ್ ಮತ್ತು ಸ್ಪೀಕರ್‌ ಮುಖಾಂತರ ಅಲ್ಟ್ರಾಸೌಂಡ್ ಕಿರಣಗಳನ್ನು ಬಳಸಿ ಹತ್ತಿರದ ಫೋನ್‌ ಜತೆಯೂ ಆಪ್ ಸಂಪರ್ಕ ಸಾಧಿಸಲಿದೆ ಎಂದು ಹೇಳಲಾಗಿದೆ..!!

TEZ App : ಗೂಗಲ್ ಭಾರತೀಯರಿಗಾಗಿ ಗೂಗಲ್‌ನಿಂದ Tez ಪೇಮೆಂಟ್ ಆಪ್
ಪೇಮೆಂಟ್ ಮಾಡುವುದು ಹೇಗೆ?

ಪೇಮೆಂಟ್ ಮಾಡುವುದು ಹೇಗೆ?

ವಾಟ್ಸ್‌ಆಪ್ ನೀಡಿರುವ ಮಾಹಿತಿಯಂತೆ ನೀವು ವಾಟ್ಸ್ಆಪ್ ಬಳಕೆ ಮಾಡುತ್ತಿರುವ ಮೊಬೈಲ್‌ ಸಂಖ್ಯೆಯು ನಿಮ್ಮ ಬ್ಯಾಂಕ್‌ ಖಾತೆಯೊಂದಿಗೆ ಸಂಪರ್ಕಿಸಿರಬೇಕು.!! ವಾಟ್ಸ್ಆಪ್‌ನಲ್ಲಿ ಪೇಮೆಂಟ್‌ಗಾಗಿಯೇ ಹೆಚ್ಚುವರಿ ಆಯ್ಕೆಯನ್ನು (ರೂಪಾಯಿ ಚಿಹ್ನೆ ಎನ್ನಲಾಗಿದೆ) ನೀಡಲಾಗಿದ್ದು, ಎಲ್ಲಿ ಯುಪಿಐ ಐಡಿ ನೀಡಿ ಹಣ ವಿನಿಮಯ ಮಾಡಬಹುದು.!!

ಕನ್ನಡದಲ್ಲಿಯೂ ಪೇಮೆಂಟ್ ಸೇವೆ!!

ಕನ್ನಡದಲ್ಲಿಯೂ ಪೇಮೆಂಟ್ ಸೇವೆ!!

Tez ಆಪ್‌ನಂತೆ 'ವಾಟ್ಸ್ಆಪ್' ಪೇಮೆಂಟ್ ಪ್ಲಾಟ್‌ಫಾರ್ಮ್ ಕೂಡ ಕನ್ನಡ, ಇಂಗ್ಲಿಷ್‌, ಹಿಂದಿ, ಬೆಂಗಾಲಿ, ಗುಜರಾತಿ, ಮರಾಠಿ, ತೆಲುಗು ಹಾಗೂ ತಮಿಳು ಸೇರಿ ಎಂಟು ಭಾಷೆಗಳಲ್ಲಿ ಬರುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ, ವಾಟ್ಸ್ಆಪ್ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಈವರೆಗೂ ನೀಡಿಲ್ಲ.!!

ಓದಿರಿ:ಜಿಯೋ ಗ್ರಾಹಕರ ಹುಡುಗಾಟ!..ಮಾಲಿಕ ಅಂಬಾನಿಗೆ ಕೊರಗು!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
WhatsApp is long rumoured to be working on adding a payment feature within the app, but the precise launch date still remains a mystery. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot