ವಾಟ್ಸ್‌ಆಪ್ ಗ್ರೂಪ್ ಅಡ್ಮಿನ್‌ಗಳಿಗೆ ವಿಶೇಷ ಅಧಿಕಾರ!..ಜೈಲಿಗೆ ಹೋಗುವ ಭಯ ಬೇಡ!!

ವಾಟ್ಸ್‌ಆಪ್ ಗ್ರೂಪ್‌ ಕ್ರಿಯೇಟ್ ಮಾಡಿಕೊಂಡಿದ್ದ ಹಲವರು ಅದರ ಅಡ್ಮಿನ್ ಆಗಿರಲು ಹಿಂಜರಿಯುತ್ತಿದ್ದ ಘಟನೆ ಬೆಳಕಿಗೆ ಬಂದ ನಂತರ ವಾಟ್ಸ್‌ಆಪ್ ಈ ಹೊಸ ಸೇವೆ ತಂದಿದೆ.!

|

ಯಾವುದೇ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಸಮಾಜದ ಸಾಮರಸ್ಯ ಕೆಡಿಸುವ, ವೈಯಕ್ತಿಕವಾಗಿ ನಿಂದಿಸುವ ಮೆಸೇಜ್‌ಗಳು ಹರಿದಾಡಿದರೆ ಗ್ರೂಪ್ ಅಡ್ಮಿನ್‌ಗಳು ಜೈಲಿಗೆ ಹೋಗಬೇಕಾದ ಪರಿಸ್ಥಿತಿಗೆ ಬ್ರೇಕ್ ಹಾಕಲು ವಾಟ್ಸ್‌ಆಪ್ ಮುಂದಾಗಿದೆ.! ಹಾಗಾಗಿ, ಗ್ರೂಪ್ ಅಡ್ಮಿನ್‌ಗಳಿಗಾಗಿ ವಿಶೇಷ ಅಧಿಕಾರವನ್ನು ವಾಟ್ಸ್‌ಆಪ್ ನೀಡುತ್ತಿದೆ.!!

ಹೌದು, ವಾಟ್ಸ್‌ಆಪ್ ಗ್ರೂಪ್‌ ಕ್ರಿಯೇಟ್ ಮಾಡಿಕೊಂಡಿದ್ದ ಹಲವರು ಅದರ ಅಡ್ಮಿನ್ ಆಗಿರಲು ಹಿಂಜರಿಯುತ್ತಿದ್ದ ಘಟನೆ ಬೆಳಕಿಗೆ ಬಂದ ನಂತರ ವಾಟ್ಸ್‌ಆಪ್ ಈ ಹೊಸ ಸೇವೆ ತಂದಿದೆ.! ಹಾಗಾದರೆ, ವಾಟ್ಸ್ಆಪ್ ಗ್ರೂಪ್ ಅಡ್ಮಿನ್‌ಗಳಿಗೆ ನೀಡಿರುವ ವಿಶೇಷ ಅಧಿಕಾರ ಏನು? ಇದರಿಂದ ಅಡ್ಮಿನ್‌ಗಳಿಗೆ ಏನು ಉಪಯೋಗ ಎಂದು ಮುಂದೆ ತಿಳಿಯಿರಿ.!!

ರಿಸ್ಟ್ರಿಕ್ಟೆಡ್ ಗ್ರೂಪ್ಸ್!!

ರಿಸ್ಟ್ರಿಕ್ಟೆಡ್ ಗ್ರೂಪ್ಸ್!!

ವಾಟ್ಸ್‌ಆಪ್‌ನಲ್ಲಿ ಹೊಸದಾಗಿ ‘ರಿಸ್ಟ್ರಿಕ್ಟೆಡ್ ಗ್ರೂಪ್ಸ್' ತರಲು ವಾಟ್ಸ್ಆಪ್ ಮುಂದಾಗಿದೆ. ಇದು ಗ್ರೂಪ್ ಅಡ್ಮಿನ್‌ಗಳಿಗೆ ಸಹಾಯವಾಗಲಿದ್ದು, ಇದರಲ್ಲಿರುವ ಹೊಸ ಸೆಟ್ಟಿಂಗ್ಸ್ ಆಯ್ಕೆ ಮಾಡಿದ್ರೆ ಆ ಗ್ರೂಪ್‌ನಲ್ಲಿ ಅಡ್ಮಿನ್ ಬಿಟ್ಟು ಬೇರೆ ಸದಸ್ಯರು ಯಾವುದೇ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ ಎಂದು ವಾಟ್ಸ್‌ಆಪ್ ತಿಳಿಸಿದೆ.!!

ಪೋಸ್ಟ್ ವೀಕ್ಷಿಸಬಹುದಷ್ಟೆ!!

ಪೋಸ್ಟ್ ವೀಕ್ಷಿಸಬಹುದಷ್ಟೆ!!

ರಿಸ್ಟ್ರಿಕ್ಟೆಡ್ ಗ್ರೂಪ್ಸ್ ಮೂಲಕ ಅಡ್ಮಿನ್ ಕಳುಹಿಸಿದ ಮೆಸೇಜ್‌ಗಳನ್ನು ಮೆಂಬರ್‌ಗಳು ವೀಕ್ಷಿಸಬಹುದೇ ವಿನಾಃ ಅದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಸದಸ್ಯರು ಮೆಸೇಜ್ ಸೆಂಡ್ ಮಾಡಿದ್ರೂ ಅಡ್ಮಿನ್ ಅನುಮತಿ ಇಲ್ಲದೇ ಇದ್ದರೆ ಅದು ಯಾರಿಗೂ ಕಾಣಿಸುವುದಿಲ್ಲ.!!

ಈಗಲೇ ಸೇವೆ ಲಭ್ಯವಿಲ್ಲ.!!

ಈಗಲೇ ಸೇವೆ ಲಭ್ಯವಿಲ್ಲ.!!

ಈ ಸುದ್ದಿ ಗ್ರೂಪ್ ಅಡ್ಮಿನ್‌ಗಳಿಗೆ ಸಂತೋಷವಾದರೂ ಈಗಲೇ ಈ ಸೇವೆ ಬಳಕೆಗೆ ಸಿಗುವುದಿಲ್ಲ. ವಾಟ್ಸಪ್‌ ಪರಿಚಯಿಸುವ ಮುಂದಿನ ಬೀಟಾ ಆವೃತ್ತಿಯಲ್ಲಿ ಈ ವಿಶೇಷತೆ ಮೊದಲು ಲಭ್ಯವಾಗಲಿದೆ. ಬಳಿಕ ಎಲ್ಲ ಬಳಕೆದಾರರಿಗೆ ಇದು ಲಭ್ಯವಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.!!

ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಈ ಆಯ್ಕೆ ಇದೆ.!!

ಫೇಸ್‌ಬುಕ್ ಗ್ರೂಪ್‌ಗಳಲ್ಲಿ ಈ ಆಯ್ಕೆ ಇದೆ.!!

ಇನ್ನು ಗ್ರೂಪ್ ಅಡ್ಮಿನ್‌ಗಳಿಗೆ ಸಹಾಯವಾಗಲು ವಾಟ್ಸ್‌ಆಪ್‌ನಲ್ಲಿ ತರುತ್ತಿರುವ ಈ ಆಯ್ಕೆ ಫೇಸ್‌ಬುಕ್‌ನಲ್ಲಿ ಈಗಾಗಲೇ ಲಭ್ಯವಿದೆ.!ಫೇಸ್‌ಬುಕ್‌ ಗ್ರೂಪ್‌ನಲ್ಲಿ ಅಡ್ಮಿನ್ ಗಳು ಅನುಮೋದನೆ ಕೊಟ್ಟರೆ ಮಾತ್ರ ಆ ಗ್ರೂಪಿನಲ್ಲಿ ಪೋಸ್ಟ್ ಪ್ರಕಟವಾಗುತ್ತದೆ.!!

ವೊಡಾಫೋನ್ ಸಹಯೋಗದಲ್ಲಿ 5,000mAh ಬ್ಯಾಟರಿ ಫೋನ್ ಲಾಂಚ್!..ಯಾವುವು ಗೊತ್ತಾ?ವೊಡಾಫೋನ್ ಸಹಯೋಗದಲ್ಲಿ 5,000mAh ಬ್ಯಾಟರಿ ಫೋನ್ ಲಾಂಚ್!..ಯಾವುವು ಗೊತ್ತಾ?

Best Mobiles in India

English summary
Facebook owned messaging service WhatsApp is likely to add a new feature to its mobile app. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X