ಫೆಬ್ರವರಿಯಿಂದ ವಾಟ್ಸ್ ಆಪ್ ಪೇಮೆಂಟ್ ಸೇವೆ..?

By Lekhaka
|

ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ. ಶೀಘ್ರವೇ ವಾಟ್ಸ್ ಆಪ್ ಬಳಕೆದಾರರಿಗೆ ಪೇಮೆಂಟ್ ಆಯ್ಕೆಯನ್ನು ನೀಡಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಫೆಬ್ರವರಿಯಲ್ಲಿ ಈ ಹೊಸ ಆಯ್ಕೆಯೂ ಬಳಕೆದಾರರಿಗೆ ದೊರೆಯಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ವಾಟ್ಸ್ ಆಪ್ ಹೆಚ್ಚಿನ ಬಳಕೆದಾರರನ್ನು ಹೊಂದಿದ್ದು, ಇದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಫೆಬ್ರವರಿಯಿಂದ ವಾಟ್ಸ್ ಆಪ್ ಪೇಮೆಂಟ್ ಸೇವೆ..?


ಈಗಾಗಲೇ ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಹಲವಾರು ಆಪ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್ ಆಪ್ ಹೆಚ್ಚಿನ ಬಳಕೆದಾರರನ್ನು ಒಳಗೊಂಡಿದ್ದು, ತನ್ನ ಎಲ್ಲಾ ಬಳೆಕೆದಾರರಿಗೆ ಹೊಸ ಆಯ್ಕೆಯನ್ನು ನೀಡಲಿದೆ.

ವಾಟ್ಸ್ ಆಪ್ ಪ್ರತಿ ಸ್ಪರ್ಧಿಯಂದೆ ಗುರುತಿಸಿಕೊಂಡಿರುವ ಹೈಕ್ ತನ್ನ ಬಳಕೆದಾರರಿಗೆ ಪೇಮೆಂಟ್ ಆಯ್ಕೆಯನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲಿ ವಾಟ್ಸ್ ಆಪ್ ಶೀಘ್ರವೇ ಈ ಹೊಸ ಆಯ್ಕೆಯನ್ನು ನೀಡಲಿದೆ ಈ ಹಿಂದೆಯೇ ಮಾರುಕಟ್ಟೆಗೆ ಈ ಹೊಸ ಆಯ್ಕೆಯನ್ನು ನೀಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಸದ್ಯ ಈಗ ಮಾರುಕಟ್ಟೆಗೆ ಈ ಹೊಸ ಆಯ್ಕೆಯೂ ಲಗ್ಗೆ ಇಡುತ್ತಿದೆ.

ಮಾರುಕಟ್ಟೆಯಲ್ಲಿ ಡಿಜಿಟಲ್ ಪೇಮೆಂಟ್ ಆಪ್ ಗಳ ಸಂಖ್ಯೆಯೂ ಅಧಿಕವಾಗುತ್ತಿದ್ದು, ವಾಟ್ಸ್ ಆಪ್ ಸಹ ಇದೇ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಹಿನ್ನಲೆಯಲ್ಲಿ ಬೇರೆ ಆಪ್ ಗಳು ಹೆಚ್ಚಿನ ಬಳಕೆದಾರರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ವಾಟ್ಸ್ಆಪ್ ತನ್ನ ಪೇಮೆಂಟ್ ಸೇವೆಯನ್ನು ಪರೀಕ್ಷೆಯಲ್ಲಿಟ್ಟಿದೆ ಎನ್ನಲಾಗಿದೆ.

How to save WhatsApp Status other than taking screenshots!! Kannada

ವಾಟ್ಸ್‌ಆಪ್ ಬಿಸ್ನೆಸ್ ಆಪ್ ಲಾಂಚ್: ಏನಿದರ ವಿಶೇಷತೆ? ಬಳಕೆ ಹೇಗೆ?ವಾಟ್ಸ್‌ಆಪ್ ಬಿಸ್ನೆಸ್ ಆಪ್ ಲಾಂಚ್: ಏನಿದರ ವಿಶೇಷತೆ? ಬಳಕೆ ಹೇಗೆ?

ಫೇಸ್ ಬುಕ್ ಇದೇ ಕೆಲವು ದಿನಗಳ ಹಿಂದೆ ವಾಟ್ಸ್ ಆಪ್ ಬಿಸ್ನೆಸ್ ಆಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಈಗ ಇದರೊಂದಿಗೆ ಪೇಮೆಂಟ್ ಸೇವೆಯನ್ನು ನಿಡುತ್ತಿದ್ದು, ಇದರಿಂದಾಗಿ ವಾಟ್ಟ್ ಆಪ್ ಬಳಕೆದಾರರ ಸಂಖ್ಯೆಯೂ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಲೆಕ್ಕಚಾರವನ್ನು ಹಾಕಿದೆ ಎನ್ನಲಾಗಿದೆ.

Best Mobiles in India

Read more about:
English summary
WhatsApp payments feature could go live in February this year claims a new report. It is stated the platform is in discussion with many banks such as SBI, HDFC, ICICI, and Axis Bank in order to get the payments feature implemented. As of now, it is believed that the same is under testing in the beta phase.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X