ಅಂತೂ ಇಂತೂ ವಾಟ್ಸ್‌ಆಪ್‌ಗೆ ಬಂತು ಬಹುನಿರೀಕ್ಷಿತ ಫೀಚರ್..!
ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಆಂಡ್ರಾಯ್ಡ್ ಮತ್ತು ಐಓಎಸ್ ಮತ್ತು ವೆಬ್ ವರ್ಷನ್ ಗೆ ಬಹಳ ದಿನಗಳಿಂದ ಕಾಯುತ್ತಿದ್ದ ವೈಶಿಷ್ಟ್ಯತೆಯನ್ನು ಬಿಡುಗಡೆಗೊಳಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಸ್ಟಿಕ್ಕರ್ ವೈಶಿಷ್ಟ್ಯತೆಯ ಬಗ್ಗೆ ಕಂಪೆನಿಯು ಕೆಲಸ ಮಾಡುತ್ತಿದೆ. ಇದನ್ನು ಇದೀಗ ನಿಧಾನವಾಗಿ ಬಿಡುಗಡೆಗೊಳಿಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಡಿವೈಸ್ ನ್ನು ಕೂಡ ತಲುಪಲಿದೆ.

ವಿಭಿನ್ನ ಸ್ಟಿಕ್ಕರ್ ಗಳು:
ಇತರೆ ಮೆಸೇಜಿಂಗ್ ಆಪ್ ಗಳಲ್ಲಿ ಮಾಡುವಂತೆ ಈ ಮೆಸೇಜಿಂಗ್ ಆಪ್ ನಲ್ಲೂ ಕೂಡ ವಿಭಿನ್ನ ಸ್ಟಿಕ್ಕರ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡುತ್ತಿದ್ದು ಆಪ್ ನಲ್ಲಿ ಸ್ಟಿಕ್ಕರ್ ಸ್ಟೋರ್ ನ್ನು ಕೂಡ ವಾಟ್ಸ್ ಆಪ್ ಕಂಪೆನಿ ಪರಿಚಯಿಸುತ್ತಿದೆ.

ಸ್ಟಿಕ್ಕರ್ ಪ್ಯಾಕ್ ಗಳೂ ಕೂಡ ಲಭ್ಯ:
ಪ್ರಾರಂಭಿಕ ಹಂತದಲ್ಲಿ ಬಳಕೆದಾರರು ಒಂದು ಸೆಟ್ ನ ಸ್ಟಿಕ್ಕರ್ ಗಳನ್ನು ಪಡೆಯಲಿದ್ದಾರೆ ಅದನ್ನು ‘Cuppy' ಎಂದು ಹೆಸರಿಸಲಾಗಿದ್ದು Minseung Song ನಿಂದ ತಯಾರಿಸಿ ರುವುದಾಗಿದ್ದು ಮೊದಲ ಅಪ್ ಡೇಟ್ ನಲ್ಲಿ ಪ್ರೀಇನ್ಸ್ಟಾಲ್ಡ್ ಆಗಿ ಇದು ಬರುತ್ತದೆ. ಆದರೆ ಮುಂದಿನ ದಿನಗಳಲ್ಲಿ ಸ್ಟೋರ್ ನಿಂದ ಹೊಸ ಸ್ಟಿಕ್ಕರ್ ಪ್ಯಾಕ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು ಮತ್ತು ಈಗಾಗಲೇ ಲಭ್ಯವಿರುವ ಸ್ಟಿಕ್ಕರ್ ಗಳನ್ನು ಡಿಲೀಟ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ.

ಆಂಡ್ರಾಯ್ಡ್ ನಲ್ಲಿ ಸ್ಟಿಕ್ಕರ್ ಆಕ್ಸಿಸ್ ಮಾಡಲು ಏನು ಮಾಡಬೇಕು?
ಅಧಿಕೃತ ವೆಬ್ ಸೈಟ್ ನ ಮಾಹಿತಿಯ ಪ್ರಕಾರವೇ ಹೇಳುವುದಾದರೆ, ಆಂಡ್ರಾಯ್ಡ್ ಬಳಕೆದಾರರು ಸ್ಟಿಕ್ಕರ್ ಗಳನ್ನು ಆಕ್ಸಿಸ್ ಮಾಡಲು ಸ್ಕ್ರೀನಿನ ಎಡಭಾಗದಲ್ಲಿರುವ ಎಮೋಜಿ ಐಕಾನ್ ಗಳನ್ನು ಬಳಕೆ ಮಾಡಬೇಕು. ಎಮೋಜಿ ಐಕಾನ್ ನ್ನು ಬಳಕೆದಾರರು ಟ್ಯಾಪ್ ಮಾಡಿದ ನಂತರ GIF ಐಕಾನ್ ನ ಬಲಭಾಗದಲ್ಲಿರುವ ಸ್ಟಿಕ್ಕರ್ ಐಕಾನ್ ನ್ನು ಟ್ಯಾಪ್ ಮಾಡಬೇಕು. ಪ್ಯಾಕ್ ನಲ್ಲಿರುವ ಯಾವುದೇ ಸ್ಟಿಕ್ಕರ್ ನ್ನು ಕೂಡ ಬಳಕೆದಾರರು ನಂತರ ಆಯ್ಕೆ ಮಾಡಿಕೊಳ್ಳಬಹುದು.

ಐಓಎಸ್ ಬಳಕೆದಾರರು
ಟೆಕ್ಸ್ಟ್ ಫೀಲ್ಡ್ ನಲ್ಲಿರುವ ಸ್ಟಿಕ್ಕರ್ ಐಕಾನ್ ನ್ನು ಕ್ಲಿಕ್ಕಿಸಿಕೊಂಡು ಯಾವುದೇ ಸ್ಟಿಕ್ಕರ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಹೊಸ ಪ್ಯಾಕ್ ನ್ನು ಸೇರಿಸಿಕೊಳ್ಳುವುದಕ್ಕಾದರೆ ಸ್ಟಿಕ್ಕರ್ ಸೆಕ್ಷನ್ ನ ಎಡಭಾಗದಲ್ಲಿರುವ + ಐಕಾನ್ ನ್ನು ಕ್ಲಿಕ್ಕಿಸಿಕೊಳ್ಳಬೇಕು. ಬಳಕೆದಾರರು ಇಲ್ಲಿ ಮೈ ಸ್ಟಿಕ್ಕರ್ಸ್ ಮತ್ತು ಆಲ್ ಸ್ಟಿಕ್ಕರ್ಸ್ ಎಂದು ವಿಭಾಗಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಯಾವುದೇ ಸ್ಟಿಕ್ಕರ್ ನ್ನು ಡೌನ್ ಲೋಡ್ ಮಾಡಿಕೊಳ್ಳುವುದಕ್ಕಿಂತ ಮುಂಚೆ ಸ್ಟಿಕ್ಕರ್ ನ್ನು ನೋಡುವುದಕ್ಕೆ ಬಳಕೆದಾರರಿಗೆ ಅವಕಾಶವಿರುತ್ತದೆ.

ಯಾವ ವರ್ಷನ್ ನಲ್ಲಿ ಲಭ್ಯ:
ವಾಬೇಟಾಇನ್ಫೋ ಮಾಹಿತಿಯು ಹೇಳುವ ಪ್ರಕಾರ ಹೊಸ ವೈಶಿಷ್ಟ್ಯತೆಯನ್ನು ವಾಟ್ಸ್ ಆಪ್ ನಲ್ಲಿ ಆಕ್ಸಿಸ್ ಮಾಡಿಕೊಳ್ಳಬೇಕಾದರೆ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರು ವರ್ಷನ್ 2.18.329 ಮತ್ತು 2.18.100 ನ್ನು ಕ್ರಮವಾಗಿ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಸ್ಟಿಕ್ಕರ್ ಕೆಟಗರಿ ಸೆಕ್ಷನ್ ನ್ನು ಕೂಡ ಇನ್ಸ್ಟೆಂಟ್ ಮೆಸೇಜಿಂಗ್ ಆಪ್ ನಲ್ಲಿ ಸೇರಿಸಲಾಗಿದ್ದು ಕ್ಲಾಕ್ ಸೆಕ್ಷನ್ ನ ಪಕ್ಕದಲ್ಲಿ ಮತ್ತು ಸ್ಟಾರ್ಡ್ ಸೆಕ್ಷನ್ ನ್ನು ಆಪ್ ನಲ್ಲಿ ಸೇರಿಸಲಾಗಿದೆ. ಕ್ಲಾಕ್ ಸೆಕ್ಷನ್ ನಲ್ಲಿ ಇತ್ತೀಚೆಗೆ ಕಳುಹಿಸಲಾಗಿರುವ ಸ್ಟಿಕ್ಕರ್ ಗಳಿರುತ್ತದೆ ಮತ್ತು ಸ್ಟಾರ್ ಸೆಕ್ಷನ್ ನಲ್ಲಿ ನಿಮ್ಮ ಫೇವರೆಟ್ ಸ್ಟಿಕ್ಕರ್ ಗಳಿರುತ್ತದೆ. ಸದ್ಯ ಕಂಪೆನಿಯು 12 ಸ್ಟಿಕ್ಕರ್ ಪ್ಯಾಕ್ ನ್ನು ಸ್ಟಿಕ್ಕರ್ ಫೀಚರ್ ನಲ್ಲಿ ಬಿಡುಗಡೆಗೊಳಿಸುತ್ತಿದೆ.


Click it and Unblock the Notifications