Home
Apps

ವಾಟ್ಸಾಪ್ ಅಪ್‌ಡೇಟ್ 2026: ಈ ಹೊಸ ಫೀಚರ್ಸ್ ನೋಡಿದ್ದೀರಾ?

ಮೆಟಾ ಒಡೆತನದ ಈ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ನಿರಂತರವಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇದೆ. 2026ರ ಆರಂಭದಲ್ಲೇ ಇದೀಗ ಗ್ರೂಪ್ ಚಾಟ್‌ಗಳನ್ನು ಹೆಚ್ಚು ಉಪಯುಕ್ತ, ವೈಯಕ್ತಿಕ ಮತ್ತು ಸಂಯೋಜಿತವಾಗಿಸುವಂತಹ ಹೊಸ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ವಾಟ್ಸಾಪ್ ಅಪ್‌ಡೇಟ್‌ನೊಂದಿಗೆ ಈ ವೈಶಿಷ್ಟ್ಯಗಳು ಹಂತ ಹಂತವಾಗಿ ಬಳಕೆದಾರರಿಗೆ ಲಭ್ಯವಾಗುತ್ತಿವೆ. ಹಾಗಾದರೆ, ವಾಟ್ಸಾಪ್‌ಗೆ ಸೇರಿರುವ ಹೊಸ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಈ ಹೊಸ ಅಪ್‌ಡೇಟ್‌ನ ಪ್ರಮುಖ ಹೈಲೈಟ್ ಎಂದರೆ ಗ್ರೂಪ್ ಸದಸ್ಯರ ಟ್ಯಾಗ್‌ಗಳು (Member Tags). ಇದರ ಮೂಲಕ ಗುಂಪಿನೊಳಗಿನ ಸದಸ್ಯರು ತಮ್ಮ ಪಾತ್ರ ಅಥವಾ ಗುರುತನ್ನು ತಾವೇ ಆಯ್ಕೆ ಮಾಡಿಕೊಳ್ಳಬಹುದು. ಅಂದರೆ, ಕುಟುಂಬ ಗುಂಪಿನಲ್ಲಿ 'ಅಪ್ಪ', 'ಅಮ್ಮ', 'ಮಾಮ', 'ಅಕ್ಕ' ಎಂಬಂತೆ ಅಥವಾ ಕಚೇರಿ ಮತ್ತು ಕಾಲೇಜು ಗುಂಪುಗಳಲ್ಲಿ 'ಟೀಮ್ ಲೀಡರ್', 'ಕೋರ್ಡಿನೇಟರ್', 'ಡಿಸೈನರ್' ಮುಂತಾದ ಟ್ಯಾಗ್‌ಗಳನ್ನು ಬಳಸಬಹುದು. ಪ್ರತಿಯೊಂದು ಗುಂಪಿಗೆ ಪ್ರತ್ಯೇಕವಾಗಿ ಟ್ಯಾಗ್‌ಗಳನ್ನು ಹೊಂದಿಸಬಹುದಾಗಿರುವುದರಿಂದ, ಗುಂಪಿನೊಳಗಿನ ಸಂವಹನ ಹೆಚ್ಚು ಸ್ಪಷ್ಟ ಮತ್ತು ಅರ್ಥಪೂರ್ಣವಾಗುತ್ತದೆ.

ಇದರ ಜೊತೆಗೆ, ವಾಟ್ಸಾಪ್ ಪಠ್ಯ ಆಧಾರಿತ ಸ್ಟಿಕ್ಕರ್‌ಗಳ ಮೂಲಕ ಬಳಕೆದಾರರ ಸೃಜನಶೀಲತೆಯನ್ನು ಈಗ ಮತ್ತಷ್ಟು ಉತ್ತೇಜಿಸಲು ಮುಂದಾಗಿದೆ. ಈಗ ನೀವು ಟೈಪ್ ಮಾಡುವ ಯಾವುದೇ ಪದ ಅಥವಾ ವಾಕ್ಯವನ್ನು ನೇರವಾಗಿ ಸ್ಟಿಕ್ಕರ್ ಆಗಿ ಪರಿವರ್ತಿಸಬಹುದು. ಈ ಸ್ಟಿಕ್ಕರ್‌ಗಳನ್ನು ಸ್ಟಿಕ್ಕರ್ ಸರ್ಚ್‌ನಲ್ಲಿಯೇ ರಚಿಸಿ, ಮೊದಲು ಚಾಟ್‌ಗೆ ಕಳುಹಿಸದೇಲೇ ನಿಮ್ಮ ವೈಯಕ್ತಿಕ ಸ್ಟಿಕ್ಕರ್ ಪ್ಯಾಕ್‌ಗೆ ಸೇವ್ ಮಾಡಿಕೊಳ್ಳಬಹುದು. ಇದು ಯುವ ಬಳಕೆದಾರರು ಮತ್ತು ಕ್ರಿಯೇಟಿವ್ ಚಾಟ್ ಪ್ರಿಯರಿಗೆ ವಿಶೇಷ ಆಕರ್ಷಣೆಯಾಗಿದೆ.

ವಾಟ್ಸಾಪ್ ಅಪ್‌ಡೇಟ್ 2026: ಈ ಹೊಸ ಫೀಚರ್ಸ್ ನೋಡಿದ್ದೀರಾ?

ಗ್ರೂಪ್ ಕಾರ್ಯಕ್ರಮಗಳ ಯೋಜನೆಗೆ ಸಂಬಂಧಿಸಿದಂತೆ ಕೂಡ ವಾಟ್ಸಾಪ್ ಮಹತ್ವದ ಸುಧಾರಣೆ ತಂದಿದೆ. ಈವೆಂಟ್ ರಿಮೈಂಡರ್‌ಗಳಿಗೆ ಕಸ್ಟಮ್ ಅಡ್ವಾನ್ಸ್ ಅಲರ್ಟ್‌ಗಳ ಸೌಲಭ್ಯವನ್ನು ಸೇರಿಸಲಾಗಿದೆ. ಇದರ ಮೂಲಕ ಕಾರ್ಯಕ್ರಮ ಆರಂಭಕ್ಕೂ ಬೇಕಾದಷ್ಟು ಮುಂಚಿತವಾಗಿ ಸದಸ್ಯರಿಗೆ ನೆನಪಿನ ಸೂಚನೆ ಕಳುಹಿಸಬಹುದು. ಕುಟುಂಬ ಸಮಾರಂಭಗಳು, ಸ್ನೇಹಿತರ ಭೇಟಿ, ಕಚೇರಿ ಮೀಟಿಂಗ್ ಅಥವಾ ಆನ್‌ಲೈನ್ ಈವೆಂಟ್‌ಗಳ ವೇಳಾಪಟ್ಟಿಯನ್ನು ಸುಲಭವಾಗಿ ನಿರ್ವಹಿಸಲು ಇದು ಸಹಕಾರಿಯಾಗಲಿದೆ.

ಈ ಎಲ್ಲಾ ಹೊಸ ವೈಶಿಷ್ಟ್ಯಗಳು ಈಗಾಗಲೇ ಲಭ್ಯವಿರುವ ವಾಟ್ಸಾಪ್ ಗ್ರೂಪ್ ಸೌಲಭ್ಯಗಳಾದ ದೊಡ್ಡ ಫೈಲ್ ಶೇರ್, ಎಚ್‌ಡಿ ಫೋಟೋ ಮತ್ತು ವಿಡಿಯೋ ಶೇರ್, ಸ್ಕ್ರೀನ್ ಶೇರಿಂಗ್ ಮತ್ತು ವಾಯ್ಸ್ ಚಾಟ್‌ಗಳ ಜೊತೆಗೆ ಸೇರಿಕೊಂಡಿವೆ. ಇದರ ಪರಿಣಾಮವಾಗಿ, ವಾಟ್ಸಾಪ್ ಗುಂಪುಗಳು ಕೇವಲ ಚಾಟ್ ಮಾಡುವ ವೇದಿಕೆಯಲ್ಲ, ದಿನನಿತ್ಯದ ಸಂವಹನ ಮತ್ತು ಯೋಜನೆಗಳ ಕೇಂದ್ರವಾಗುತ್ತಿವೆ.

ಈ ಬಗ್ಗೆ ವಾಟ್ಸಾಪ್ ತನ್ನ ಅಧಿಕೃತ ಪ್ರಕಟಣೆಯಲ್ಲಿ, "ಹೊಸ ವರ್ಷಕ್ಕೆ ಗ್ರೂಪ್ ಚಾಟ್‌ಗಳಿಗೆ ಹೊಸ ಅಪ್‌ಗ್ರೇಡ್‌ಗಳನ್ನು ತರುವುದಕ್ಕೆ ನಾವು ಸಂತೋಷಪಡುತ್ತೇವೆ. ವಿಭಿನ್ನ ಡಿವೈಸ್ ಬಳಸುವ ಜನರೊಂದಿಗೆ ಸಹ ಸುಲಭವಾಗಿ ಸಂಪರ್ಕದಲ್ಲಿರಲು ವಾಟ್ಸಾಪ್ ಸಹಾಯ ಮಾಡುತ್ತದೆ. ಹೊಸ ವರ್ಷದ ನಿರ್ಣಯಗಳು, ವಿಶೇಷ ಆಚರಣೆಗಳ ಯೋಜನೆ ಅಥವಾ ಸ್ನೇಹಿತರೊಂದಿಗೆ ಕ್ರೀಡಾ ಲೀಗ್ ತಂತ್ರ - ಎಲ್ಲಕ್ಕೂ ವಾಟ್ಸಾಪ್ ಗುಂಪುಗಳು ಉಪಯುಕ್ತ" ಎಂದು ತಿಳಿಸಿದೆ.

ಈ ಹೊಸ ವಾಟ್ಸಾಪ್ ಅಪ್‌ಡೇಟ್‌ಗಳು ಬಹುತೇಕ ಭಾರತೀಯ ಬಳಕೆದಾರರ ದಿನನಿತ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡಂತಿದ್ದು, ಗ್ರೂಪ್ ಚಾಟ್ ಅನುಭವವನ್ನು ಹೆಚ್ಚು ಸುಲಭ, ವೈಯಕ್ತಿಕ ಮತ್ತು ಪರಿಣಾಮಕಾರಿಯಾಗಿ ಮಾಡುತ್ತವೆ. ಮುಂದಿನ ದಿನಗಳಲ್ಲಿ ಈ ವೈಶಿಷ್ಟ್ಯಗಳು ವಾಟ್ಸಾಪ್ ಬಳಕೆಯನ್ನು ಇನ್ನಷ್ಟು ಆಕರ್ಷಕವಾಗಿಸುವ ನಿರೀಕ್ಷೆ ಇದೆ. ನೀವು ಕೂಡ ಈ ಹೊಸ ವೈಶಿಷ್ಟ್ಯಗಳನ್ನು ಬಳಸಿದ್ದೀರಾ?.. ಅಥವಾ ಬಳಸಲು ಇಚ್ಚಿಸುತ್ತೀರಾ ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
WhatsApp has introduced new group chat updates in early 2026, including Member Tags, allowing users to assign custom roles and identities within groups. This feature makes group conversations more organized, personalized, and easier to understand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+