ಎಲ್ಲಾ ಪೇಮೆಂಟ್ ಆಪ್ ಗಿಂತ ಬೆಸ್ಟ್ ಆಗಲಿದೆಯಾ ವಾಟ್ಸ್ ಆಪ್ ಪೇಮೆಂಟ್?

By Gizbot Bureau
|

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ತನ್ನ 300 ಮಿಲಿಯನ್ ಬಳಕೆದಾರರಿಗೆ ಯುಪಿಐ ಆಧಾರಿತ ಪಾವತಿ ಸೇವೆಯನ್ನು ಬಿಡುಗಡೆಗೊಳಿಸುವುದಕ್ಕೆ ಸಿದ್ಧವಾಗಿದೆ. ಅದರಲ್ಲೂ ಪ್ರಮುಖವಾಗಿ ಭಾರತದಲ್ಲಿರುವ ಸಣ್ಣ ಮತ್ತು ಮಧ್ಯಮ ವ್ಯಾಪಾರಸ್ಥರಿಗಾಗಿ ಈ ವರ್ಷದ ಅಂತ್ಯದ ಸಂದರ್ಬದಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂದು ಗ್ಲೋಬಲ್ ಹೆಡ್ ವಿಲ್ ಕ್ಯಾಚ್ ಕಾರ್ಟ್ ಪ್ರಕಟಿಸಿದ್ದಾರೆ.

ಟೆಸ್ಟ್ ರನ್ ಈಗಾಗಲೇ ಆರಂಭ:

ಟೆಸ್ಟ್ ರನ್ ಈಗಾಗಲೇ ಆರಂಭ:

ಕಳೆದ ವರ್ಷವೇ ವಾಟ್ಸ್ ಆಪ್ ದೇಶದಲ್ಲಿ ತನ್ನ ಪಾವತಿ ಸೇವೆಯ ಟೆಸ್ಟ್ ರನ್ ನ್ನು ಸುಮಾರು 100 ಮಿಲಿಯನ್ ಬಳಕೆದಾರರಲ್ಲಿ ಪ್ರಾರಂಭಿಸಿದೆ. ಆದರೆ ಅದು ಡಿಜಿಟಲ್ ಪಾವತಿ ಫ್ರೇಮ್ ವರ್ಕ್ ನ ಗೈಡ್ ಲೈನ್ ನಲ್ಲಿ ಸ್ಥಗಿತವಾಗಿದೆ. ಇದೀಗ ಸೇವೆಯು ಅಂತಿಮ ಹಂತದಲ್ಲಿದೆ.

ನಿಯಮಗಳ ಪೂರೈಕೆ:

ನಿಯಮಗಳ ಪೂರೈಕೆ:

ಭಾರತದಲ್ಲಿ ಡಿಜಿಟಲ್ ಸೇವೆಯನ್ನು ಹೆಚ್ಚಿಸುವುದಕ್ಕಾಗಿ ದೇಶದಲ್ಲಿ ಈ ವರ್ಷಾಂತ್ಯದಲ್ಲಿ ನಾವು ಪಾವತಿ ಸೇವೆಯನ್ನು ದೇಶದಾದ್ಯಂತ ಬಿಡುಗಡೆಗೊಳಿಸಲಾಗುತ್ತದೆ. ಅದಕ್ಕಾಗಿ ಕೆಲವು ನಿಯಮಾವಳಿಗಳ ಪೂರೈಕೆಗಾಗಿ ಕಾಯಲಾಗುತ್ತಿದೆ ಎಂದು ಕ್ಯಾಚ್ ಕಾರ್ಟ್ ಹೇಳಿದ್ದಾರೆ.2023ರ ವೇಳೆಗೆ 1 ಟ್ರಿಲಿಯನ್ ಮಂದಿಗೆ ಇದು ತಲುಪುವ ಉದ್ದೇಶವನ್ನು ಹೊಂದಲಾಗಿದೆ.

ಸಣ್ಣ ಮತ್ತು ಮಧ್ಯಮ ಬ್ಯುಸಿನೆಸ್ ನವರಿಗೆ ಅನುಕೂಲ:

ಸಣ್ಣ ಮತ್ತು ಮಧ್ಯಮ ಬ್ಯುಸಿನೆಸ್ ನವರಿಗೆ ಅನುಕೂಲ:

ಒಮಿಡ್ಯಾರ್ ನೆಟ್ ವರ್ಕ್ ಮತ್ತು ಬೂಸ್ಟನ್ ಕನ್ಸಲಿಂಗ್ ಗ್ರೂಪ್(ಬಿಸಿಜಿ) ವರದಿಯ ಪ್ರಕಾರ ವಾಟ್ಸ್ ಆಪ್ ಪಾವತಿ ಆಯ್ಕೆ ಬಿಡುಗಡೆಗೊಂಡ ನಂತರ ವಾರ್ಷಿಕ ಮೂರು ಲಕ್ಷದಿಂದ ಮತ್ತು 75 ಕೋಟಿ ವರೆಗಿನ ಬ್ಯುಸಿನೆಸ್ ಹೊಂದಿರುವ ಎಮ್ಎಸ್ಎಂಮಿ ಮಾಲೀಕರು ವಾಟ್ಸ್ ಆಪ್ ಪಾವತಿ ಆಯ್ಕೆಯನ್ನು ಬಳಸಲು ಸಾಧ್ಯವಾಗುತ್ತದೆ .

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಎನ್ಐಟಿಐನ ಸಿಇಓ ಆಗಿರುವ ಅಮಿತಾಬ್ ಕಾಂತ್ ಅವರು ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಭಾರತದಲ್ಲಿ ಬಿಡುಗಡೆಗೊಳ್ಳುವುದು ನಿಧಾನವಾಗಿದೆ. ಯಾಕೆಂದರೆ ಭಾರತದಲ್ಲಿ ಕೆಲವು ನಿಯಂತ್ರಕ ಅವಶ್ಯಕತೆಗಳು ಪೂರೈಕೆಯಾದ ಕೂಡಲೇ ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಸಂಚಲನ:

ಭಾರತದಲ್ಲಿ ಸಂಚಲನ:

ಡಿಜಿಟಲ್ ಸೇವೆಯಲ್ಲಿ ಸಣ್ಣ ಮತ್ತು ಮಧ್ಯಮ ಬ್ಯುಸಿನೆಸ್ ಹೊಂದಿರುವವರಿಗೆ ವಾಟ್ಸ್ ಆಪ್ ಪಾವತಿ ಆಯ್ಕೆಯು

ದೊಡ್ಡ ಅವಕಾಶವನ್ನು ಒದಗಿಸಿಕೊಡುತ್ತದೆ.ಪಾವತಿ ಎಕೋಸಿಸ್ಟಮ್ ನಲ್ಲಿ ವಾಟ್ಸ್ ಆಪ್ ಪಾವತಿಯು ಹೊಸ ಶಕೆಯನ್ನು ಪ್ರಾರಂಭಿಸಲಿದೆ ಎಂದು ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್ ಮತ್ತು ಸೈಬರ್ ಮೀಡಿಯಾ ರೀಸರ್ಚ್ ನ ಮುಖ್ಯಸ್ಥರು ಆಗಿರುವ ಪ್ರಭು ರಾಮ್ ತಿಳಿಸಿದ್ದಾರೆ.

ವಾಟ್ಸ್ ಆಪ್ ಪಾವತಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಬಗ್ಗೆ

ಇತರೆ ಪಾವತಿ ಆಯ್ಕೆಗಳಿಗೆ ಸ್ಪರ್ಧೆ:

ಇತರೆ ಪಾವತಿ ಆಯ್ಕೆಗಳಿಗೆ ಸ್ಪರ್ಧೆ:

ಕಂಪೆನಿಯು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂಬ ಬಗ್ಗೆ ಫೇಸ್ ಬುಕ್ ನ ಸಿಇಓ ಮಾರ್ಕ್ ಜ್ಯೂಕ್ ಬರ್ಗ್ ಕಳೆದ ಎಪ್ರಿಲ್ ನಲ್ಲಿಯೇ ತಿಳಿಸಿದ್ದರು.ಖಂಡಿತ ಇದು ಸದ್ಯ ಭಾರತದಲ್ಲಿ ಡಿಜಿಟಲ್ ಪಾವತಿಯಲ್ಲಿ ರಾರಾಜಿಸುತ್ತಿರುವ ಪೇಟಿಎಂಗೆ ದೊಡ್ಡ ಆಘಾತಕಾರಿ ಸುದ್ದಿಯಾಗಿದ್ದು ಸ್ಪರ್ಧೆಗೆ ಸಿದ್ಧವಾಗಿ ಎಂಬ ಸಂದೇಶವನ್ನು ವಾಟ್ಸ್ ಆಪ್ ಸಂಸ್ಥೆ ರವಾನಿಸಿದಂತಿದೆ.

300 ಮಿಲಿಯನ್ ಬಳಕೆದಾರರು:

300 ಮಿಲಿಯನ್ ಬಳಕೆದಾರರು:

"ಭಾರತೀಯ ಪಾವತಿ ಮಾರುಕಟ್ಟೆಯಲ್ಲಿ ವಾಟ್ಸ್ ಆಪ್ ಪಾವತಿ ಆಯ್ಕೆಯು ಹೆಚ್ಚು ಪ್ರಸಿದ್ಧಿಯಾಗುವ ಎಲ್ಲಾ ಲಕ್ಷಣಗಳು ಇದ್ದು ಇತರೆ ಎಲ್ಲಾ ಪಾವತಿ ಸೇವೆಯೂ ಕೂಡ ಇದು ಸ್ಪರ್ಧಾತ್ಮಕವಾಗಿರುತ್ತದೆ.ಸದ್ಯ ಭಾರತದಲ್ಲಿ ವಾಟ್ಸ್ ಆಪ್ ಗೆ ಸುಮಾರು 300 ಮಿಲಿಯನ್ ಬಳಕೆದಾರರಿದ್ದಾರೆ(ಫೇಸ್ ಬುಕ್ ನಲ್ಲಿ ಇನ್ನೂ 300 ಮಿಲಿಯನ್ ಮಂದಿ ಭಾರತದಲ್ಲಿ ಬಳಕೆದಾರರಿದ್ದಾರೆ) ಮತ್ತು ಒಮಮ್ಮೆ ಇದು ಪಿ2ಪಿ ಯುಪಿಐ ಆಧಾರಿತ ಪಾವತಿ ಸೇವೆ ಆರಂಭವಾದರೆ ಈ ಸಂಖ್ಯೆ ಪೇಟಿಎಂ ಬಳಕೆದಾರರಿಗಿಂತ ಅಧಿಕವಾಗುತ್ತದೆ. ಕಳೆದ ಬಾರಿ ಪೇಟಿಎಂ ಭಾರತದಲ್ಲಿ ತನ್ನ ಬಳಕೆದಾರರ ಸಂಖ್ಯೆ 230 ಮಿಲಿಯನ್ ಎಂದು ತೋರಿಸಿದೆ.

ಭಾರತೀಯ ಆರ್ಥಿಕತೆಗೆ ನೆರವು:

ಭಾರತೀಯ ಆರ್ಥಿಕತೆಗೆ ನೆರವು:

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಬಗ್ಗೆ ಜಾಗೃತಿ ಹೆಚ್ಚಾಗುತ್ತಿದ್ದು ಮೊಬೈಲ್ ಸೆಂಟ್ರಿಕ್ ಪಾವತಿ ಆಪ್ ಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ವಾಟ್ಸ್ ಆಪ್ ಈ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆ ನೀಡಲಿದ್ದು ಮುಂದಿನ ದಿನಗಳಲ್ಲಿ ವಾಟ್ಸ್ ಆಪ್ ಪೇಮೆಂಟ್ ಕೂಡ ಪಾವತಿ ಆಯ್ಕೆಗಳು ಭಾರತದಲ್ಲಿ ಇನ್ನಷ್ಟು ಸುಲಭ ಮತ್ತು ಸುರಕ್ಷಿತವಾಗಲಿದೆ ಎನ್ನುತ್ತಾರೆ ಕೌಂಟರ್ ಪಾಯಿಂಟ್ ರೀಸರ್ಚ್ ನ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ತರುಣ್ ಪಾಟಕ್.

ಧನಾತ್ಮಕ ಎಫೆಕ್ಟ್:

ಧನಾತ್ಮಕ ಎಫೆಕ್ಟ್:

ದೇಶದಲ್ಲಿ ಸಂಪೂರ್ಣ ಪಾವತಿ ಸೇವೆಯನ್ನು ಆರಂಭಿಸುವ ಮುನ್ನ ಆರ್ ಬಿಐ ನ ಎಲ್ಲಾ ಗೈಡ್ ಲೈನ್ ಗಳನ್ನು ನಿರ್ವಹಣೆ ಮಾಡಿಕೊಳ್ಳುವುದಾಗಿ ವಾಟ್ಸ್ ಆಪ್ ಸಂಸ್ಥೆ ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಭಾರತೀಯ ಡಿಜಿಟಲ್ ಸೇವೆಯಲ್ಲಿ ಧನಾತ್ಮಕವಾಗಿರುವ ಮತ್ತು ಹೆಚ್ಚು ಪ್ರಸಿದ್ಧಿಯಾಗುವ ಎಲ್ಲಾ ಸೂಚನೆಗಳನ್ನು ವಾಟ್ಸ್ ಆಪ್ ಪೇಮೆಂಟ್ ನೀಡುತ್ತಿದೆ. ಭಾರತದ ಎಕಾನಮಿಗೆ ಇದು ನೆರವು ನೀಡಲಿದೆ.

ಒಟ್ಟಿನಲ್ಲಿ ವಾಟ್ಸ್ ಆಪ್ ಪೇಮೆಂಟ್ ಭಾರತದಲ್ಲಿ ಬಿಡುಗಡೆಗೊಳ್ಳುವುದು ಇತರೆ ಪಾವತಿ ಸೇವೆಗಳಿಗೆ ದೊಡ್ಡ ಸ್ಪರ್ಧೆಯಾಗುವುದಂತೂ ಸತ್ಯ.

Best Mobiles in India

Read more about:
English summary
WhatsApp Pay Coming Soon To India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X