ವಾಟ್ಸ್‌ಆಪ್‌ನ ಗೌಪ್ಯತಾ ನೀತಿ ಒಪ್ಪಿಕೊಳ್ಳದಿದ್ದರೆ ನಿಮ್ಮ ವಾಟ್ಸ್‌ಆಪ್‌ ಏನಾಗುತ್ತೆ..? ಇಲ್ಲಿದೆ ಉತ್ತರ..!

By Gizbot Bureau
|

ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ತನ್ನ ಹೊಸ ಗೌಪ್ಯತೆ ನೀತಿ ಅಪ್‌ಡೇಟ್‌ನೊಂದಿಗೆ ಮುಂದುವರೆಯುವುದಾಗಿ ಕಳೆದ ವಾರ ಸ್ಪಷ್ಟಪಡಿಸಿದೆ. ಕಂಪನಿಯು ಬಳಕೆದಾರರಿಗೆ ಹೊಸ ಪ್ರೈವೆಸಿ ಪಾಲಿಸಿಯನ್ನು ಓದಲು ನೀಡಿದೆ. ಜೊತೆಗೆ ಹೆಚ್ಚುವರಿ ಮಾಹಿತಿ ಒದಗಿಸುವ ಬ್ಯಾನರ್ ಅನ್ನು ಸಹ ಆಪ್‌ನಲ್ಲಿ ನೊಟಿಫಿಕೇಷನ್‌ನಂತೆ ನೀಡುತ್ತದೆ. ಕಂಪನಿಯು ಕಳೆದ ತಿಂಗಳು ಹೊಸ ನೀತಿ ಜಾರಿಗೆ ಮೂರು ತಿಂಗಳು ಸಮಯ ನಿಗದಿಪಡಿಸಿತ್ತು. ಅಂದಿನಿಂದಲೂ ಬಳಕೆದಾರರಿಗೆ ಅದರ ನಿಯಮಗಳನ್ನು ವಿವರಿಸುತ್ತಿದೆ. ಆದಾಗ್ಯೂ, ಮೇ 15ರೊಳಗೆ ನಿಯಮಗಳನ್ನು ಸ್ವೀಕರಿಸದ ಬಳಕೆದಾರರ ಖಾತೆ ಏನಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟ ವಿವರಣೆಯನ್ನು ಎಲ್ಲೂ ನೀಡಿಲ್ಲ.

ವಾಟ್ಸ್‌ಆಪ್

ಆದರೆ, ಟೆಕ್‌ಕ್ರಂಚ್‌ ವರದಿ ಮಾಡಿರುವಂತೆ ವಾಟ್ಸ್‌ಆಪ್‌ನ ಎಲ್ಲ ಫೀಚರ್‌ಗಳನ್ನು ಬಳಸಲು ಹೊಸ ಗೌಪ್ಯತಾ ನೀತಿಯನ್ನು ಒಪ್ಪುವಂತೆ ವಾಟ್ಸ್‌ಆಪ್‌ ತನ್ನ ಬಳಕೆದಾರರನ್ನು ನಿಧಾನವಾಗಿ ಕೇಳುತ್ತದೆ ಎಂದು ಹೇಳಲಾಗಿದೆ. ಈಗಾಗಲೇ ಈ ಬಗ್ಗೆ ವಾಟ್ಸ್‌ಆಪ್‌ ಸ್ಪಷ್ಟ ಯೋಜನೆಯನ್ನು ರೂಪಿಸಿಕೊಂಡಿದ್ದು, ಟಿಪ್ಪಣಿಯನ್ನು ಸಹ ಬಳಕೆದಾರರಿಗೆ ಆಪ್‌ನಲ್ಲಿ ತಿಳಿಸುತ್ತದೆ. ಆ ಟಿಪ್ಪಣಿಯಲ್ಲಿ ವಾಟ್ಸ್‌ಆಪ್ FAQ ಪುಟಕ್ಕೂ ಲಿಂಕ್ ಮಾಡಲಾಗಿದೆ. ಅಲ್ಲಿ ಹೋಗಿ ವಾಟ್ಸ್‌ಆಪ್‌ನ ಗೌಪ್ಯತಾ ವಿವರಗಳನ್ನು ತಿಳಿದುಕೊಳ್ಳಬಹುದು. ಅದರಲ್ಲಿ ಒಂದಿಷ್ಟು ಪ್ರಮುಖ ವಿವರಗಳನ್ನು ಇಲ್ಲಿ ನೀಡಲಾಗಿದೆ ನೋಡಿ.

ನಿಮ್ಮ ವಾಟ್ಸ್‌ಆಪ್‌ ತಕ್ಷಣ ಡಿಲೀಟ್‌ ಆಗುವುದಿಲ್ಲ, ಅನೇಕ ನಿರ್ಬಂಧ ಹೇರಲಾಗುತ್ತದೆ

ನಿಮ್ಮ ವಾಟ್ಸ್‌ಆಪ್‌ ತಕ್ಷಣ ಡಿಲೀಟ್‌ ಆಗುವುದಿಲ್ಲ, ಅನೇಕ ನಿರ್ಬಂಧ ಹೇರಲಾಗುತ್ತದೆ

ವಾಟ್ಸ್‌ಆಪ್‌ನ ಹೊಸ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ನೀಡಿದ್ದು, ಅದಕ್ಕಾಗಿ ಮೇ 15 ರವರೆಗೆ ಗಡುವನ್ನು ವಿಸ್ತರಿಸಲಾಗಿದೆ. ನೀವು ಹೊಸ ನೀತಿಯನ್ನು ಒಪ್ಪದಿದ್ದರೆ ವಾಟ್ಸ್‌ಆಪ್‌ ನಿಮ್ಮ ಖಾತೆಯನ್ನು ಡಿಲೀಟ್‌ ಮಾಡುವುದಿಲ್ಲ. ಆದರೆ, ನೀವು ಹೊಸ ನೀತಿ ಸ್ವೀಕರಿಸುವವರೆಗೂ ಪೂರ್ಣ ಪ್ರಮಾಣದ ವಾಟ್ಸ್‌ಆಪ್‌ ಬಳಸಲಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ಅನೇಕ ಫೀಚರ್‌ಗಳ ಮೇಲೆ ನಿರ್ಬಂಧ ವಿಧಿಸಲಾಗುತ್ತದೆ.

ಮೆಸೇಜ್‌ಗಳನ್ನು ಓದಲು ಅಥವಾ ಕಳಿಸಲು ಆಗಲ್ಲ

ಮೆಸೇಜ್‌ಗಳನ್ನು ಓದಲು ಅಥವಾ ಕಳಿಸಲು ಆಗಲ್ಲ

ಮೇ 15ರ ನಂತರ ಒಂದಿಷ್ಟು ಸಮಯ ವಾಟ್ಸ್‌ಆಪ್‌ ಬಳಕೆದಾರರು ಕಾಲ್‌ ಮತ್ತು ನೊಟಿಫಿಕೇಷನ್‌ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಆದರೆ, ಸಂದೇಶಗಳನ್ನು ಓದಲು ಅಥವಾ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.

ಖಾತೆ ಡಿಲೀಟ್‌ ಆದರೆ ವಾಪಸ್‌ ಪಡೆಯಲು ಸಾಧ್ಯವಿಲ್ಲ

ಖಾತೆ ಡಿಲೀಟ್‌ ಆದರೆ ವಾಪಸ್‌ ಪಡೆಯಲು ಸಾಧ್ಯವಿಲ್ಲ

ವಾಟ್ಸ್‌ಆಪ್‌ ಪ್ರಕಾರ, ಖಾತೆಯನ್ನು ಡಿಲೀಟ್‌ ಮಾಡುವುದು ಶಾಶ್ವತ ಪ್ರಕ್ರಿಯೆಯಾಗಿರುತ್ತದೆ. ಹಾಗೂ ಅದನ್ನು ವಾಪಸ್‌ ಪಡೆಯಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.

ಚಾಟ್‌ ಇತಿಹಾಸ ಡಿಲೀಟ್‌

ಚಾಟ್‌ ಇತಿಹಾಸ ಡಿಲೀಟ್‌

ಮೇ 15ರ ಬಳಿಕ ಬಳಕೆದಾರರ ಸಂಪೂರ್ಣ ಚಾಟ್‌ ಹಿಸ್ಟರಿಯನ್ನು ಶಾಶ್ವತವಾಗಿ ವಾಟ್ಸ್‌ಆಪ್‌ ಡಿಲೀಟ್‌ ಮಾಡುತ್ತದೆ.

ವಾಟ್ಸ್‌ಆಪ್‌ ಗ್ರೂಪ್‌ಗಳಿಂದ ರಿಮೂವ್‌

ವಾಟ್ಸ್‌ಆಪ್‌ ಗ್ರೂಪ್‌ಗಳಿಂದ ರಿಮೂವ್‌

ಹೊಸ ಗೌಪ್ಯತಾ ನೀತಿಯನ್ನು ಸ್ವೀಕರಿಸದ ಬಳಕೆದಾರರನ್ನು ಎಲ್ಲ ವಾಟ್ಸ್‌ಆಪ್‌ ಗ್ರೂಪ್‌ಗಳಿಂದ ಸ್ವಯಂಚಾಲಿತವಾಗಿ ರಿಮೂವ್‌ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಸಂಪೂರ್ಣ ಬ್ಯಾಕಪ್‌ ಡಿಲೀಟ್‌

ಹೊಸ ನೀತಿಯನ್ನು ಬಳಕೆದಾರರು ಒಪ್ಪಿಕೊಳ್ಳದಿದ್ದರೆ ನೀವು ಸಂಪೂರ್ಣ ವಾಟ್ಸ್‌ಆಪ್‌ ಬ್ಯಾಕಪ್‌ನ್ನು ಕಳೆದುಕೊಳ್ಳುತ್ತೀರಿ. ಆದರೂ, ಮೇ 15 ರವರೆಗೂ ಬ್ಯಾಕಪ್‌ ತೆಗೆದುಕೊಳ್ಳಲು ಕಂಪನಿ ನೀಡಿದೆ.

ಚಾಟ್‌ ಹಿಸ್ಟರಿ ಎಕ್ಸ್‌ಪೋರ್ಟ್‌ ಮಾಡಿಕೊಳ್ಳಬಹುದು

ಮೇ 15 ರ ಮೊದಲು, ನಿಮ್ಮ ಚಾಟ್ ಹಿಸ್ಟರಿಯನ್ನು ನೀವು ಆಂಡ್ರಾಯ್ಡ್ ಅಥವಾ ಐಫೋನ್‌ನಲ್ಲಿ ಎಕ್ಸ್‌ಪೋರ್ಟ್‌ ಮಾಡಿಕೊಳ್ಳಬಹುದು ಮತ್ತು ನಿಮ್ಮ ಖಾತೆಯ ವರದಿಯನ್ನು ಡೌನ್‌ಲೋಡ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಮೇ 15ರ ಬಳಿಕ ನಿಷ್ಕ್ರಿಯ ಬಳಕೆದಾರರಿಗೆ ಸಂಬಂಧಿಸಿದ ನೀತಿ ಅನ್ವಯ

ಮೇ 15ರ ಬಳಿಕವೂ ನೀವು ನವೀಕರಣಗಳನ್ನು ಸ್ವೀಕರಿಸಬಹುದು. ನಿಷ್ಕ್ರಿಯ ಬಳಕೆದಾರರಿಗೆ ಸಂಬಂಧಿಸಿದ ನಮ್ಮ ನೀತಿ ಮೇ 15ರ ನಂತರ ಅನ್ವಯಿಸುತ್ತದೆ ಎಂದು ವಾಟ್ಸ್‌ಆಪ್ ಹೇಳಿದೆ. ನಿಷ್ಕ್ರಿಯ ಬಳಕೆದಾರರ ನೀತಿಯ ಪ್ರಕಾರ, ಖಾತೆ ಡಿಲೀಟ್‌ ಆದರೂ ಬಳಕೆದಾರರ ಮಾಹಿತಿ ಅವರ ಸ್ಮಾರ್ಟ್‌ಫೋನ್‌ನಲ್ಲಿ ಉಳಿಯುತ್ತದೆ. ಆದರೆ, ವಾಟ್ಸ್‌ಆಪ್‌ ಡಿಲೀಟ್‌ ಮಾಡುವವರೆಗೂ ಅದು ಇರುತ್ತದೆ. ಬಳಕೆದಾರರು ಅದೇ ಸಾಧನದಲ್ಲಿ ವಾಟ್ಸ್‌ಆಪ್‌ಗೆ ನೋಂದಾಯಿಸಿದಾಗ ಆ ಮಾಹಿತಿ ಮತ್ತೆ ನಿಮಗೆ ಸಿಗುತ್ತದೆ.

Most Read Articles
Best Mobiles in India

Read more about:
English summary
WhatsApp Privacy Policy Deadline; What Happens If You Don't Accept New Policy?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X