ಆರಂಭಕ್ಕೂ ಮುನ್ನವೇ ವಿಘ್ನ: ಸಂಕಷ್ಟದಲ್ಲಿ ವಾಟ್ಸ್‌ಆಪ್ ಪೇಮೆಂಟ್ ಸೇವೆ..!

|

ಜಾಗತಿಕವಾಗಿ ಮತ್ತು ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಫೇಸ್‌ಬುಕ್ ಮಾಲೀಕತ್ವದ ಸೋಶಿಯಲ್ ಮೇಸೆಜಿಂಗ್ ತಾಣ ವಾಟ್ಸ್ಆಪ್, ಭಾರತದಲ್ಲಿ ಶುರು ಮಾಡಿದ್ದ ಪೇಮೆಂಟ್ ಸೇವೆ ಸಂಕಷ್ಟಕ್ಕೆ ಸಿಲುಕಿದೆ ಎನ್ನಲಾಗಿದೆ. ದೇಶದಲ್ಲಿ ವಾಟ್ಸ್‌ಆಪ್ ಪೇಮೆಂಟ್ ಸೇವೆಯನ್ನು ಬಳಸಿಕೊಳ್ಳುತ್ತಿರುವ ಬಳಕೆದಾರರ ಮಾಹಿತಿ ವಿನಿಮಯ ವಿಚಾರದಲ್ಲಿ ತೊಂದರೆಗೆ ಸಿಲುಕಿಕೊಂಡಿದೆ.

ಆರಂಭಕ್ಕೂ ಮುನ್ನವೇ ವಿಘ್ನ: ಸಂಕಷ್ಟದಲ್ಲಿ ವಾಟ್ಸ್‌ಆಪ್ ಪೇಮೆಂಟ್ ಸೇವೆ..!

ವಾಟ್ಸ್‌ಆಪ್ ನೂತನ ಸೇವೆಯ ಲಾಭವನ್ನು ಪೋಷಕ ಕಂಪನಿಯಾದ ಫೇಸ್‌ಬುಕ್ ಪಡೆದುಕೊಳ್ಳಲು ಚಿಂತನೆಯನ್ನು ನಡೆಸಿದ್ದು, ಇದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಡೆ ಒಡ್ಡಿದೆ ಎನ್ನಲಾಗಿದೆ. ವಾಟ್ಸ್‌ಆಪ್ ಮಾಹಿತಿಗಳನ್ನು ಫೇಸ್‌ಬುಕ್ ನೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂದಿದೆ.

RBI ತಡೆ:

RBI ತಡೆ:

ಈ ಹಿಂದೆಯೇ ವಾಟ್ಸ್‌ಆಪ್ ತನ್ನ ಪೇಮೆಂಟ್ ಬಳಕೆದಾರರ ವಿವರಣೆಯನ್ನು ತನ್ನ ಫೋಷಕರ ಕಂಪನಿಯೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿತ್ತು. ಇದರಂತೆ ಫೇಸ್‌ಬುಕ್ ನೊಂದಿಗೆ ತನ್ನ ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಡೆಯನ್ನು ಒಡ್ಡಿದೆ ಎನ್ನಲಾಗಿದೆ.

ಪ್ರಶ್ನೆ ಮಾಡಿದೆ:

ಪ್ರಶ್ನೆ ಮಾಡಿದೆ:

ದೇಶದಲ್ಲಿ ನೀಡುತ್ತಿರುವ ಪೇಮೆಂಟ್ ಸೇವೆಯ ವಿವರವನ್ನು ಯಾವ ಕಾರಣಕ್ಕಾಗಿ ಫೇಸ್‌ಬುಕ್ ನೊಂದಿಗೆ ಹಂಚಿಕೊಳ್ಳುತ್ತಿದೆ ಎನ್ನುವುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಶ್ನೇ ಮಾಡಿದೆ ಎನ್ನಲಾಗಿದೆ. ಸರಿಯಾದ ಉತ್ತರವನ್ನು ನೀಡುವಂತೆ ಕೋರಿದೆ.

ಒಪ್ಪಿಕೊಂಡ ವಾಟ್ಸ್‌ಆಪ್:

ಒಪ್ಪಿಕೊಂಡ ವಾಟ್ಸ್‌ಆಪ್:

ಈಗಾಗಲೇ ತನ್ನ ಬಳಕೆದಾರರ ಸ್ಪಲ್ಪ ಪ್ರಮಾಣದ ಮಾಹಿತಿಯನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವುದಾಗಿ ವಾಟ್ಸ್‌ಆಪ್ ಮಾಹಿತಿಯನ್ನು ನೀಡಿತ್ತು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ತಡೆಯಿಡ್ಡಿದೆ.

ಹಂಚಿಕೊಳ್ಳುವಂತೆ ಇಲ್ಲ:

ಹಂಚಿಕೊಳ್ಳುವಂತೆ ಇಲ್ಲ:

ವಾಟ್ಸ್‌ಆಪ್ ಯಾವುದೇ ಕಾರಣಕ್ಕೂ ಫೇಸ್‌ಬುಕ್ ನೊಂದಿಗೆ ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವಾಟ್ಸ್‌ಆಪ್ ಗೆ ತಿಳೀಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಫೇಸ್‌ಬುಕ್ ಮಾಹಿತಿ ಪಡೆಯುವ ಸಹಾಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಡೆತವನ್ನು ನೀಡಿದೆ.

Best Mobiles in India

English summary
WhatsApp Payments runs into trouble with Indian authorities. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X