ಫೇಸ್‌ಬುಕ್‌ನೊಂದಿಗೆ ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳಲಿದೆ ವಾಟ್ಸ್‌ಆಪ್..!
ವಾಟ್ಸ್‌ಆಪ್ ಹೊಸದಾಗಿ ಶುರು ಮಾಡಿರುವ ವಾಟ್ಸ್‌ಆಪ್ ಪೇಮೆಂಟ್ ಸೇವೆಯೂ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯುವ ಸಾಧ್ಯತೆ ಇದೆ. ಆದರೆ ಈ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ಮುನ್ನವೇ ಅಪಸ್ವರವೊಂದು ಕೇಳಿ ಬಂದಿದೆ. ವಾಟ್ಸ್‌ಆಪ್ ತನ್ನ ಪೇಮೆಂಟ್ ಸೇವೆಯ ಮಾಹಿತಿಯನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದೆ.

ವಾಟ್ಸ್‌ಆಪ್ ಚಾಟಿಂಗ್ ಕುರಿತು ಬಳಕೆದಾರರ ಯಾವುದೇ ಮಾಹಿತಿಯನ್ನು ರೆಕಾರ್ಡ್ ಮಾಡಿಕೊಳ್ಳುವುದಿಲ್ಲ ಎಂದಿರುವ ವಾಟ್ಸ್‌ಆಪ್, ಪೇಮೆಂಟ್ ಸೇವೆಯನ್ನು ಅಭಿವೃದ್ಧಿ ಪಡಿಸಲು ಮತ್ತು ಬಳಕೆದಾರ ಮಾಹಿತಿಯನ್ನು ಸೇಫ್ ಆಗಿ ಇಡುವ ಸಲುವಾಗಿ ತನ್ನ ಪೇರೆಂಟ್ ಕಂಪನಿ ಫೇಸ್‌ಬುಕ್ ನೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದೆ.
ಆದರೆ ಈಗಾಗಲೇ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪವನ್ನು ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಸಹ ಮಾಹಿತಿಯನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವುದು ಎಷ್ಟು ಸರಿ ಎನ್ನುವ ಮಾತು ಕೇಳಿಬಂದಿದೆ. ಒಟ್ಟಿನಲ್ಲಿ ವಾಟ್ಸ್‌ಆಪ್ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇದಕ್ಕೆ ಪ್ರತಿಕ್ರಿಯೇ ನೀಡಿರುವ ವಾಟ್ಸ್‌ಆಪ್, ನಮ್ಮ ಪೇಮೆಂಟ್ ಸೇವೆಯನ್ನು ಉತ್ತಮ ಪಡಿಸುವ ಸಲುವಾಗಿ ನಾವು ಮಾಹಿತಿಯನ್ನು ಥರ್ಡ್ ಪಾರ್ಟಿ ಆಪ್ ನೊಂದಿಗೆ ಹಂಚಿಕೊಳ್ಳುತ್ತೇವೆ. ಪೇಮೆಂಟ್ ಸೇವೆಯನ್ನು ನೀಡುವವರಿಗೆ ಹಂಚಿಕೊಳ್ಳಲೇ ಬೇಕಾಗುತ್ತದೆ. ಇದರಲ್ಲಿ ಫೇಸ್‌ಬುಕ್ ಸಹ ಸೇರಿಕೊಳ್ಳಲಿದ್ದು, ಈ ಕ್ರಮವು ಬಳಕೆದಾರರ ಸುಕ್ಷತೆಗಾಗಿಯೇ ಎಂದು ವಾದವನ್ನು ಮಂಡಿಸಿದೆ.

ಬಳಕೆದಾರರ ಮೆಸೆಂಜಿಂಗ್ ಆಪ್ ನಲ್ಲಿ ನಡೆಸುವ ಯಾವುದೇ ಚಾಟಿಂಗ್ ನಲ್ಲಿ ತಾನು ಮೂಗು ತೂರಿಸುವುದಿಲ್ಲ ಎಂದಿರುವ ವಾಟ್ಸ್‌ಆಪ್, ಬಳಕೆದಾರರ ಚಾಟಿಂಗ್ ಸಂಪೂರ್ಣ ಎನ್‌ಸ್ಕ್ರಿಪ್ಟ್ ಆಗಿದೆ. ಅವರು ಚಾಟ್ ಮಾಡುವ ವಿಷಯಗಳು ಅವರಿಬ್ಬರಿಗೆ ಬಿಟ್ಟರೆ ಇನ್ಯಾರಿಗೂ ತಿಳಿಯುವುದಿಲ್ಲ ಎಂದು ಮಾಹಿತಿಯನ್ನು ನೀಡಿದೆ.


Click it and Unblock the Notifications








