ವಾಟ್ಸ್‌ಆಪ್‌ ಗ್ರೂಪ್ ಆಡ್ಮಿನ್‌ಗಳಿಗೆ ಉಳಿಗಾಲವಿಲ್ಲ..! ಸದಸ್ಯರಿಗೆ ಹೊಸ ಅಸ್ತ್ರ.!

|

ಜಾಗತಿಕವಾಗಿ ಅತೀ ಬಳಕೆದಾರರನ್ನು ಹೊಂದುವ ಮೂಲಕ ಸೋಶಿಯಲ್ ಮೇಸೆಜಿಂಗ್ ಆಪ್ ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿರುವ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್. ತನ್ನ ಬಳಕೆದಾರರಿಗೆ ಚಾಟಿಂಗ್ ಅನ್ನು ಇನ್ನಷ್ಟು ಸುಲಭವಾಗಿಸುವ ಸಲುವಾಗಿ ಅನೇಕ ಹೊಸ ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ದಿನಕ್ಕೊಂದು ಹೊಸ ಆಯ್ಕೆಯನ್ನು ಪರೀಕ್ಷಿಸುತ್ತಿದ್ದು, ಇದೇ ಮಾದರಿಯಲ್ಲಿ ಮೊತ್ತೊಂದು ಹೊಸ ಆಯ್ಕೆಯನ್ನು ನೀಡಲು ಯೋಜನೆ ರೂಪಿಸಿದೆ.

ವಾಟ್ಸ್‌ಆಪ್‌ ಗ್ರೂಪ್ ಆಡ್ಮಿನ್‌ಗಳಿಗೆ ಉಳಿಗಾಲವಿಲ್ಲ..! ಸದಸ್ಯರಿಗೆ ಹೊಸ ಅಸ್ತ್ರ.!

ದಿನಕಳೆದಂತೆ ವಾಟ್ಸ್‌ಆಪ್ ಗ್ರೂಪ್ ಚಾಟಿಂಗ್ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದ್ದು, ಇದನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡಲು ವಾಟ್ಸ್‌ಆಪ್ ಗ್ರೂಪ್ ಚಾಟಿಂಗ್ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲು ಮುಂದಾಗಿದೆ. ಇದರಿಂದಾಗಿ ಗ್ರೂಪ್‌ಗಳಲ್ಲಿ ಆಡ್ಮಿನ್‌ಗಳು ಮತ್ತು ಸದಸ್ಯರ ನಡುವೆ ಸಮಾನತೆಯೂ ಕಾಣಿಸಿಕೊಳ್ಳಲಿದೆ.

ಗ್ರೂಪ್ ಆಡ್ಮಿನ್‌ಗಳನ್ನು ಕಿತ್ತಾಕಬಹುದು:

ಗ್ರೂಪ್ ಆಡ್ಮಿನ್‌ಗಳನ್ನು ಕಿತ್ತಾಕಬಹುದು:

ವಾಟ್ಸ್‌ಆಪ್‌ ಗ್ರೂಪ್‌ಗಳು ಇಂದು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು, ವಿಷಯಗಳ ಚರ್ಚೆಗೆ, ಕುಟುಂಬದ ವೇದಿಕೆಯಾಗಿ, ಕ‍ಚೇರಿಯಲ್ಲಿ ಸಂವಹನಕ್ಕಾಗಿ ವಾಟ್ಸ್‌ಆಪ್ ಗ್ರೂಪ್ ಬಳಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ತಂಡದ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಅವರನ್ನು ಗ್ರೂಪ್‌ ನಿಂದ ಕಿತ್ತು ಹಾಕುವ ಅಧಿಕಾರವನ್ನು ಗ್ರೂಪ್ ಆಡ್ಮಿನ್‌ ಗಳಿಗೆ ನೀಡಲಾಗಿತ್ತು. ಸದ್ಯ ಇದೇ ಮಾದರಿಯಲ್ಲಿ ತಂಡ ಸದಸ್ಯರು ತಂಡದ ಆಡ್ಮಿನ್‌ಗಳನ್ನು ತೆಗೆದು ಹಾಕುವ ಅವಕಾಶ ಮಾಡಿಕೊಟ್ಟೆದೆ.

ಡಿಸ್‌ಮಿಸ್ ಆಡ್ಮಿನ್:

ಡಿಸ್‌ಮಿಸ್ ಆಡ್ಮಿನ್:

ವಾಟ್ಸ್‌ಆಪ್‌ ಗ್ರೂಪ್‌ಗಳ ಆಡ್ಮಿನ್ ಗಳನ್ನು ಕಿತ್ತು ಹಾಕುವ ಸಲುವಾಗಿ ಡಿಸ್‌ಮಿಸ್ ಆಡ್ಮಿನ್ ಎನ್ನುವ ಆಯ್ಕೆಯೊಂದನ್ನು ಗ್ರೂಪ್ ಗಳಲ್ಲಿ ನೀಡಲು ವಾಟ್ಸ್‌ಆಪ್ ಮುಂದಾಗಿದೆ. ಸದ್ಯ ಈ ಆಯ್ಕೆಯೂ ಪ್ರಯೋಗ ಹಂತದಲ್ಲಿದ್ದು, ಶೀಘ್ರವೇ ಸಾಮಾನ್ಯ ಬಳಕೆದಾರರಿಗೆ ದೊರೆಯಲಿದೆ.

ಆದ್ಯತೆ ನೋಟಿಫಿಕೇಷನ್;

ಆದ್ಯತೆ ನೋಟಿಫಿಕೇಷನ್;

ಇದು ಹೊಸದಾಗಿ ವಾಟ್ಸ್‌ಆಪ್ ನೀಡಿರುವ ಆಯ್ಕೆಯಾಗಿದ್ದು, ನಿಮಗೆ ಬೇಕಾದ ವ್ಯಕ್ತಿಯ ಚಾಟ್ ಅನ್ನು ಪಿನ್ ಟು ಟಾಪ್ ಮಾಡಿಕೊಳ್ಳುವ ಮಾದರಿಯಲ್ಲಿ ನಿಮಗೆ ಬೇಕಾದ ವ್ಯಕ್ತಿಯ ಚಾಟ್ ಇಲ್ಲವೇ ಗ್ರೂಪ್ ನೋಷಿಫಿಕೇಷನ್ ಮೊದಲು ತೋರಿಸುವಂತೆ ಆದ್ಯತೆ ನೋಷಿಫಿಕೇಷನ್ ಇಟ್ಟು ಕೊಳ್ಳಬಹುದಾಗಿದೆ. ಇಂದು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಲಭ್ಯವಿದೆ.

How to Send a WhatsApp Message Without Saving the Contact in Your Phone - GIZBOT KANNADA
ಹಣಕ್ಕಾಗಿ ಮನವಿ:

ಹಣಕ್ಕಾಗಿ ಮನವಿ:

ಹೊಸದಾಗಿ ಕಾರ್ಯಚರಣೆಯನ್ನು ಆರಂಭಿಸಿರುವ ವಾಟ್ಸ್‌ಆಪ್ ಪೇಮೆಂಟ್ ಸೇವೆಯಲ್ಲಿ ಬಳಕೆದಾರರು ಹಣವನ್ನು ಕಳುಹಿಸುವ ಮಾದರಿಯಲ್ಲಿ, ಗೂಗಲ್ ತೇಜ್ ನಲ್ಲಿ ಹಣವನ್ನು ರಿಕ್ವೆಸ್ಟ್ ಮಾಡುವ ಮಾದರಿಯಲ್ಲಿ ವಾಟ್ಸ್‌ಆಪ್ ನಲ್ಲಿಯೂ ಸ್ನೇಹಿತರಿಗೆ ಹಣಕಳುಹಿಸಲು ಮನವಿಯನ್ನು ಮಾಡಬಹುದಾಗಿದೆ.

ಫೋಟೋ ಡಿಲೀಟ್ ಆದರೆ ಚಿಂತೆ ಇಲ್ಲ.

ಫೋಟೋ ಡಿಲೀಟ್ ಆದರೆ ಚಿಂತೆ ಇಲ್ಲ.

ಚಾಟಿಂಗ್‌ನಲ್ಲಿ ಡಿಲೀಟ್ ಮಾಡಿದ ಫೋಟೋಗಳನ್ನು ಮತ್ತೇ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ವಾಟ್ಸ್‌ಆಪ್ ನೀಡಿದೆ. ನಿಮ್ಮ ಎಲ್ಲಾ ವಿಡಿಯೋ, ಜಿಫ್ ಮತ್ತು ಫೋಟೋಗಳು ವಾಟ್ಸ್‌ಆಪ್ ತನ್ನ ಸರ್ವರ್‌ನಲ್ಲಿ ಸೇವ್ ಮಾಡಿಕೊಳ್ಳಲಿದೆ. ನಿಮಗೆ ಬೇಕಾದ ಸಂದರ್ಭದಲ್ಲಿ ನೀವು ಮತ್ತೇ ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
WhatsApp Rolls Out 'Dismiss as Admin' Feature. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X