Home
Apps

ಭಾರತದಲ್ಲಿ ಬದಲಾಗುತ್ತಿದೆ ವಾಟ್ಸ್‌ಆಪ್, ನೀವು ತಿಳಿಯಬೇಕಾದ ಅಂಶಗಳು

ಕಳೆದ ಕೆಲವು ತಿಂಗಳುಗಳಿಂದ ವಾಟ್ಸ್ ಆಪ್ ಮತ್ತು ಭಾರತ ಸರ್ಕಾರದ ನಡುವೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದರಲ್ಲಿ ಒಂದು ಪ್ರಮುಖ ವಿಚಾರವೇನೆಂದರೆ ಸುಳ್ಳು ಸುದ್ದಿಗಳು ವಾಟ್ಸ್ ಆಪ್ ಮೂಲಕ ಹರಿದಾಡುತ್ತದೆ ಎಂಬುದೇ ಆಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಜೊತೆ ಮಾತುಕತೆಯನ್ನೂ ನಡೆಸಿ ದೊಡ್ಡ ಹೆಜ್ಜೆಯನ್ನು ವಾಟ್ಸ್ ಆಪ್ ತೆಗೆದುಕೊಂಡಿದ್ದು ಇದೀಗ ದೂರುದಾರ ಅಧಿಕಾರಿಯೊಬ್ಬರನ್ನು ಭಾರತಕ್ಕೆ ನೇಮಿಸಿದೆ. ವಾಟ್ಸ್ ಆಪ್ ಬಗೆಗಿನ ಯಾವುದೇ ದೂರನ್ನು ಬಳಕೆದಾರರು ಅವರಿಗೆ ನೀಡಬಹುದಾಗಿದೆ.

ಭಾರತದಲ್ಲಿ ಬದಲಾಗುತ್ತಿದೆ ವಾಟ್ಸ್‌ಆಪ್, ನೀವು ತಿಳಿಯಬೇಕಾದ ಅಂಶಗಳು

ಕೋಮಲ್ ಲಹಿರಿ ಹಿರಿಯ ನಿರ್ದೇಶಕಿ, ಜಾಗತಿಕ ಗ್ರಾಹಕರ ಕಾರ್ಯಾಚರಣೆಗಳು ಮತ್ತು ಸ್ಥಳೀಕರಣ WhatsApp ಇಂಕ್. ನ ಭಾರತೀಯ ದೂರುದಾರ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಹಾಗಾದ್ರೆ ವಾಟ್ಸ್ ಆಪ್ ನ ಈ ಬಗೆಗಿನ ದೊಡ್ಡ ಪ್ರಕಟಣೆಯ ಬಗೆಗಿನ ವಿವರಗಳು ಇಲ್ಲಿದೆ ನೋಡಿ.

ಯಾವುದೇ ಸಮಸ್ಯೆಗಾಗಿ ನೀವು ದೂರುದಾರರಿಗೆ ಇಮೇಲ್ ಮಾಡಬಹುದು 

ಯಾವುದೇ ಸಮಸ್ಯೆಗಾಗಿ ನೀವು ದೂರುದಾರರಿಗೆ ಇಮೇಲ್ ಮಾಡಬಹುದು 

ಇಮೇಲ್ ಮೂಲಕ ಇಲ್ಲವೇ ಆಪ್ ಮೂಲಕ ದೂರುದಾರರಿಗೆ ನಿಮ್ಮ ಸಮಸ್ಯೆಯ ಬಗ್ಗೆ ತಿಳಿಸುವುದಕ್ಕೆ ಅವಕಾಶವಿರುತ್ತದೆ. ವಾಟ್ಸ್ ಆಪ್ ನ FAQ ಪೇಜ್ ನಲ್ಲಿ ಈ ಬಗ್ಗೆ ತಿಳಿಸಲಾಗಿದೆ., "ದೂರುದಾರ ಅಧಿಕಾರಿಗೆ ನೀವು ಯಾವುದೇ ಕಂಪ್ಲೈಟ್ ಅಥವಾ ಕಾಳಜಿ ಬಗ್ಗೆ ತಿಳಿಸುವುದಾದರೆ ಇಮೇಲ್ ಕಳುಹಿಸಬಹುದು ಜೊತೆಗೆ ಎಲೆಕ್ಟ್ರಾನಿಕ್ ಹಸ್ತಾಕ್ಷರವನ್ನು ಒದಗಿಸಬೇಕಾಗುತ್ತದೆ. ನೀವು ಯಾವುದೇ ನಿರ್ಧಿಷ್ಟ ಅಕೌಂಟಿನ ಬಗ್ಗೆ ಹೇಳುವುದಾದರೆ ಅಂತರಾಷ್ಟ್ರೀಯ ಫಾರ್ಮೇಟ್ ನಲ್ಲಿ ಕಂಟ್ರಿ ಕೋಡ್ ಸಹಿತ ಫೋನ್ ನಂಬರ್ ನ್ನು ಒದಗಿಸಬೇಕಾಗುತ್ತದೆ" ಎಂದು ತಿಳಿಸಲಾಗಿದೆ.

ಆಪ್‌ನಲ್ಲಿ ಹೆಚ್ಚಿನ ಮಾಹಿತಿ

ಆಪ್‌ನಲ್ಲಿ ಹೆಚ್ಚಿನ ಮಾಹಿತಿ

ವಾಟ್ಸ್ ಆಪ್ ತನ್ನ ಆಪ್ ನ ಮೂಲಕವೇ ಯಾವುದೇ ಸಮಸ್ಯೆಯ ದೂರನ್ನು ನೀಡಲು ಅವಕಾಶ ನೀಡುತ್ತದೆ. ಬಳಕೆದಾರರು ಅದಕ್ಕಾಗಿ Settings > Help > Contact Us ಗೆ ತೆರಳಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಪೋಸ್ಟ್ ಮೂಲಕವೂ ದೂರು ಸಲ್ಲಿಸಬಹುದು

ಪೋಸ್ಟ್ ಮೂಲಕವೂ ದೂರು ಸಲ್ಲಿಸಬಹುದು

ಬಳಕೆದಾರರು ಪೋಸ್ಟ್ ಮುಖಾಂತರ ನೇರವಾಗಿ ವಾಟ್ಸ್ ಆಪ್ ನ ಪ್ರಧಾನ ಕಛೇರಿ ಮೆನ್ಲೋ ಪಾರ್ಕ್ ಕ್ಯಾಲಿಫೋರ್ನಿಯಾಗೆ ದೂರುಗಳನ್ನು ಬರೆಯಬಹುದು.

ಯಾವುದೇ ಅಕೌಂಟಿನ ಬಗ್ಗೆಯೂ ದೂರು ನೀಡಬಹುದು 

ಯಾವುದೇ ಅಕೌಂಟಿನ ಬಗ್ಗೆಯೂ ದೂರು ನೀಡಬಹುದು 

ಯಾವುದೇ ನಿರ್ದಿಷ್ಟ ಅಕೌಂಟಿನಿಂದ ನಿಮಗೆ ಕಿರಿಕಿರಿಯಾದಲ್ಲಿ ಅದನ್ನೂ ಕೂಡ ದೂರು ಮಾಡಲು ವಾಟ್ಸ್ ಆಪ್ ಫ್ಲಾಟ್ ಫಾರ್ಮ್ ನಲ್ಲಿ ಅವಕಾಶ ಸಿಗುತ್ತದೆ. ಒಂದು ವೇಳೆ ನೀವು ಯಾವುದೇ ಅಕೌಂಟಿನ ಬಗ್ಗೆ ದೂರು ನೀಡುವುದಾದರೆ ನಿಮ್ಮ ಫೋನ್ ನಂಬರ್ ನ್ನು ಸಂಪೂರ್ಣ ಅಂತರಾಷ್ಟ್ರೀಯ ಫಾರ್ಮೇಟ್ ಜೊತೆಗೆ ಕಂಟ್ರೀ ಕೋಡ್ ಸೇರಿಸಿ ನಮೂದಿಸಿ ಎಂದು ವಾಟ್ಸ್ ಆಪ್ ಹೇಳಿದೆ.

ಕಾನೂನು ಜಾರಿ ಅಧಿಕಾರಿಗಳಿಗೆ ವಿಭಿನ್ನ ಆಯ್ಕೆಗಳು 

ಕಾನೂನು ಜಾರಿ ಅಧಿಕಾರಿಗಳಿಗೆ ವಿಭಿನ್ನ ಆಯ್ಕೆಗಳು 

ವಾಟ್ಸ್ ಆಪ್ ನ FAQ ಪೇಜ್ ನಲ್ಲಿ ಹೇಳಿರುವಂತೆ ""ನೀವು ಕಾನೂನು ಜಾರಿ ಅಧಿಕಾರಿಯಾಗಿದ್ದರೆ, ದಯವಿಟ್ಟು ಕಾನೂನು ಜಾರಿ ಅಧಿಕಾರಿಗಳಿಗಾಗಿ ನಮ್ಮ ಮಾಹಿತಿಯನ್ನು ಓದಿ ಮತ್ತು ನಮ್ಮನ್ನು ನೀವು ಸಂಪರ್ಕಿಸಬಹುದು" ಇದು ವಾಟ್ಸ್ ಆಪ್ ನಲ್ಲಿ ಹರಿದಾಡುವ ಫೇಕ್ ನ್ಯೂಸ್ ಗಲಿಗೆ ಕಡಿವಾಣ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸಲಾಗುತ್ತದೆ.

ದೂರುದಾರ ಅಧಿಕಾರಿ ಎಲ್ಲಿರುತ್ತಾರೆ?

ದೂರುದಾರ ಅಧಿಕಾರಿ ಎಲ್ಲಿರುತ್ತಾರೆ?

ವಾಟ್ಸ್ ಆಪ್ ಸ್ಪಷ್ಟವಾಗಿ ಹೇಳಿರುವಂತೆ ಕೋಮಲ್ ಲಹಿರಿ ಕ್ಯಾಲಿಫೋರ್ನಿಯಾದ ಮೆನ್ಲೋ ಪಾರ್ಕ್ ನಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಕೋಮಲ್ ಲಹಿರಿ ಫೇಸ್ಬುಕ್, ಪೇಪಾಲ್ ಮತ್ತು ಇತರರೊಂದಿಗೆ ಕೆಲಸ ಮಾಡಿದ್ದಾರೆ

ಕೋಮಲ್ ಲಹಿರಿ ಫೇಸ್ಬುಕ್, ಪೇಪಾಲ್ ಮತ್ತು ಇತರರೊಂದಿಗೆ ಕೆಲಸ ಮಾಡಿದ್ದಾರೆ

ಕೋಮಲ್ ಲಹಿರಿಯ LinkedIn ಪ್ರೊಫೈಲ್ ಹೇಳುವಂತೆ ಆಕೆ ಈಗಾಗಲೇ ಫೇಸ್ ಬುಕ್, ಪೇಪಾಲ್ ಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಏಳು ತಿಂಗಳಿನಿಂದ ಆಕೆ ವಾಟ್ಸ್ ಆಪ್ ನೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದೂರುದಾರ ಅಧಿಕಾರಿಯನ್ನು ನೇಮಿಸುವಂತೆ ಸರ್ಕಾರವೇ ಆದೇಶಿಸಿದೆ 

ದೂರುದಾರ ಅಧಿಕಾರಿಯನ್ನು ನೇಮಿಸುವಂತೆ ಸರ್ಕಾರವೇ ಆದೇಶಿಸಿದೆ 

ಐಟಿ ಮಿನಿಸ್ಟರ್ ರವಿಶಂಕರ್ ಪ್ರಸಾದ್ ಸುಳ್ಳು ಸುದ್ದಿಗಳ ವಿಚಾರಕ್ಕೆ ಫೇಸ್ ಬುಕ್ ಮಾಡುತ್ತಿರುವ ಕೆಲಸ ಸಾಕಾಗುತ್ತಿಲ್ಲ. ಸರ್ಕಾರವೇ ಈ ದೂರುದಾರ ಅಧಿಕಾರಿಯನ್ನು ನೇಮಿಸುವಂತೆ ಸೂಚನೆಯನ್ನು ವಾಟ್ಸ್ ಆಪ್ ಗೆ ನೀಡಿತ್ತು.

ಸರ್ಕಾರದಿಂದ ವಾಟ್ಸ್ ಆಪ್ ಗೆ ಎರಡು ನೋಟಿಸ್

ಸರ್ಕಾರದಿಂದ ವಾಟ್ಸ್ ಆಪ್ ಗೆ ಎರಡು ನೋಟಿಸ್

ಸಾಮಾಜಿಕ ಜಾಲತಾಣದ ಮೇಲೆ ಹೆಚ್ಚು ಒತ್ತಡ ಹೇರುವ ಕಾರಣದಿಂದಾಗಿ ಸರ್ಕಾರವು ಎರಡು ನೋಟೀಸ್ ಗಳನ್ನು ರವಾನಿಸಿತ್ತು. ಮೊದಲನೆಯದನ್ನು ಜೂನ್ ನಲ್ಲಿ ಮತ್ತು ಎರಡನೆಯದನ್ನು ಕೇವಲ ಒಂದೇ ತಿಂಗಳ ಅಂತರದಲ್ಲಿ ಅಂದರೆ ಜುಲೈ ನಲ್ಲಿ ಕಳುಹಿಸಲಾಗಿತ್ತು.

ಭಾರತೀಯ ಕಾನೂನುಗಳನ್ನು ಅನುಸರಿಸುವಂತೆ ವಾಟ್ಸ್ ಆಪ್ ಗೆ ಸುಪ್ರೀಂಕೋರ್ಟ್ ಕೂಡ ತಿಳಿಸಿತ್ತು 

ಭಾರತೀಯ ಕಾನೂನುಗಳನ್ನು ಅನುಸರಿಸುವಂತೆ ವಾಟ್ಸ್ ಆಪ್ ಗೆ ಸುಪ್ರೀಂಕೋರ್ಟ್ ಕೂಡ ತಿಳಿಸಿತ್ತು 

ಅಪೆಕ್ಸ್ ಕೋರ್ಟ್ ನಲ್ಲಿ ಕಳೆದ ತಿಂಗಳು ವಾಟ್ಸ್ ಆಪ್ ನಲ್ಲಿ ಭಾರತೀಯ ಕಾನೂನುಗಳನ್ನು ಪಾಲಿಸುತ್ತಿಲ್ಲ ಎಂಬ ದೂರಿಗೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ತಿಳಿಸಲಾಗಿದೆ ಮತ್ತು ಅದರಲ್ಲಿ ದೂರುದಾರ ಅಧಿಕಾರಿಯ ನೇಮಕಾರಿಯ ಬಗ್ಗೆಯೂ ಪ್ರಸ್ತಾಪವಿದೆ.

Best Mobiles in India

English summary
WhatsApp's latest big announcement: What it means for you and more. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+