ವಾಟ್ಸಾಪ್ ಪೇಮೆಂಟ್ಗೆ ‘ನೋಟಿಫೈ’ ಫೀಚರ್ ಸೇರ್ಪಡೆ!!

ಈ ವಾಟ್ಸಾಪ್ ಪೇಮೆಂಟ್ ಫೀಚರ್ ಇನ್ನಷ್ಟು ಸುಧಾರಿತವಾಗುತ್ತಿದ್ದು, ಹಲವಾರು ಪರೀಕ್ಷೆಗಳಿಗೆ ಒಳಪಡ್ತಿದೆ. ಇದೀಗ, ಮತ್ತಷ್ಟು ಹೊಸ ಫೀಚರ್ಗಳನ್ನ ನೀಡಿದೆ. ಹಾಗಾದ್ರೆ ಆ ಫೀಚರ್ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ..

By Shayista Suman
|

ಯುಪಿಐ ಆಧಾರಿತ ವಾಟ್ಸಾಪ್ ಪೇಮೆಂಟ್ ಫೆಬ್ರವರಿಯಿಂದ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಯುಪಿಐ ಐಡಿ ಮೂಲಕ ಹಣ ವರ್ಗಾವಣೆ ಮತ್ತು ಪಾವತಿ ಸೌಲಭ್ಯವನ್ನ ವಾಟ್ಸಾಪ್ ತನ್ನ ಬಳಕೆದಾರರಿಗೆ ನೀಡಿದೆ. ಈ ವಾಟ್ಸಾಪ್ ಪೇಮೆಂಟ್ ಫೀಚರ್ ಇನ್ನಷ್ಟು ಸುಧಾರಿತವಾಗುತ್ತಿದ್ದು, ಹಲವಾರು ಪರೀಕ್ಷೆಗಳಿಗೆ ಒಳಪಡ್ತಿದೆ. ಇದೀಗ, ಮತ್ತಷ್ಟು ಹೊಸ ಫೀಚರ್ಗಳನ್ನ ನೀಡಿದೆ. ಹಾಗಾದ್ರೆ ಆ ಫೀಚರ್ಗಳು ಯಾವುವು ಎಂದು ಇಂದಿನ ಲೇಖನದಲ್ಲಿ ತಿಳಿಯೋಣ..

ವಾಟ್ಸಾಪ್ ಪೇಮೆಂಟ್ಗೆ ‘ನೋಟಿಫೈ’ ಫೀಚರ್ ಸೇರ್ಪಡೆ!!


ನೋಟಿಫೈ ಬಟನ್ ಸೌಲಭ್ಯ

ವಾಟ್ಸಾಪ್ ಪೇಮೆಂಟ್ಫೀಚರ್ನಲ್ಲಿ ನೋಟಿಫೈ ಸೌಲಭ್ಯವನ್ನು ನೀಡಲಾಗಿದೆ. ನೀವು ಯಾರಿಗಾದರು ಹಣ ಪಾವತಿಸಲು ಅಥವಾ ವರ್ಗಾಯಿಸಲು ಪ್ರಯತ್ನಿಸುತ್ತಿದ್ದಲ್ಲಿ, ಆ ಬಳಕೆದಾರರು ವಾಟ್ಸಾಪ್ ಪೇಮೆಂಟ್ ಬಳಸುತ್ತಿದ್ದಲ್ಲಿ, ನೋಟಿಫೈ ಬಟನ್ ಅವರನ್ನು ಗುರುತಿಸಲು ಸಹಕಾರಿಯಾಗಲಿದೆ. ಇದರ ಮೂಲಕ ಪೇಮೆಂಟ್ ಪೂರ್ಣವಾಗಿರುವ ನೋಟಿಫೈ ಲಭ್ಯವಾಗುತ್ತದೆ. ಈ ಸೌಲಭ್ಯ ಆಂಡ್ರ್ಯಾಯ್ಡ್ ಹಾಗೂ ಐಒಎಸ್ ವರ್ಶನ್ನಲ್ಲಿ ಲಭ್ಯವಿದೆ.

ಯುಪಿಐ ಐಡಿ ಮೂಲಕ ಪಾವತಿ!

ಇದರ ಜೊತೆಗೆ ಯೂಸರ್ಸ್ ಯುಪಿಐ ಐಡಿ(ಏಕೀಕೃತ ಪೇಮೆಂಟ್ ಇಂಟರ್ಫೇಸ್)ಯ ಲಾಭವನ್ನು ಪಡೆಯಬಹುದು. ಇದರ ಮೂಲಕ ಪರ್ಸನಲ್ ಅಥವಾ ಗ್ರೂಪ್ ಚಾಟ್ನಲ್ಲಿ ಹೋಗಿ ಯುಪಿಐ ಐಡಿ ನೀಡುವ ಮೂಲಕ ಪೇಮೆಂಟ್ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಈ ಹೊಸ ಫೀಚರ್ Settings → Payments → Send Payment → Send to UPI ID ( ಇದು ಕಾಂಟ್ಯಾಕ್ಟ್ ಲಿಸ್ಟ್ನ ಮೇಲಿರುತ್ತದೆ)ಮೂಲಕ ಇದರ ಸೌಲಭ್ಯ ಪಡೆಯಬಹುದು. ಯುಪಿಐ ಐಡಿ ಮೂಲಕ ಸುಲಭವಾಗಿ ಹಣ ಟ್ರಾನ್ಸ್ಫರ್ ಮಾಡಬಹುದು. ಈ ಮೊದಲು ಯೂಸರ್ ಕಾನ್ವರ್ಸೆಶನ್ನಲ್ಲಿ ಹೋಗಿ ಆಟ್ಯಾಚ್ ಮಾಡಬೇಕಿತ್ತು. ಈಗ ನಂಬರ್ ಅಟ್ಯಾಚ್ ಆಗದಿದ್ರೂ ಯುಪಿಐ ಐಡಿ ಮೂಲಕ ನೇರವಾಗಿ ಪೇಮೆಂಟ್ ಮಾಡಬಹುದು.

ವಾಟ್ಸಾಪ್ ಹಲವಾರು ಬ್ಯಾಂಕ್ಗಳೊಂದಿಗೆ ಪಾರ್ಟನರ್ಶಿಪ್ ಹೊಂದಿದ್ದು, ಹೆಚ್ಡಿಎಫ್ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್ ಹಾಗೂ ಇನ್ನಿತರ ಬ್ಯಾಂಕ್ಗಳೊಂದಿಗೆ ಹಣ ಪಡೆಯುವ ಮತ್ತು ವರ್ಗಾಯಿಸುವ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಬ್ಯಾಂಕ್ಗಳ ಜೊತೆಗೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ಗೂ ಸಹ ವಾಟ್ಸಾಪ್ ಪೇಮೆಂಟ್ ಸಪೋರ್ಟ್ ಮಾಡುತ್ತೆ.

How to save WhatsApp Status other than taking screenshots!! Kannada

ಮೇಸೆಜ್ ಡಿಲೀಟ್ಗೆ ಹೆಚ್ಚುವರಿ ಸಮಯ

ಆಂಡ್ರ್ಯಾಯ್ಡ್ ಮತ್ತು ಐಒಎಸ್ ಬಳಕೆದಾರರಿಬ್ಬರಿಗೂ ಅನಪೇಕ್ಷಿತ ಮೇಸೆಜ್ಗಳನ್ನು ಡಿಲೀಟ್ ಮಾಡಲು ಹೆಚ್ಚುವರಿ ಸಮಯ ನೀಡಿದೆ. ಈ ಮೊದಲು ಮೇಸೆಜ್ ಡಿಲೀಟ್ ಮಾಡಲು 7 ನಿಮಿಷಗಳನ್ನು ನೀಡಲಾಗಿತ್ತು. ಈಗ ಟೈಮ್ ಲೀಮಿಟ್ನ್ನು 4096 ಸೆಂಕೆಂಡ್ಗಳಿಗೆ ಅಂದ್ರೆ, 68 ನಿಮಿಷ 16 ಸೆಕೆಂಡ್ಗಳಿಗೆ ಹೆಚ್ಚಿಸಲಾಗಿದೆ.

Best Mobiles in India

English summary
WhatsApp is improving the Payments feature with new options. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X